ಭಾರತದ 100ನೇ ರಾಮ್ಸರ್ ತಾಣ(Ramsar site)ವಾದ ಜಯಪ್ರಕಾಶ್ ನಾರಾಯಣ ಪಕ್ಷಿಧಾಮ
ಭಾರತವು ಜಲಭೂಮಿಗಳ (Wetlands) ಸಂರಕ್ಷಣೆಯಲ್ಲಿ ಮತ್ತೊಂದು ಐತಿಹಾಸಿಕ ಮೈಲಿಗಲ್ಲು ಸಾಧಿಸಿದ್ದು, ಉತ್ತರ ಪ್ರದೇಶದ ಬಲಿಯಾ ಜಿಲ್ಲೆಯ ಜಯಪ್ರಕಾಶ್ ನಾರಾಯಣ ಪಕ್ಷಿಧಾಮ (ಸುರಹಾ ತಾಲ್) (Jai Prakash Narayan Bird Sanctuary) ದೇಶದ 100ನೇ ರಾಮ್ಸರ್ ತಾಣ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಘೋಷಣೆಯೊಂದಿಗೆ ಭಾರತವು ಜಾಗತಿಕ ಜಲಭೂಮಿ ಸಂರಕ್ಷಣಾ ಕ್ಷೇತ್ರದಲ್ಲಿ ತನ್ನ ಬದ್ಧತೆಯನ್ನು ಮತ್ತೊಮ್ಮೆ ಸಾಬೀತುಪಡಿಸಿದೆ.
ಜಯಪ್ರಕಾಶ್ ನಾರಾಯಣ ಪಕ್ಷಿಧಾಮವು ಉತ್ತರ ಪ್ರದೇಶದ 13ನೇ ರಾಮ್ಸರ್ ತಾಣವಾಗಿದ್ದು, ರಾಜ್ಯದ ಪರಿಸರ ಮತ್ತು ಜೀವ ವೈವಿಧ್ಯ ಸಂರಕ್ಷಣೆಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ.
ಸುರಹಾ ತಾಲ್‌ನ ವಿಶೇಷತೆ ಏನು..?
ಬಲಿಯಾ ಜಿಲ್ಲಾ ಕೇಂದ್ರದಿಂದ ಸುಮಾರು 17 ಕಿಲೋಮೀಟರ್ ದೂರದಲ್ಲಿರುವ ಬಸಂತ್‌ಪುರ ಗ್ರಾಮದ ಸಮೀಪದ ಸುರಹಾ ತಾಲ್ ಅನ್ನು ಉತ್ತರ ಪ್ರದೇಶ ಸರ್ಕಾರವು 1991ರಲ್ಲಿ ಪಕ್ಷಿಧಾಮವಾಗಿ ಘೋಷಿಸಿತ್ತು.
ಇದು ಗಂಗಾ ನದಿ ಕಣಿವೆಯ ಮಧ್ಯಭಾಗದಲ್ಲಿರುವ ಸಿಹಿನೀರಿನ ಜಲಭೂಮಿಯಾಗಿದ್ದು, ಗಂಗಾ ನದಿಯ ಹಳೆಯ ತಿರುವಿನಿಂದ (Meander) ರೂಪುಗೊಂಡಿದೆ. ಮೂರು ಪ್ರಮುಖ ಕಾಲುವೆಗಳ ಮೂಲಕ ಈ ಪ್ರದೇಶಕ್ಕೆ ನಿರಂತರವಾಗಿ ಸಿಹಿನೀರು ಹರಿದುಬರುತ್ತದೆ.
