ದಾಖಲೆಯ 1.76 ಕೋಟಿ ರೂಪಾಯಿಗೆ ಮಾರಾಟವಾದ ಗಾಂಧೀಜಿ (Mahatma Gandhi) ಅಪರೂಪದ ಫೋಟೋ
Current AffairsLatest Updates

ದಾಖಲೆಯ 1.76 ಕೋಟಿ ರೂಪಾಯಿಗೆ ಮಾರಾಟವಾದ ಗಾಂಧೀಜಿ (Mahatma Gandhi) ಅಪರೂಪದ ಫೋಟೋ

Share With Friends

Rare Oil Painting Of Mahatma Gandhi Sells For Rs 1.7 Crore In London : ಗಾಂಧೀಜಿಯವರ ಅಪರೂಪದ ತೈಲವರ್ಣ ಚಿತ್ರ ಲಂಡನ್​ನಲ್ಲಿ ನಡೆದ ಹರಾಜಿನಲ್ಲಿ ಭಾರಿ ಮೊತ್ತಕ್ಕೆ ಮಾರಾಟವಾಗಿದೆ. 1931ರಲ್ಲಿ ಗಾಂಧೀಜಿ ಎರಡನೇ ದುಂಡು ಮೇಜಿನ ಸಮ್ಮೇಳನದಲ್ಲಿ ಭಾಗವಹಿಸಲು ಲಂಡನ್​ಗೆ ಭೇಟಿ ನೀಡಿದ್ದರು. ಈ ವೇಳೆ ಕಲಾವಿದ ಕ್ಲೇರ್ ಲೈಟನ್ ಗಾಂಧೀಜಿಯ ಚಿತ್ರವನ್ನು ರಚಿಸಿದ್ದರು. ಗಾಂಧಿ ಕಲಾವಿದರೆದುರು ಕುಳಿತು ರಚಿಸಿದ ಏಕೈಕ ತೈಲವರ್ಣ ಚಿತ್ರ ಇದಾಗಿದೆ.

ಇದು ಬಹಳ ವಿಶೇಷವಾದ ಕಲಾಕೃತಿಯಾಗಿದೆ. ಈ ಕಲಾಕೃತಿಯನ್ನು 50 ರಿಂದ 70 ಸಾವಿರ ಪೌಂಡ್ಸ್ ಮೂಲಬೆಲೆ ನಿರ್ಧರಿಸಲಾಗಿತ್ತು, ಆದರೆ ಮಂಗಳವಾರ ಮುಕ್ತಾಯವಾದ ಹರಾಜಿನಲ್ಲಿ ಈ ಕಲಾಕೃತಿ 1,52,800 ಪೌಂಡ್ಸ್ (1.76 ಕೋಟಿ ರೂ.)ಗೆ ಹರಾಜಾಗಿದೆ ಎಂದು ಬೋನ್​ಹ್ಯಾಮ್ಸ್​ ಹರಾಜು ಕೇಂದ್ರದ ಮುಖ್ಯಸ್ಥೆ ರೈನಾನ್ ಡೆಮೆರಿ ತಿಳಿಸಿದ್ದಾರೆ.

ಬ್ರಿಟಿಷ್ ಕಲಾವಿದೆ ಕ್ಲೇರ್ ಲಿಂಗ್ಟನ್‌ ಬಿಡಿಸಿದ ಈ ಚಿತ್ರಕ್ಕೆ 50,000-70,000 ಪೌಂಡ್‌ಗಳ ಬೆಲೆ ನಿರೀಕ್ಷಿಸಲಾಗಿತ್ತು. ಆದರೆ ನಿರೀಕ್ಷೆಗಿಂತ ಮೂರು ಪಟ್ಟು ಹೆಚ್ಚು ಬೆಲೆ ಸಿಕ್ಕಿದೆ. ಟ್ರಾವೆಲ್ ಮತ್ತು ಎಕ್ಸ್‌ಪ್ಲೋರೇಷನ್ ಆನ್‌ಲೈನ್ ಮಾರಾಟದಲ್ಲಿ ಅತ್ಯುತ್ತಮ ಮಾರಾಟದ ಚಿತ್ರವಾಗಿಯೂ ಇದು ದಾಖಲೆ ನಿರ್ಮಿಸಿದೆ. ಗಾಂಧೀಜಿಯವರ ಈ ಚಿತ್ರವನ್ನು ಹಿಂದೆಂದೂ ಹರಾಜು ಹಾಕಿರಲಿಲ್ಲ ಎಂದು ಬೋನ್‌ಹ್ಯಾಮ್ಸ್ ಮಾರಾಟ ಮುಖ್ಯಸ್ಥ ರಿಯಾನಾನ್ ಡೆಮೆರಿ ಹೇಳಿದ್ದಾರೆ.

1974ರಲ್ಲಿ ಆಯಿಲ್ ಪೇಟಿಂಗ್‌ನ್ನು ಸಾರ್ವಜನಿಕವಾಗಿ ಪ್ರದರ್ಶನಕ್ಕೆ ಇರಿಸಲಾಗಿತ್ತು. ಈ ವೇಳೆ ಹಿಂದೂ ಬಲಪಂಥೀಯ ಕಾರ್ಯಕರ್ತ ಚಾಕುವಿನಿಂದ ಫೋಟೋಗೆ ಹಾನಿ ಮಾಡಲು ಪ್ರಯತ್ನಿಸಿದ್ದರು. ಇಂದಿಗೂ ಈ ಫೋಟೋದ ಮೇಲೆ ಚಾಕುವಿನಿಂದ ಮಾಡಿದ ಹಾನಿಯನ್ನು ಗಮನಿಸಬಹುದು.

ಬ್ರಿಟಿಷ್ ಕಲಾವಿದೆ ಕ್ಲೇರ್ ಲಿಂಗ್ಟನ್‌ 1989ರಲ್ಲಿ ನಿಧನರಾಗುತ್ತಾರೆ. ಆನಂತರ ಈ ಆಯಿಲ್ ಪೇಂಟಿಂಗ್ ಕ್ಲೇರ್ ಲಿಂಗ್ಟನ್‌ ಕುಟುಂಬದ ಸುಪರ್ದಿಗೆ ಸೇರಿತು. 1931ರಲ್ಲಿ ಗಾಂಧೀಜಿಯವರು ಲಂಡನ್‌ನಲ್ಲಿ ನಡೆದ ಎರಡನೇ ದುಂಡುಮೇಜಿನ ಸಮ್ಮೇಳನದಲ್ಲಿ ಭಾಗವಹಿಸಿದ್ದರು. ಈ ವೇಳೆ ಕಲಾವಿದ ಕ್ಲೇರ್ ಲೈಟನ್ ನೇರವಾಗಿ ಗಾಂಧೀಜಿಯವರನ್ನು ಭೇಟಿಯಾಗಿ ಈ ಚಿತ್ರ ಬಿಡಿಸಿದ್ದರು.

error: Content Copyright protected !!