Cat-A QFI ಅರ್ಹತೆ ಪಡೆದ ಮೊದಲ ಮಹಿಳಾ ಅಧಿಕಾರಿ ಸ್ಕ್ವಾಡ್ರನ್ ಲೀಡರ್ ಸಾನ್ಯಾ
Current AffairsLatest Updates

Cat-A QFI ಅರ್ಹತೆ ಪಡೆದ ಮೊದಲ ಮಹಿಳಾ ಅಧಿಕಾರಿ ಸ್ಕ್ವಾಡ್ರನ್ ಲೀಡರ್ ಸಾನ್ಯಾ

Share With Friends

ಭಾರತೀಯ ವಾಯುಪಡೆಯ (IAF) ಇತಿಹಾಸದಲ್ಲಿ ಮಹಿಳಾ ಅಧಿಕಾರಿಯೊಬ್ಬರು ಅಪ್ರತಿಮ ಸಾಧನೆ ಮಾಡುವ ಮೂಲಕ ಹೊಸ ಮೈಲಿಗಲ್ಲು ಸ್ಥಾಪಿಸಿದ್ದಾರೆ. ಸ್ಕ್ವಾಡ್ರನ್ ಲೀಡರ್ ಸಾನ್ಯಾ ಅವರು ಅತ್ಯಂತ ಪ್ರತಿಷ್ಠಿತ Cat-A Qualified Flying Instructor (QFI-ಅರ್ಹ ಹಾರಾಟ ತರಬೇತುದಾರರು) ಅರ್ಹತೆ ಪಡೆದ ದೇಶದ ಮೊದಲ ಮಹಿಳಾ ಅಧಿಕಾರಿಯಾಗಿದ್ದಾರೆ. ಮಿಲಿಟರಿ ವಿಮಾನಯಾನ ಮತ್ತು ಹಾರಾಟ ತರಬೇತಿ ಕ್ಷೇತ್ರದಲ್ಲಿ ಈ ಸಾಧನೆಯು ಅತ್ಯಂತ ಶ್ರೇಷ್ಠ ಹಾಗೂ ಸವಾಲಿನದ್ದಾಗಿದೆ ಎಂದು ಪರಿಗಣಿಸಲಾಗಿದೆ. ಈ ಸಾಧನೆಗಾಗಿ ಭಾರತೀಯ ವಾಯುಪಡೆಯ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ A. P. Singh ಅವರು ಸಾನ್ಯಾ ಅವರನ್ನು ಸನ್ಮಾನಿಸಿದರು.

ಸ್ಕ್ವಾಡ್ರನ್ ಲೀಡರ್ ಸಾನ್ಯಾ ಅವರು 2015ರ ಜೂನ್ 20ರಂದು 42 SSC (W) FP ಕೋರ್ಸ್ ಮೂಲಕ ಭಾರತೀಯ ವಾಯುಪಡೆಯ ಫ್ಲೈಯಿಂಗ್ ಬ್ರಾಂಚ್‌ಗೆ ಸೇರ್ಪಡೆಯಾಗಿದ್ದರು. ನಂತರ 2017ರಲ್ಲಿ ಫ್ಲೈಟ್ ಲೆಫ್ಟಿನೆಂಟ್ ಆಗಿ ಮತ್ತು 2021ರ ಜೂನ್‌ನಲ್ಲಿ ಸ್ಕ್ವಾಡ್ರನ್ ಲೀಡರ್ ಹುದ್ದೆಗೆ ಪದೋನ್ನತಿ ಪಡೆದರು.