ಈ ಪ್ರದೇಶವು ಪ್ರವಾಹ ಸಮತಟ್ಟುಗಳು, ವಿಶಾಲ ಜೌಗು ಪ್ರದೇಶಗಳು, ಋತುಮಾನಿಕವಾಗಿ ನೀರಿನಿಂದ ತುಂಬುವ ಭೂಭಾಗಗಳು ಹಾಗೂ ಭತ್ತದ ಗದ್ದೆಗಳಿಂದ ಆವೃತವಾಗಿದೆ. ಬೇಸಿಗೆಯಲ್ಲಿ ಸುತ್ತಮುತ್ತಲಿನ ಅನೇಕ ಸಣ್ಣ ಜಲಭೂಮಿಗಳು ಒಣಗಿದಾಗ, ಈ ತಾಣವು ಸಾವಿರಾರು ಜಲಪಕ್ಷಿಗಳಿಗೆ ಸುರಕ್ಷಿತ ಆಶ್ರಯವಾಗುತ್ತದೆ.
ಸುರಹಾ ತಾಲ್‌ನಲ್ಲಿ ಅಪರೂಪದ ಹಾಗೂ ಸಂರಕ್ಷಣೆ ಅಗತ್ಯವಿರುವ ಹಲವು ಜಾತಿಯ ಪಕ್ಷಿಗಳು ಕಂಡುಬರುತ್ತವೆ. ಅವುಗಳಲ್ಲಿ:
*ಕಾಮನ್ ಪೋಚಾರ್ಡ್ (Aythya ferina) – ಅಪಾಯದ ಅಂಚಿನಲ್ಲಿರುವ ಜಲಪಕ್ಷಿ
*ಇಂಡಿಯನ್ ರಿವರ್ ಟರ್ನ್ (Sterna aurantia) – ಭಾರತಕ್ಕೆ ವಿಶಿಷ್ಟವಾದ ಪಕ್ಷಿ
ಈ ಜಲಭೂಮಿಯಲ್ಲಿ 221 ಸಸ್ಯ ಪ್ರಭೇದಗಳು, 66 ಮೀನುಗಳ ಜಾತಿಗಳು, 7 ಸರೀಸೃಪ ಜಾತಿಗಳು, 3 ಉಭಯಚರ ಜಾತಿಗಳು ದಾಖಲಾಗಿವೆ. ಇಲ್ಲಿನ ಪ್ರಮುಖ ಮೀನುಗಳಲ್ಲಿ ವಾಲಾಗೋ ಅಟ್ಟು (Wallago attu) ಮತ್ತು ಬಾಗಾರಿಯಸ್ ಬಾಗಾರಿಯಸ್ (Bagarius bagarius) ಸೇರಿವೆ. ಸಮೃದ್ಧ ಮೀನು ಸಂಪತ್ತಿನಿಂದಾಗಿ ಅಪರೂಪದ ಫಿಶಿಂಗ್ ಕ್ಯಾಟ್ (Prionailurus viverrinus) ಕೂಡ ಈ ಪ್ರದೇಶವನ್ನು ಆಹಾರ ಹುಡುಕುವ ತಾಣವಾಗಿ ಬಳಸುತ್ತದೆ.
ರಾಮ್ಸರ್ ಒಪ್ಪಂದ (Ramsar Convention) ಎಂದರೇನು?
ರಾಮ್ಸರ್ ಕನ್ವೆನ್ಷನ್ ಎಂಬುದು ಜಲಭೂಮಿಗಳ ಸಂರಕ್ಷಣೆಗೆ ಸಂಬಂಧಿಸಿದ ಅಂತರರಾಷ್ಟ್ರೀಯ ಒಪ್ಪಂದವಾಗಿದೆ. 1971ರ ಫೆಬ್ರವರಿ 2ರಂದು ಇರಾನ್‌ನ ರಾಮ್ಸರ್ ನಗರದಲ್ಲಿ ಈ ಒಪ್ಪಂದಕ್ಕೆ ಸಹಿ ಹಾಕಲಾಯಿತು. ಇದೇ ಕಾರಣಕ್ಕೆ ಇದನ್ನು “ರಾಮ್ಸರ್ ಕನ್ವೆನ್ಷನ್” ಎಂದು ಕರೆಯಲಾಗುತ್ತದೆ.
