ಭಾರತ-ಯುಎಇ ಪ್ರಮುಖ ಇಂಧನ ಒಪ್ಪಂದಕ್ಕೆ ಸಹಿ : ಇಲ್ಲಿದೆ ಕಂಪ್ಲೀಟ್ ರಿಪೋರ್ಟ್
Current AffairsLatest Updates

ಭಾರತ-ಯುಎಇ ಪ್ರಮುಖ ಇಂಧನ ಒಪ್ಪಂದಕ್ಕೆ ಸಹಿ : ಇಲ್ಲಿದೆ ಕಂಪ್ಲೀಟ್ ರಿಪೋರ್ಟ್

Share With Friends

ಭಾರತ ಮತ್ತು United Arab Emirates ನಡುವೆ ಇಂಧನ, ರಕ್ಷಣಾ, ಸಮುದ್ರ ಮೂಲಸೌಕರ್ಯ ಹಾಗೂ ಉದಯೋನ್ಮುಖ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಮಹತ್ವದ ಒಪ್ಪಂದಗಳು ನಡೆದಿವೆ. ಪ್ರಧಾನಿ Narendra Modi ಅವರು ಮೇ 15ರಂದು ಅಬುಧಾಬಿಗೆ ಭೇಟಿ ನೀಡಿದ ವೇಳೆ, Sheikh Mohamed bin Zayed Al Nahyan ಅವರೊಂದಿಗೆ ಉನ್ನತ ಮಟ್ಟದ ಮಾತುಕತೆ ನಡೆಸಿದರು. ಪಶ್ಚಿಮ ಏಷ್ಯಾದ ಉದ್ವಿಗ್ನ ಪರಿಸ್ಥಿತಿಯ ನಡುವೆಯೂ, ಎರಡೂ ದೇಶಗಳು ತಮ್ಮ ಸಮಗ್ರ ಕಾರ್ಯತಂತ್ರದ ಸಹಭಾಗಿತ್ವವನ್ನು ಮತ್ತಷ್ಟು ಬಲಪಡಿಸಲು ಒಪ್ಪಿಕೊಂಡವು. ಭಾರತ-ಯುಎಇ ಸಮಗ್ರ ಆರ್ಥಿಕ ಸಹಭಾಗಿತ್ವ ಒಪ್ಪಂದ (CEPA) ಯಶಸ್ವಿಯಾಗಿ ಜಾರಿಗೆ ಬಂದು, ದ್ವಿಪಕ್ಷೀಯ ವ್ಯಾಪಾರ ಹೊಸ ಎತ್ತರ ತಲುಪಿರುವುದನ್ನು ನಾಯಕರು ಶ್ಲಾಘಿಸಿದರು.

ಈ ಭೇಟಿಯು ಭಾರತ ಮತ್ತು ಯುಎಇ ನಡುವಿನ ಸಾಂಪ್ರದಾಯಿಕ ವ್ಯಾಪಾರ ಸಂಬಂಧವನ್ನು ಹೊಸ ಆಯಾಮದ ವ್ಯೂಹಾತ್ಮಕ ಪಾಲುದಾರಿಕೆ(strategic partnership)ಯಾಗಿ ಪರಿವರ್ತಿಸಿದೆ.


ಮಹತ್ವದ ಒಪ್ಪಂದಗಳು ಯಾವುವು..?