Cat-A ತರಬೇತುದಾರರು ಭಾರತೀಯ ವಾಯುಪಡೆಯ ಭವಿಷ್ಯದ ಯುದ್ಧ ವಿಮಾನ ಪೈಲಟ್‌ಗಳನ್ನು ರೂಪಿಸುವಲ್ಲಿ ಅತ್ಯಂತ ಮಹತ್ವದ ಪಾತ್ರ ವಹಿಸುತ್ತಾರೆ. ಸ್ಕ್ವಾಡ್ರನ್ ಲೀಡರ್ ಸಾನ್ಯಾ ಅವರ ಸಾಧನೆ ಭಾರತೀಯ ಸಶಸ್ತ್ರ ಪಡೆಗಳಲ್ಲಿ ಮಹಿಳೆಯರ ಹೆಚ್ಚುತ್ತಿರುವ ಸಾಮರ್ಥ್ಯ ಮತ್ತು ನಾಯಕತ್ವಕ್ಕೆ ಮತ್ತೊಂದು ಪ್ರೇರಣಾದಾಯಕ ಉದಾಹರಣೆಯಾಗಿದೆ.

ಏನಿದು Cat-A QFI ವ್ಯವಸ್ಥೆ..?
ಭಾರತೀಯ ವಾಯುಪಡೆಯಲ್ಲಿ ಪೈಲಟ್‌ಗಳಿಗೆ ತರಬೇತಿ ನೀಡುವ ಬೋಧಕರಲ್ಲಿ (Instructors) ‘ಕ್ಯಾಟ್-ಎ’ ಅತ್ಯುನ್ನತ ಮತ್ತು ಅತ್ಯಂತ ಗೌರವಾನ್ವಿತ ಶ್ರೇಣಿಯಾಗಿದೆ. ಅತ್ಯುತ್ತಮ ಹಾರಾಟ ಕೌಶಲ್ಯ, ತಾಂತ್ರಿಕ ಜ್ಞಾನ ಮತ್ತು ಬೋಧನಾ ಸಾಮರ್ಥ್ಯವನ್ನು ಹೊಂದಿರುವ ಆಯ್ದ ಅಧಿಕಾರಿಗಳಿಗೆ ಮಾತ್ರ ಕಠಿಣ ಪರೀಕ್ಷೆಗಳ ನಂತರ ಈ ಅರ್ಹತೆಯನ್ನು ನೀಡಲಾಗುತ್ತದೆ.

ಭಾರತೀಯ ವಾಯುಪಡೆಯಲ್ಲಿ ಪೈಲಟ್ ತರಬೇತುದಾರರ ಸಾಮರ್ಥ್ಯವನ್ನು ಅಳೆಯಲು Qualified Flying Instructor (QFI) ಗ್ರೇಡಿಂಗ್ ವ್ಯವಸ್ಥೆ ಬಳಸಲಾಗುತ್ತದೆ. ಇದರಲ್ಲಿ ಮೂರು ಪ್ರಮುಖ ಹಂತಗಳಿವೆ. ‘ಕ್ಯಾಟ್-ಎ’ (Category-A) ಅತ್ಯುನ್ನತ ಮತ್ತು ಕೊನೆಯ ಹಂತದ ಅರ್ಹತೆಯಾಗಿದೆ.
*Category-C: ತರಬೇತಿ ಹಂತದಲ್ಲಿರುವ ಅಥವಾ ಪ್ರಾಬೇಶನರಿ ಇನ್‌ಸ್ಟ್ರಕ್ಟರ್‌ಗಳು
*Category-B: ಸಾಮಾನ್ಯ ಹಾರಾಟ ತರಬೇತಿ ನೀಡಲು ಅರ್ಹರಾದ ಇನ್‌ಸ್ಟ್ರಕ್ಟರ್‌ಗಳು
*Category-A: ಇತರ ತರಬೇತುದಾರರಿಗೆ ತರಬೇತಿ ನೀಡುವ ಹಾಗೂ ಉನ್ನತ ಹಾರಾಟ ಕೌಶಲ್ಯ ಮೌಲ್ಯಮಾಪನ ಮಾಡುವ ಅಧಿಕಾರ ಹೊಂದಿರುವ ಶ್ರೇಷ್ಠ ಇನ್‌ಸ್ಟ್ರಕ್ಟರ್‌ಗಳು

error: Content Copyright protected !!