ಪ್ರಸ್ತುತ 173ಕ್ಕೂ ಹೆಚ್ಚು ರಾಷ್ಟ್ರಗಳು ಈ ಒಪ್ಪಂದದ ಸದಸ್ಯರಾಗಿದ್ದು, ಜಲಭೂಮಿಗಳ ಪರಿಸರ ವೈಶಿಷ್ಟ್ಯವನ್ನು ಕಾಪಾಡುವುದು ಹಾಗೂ ಜೀವ ವೈವಿಧ್ಯ ಸಂರಕ್ಷಣೆ ಇದರ ಮುಖ್ಯ ಉದ್ದೇಶವಾಗಿದೆ. ಭಾರತವು 1982ರ ಫೆಬ್ರವರಿ 1ರಂದು ಈ ಒಪ್ಪಂದವನ್ನು ಅನುಮೋದಿಸಿತ್ತು.
ವಿಶ್ವದಾದ್ಯಂತ ಈಗ 2,500ಕ್ಕೂ ಹೆಚ್ಚು ರಾಮ್ಸರ್ ತಾಣಗಳು ಇದ್ದು, ಅವು ಸುಮಾರು 25 ಲಕ್ಷ ಚದರ ಕಿಲೋಮೀಟರ್‌ಗೂ ಅಧಿಕ ಪ್ರದೇಶವನ್ನು ಒಳಗೊಂಡಿವೆ.
ವಿಶ್ವ ಜಲಭೂಮಿ ದಿನ :
ಜಲಭೂಮಿಗಳ ಮಹತ್ವದ ಬಗ್ಗೆ ಜಾಗೃತಿ ಮೂಡಿಸಲು ಪ್ರತಿವರ್ಷ ಫೆಬ್ರವರಿ 2ರಂದು ವಿಶ್ವ ಜಲಭೂಮಿ ದಿನ (World Wetlands Day) ಆಚರಿಸಲಾಗುತ್ತದೆ. ಇದೇ ದಿನ 1971ರಲ್ಲಿ ರಾಮ್ಸರ್ ಒಪ್ಪಂದ ಅಂಗೀಕರಿಸಲ್ಪಟ್ಟಿತ್ತು. ಭೂಮಿಯ ಒಟ್ಟು ಭೂಭಾಗದ ಕೇವಲ 6 ಶೇಕಡಾ ಭಾಗವನ್ನು ಮಾತ್ರ ಜಲಭೂಮಿಗಳು ಆವರಿಸಿಕೊಂಡಿದ್ದರೂ, ವಿಶ್ವದ 40 ಶೇಕಡಾ ಸಸ್ಯ ಮತ್ತು ಪ್ರಾಣಿ ಜಾತಿಗಳು ಇವುಗಳ ಮೇಲೆ ಅವಲಂಬಿತವಾಗಿವೆ.
