ಪ್ರಧಾನಿ ಮೋದಿಗೆ ನಾರ್ವೆಯ ಅತ್ಯುನ್ನತ ನಾಗರಿಕ ಗೌರವ : ಅಂತರರಾಷ್ಟ್ರೀಯ ಗೌರವಗಳ ಸಂಖ್ಯೆ 32ಕ್ಕೆ ಏರಿಕೆ
ಭಾರತದ ಪ್ರಧಾನಿ Narendra Modi ಅವರಿಗೆ ನಾರ್ವೆಯ ಅತ್ಯುನ್ನತ ನಾಗರಿಕ ಗೌರವ(Norway’s highest civilian honour)ವಾದ “ಗ್ರ್ಯಾಂಡ್ ಕ್ರಾಸ್ ಆಫ್ ದ ರಾಯಲ್ ನಾರ್ವೇಜಿಯನ್ ಆರ್ಡರ್ ಆಫ್ ಮೆರಿಟ್” (Grand Cross of the Royal Norwegian Order of Merit) ಪ್ರದಾನ ಮಾಡಲಾಗಿದೆ. ನಾರ್ವೆಯ ಅಧಿಕೃತ ಓಸ್ಲೋ ಭೇಟಿಯ ವೇಳೆ ಈ ಗೌರವ ನೀಡಿ ಸನ್ಮಾನಿಸಲಾಯಿತು. ಈ ಮೂಲಕ ಪ್ರಧಾನಿ ಮೋದಿಗೆ ಲಭಿಸಿದ ಅಂತರರಾಷ್ಟ್ರೀಯ ಗೌರವಗಳ ಸಂಖ್ಯೆ 32ಕ್ಕೆ ಏರಿಕೆಯಾಗಿದೆ.
⮞ ನಾರ್ವೆಯ ಅತ್ಯುನ್ನತ ಗೌರವ :
ಮೇ 18ರಂದು ನಡೆದ ಅಧಿಕೃತ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಅವರಿಗೆ ನಾರ್ವೆಯ ಅತ್ಯುನ್ನತ ಶ್ರೇಣಿಯ ನಾಗರಿಕ ಪ್ರಶಸ್ತಿ ಪ್ರದಾನ ಮಾಡಲಾಯಿತು. ಈ ಪ್ರಶಸ್ತಿ ನಾರ್ವೆಯ ಹಿತಾಸಕ್ತಿಗಳನ್ನು ಉತ್ತೇಜಿಸುವುದು ಹಾಗೂ ಅಂತರರಾಷ್ಟ್ರೀಯ ಸಂಬಂಧಗಳನ್ನು ಬಲಪಡಿಸುವಲ್ಲಿ ವಿಶೇಷ ಸೇವೆ ಸಲ್ಲಿಸಿದವರಿಗೆ ನೀಡಲಾಗುತ್ತದೆ.
⮞ಪ್ರಶಸ್ತಿಯ ಹಿನ್ನೆಲೆ :
ಈ ರಾಯಲ್ ನಾರ್ವೇಜಿಯನ್ ಆರ್ಡರ್ ಆಫ್ ಮೆರಿಟ್ ಪ್ರಶಸ್ತಿಯನ್ನು 1985 ರಲ್ಲಿ ನಾರ್ವೆಯ ರಾಜ ಓಲಾವ್ V (King Olav V) ಅವರು ಸ್ಥಾಪಿಸಿದರು. ನಾರ್ವೆಯ ಹಿತಾಸಕ್ತಿಗಾಗಿ ಶ್ರಮಿಸಿದ ಮತ್ತು ಅಂತರರಾಷ್ಟ್ರೀಯ ಸಂಬಂಧಗಳನ್ನು ಬಲಪಡಿಸಲು ಅತ್ಯುತ್ತಮ ಸೇವೆ ಸಲ್ಲಿಸಿದ ವಿದೇಶಿ ಪ್ರಜೆಗಳು ಹಾಗೂ ನಾರ್ವೆ ನಾಗರಿಕರಿಗೆ ಈ ಗೌರವವನ್ನು ನೀಡಲಾಗುತ್ತದೆ. : ‘ಗ್ರಾಂಡ್ ಕ್ರಾಸ್’ ಎಂಬುದು ಈ ಪ್ರಶಸ್ತಿಯಲ್ಲೇ ಅತ್ಯಂತ ಉನ್ನತ ದರ್ಜೆಯದ್ದಾಗಿದ್ದು, ಇದು ಕಮಾಂಡರ್ ಮತ್ತು ನೈಟ್ ಶ್ರೇಣಿಗಳಿಗಿಂತ ಮೇಲಿನ ಸ್ಥಾನದಲ್ಲಿದೆ.