✶ ಇಂಧನ ಕ್ಷೇತ್ರ: ತೈಲ ಮತ್ತು ಅನಿಲ ಭದ್ರತೆ (Energy Security)
⮞ ಜಾಗತಿಕ ತೈಲ ಮಾರುಕಟ್ಟೆಯಲ್ಲಿನ ಏರಿಳಿತಗಳಿಂದ ಭಾರತವನ್ನು ರಕ್ಷಿಸಲು ಈ ಒಪ್ಪಂದಗಳು ಅತ್ಯಂತ ಪ್ರಮುಖವಾಗಿವೆ. ಭಾರತದ ತೈಲ ಸಂಗ್ರಹ ಸಾಮರ್ಥ್ಯವನ್ನು 30 ಮಿಲಿಯನ್ ಬ್ಯಾರೆಲ್‌ಗಳಿಗೆ ಹೆಚ್ಚಿಸಲು Indian Strategic Petroleum Reserves Limited ಮತ್ತು Abu Dhabi National Oil Company ನಡುವೆ ಒಪ್ಪಂದವಾಗಿದ್ದು, ಭಾರತದಲ್ಲಿ ತಂತ್ರಾತ್ಮಕ ಅನಿಲ ಸಂಗ್ರಹ ಸ್ಥಾಪನೆಗೂ ಸಹಕಾರ ನೀಡಲಾಗುವುದು. ಜೊತೆಗೆ ಎಲ್‌ಪಿಜಿ ದೀರ್ಘಾವಧಿ ಪೂರೈಕೆಗೆ Indian Oil Corporation ಮತ್ತು ADNOC ನಡುವೆ ಒಪ್ಪಂದಕ್ಕೆ ಸಹಿ ಹಾಕಲಾಯಿತು.
⮞ ಕಚ್ಚಾ ತೈಲ ಸಂಗ್ರಹಣೆ: ಇಂಡಿಯನ್ ಸ್ಟ್ರಾಟೆಜಿಕ್ ಪೆಟ್ರೋಲಿಯಂ ರಿಸರ್ವ್ಸ್ ಲಿಮಿಟೆಡ್ (ISPRL) ಮತ್ತು ಅಬುಧಾಬಿ ನ್ಯಾಷನಲ್ ಆಯಿಲ್ ಕಂಪನಿ (ADNOC) ನಡುವೆ ಒಪ್ಪಂದವಾಗಿದೆ. ಇದರ ಅನ್ವಯ ಭಾರತದ ವಿಶಾಖಪಟ್ಟಣಂ ಮತ್ತು ಚಂಡಿಖೋಲ್‌ನಲ್ಲಿರುವ ವ್ಯೂಹಾತ್ಮಕ ಪೆಟ್ರೋಲಿಯಂ ಮೀಸಲು ಕೇಂದ್ರಗಳಲ್ಲಿ ಯುಎಇಯ 30 ಮಿಲಿಯನ್ ಬ್ಯಾರೆಲ್ ಕಚ್ಚಾ ತೈಲವನ್ನು ಸಂಗ್ರಹಿಸಲು ನಿರ್ಧರಿಸಲಾಗಿದೆ.
⮞ ಯುಎಇಯ ಅಬುಧಾಬಿ ರಾಷ್ಟ್ರೀಯ ತೈಲ ಕಂಪನಿ (ADNOC) ಕಚ್ಚಾ ತೈಲ ಸಂಗ್ರಹವನ್ನು 30 ಮಿಲಿಯನ್ ಬ್ಯಾರೆಲ್‌ಗಳಿಗೆ ಹೆಚ್ಚಿಸಲು ಒಪ್ಪಿಕೊಂಡಿರುವುದರಿಂದ, ಭಾರತದ ಕಚ್ಚಾ ತೈಲ ಭದ್ರತೆಯು 5.3 ಮಿಲಿಯನ್ ಟನ್‌ಗಳಿಂದ ಸುಮಾರು 70% ರಷ್ಟು ಹೆಚ್ಚಾಗುವ ಸಾಧ್ಯತೆಯಿದೆ.

⮞ LPG ಪೂರೈಕೆ ಒಪ್ಪಂದ: ಭಾರತದ ಗೃಹಬಳಕೆಯ ಎಲ್‌ಪಿಜಿ ಅಗತ್ಯತೆಯ ಸುಮಾರು 40% ರಷ್ಟನ್ನು ಯುಎಇ ಪೂರೈಸುತ್ತದೆ. ಈಗ ಇಂಡಿಯನ್ ಆಯಿಲ್ ಕಾರ್ಪೊರೇಷನ್ (IOCL) ಮತ್ತು ADNOC ನಡುವೆ ದೀರ್ಘಕಾಲೀನ ಮತ್ತು ಸ್ಥಿರವಾದ ಎಲ್‌ಪಿಜಿ ಪೂರೈಕೆಗಾಗಿ ಒಪ್ಪಂದ ಮಾಡಿಕೊಳ್ಳಲಾಗಿದೆ.


✶ ತಂತ್ರಜ್ಞಾನ ಕ್ಷೇತ್ರ: ಸೂಪರ್ ಕಂಪ್ಯೂಟಿಂಗ್ ಮತ್ತು AI
⮞ ಭಾರತದ AI ಮಿಷನ್ ಭಾಗವಾಗಿ ಭಾರತದ C-DAC ( Centre for Development of Advanced Computing ) ಮತ್ತು ಯುಎಇ ಮೂಲದ G-42 ಸಂಸ್ಥೆಗಳು ಒಟ್ಟಾಗಿ ಭಾರತದ ಕೃತಕ ಬುದ್ಧಿಮತ್ತೆ (AI) ಅಭಿವೃದ್ಧಿಗೆ ಪೂರಕವಾಗಿ 8 ಎಕ್ಸಾಫ್ಲಾಪ್ (8 Exaflop) ಸಾಮರ್ಥ್ಯದ ಸೂಪರ್ ಕಂಪ್ಯೂಟಿಂಗ್ ಕ್ಲಸ್ಟರ್ ಅನ್ನು ಸ್ಥಾಪಿಸಲು ಒಪ್ಪಂದ ಮಾಡಿಕೊಂಡಿವೆ.