ರಾಜ್ಯವಾರು ರಾಮ್ಸರ್ ತಾಣಗಳ ಪಟ್ಟಿ :
| ರಾಜ್ಯ / ಕೇಂದ್ರಾಡಳಿತ ಪ್ರದೇಶ | ಸಂಖ್ಯೆ |
|---|---|
| Tamil Nadu | 20 |
| Uttar Pradesh | 13 |
| Madhya Pradesh | 8 |
| Punjab | 7 |
| Gujarat | 5 |
| Odisha | 5 |
| Karnataka | 5 |
| Maharashtra | 4 |
| Kerala | 3 |
| Rajasthan | 4 |
| ಇತರೆ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು | 26 |
ಕರ್ನಾಟಕದ ರಾಮ್ಸರ್ ತಾಣಗಳು : ಒಟ್ಟು – 5
1.ರಂಗನತಿಟ್ಟು ಪಕ್ಷಿಧಾಮ | Ranganathittu Bird Sanctuary
2.ಮಾಗಡಿ ಕೆರೆ ಸಂರಕ್ಷಣಾ ಮೀಸಲು | Ranganathittu Bird Sanctuary
3.ಅಂಕಸಮುದ್ರ ಪಕ್ಷಿ ಸಂರಕ್ಷಣಾ ಮೀಸಲು | Ankasamudra Bird Conservation Reserve
4.ಅಘನಾಶಿನಿ ನದೀಮುಖ | Aghanashini Estuary
5.ಶಲ್ಲಾಕಿ ವೆಟ್ಲ್ಯಾಂಡ್ ಕನ್ಸರ್ವೇಶನ್ ರಿಸರ್ವ್ | Shallaki Wetland Conservation Reserve
ಭಾರತವು ರಾಮ್ಸರ್ ತಾಣಗಳ ಪಟ್ಟಿ :
| ಕ್ರ.ಸಂ | ರಾಮ್ಸರ್ ತಾಣ | ರಾಜ್ಯ / ಕೇಂದ್ರಾಡಳಿತ ಪ್ರದೇಶ |
|---|---|---|
| 1 | Kolleru Lake | Andhra Pradesh |
| 2 | Deepor Beel | Assam |
| 3 | Kabartal Wetland | Bihar |
| 4 | Nanda Lake | Goa |
| 5 | Khijadiya Wildlife Sanctuary | Gujarat |
| 6 | Nalsarovar Bird Sanctuary | Gujarat |
| 7 | Thol Lake Wildlife Sanctuary | Gujarat |
| 8 | Wadhvana Wetland | Gujarat |
| 9 | Chhari-Dhand | Gujarat |
| 10 | Bhindawas Wildlife Sanctuary | Haryana |
| 11 | Sultanpur National Park | Haryana |
| 12 | Chandertal Wetland | Himachal Pradesh |
| 13 | Pong Dam Lake | Himachal Pradesh |
| 14 | Renuka Wetland | Himachal Pradesh |
| 15 | Tso Moriri | Ladakh |
| 16 | Hokersar Wetland | Jammu & Kashmir |
| 17 | Surinsar-Mansar Lakes | Jammu & Kashmir |
| 18 | Wular Lake | Jammu & Kashmir |
| 19 | Hygam Wetland Conservation Reserve | Jammu & Kashmir |
| 20 | Shallbugh Wetland Conservation Reserve | Jammu & Kashmir |
| 21 | Pala Wetland | Mizoram |
| 22 | Loktak Lake | Manipur |
| 23 | Lonar Lake | Maharashtra |
| 24 | Nandur Madhameshwar | Maharashtra |
| 25 | Thane Creek Flamingo Sanctuary | Maharashtra |
| 26 | Nandurbar Wetland | Maharashtra |
| 27 | Bhoj Wetland | Madhya Pradesh |
| 28 | Sakhya Sagar | Madhya Pradesh |
| 29 | Sirpur Wetland | Madhya Pradesh |
| 30 | Yashwant Sagar | Madhya Pradesh |
| 31 | Tawa Reservoir | Madhya Pradesh |
| 32 | Ratapani Wetland | Madhya Pradesh |
| 33 | Madhav National Park Wetland | Madhya Pradesh |
| 34 | Chitrangudi Bird Sanctuary | Tamil Nadu |
| 35 | Gulf of Mannar Marine Biosphere Reserve | Tamil Nadu |
| 36 | Kanjirankulam Bird Sanctuary | Tamil Nadu |
| 37 | Karikili Bird Sanctuary | Tamil Nadu |
| 38 | Pallikaranai Marsh Reserve Forest | Tamil Nadu |
| 39 | Pichavaram Mangrove | Tamil Nadu |
| 40 | Point Calimere Wildlife Sanctuary | Tamil Nadu |
| 41 | Suchindram Theroor Wetland Complex | Tamil Nadu |
| 42 | Vaduvur Bird Sanctuary | Tamil Nadu |