“ಗ್ರ್ಯಾಂಡ್ ಕ್ರಾಸ್” ಈ ಪ್ರಶಸ್ತಿಯ ಅತ್ಯುನ್ನತ ಹಂತವಾಗಿದೆ. ಈ ಆರ್ಡರ್‌ನಲ್ಲಿ ಒಟ್ಟು ಐದು ಹಂತಗಳಿವೆ: ಗ್ರ್ಯಾಂಡ್ ಕ್ರಾಸ್, ಕಮಾಂಡರ್ ವಿತ್ ಸ್ಟಾರ್, ಕಮಾಂಡರ್, ನೈಟ್ ಫಸ್ಟ್ ಕ್ಲಾಸ್ ಹಾಗೂ ನೈಟ್. ಅತ್ಯಂತ ಅಪರೂಪದ ಮತ್ತು ವಿಶೇಷ ಸಂದರ್ಭಗಳಲ್ಲಿ ಮಾತ್ರ ಗ್ರ್ಯಾಂಡ್ ಕ್ರಾಸ್ ಪ್ರದಾನ ಮಾಡಲಾಗುತ್ತದೆ.
ಇದನ್ನೂ ಓದಿ : ಪ್ರಧಾನಿ ಮೋದಿಗೆ 31ನೇ ಅತ್ಯುನ್ನತ ಅಂತಾರಾಷ್ಟ್ರೀಯ ನಾಗರಿಕ ಗೌರವ
⮞32ನೇ ಅಂತರರಾಷ್ಟ್ರೀಯ ಗೌರವ :
ಈ ಗೌರವದೊಂದಿಗೆ ಪ್ರಧಾನಿ ಮೋದಿ ಈಗ ವಿಶ್ವದ ವಿವಿಧ ರಾಷ್ಟ್ರಗಳಿಂದ 32 ಅಂತರರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದ ನಾಯಕರ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ. ಇದು ಜಾಗತಿಕ ರಾಜತಾಂತ್ರಿಕ ಕ್ಷೇತ್ರದಲ್ಲಿ ಭಾರತದ ಹೆಚ್ಚುತ್ತಿರುವ ಪ್ರಭಾವವನ್ನು ಪ್ರತಿಬಿಂಬಿಸುತ್ತದೆ.
⮞ಒಂದೇ ಪ್ರವಾಸದಲ್ಲಿ ಎರಡನೇ ಪ್ರಶಸ್ತಿ :
ನಾರ್ವೆ ಗೌರವಕ್ಕೂ ಒಂದು ದಿನ ಮೊದಲು ಪ್ರಧಾನಿ ಮೋದಿ ಅವರಿಗೆ Sweden ದೇಶದ “ರಾಯಲ್ ಆರ್ಡರ್ ಆಫ್ ದ ಪೊಲಾರ್ ಸ್ಟಾರ್” ಗೌರವವೂ ಲಭಿಸಿತ್ತು. ಎರಡು ದಿನಗಳಲ್ಲಿ ಯುರೋಪಿನ ಎರಡು ಪ್ರಮುಖ ರಾಷ್ಟ್ರಗಳಿಂದ ಅತ್ಯುನ್ನತ ಗೌರವ ಸಿಕ್ಕಿರುವುದು ಭಾರತದ ಜಾಗತಿಕ ರಾಜತಾಂತ್ರಿಕ ಬಲವನ್ನು ಮತ್ತಷ್ಟು ಎತ್ತಿಹಿಡಿದಿದೆ.