✶ಕಡಲ ಮೂಲಸೌಕರ್ಯ (Maritime Infrastructure)
⮞ ಗುಜರಾತ್‌ನ ವಾದಿನಾರ್‌ನಲ್ಲಿ ಹಡಗು ದುರಸ್ತಿ ಕ್ಲಸ್ಟರ್ (Ship Repair Cluster) ಅನ್ನು ಸ್ಥಾಪಿಸಲು ಕೊಚ್ಚಿನ್ ಶಿಪ್‌ಯಾರ್ಡ್ ಲಿಮಿಟೆಡ್ (CSL) ಮತ್ತು ಡ್ರೈಡಾಕ್ಸ್ ವರ್ಲ್ಡ್ ದುಬೈ ನಡುವೆ ಒಪ್ಪಂದ ನಡೆದಿದೆ. ಇದು ಭಾರತದ ಕಡಲ ತೀರದ ಮೂಲಸೌಕರ್ಯವನ್ನು ಬಲಪಡಿಸಲಿದೆ.

✶5 ಬಿಲಿಯನ್ ಡಾಲರ್ ಬೃಹತ್ ಹೂಡಿಕೆ ಘೋಷಣೆ
⮞ ಭಾರತದ ಆರ್ಥಿಕತೆಗೆ ಬೂಸ್ಟ್ ನೀಡಲು ಯುಎಇ ಒಟ್ಟು 5 ಬಿಲಿಯನ್ ಯುಎಸ್ ಡಾಲರ್ (USD 5 Billion) ಹೂಡಿಕೆಯನ್ನು ಘೋಷಿಸಿದೆ:
⮞ ಮೂಲಸೌಕರ್ಯ: ಅಬುಧಾಬಿ ಇನ್ವೆಸ್ಟ್‌ಮೆಂಟ್ ಅಥಾರಿಟಿ (ADIA) ಮತ್ತು ಭಾರತದ NIIF ಜಂಟಿಯಾಗಿ ಭಾರತೀಯ ಮೂಲಸೌಕರ್ಯ ಯೋಜನೆಗಳಲ್ಲಿ 1 ಬಿಲಿಯನ್ ಡಾಲರ್ ಹೂಡಿಕೆ ಮಾಡಲಿವೆ.
⮞ ಬ್ಯಾಂಕಿಂಗ್ ಕ್ಷೇತ್ರ: ಎಮಿರೇಟ್ಸ್ ಎನ್‌ಬಿಡಿ (Emirates NBD) ಬ್ಯಾಂಕ್ ಭಾರತದ ಆರ್‌ಬಿಎಲ್ (RBL) ಬ್ಯಾಂಕ್‌ನ 60% ಪಾಲನ್ನು 3 ಬಿಲಿಯನ್ ಡಾಲರ್‌ಗೆ ಖರೀದಿಸಲಿದೆ.
⮞ ಹೌಸಿಂಗ್ ಫೈನಾನ್ಸ್: ಇಂಟರ್ನ್ಯಾಷನಲ್ ಹೋಲ್ಡಿಂಗ್ ಕಂಪನಿಯು ‘ಸಮ್ಮಾನ್ ಕ್ಯಾಪಿಟಲ್’ನಲ್ಲಿ 1 ಬಿಲಿಯನ್ ಡಾಲರ್ ಹೂಡಿಕೆ ಮಾಡಲಿದೆ.
⮞ Emirates NBD, Abu Dhabi Investment Authority ಹಾಗೂ International Holding Company ಪ್ರಮುಖ ಹೂಡಿಕೆಗಳನ್ನು ಮಾಡಲಿವೆ.


