ಯುಕೆನಲ್ಲಿ ಅತಿ ಕಿರಿಯ ವಯಸ್ಸಿನ ಮೇಯರ್ ಆದ ಭಾರತೀಯ ಮೂಲದ ತುಷಾರ್ ಕುಮಾರ್
Current AffairsLatest Updates

ಯುಕೆನಲ್ಲಿ ಅತಿ ಕಿರಿಯ ವಯಸ್ಸಿನ ಮೇಯರ್ ಆದ ಭಾರತೀಯ ಮೂಲದ ತುಷಾರ್ ಕುಮಾರ್

Share With Friends

ಭಾರತೀಯ ಮೂಲದ 23 ವರ್ಷದ ತುಷಾರ್ ಕುಮಾರ್ ಅವರು ಯುನೈಟೆಡ್ ಕಿಂಗ್‌ಡಮ್‌ನ ಇತಿಹಾಸದಲ್ಲೇ ಅತಿ ಕಿರಿಯ ಭಾರತೀಯ ಮೂಲದ ಮೇಯರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅವರು 2026ರ ಮೇ 13ರಂದು ಬೋರ್‌ಹ್ಯಾಮ್‌ವುಡ್‌ನ ಫೇರ್‌ವೇ ಹಾಲ್‌ನಲ್ಲಿ ನಡೆದ ಅಧಿಕೃತ ಸಮಾರಂಭದಲ್ಲಿ ಎಲ್ಸ್ಟ್ರೀ ಮತ್ತು ಬೋರ್‌ಹ್ಯಾಮ್‌ವುಡ್ (Elstree and Borehamwood ) ಪಟ್ಟಣದ ಮೇಯರ್ ಆಗಿ ಪ್ರಮಾಣವಚನ ಸ್ವೀಕರಿಸಿದರು.

ಲಂಡನ್‌ನ ಪ್ರತಿಷ್ಠಿತ ‘ಕಿಂಗ್ಸ್ ಕಾಲೇಜ್’ನಲ್ಲಿ ರಾಜಕೀಯ ಶಾಸ್ತ್ರ (Political Science) ವ್ಯಾಸಂಗ ಮಾಡಿರುವ ಇವರು, ಕೇವಲ 20ನೇ ವಯಸ್ಸಿನಲ್ಲಿಯೇ ಕೌನ್ಸಿಲರ್ ಆಗಿ ಆಯ್ಕೆಯಾಗುವ ಮೂಲಕ ಬ್ರಿಟನ್ ರಾಜಕೀಯಕ್ಕೆ ಪ್ರವೇಶಿಸಿದ್ದರು. ಬಳಿಕ ಉಪಮೇಯರ್ ಆಗಿ ಸೇವೆ ಸಲ್ಲಿಸಿ ಇದೀಗ ಮೇಯರ್ ಹುದ್ದೆ ಅಲಂಕರಿಸಿದ್ದಾರೆ. ಇವರು ಬ್ರಿಟನ್‌ನ ಪ್ರಮುಖ ರಾಜಕೀಯ ಪಕ್ಷವಾದ ‘ಲೇಬರ್ ಪಾರ್ಟಿ’ಯ (Labour Party) ಸದಸ್ಯರಾಗಿದ್ದಾರೆ.

ಭಾರತೀಯ ಸಂಸ್ಕೃತಿಯೊಂದಿಗೆ ಆಳವಾದ ನಂಟು ಹೊಂದಿರುವ ತುಷಾರ್, ಯುಕೆನಲ್ಲಿ ಉಚಿತ ಹಿಂದಿ ತರಗತಿಗಳನ್ನು ನಡೆಸುವ ಸಂಸ್ಥೆಯಲ್ಲೂ ಸ್ವಯಂಸೇವಕರಾಗಿ ಗುರುತಿಸಿಕೊಂಡಿದ್ದಾರೆ.

ತಮ್ಮ ಅವಧಿಯಲ್ಲಿ ಸಮುದಾಯ ಅಭಿವೃದ್ಧಿ, ಯುವಜನರ ಪಾಲ್ಗೊಳ್ಳುವಿಕೆ ಹಾಗೂ ಸ್ಥಳೀಯ ಸೇವೆಗಳ ಸುಧಾರಣೆಗೆ ಆದ್ಯತೆ ನೀಡುವುದಾಗಿ ಅವರು ತಿಳಿಸಿದ್ದಾರೆ.


error: Content Copyright protected !!