⮞ಐತಿಹಾಸಿಕ ನಾರ್ವೆ ಭೇಟಿ :
ಪ್ರಧಾನಿ ಮೋದಿ ಅವರ ಈ ಭೇಟಿ ಹಲವು ಕಾರಣಗಳಿಂದ ಮಹತ್ವ ಪಡೆದಿದೆ. ಇದು ಮೋದಿ ಅವರ ಮೊದಲ ನಾರ್ವೆ ಭೇಟಿ ಆಗಿದ್ದು, ಕಳೆದ 43 ವರ್ಷಗಳಲ್ಲಿ ಭಾರತೀಯ ಪ್ರಧಾನಿಯೊಬ್ಬರ ನಾರ್ವೆ ಪ್ರವಾಸವೂ ಇದೇ ಮೊದಲಾಗಿದೆ. ಈ ಭೇಟಿ ಭಾರತ-ನಾರ್ವೆ ದ್ವಿಪಕ್ಷೀಯ ಸಂಬಂಧಗಳನ್ನು ಮತ್ತಷ್ಟು ಬಲಪಡಿಸುವ ಹೆಜ್ಜೆಯಾಗಿ ಪರಿಗಣಿಸಲಾಗಿದೆ. ಭಾರತ ಮತ್ತು ನಾರ್ವೆ ದೇಶಗಳು 1947 ರಲ್ಲಿಯೇ ರಾಜತಾಂತ್ರಿಕ ಸಂಬಂಧಗಳನ್ನು ಸ್ಥಾಪಿಸಿವೆ.
ಕಡಲ ವ್ಯವಹಾರಗಳು (Maritime affairs), ಹವಾಮಾನ ವೈಪರೀತ್ಯ ನಿಯಂತ್ರಣ, ಮೀನುಗಾರಿಕೆ ಮತ್ತು ಅಭಿವೃದ್ಧಿ ಪಾಲುದಾರಿಕೆಯಂತಹ ಪ್ರಮುಖ ಕ್ಷೇತ್ರಗಳಲ್ಲಿ ನಾರ್ವೆ ಭಾರತದೊಂದಿಗೆ ನಿಕಟವಾಗಿ ಸಹಕರಿಸುತ್ತಿದೆ. ಪ್ರಧಾನಿ ಮೋದಿಯವರ ಈ ಭೇಟಿಯು ಉಭಯ ದೇಶಗಳ ಬಾಂಧವ್ಯವನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ದಿದೆ.
| NOTES : ನಾರ್ವೆ ದೇಶದ ಕುರಿತ ಮಾಹಿತಿ *ನಾರ್ವೆಯ ರಾಜಧಾನಿ ಮತ್ತು ಅತ್ಯಂತ ದೊಡ್ಡ ನಗರ – ಓಸ್ಲೋ *1991 ರಿಂದ ಕಿಂಗ್ ಹರಾಲ್ಡ್ V (King Harald V) ಅವರು ನಾರ್ವೆಯ ರಾಜರಾಗಿದ್ದರು. *ಅಧಿಕೃತ ಭಾಷೆ: ನಾರ್ವೇಜಿಯನ್ (Norwegian) *ಕರೆನ್ಸಿ (ಹಣ): ನಾರ್ವೇಜಿಯನ್ ಕ್ರೋನ್ (Norwegian Krone – NOK) *ಸರ್ಕಾರದ ವ್ಯವಸ್ಥೆ: ಸಾಂವಿಧಾನಿಕ ರಾಜಪ್ರಭುತ್ವ (Constitutional Monarchy) ಮತ್ತು ಸಂಸದೀಯ ಪ್ರಜಾಪ್ರಭುತ್ವ. ಪ್ರಸ್ತುತ ಕಿಂಗ್ ಹರಾಲ್ಡ್ V ಅವರು ಇಲ್ಲಿನ ರಾಜರಾಗಿದ್ದಾರೆ. *ಮಧ್ಯರಾತ್ರಿಯ ಸೂರ್ಯನ ನಾಡು (Land of the Midnight Sun): ನಾರ್ವೆ ಉತ್ತರ ಧ್ರುವಕ್ಕೆ ಹತ್ತಿರದಲ್ಲಿದೆ. ಇಲ್ಲಿನ ಕೆಲವು ಭಾಗಗಳಲ್ಲಿ (ಉದಾಹರಣೆಗೆ ಹ್ಯಾಮರ್‌ಫೆಸ್ಟ್) ಬೇಸಿಗೆಯ ಅವಧಿಯಲ್ಲಿ, ಅಂದರೆ ಮೇ ತಿಂಗಳಿನಿಂದ ಜುಲೈ ಅಂತ್ಯದವರೆಗೆ ಸೂರ್ಯನೇ ಮುಳುಗುವುದಿಲ್ಲ! ಮಧ್ಯರಾತ್ರಿಯಲ್ಲೂ ಸೂರ್ಯ ಪ್ರಕಾಶಮಾನವಾಗಿ ಕಾಣಿಸುತ್ತಾನೆ. ಹಾಗೆಯೇ ಚಳಿಗಾಲದಲ್ಲಿ ಕೆಲವು ತಿಂಗಳುಗಳ ಕಾಲ ಸೂರ್ಯನೇ ಉದಯಿಸುವುದಿಲ್ಲ. *ಆರ್ಥಿಕ ಮೂಲ: ನಾರ್ವೆಯು ತೈಲ (Petroleum), ನೈಸರ್ಗಿಕ ಅನಿಲ, ಮೀನುಗಾರಿಕೆ ಮತ್ತು ಜಲವಿದ್ಯುತ್ ಉತ್ಪಾದನೆಯಲ್ಲಿ ಜಾಗತಿಕವಾಗಿ ಮುಂಚೂಣಿಯಲ್ಲಿದೆ. |