| 43 | Vedanthangal Bird Sanctuary | Tamil Nadu |
| 44 | Udhayamarthandapuram Bird Sanctuary | Tamil Nadu |
| 45 | Vellode Bird Sanctuary | Tamil Nadu |
| 46 | Velode Wetland | Tamil Nadu |
| 47 | Kazhuveli Bird Sanctuary | Tamil Nadu |
| 48 | Nanjarayan Bird Sanctuary | Tamil Nadu |
| 49 | Karaivetti Bird Sanctuary | Tamil Nadu |
| 50 | Longwood Shola Reserve Forest | Tamil Nadu |
| 51 | Tamiraparani Wetland Complex | Tamil Nadu |
| 52 | Chitrangudi Wetland | Tamil Nadu |
| 53 | Nanmangalam Reserve Forest Wetland | Tamil Nadu |
| 54 | Rudrasagar Lake | Tripura |
| 55 | Asan Conservation Reserve | Uttarakhand |
| 56 | Upper Ganga River | Uttar Pradesh |
| 57 | Nawabganj Bird Sanctuary (Shaheed Chandra Shekhar Azad BS) | Uttar Pradesh |
| 58 | Saman Bird Sanctuary | Uttar Pradesh |
| 59 | Samaspur Bird Sanctuary | Uttar Pradesh |
| 60 | Sandi Bird Sanctuary | Uttar Pradesh |
| 61 | Sur Sarovar | Uttar Pradesh |
| 62 | Parvati Arga Bird Sanctuary | Uttar Pradesh |
| 63 | Haiderpur Wetland | Uttar Pradesh |
| 64 | Bakhira Wildlife Sanctuary | Uttar Pradesh |
| 65 | Patna Bird Sanctuary | Uttar Pradesh |
| 66 | Shekha Jheel Bird Sanctuary | Uttar Pradesh |
| 67 | Jai Prakash Narayan Bird Sanctuary (Surha Tal) | Uttar Pradesh |
| 68 | East Kolkata Wetlands | West Bengal |
| 69 | Sundarban Wetland | West Bengal |
| 70 | Bhitarkanika Mangroves | Odisha |
| 71 | Chilika Lake | Odisha |
| 72 | Satkosia Gorge Wetland | Odisha |
| 73 | Tampara Lake | Odisha |
| 74 | Hirakud Reservoir | Odisha |
| 75 | Harike Wetland | Punjab |
| 76 | Kanjli Wetland | Punjab |
| 77 | Ropar Wetland | Punjab |
| 78 | Beas Conservation Reserve | Punjab |
| 79 | Nangal Wildlife Sanctuary | Punjab |
| 80 | Keshopur-Miani Community Reserve | Punjab |
| 81 | Ranjit Sagar Wetland | Punjab |
| 82 | Keoladeo National Park | Rajasthan |
| 83 | Sambhar Lake | Rajasthan |
| 84 | Menar Wetland Complex | Rajasthan |
| 85 | Khichan Wetland | Rajasthan |
| 86 | Udhyapur Wetland Complex | Rajasthan |
| 87 | Aghanashini Estuary | Karnataka |
| 88 | Ranganathittu Bird Sanctuary | Karnataka |
| 89 | Magadi Kere Conservation Reserve | Karnataka |
| 90 | Ankasamudra Bird Conservation Reserve | Karnataka |
| 91 | Shallaki Wetland Conservation Reserve | Karnataka |
| 92 | Vembanad-Kol Wetland | Kerala |
| 93 | Ashtamudi Wetland | Kerala |
| 94 | Sasthamkotta Lake | Kerala |
| 95 | Tsomgo Lake | Sikkim |
| 96 | Udhwa Lake Bird Sanctuary | Jharkhand |
| 97 | Nagi Bird Sanctuary | Bihar |
| 98 | Nakti Bird Sanctuary | Bihar |
| 99 | Shekha Jheel Bird Sanctuary | Uttar Pradesh |
| 100 | Jai Prakash Narayan Bird Sanctuary (Surha Tal) | Uttar Pradesh |