✶ ತಂತ್ರಾತ್ಮಕ ಪೆಟ್ರೋಲಿಯಂ ಸಂಗ್ರಹಣೆ :
ಭಾರತದಲ್ಲಿ ಪ್ರಸ್ತುತ ಆಂಧ್ರ ಪ್ರದೇಶ ಮತ್ತು ಕರ್ನಾಟಕದಲ್ಲಿ ಒಟ್ಟು 5.33 ಮಿಲಿಯನ್ ಮೆಟ್ರಿಕ್ ಟನ್ ಸಾಮರ್ಥ್ಯದ ತಂತ್ರಾತ್ಮಕ ಪೆಟ್ರೋಲಿಯಂ ಸಂಗ್ರಹಣಾ ಕೇಂದ್ರಗಳಿದ್ದು, ತುರ್ತು ಸಂದರ್ಭಗಳಲ್ಲಿ ಇಂಧನ ಪೂರೈಕೆ ವ್ಯತ್ಯಯಗಳನ್ನು ಎದುರಿಸಲು ಅವು ಪ್ರಮುಖ ಭದ್ರತಾ ವ್ಯವಸ್ಥೆಯಾಗಿ ಕಾರ್ಯನಿರ್ವಹಿಸುತ್ತಿವೆ.

ಭಾರತದ ವ್ಯೂಹಾತ್ಮಕ ಪೆಟ್ರೋಲಿಯಂ ಮೀಸಲು (Strategic Petroleum Reserves – SPR) ಕೇಂದ್ರಗಳು ತುರ್ತು ಸಂದರ್ಭಗಳಲ್ಲಿ ಅಥವಾ ಜಾಗತಿಕ ತೈಲ ಪೂರೈಕೆಯಲ್ಲಿ ವ್ಯತ್ಯಯವಾದಾಗ ಬಳಸಲು ಸ್ಥಾಪಿಸಲಾದ ಕಚ್ಚಾ ತೈಲದ ಬೃಹತ್ ಭೂಗತ ಸಂಗ್ರಹಾಗಾರಗಳಾಗಿವೆ. ಇವುಗಳನ್ನು ಭಾರತೀಯ ವ್ಯೂಹಾತ್ಮಕ ಪೆಟ್ರೋಲಿಯಂ ರಿಸರ್ವ್ಸ್ ಲಿಮಿಟೆಡ್ (ISPRL) ನಿರ್ವಹಿಸುತ್ತದೆ.

ಭಾರತ – ಯುಎಇ ಒಪ್ಪಂದಗಳು : ಶಾರ್ಟ್ ನೋಟ್ಸ್
⮞Indian Strategic Petroleum Reserves Limited ಮತ್ತು Abu Dhabi National Oil Company ನಡುವೆ ಕಚ್ಚಾ ತೈಲ ಸಂಗ್ರಹ ಒಪ್ಪಂದ.
⮞ಭಾರತದಲ್ಲಿ 30 ಮಿಲಿಯನ್ ಬ್ಯಾರೆಲ್ ಕಚ್ಚಾ ತೈಲ ಸಂಗ್ರಹಕ್ಕೆ ನಿರ್ಧಾರ.
⮞Indian Oil Corporation ಮತ್ತು ADNOC ನಡುವೆ ದೀರ್ಘಾವಧಿಯ LPG ಪೂರೈಕೆ ಒಪ್ಪಂದ.
⮞ Centre for Development of Advanced Computing ಹಾಗೂ G42 ನಡುವೆ 8 Exaflop Super Computing Cluster ನಿರ್ಮಾಣಕ್ಕೆ ಒಪ್ಪಂದ. AI ಅಭಿವೃದ್ಧಿಗೆ ಸಹಕಾರ.
⮞ಗುಜರಾತ್‌ನ ವಾದಿನಾರ್‌ನಲ್ಲಿ Ship Repair Cluster ಸ್ಥಾಪನೆ. Cochin Shipyard Limited ಮತ್ತು Drydocks World ನಡುವೆ ಒಪ್ಪಂದ.
⮞ 5 ಬಿಲಿಯನ್ ಡಾಲರ್ ಹೂಡಿಕೆ : Abu Dhabi Investment Authority ಮತ್ತು NIIF ಸೇರಿ 1 ಬಿಲಿಯನ್ ಡಾಲರ್ ಮೂಲಸೌಕರ್ಯ ಹೂಡಿಕೆ.
Emirates NBD → RBL Bank ನಲ್ಲಿ ಹೂಡಿಕೆ.
International Holding Company → ಹೌಸಿಂಗ್ ಫೈನಾನ್ಸ್ ಕ್ಷೇತ್ರದಲ್ಲಿ ಹೂಡಿಕೆ.

✦ ಪ್ರಮುಖ ಸಂಕ್ಷಿಪ್ತ ರೂಪಗಳು :
CEPA → Comprehensive Economic Partnership Agreement
ADNOC → Abu Dhabi National Oil Company
ISPRL → Indian Strategic Petroleum Reserves Limited
SPR → Strategic Petroleum Reserves
C-DAC → Centre for Development of Advanced Computing


error: Content Copyright protected !!