ಪ್ರಧಾನಿ ನರೇಂದ್ರ ಮೋದಿ ಅವರಿಗೆ ದೊರೆತ 31 ಅಂತರರಾಷ್ಟ್ರೀಯ ಗೌರವಗಳ ಸಂಪೂರ್ಣ ಪಟ್ಟಿ
| No. | Kannada Name | Country / Organization | Year |
|---|---|---|---|
| 1 | ಸ್ಟೇಟ್ ಆರ್ಡರ್ ಆಫ್ ಘಾಜಿ ಅಮೀರ್ ಅಮಾನುಲ್ಲಾ ಖಾನ್ (State Order of Ghazi Amir Amanullah Khan) | Afghanistan | 2016 |
| 2 | ಆರ್ಡರ್ ಆಫ್ ಕಿಂಗ್ ಅಬ್ದುಲಅಜೀಸ್ (Order of King Abdulaziz) | Saudi Arabia | 2016 |
| 3 | ಗ್ರ್ಯಾಂಡ್ ಕಾಲರ್ ಆಫ್ ದ ಸ್ಟೇಟ್ ಆಫ್ ಪ್ಯಾಲೆಸ್ಟೈನ್ (Grand Collar of the State of Palestine) | Palestine | 2018 |
| 4 | ಯುಎನ್ ಚಾಂಪಿಯನ್ಸ್ ಆಫ್ ದಿ ಎರ್ಥ್ ಪ್ರಶಸ್ತಿ (UN Champions of the Earth Award) | United Nations | 2018 |
| 5 | ಸಿಯೋಲ್ ಶಾಂತಿ ಪ್ರಶಸ್ತಿ (Seoul Peace Prize) | South Korea | 2018 |
| 6 | ಆರ್ಡರ್ ಆಫ್ ಜಾಯೆದ್ (Order of Zayed) | United Arab Emirates | 2019 |
| 7 | ಆರ್ಡರ್ ಆಫ್ ದ ಡಿಸ್ಟಿಂಗ್ವಿಶ್ಡ್ ರೂಲ್ ಆಫ್ ನಿಶಾನ್ ಇಜ್ಜುದ್ದೀನ್ (Order of the Distinguished Rule of Nishan Izzuddin) | Maldives | 2019 |
| 8 | ಕಿಂಗ್ ಹಮದ್ ಆರ್ಡರ್ ಆಫ್ ದ ರಿನೈಸಾನ್ಸ್ (King Hamad Order of the Renaissance) | Bahrain | 2019 |
| 9 | ಲೀಜನ್ ಆಫ್ ಮೆರಿಟ್ (Legion of Merit) | United States | 2020 |
| 10 | ಆರ್ಡರ್ ಆಫ್ ದ ಡ್ರ್ಯಾಗನ್ ಕಿಂಗ್ (ಡುಕ್ ಗ್ಯಾಲ್ಪೋ) (Order of the Dragon King) | Bhutan | 2021 |
| 11 | ಆರ್ಡರ್ ಆಫ್ ದ ನೈಲ್ (Order of the Nile) | Egypt | 2023 |
| 12 | ಕಂಪ್ಯಾನಿಯನ್ ಆಫ್ ದ ಆರ್ಡರ್ ಆಫ್ ಫಿಜಿ (Companion of the Order of Fiji) | Fiji | 2023 |
| 13 | ಕಂಪ್ಯಾನಿಯನ್ ಆಫ್ ದ ಆರ್ಡರ್ ಆಫ್ ಲೊಗೋಹು (Companion of the Order of Logohu) | Papua New Guinea | 2023 |
| 14 | ಗ್ರ್ಯಾಂಡ್ ಕ್ರಾಸ್ ಆಫ್ ದ ಲೀಜನ್ ಆಫ್ ಹಾನರ್ (Grand Cross of the Legion of Honour) | France | 2023 |
| 15 | ಗ್ರ್ಯಾಂಡ್ ಕ್ರಾಸ್ ಆಫ್ ದ ಆರ್ಡರ್ ಆಫ್ ಹಾನರ್ (Grand Cross of the Order of Honour) | Greece | 2023 |
| 16 | ಗ್ರ್ಯಾಂಡ್ ಕಮಾಂಡರ್ ಆಫ್ ದ ಆರ್ಡರ್ ಆಫ್ ದ ನೈಜರ್ (Grand Commander of the Order of the Niger) | Nigeria | 2024 |
| 17 | ಡೊಮಿನಿಕಾ ಅವಾರ್ಡ್ ಆಫ್ ಹಾನರ್ (Dominica Award of Honour) | Dominica | 2024 |
| 18 | ಆರ್ಡರ್ ಆಫ್ ಎಕ್ಸಲೆನ್ಸ್ (Order of Excellence) | Guyana | 2024 |
| 19 | ಆರ್ಡರ್ ಆಫ್ ಮುಬಾರಕ್ ಅಲ್ ಕಬೀರ್ (Order of Mubarak Al-Kabeer) | Kuwait | 2024 |
| 20 | ಆನರರಿ ಆರ್ಡರ್ ಆಫ್ ಫ್ರೀಡಮ್ ಆಫ್ ಬಾರ್ಬಡೋಸ್ (Honorary Order of Freedom of Barbados) | Barbados | 2025 |
| 21 | ಗ್ರ್ಯಾಂಡ್ ಕಮಾಂಡರ್ ಆಫ್ ದ ಆರ್ಡರ್ ಆಫ್ ದ ಸ್ಟಾರ್ ಅಂಡ್ ಕೀ ಆಫ್ ದ ಇಂಡಿಯನ್ ಓಷನ್ (Grand Commander of the Order of the Star and Key of the Indian Ocean) | Mauritius | 2025 |
| 22 | ಶ್ರೀಲಂಕಾ ಮಿತ್ರ ವಿಭೂಷಣ (Sri Lanka Mitra Vibhushana) | Sri Lanka | 2025 |
| 23 | ಗ್ರ್ಯಾಂಡ್ ಕ್ರಾಸ್ ಆಫ್ ದ ಆರ್ಡರ್ ಆಫ್ ಮಕಾರಿಯೊಸ್ III (Grand Cross of the Order of Makarios III) | Cyprus | 2025 |
| 24 | ಆಫೀಸರ್ ಆಫ್ ದ ಆರ್ಡರ್ ಆಫ್ ದ ಸ್ಟಾರ್ ಆಫ್ ಘಾನಾ (Officer of the Order of the Star of Ghana) | Ghana | 2025 |
| 25 | ಆರ್ಡರ್ ಆಫ್ ದ ರಿಪಬ್ಲಿಕ್ ಆಫ್ ಟ್ರಿನಿಡಾಡ್ ಅಂಡ್ ಟೊಬ್ಯಾಗೊ (Order of the Republic of Trinidad and Tobago) | Trinidad and Tobago | 2025 |
| 26 | ಗ್ರ್ಯಾಂಡ್ ಕಾಲರ್ ಆಫ್ ದ ನ್ಯಾಷನಲ್ ಆರ್ಡರ್ ಆಫ್ ದ ಸದರ್ನ್ ಕ್ರಾಸ್ (Grand Collar of the National Order of the Southern Cross) | Brazil | 2025 |
| 27 | ಆರ್ಡರ್ ಆಫ್ ದ ಮೊಸ್ಟ್ ಏನ್ಶಿಯೆಂಟ್ ವೆಲ್ವಿಟ್ಷಿಯಾ ಮಿರಾಬಿಲಿಸ್ (Order of the Most Ancient Welwitschia Mirabilis) | Namibia | 2025 |
| 28 | ಗ್ರೇಟ್ ಹಾನರ್ ನಿಶಾನ್ ಆಫ್ ಇಥಿಯೋಪಿಯಾ (Great Honour Nishan of Ethiopia) | Ethiopia | 2025 |
| 29 | ಆರ್ಡರ್ ಆಫ್ ಓಮನ್ (ಪ್ರಥಮ ದರ್ಜೆ) (Order of Oman – First Class) | Oman | 2025 |
| 30 | ಸ್ಪೀಕರ್ ಆಫ್ ದ ನೆಸೆಟ್ ಮೆಡಲ್ (Speaker of the Knesset Medal) | Israel | 2026 |
| 31 | ರಾಯಲ್ ಆರ್ಡರ್ ಆಫ್ ದ ಪೋಲರ್ ಸ್ಟಾರ್, ಕಮಾಂಡರ್ ಗ್ರ್ಯಾಂಡ್ ಕ್ರಾಸ್ (Royal Order of the Polar Star, Commander Grand Cross) | Sweden | 2026 |
| 32 | “ಗ್ರ್ಯಾಂಡ್ ಕ್ರಾಸ್ ಆಫ್ ದ ರಾಯಲ್ ನಾರ್ವೇಜಿಯನ್ ಆರ್ಡರ್ ಆಫ್ ಮೆರಿಟ್” (Grand Cross of the Royal Norwegian Order of Merit) | Norway | 2026 |
- ಜಗತ್ತಿನ ಶ್ರೇಷ್ಠ ಜಾಝ್ ಸ್ಯಾಕ್ಸೋಫೋನ್ ವಾದಕ ಸೊನ್ನಿ ರೋಲಿನ್ಸ್ (Sonny Rollins) ನಿಧನ
- ಜನಸಂಖ್ಯಾ ಬದಲಾವಣೆ (Demography Changes) ಅಧ್ಯಯನಕ್ಕೆ ಉನ್ನತ ಮಟ್ಟದ ಸಮಿತಿ ರಚನೆ
- ಅಸ್ಸಾಂ ವಿಧಾನಸಭೆಯಲ್ಲಿ ಏಕರೂಪ ನಾಗರಿಕ ಸಂಹಿತೆ (Uniform Civil Code) ಮಸೂದೆ ಅಂಗೀಕಾರ
- ಭ್ರಷ್ಟಾಚಾರ ನಿರ್ಮೂಲನೆಗೆ ಕೇರಳದಲ್ಲಿ ‘ಪ್ರಾಜೆಕ್ಟ್ ಜೀರೋ’ (Project Zero) ಆರಂಭ
- 10 ಬಿಲಿಯನ್ ವರ್ಷ ಹಳೆಯ ರೇಡಿಯೋ ಸಂಕೇತ ಪತ್ತೆ ಮಾಡಿದ ವಿಜ್ಞಾನಿಗಳು

