ಪ್ರಚಲಿತ ಘಟನೆಗಳು CA QUIZ GK JOB NEWS E-BOOK QUIZ TEST Geography History Indian Constitution MCQs
Impotent DaysLatest Updates

ಜೂನ್ 21 : ಅಂತರರಾಷ್ಟ್ರೀಯ ಯೋಗ ದಿನ (International Yoga Day) : ಹಿನ್ನೆಲೆ ಮತ್ತು ಮಹತ್ವ

Share With Friends

ಯೋಗವು ಭಾರತವು ಜಗತ್ತಿಗೆ ನೀಡಿದ ಅತ್ಯಂತ ಅಮೂಲ್ಯವಾದ ಕೊಡುಗೆಯಾಗಿದೆ. ದೈಹಿಕ ಫಿಟ್‌ನೆಸ್ ಮಾತ್ರವಲ್ಲದೆ, ಮಾನಸಿಕ ಶಾಂತಿ ಮತ್ತು ಆಧ್ಯಾತ್ಮಿಕ ಬೆಳವಣಿಗೆಯನ್ನು ನೀಡುವ ಈ ಕಲೆಗೆ ಜಾಗತಿಕ ಮನ್ನಣೆ ಸಿಕ್ಕ ದಿನವೇ ಜೂನ್ 21. ಪ್ರತಿವರ್ಷ ಜೂನ್ 21ರಂದು ಆಚರಿಸಲಾಗುವ ಅಂತರರಾಷ್ಟ್ರೀಯ ಯೋಗ ದಿನ(International Yoga Day)ವನ್ನು ಆಚರಿಸಲಾಗುತ್ತದೆ. ಭಾರತದ ಅಮೂಲ್ಯ ಸಾಂಸ್ಕೃತಿಕ ಪರಂಪರೆಯಾದ ಯೋಗದ ಮಹತ್ವವನ್ನು ಜಗತ್ತಿಗೆ ಪರಿಚಯಿಸುವ ಉದ್ದೇಶದಿಂದ ಈ ದಿನವನ್ನು ಆಚರಿಸಲಾಗುತ್ತದೆ. ಯೋಗವು ದೈಹಿಕ, ಮಾನಸಿಕ ಹಾಗೂ ಭಾವನಾತ್ಮಕ ಆರೋಗ್ಯವನ್ನು ಸುಧಾರಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತಿದ್ದು, ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳಲು ಪ್ರೇರೇಪಿಸುತ್ತದೆ.

ಯೋಗ ದಿನ ಆರಂಭವಾದದ್ದು ಹೇಗೆ…?
2014ರ ಸೆಪ್ಟೆಂಬರ್‌ನಲ್ಲಿ ನಡೆದ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ (UNGA) ಪ್ರಧಾನಿ ನರೇಂದ್ರ ಮೋದಿ ಅವರು ಜೂನ್ 21 ಅನ್ನು ‘ಅಂತರರಾಷ್ಟ್ರೀಯ ಯೋಗ ದಿನ’ವಾಗಿ ಆಚರಿಸಲು ಕರೆ ನೀಡಿದರು.

ಭಾರತದ ಈ ಪ್ರಸ್ತಾವನೆಗೆ ವಿಶ್ವಸಂಸ್ಥೆಯ ಇತಿಹಾಸದಲ್ಲೇ ಅಭೂತಪೂರ್ವ ಬೆಂಬಲ ವ್ಯಕ್ತವಾಯಿತು. ಕೇವಲ 75 ದಿನಗಳಲ್ಲಿ 175 ದೇಶಗಳ ಬೆಂಬಲದೊಂದಿಗೆ ಡಿಸೆಂಬರ್ 11, 2014 ರಂದು ವಿಶ್ವಸಂಸ್ಥೆಯು ಜೂನ್ 21 ಅನ್ನು ಅಂತರರಾಷ್ಟ್ರೀಯ ಯೋಗ ದಿನ ಎಂದು ಅಧಿಕೃತವಾಗಿ ಘೋಷಿಸಿತು. ಜೂನ್ 21, 2015 ರಂದು ವಿಶ್ವದಾದ್ಯಂತ ಮೊದಲ ಬಾರಿಗೆ ಅಂತರರಾಷ್ಟ್ರೀಯ ಯೋಗ ದಿನವನ್ನು ಅತ್ಯಂತ ಯಶಸ್ವಿಯಾಗಿ ಆಚರಿಸಲಾಯಿತು.

ಯೋಗ ದಿನವನ್ನು ಜೂನ್ 21ರಂದು ಏಕೆ ಆಚರಿಸಲಾಗುತ್ತದೆ..?
ಪ್ರತಿ ವರ್ಷ ಜೂನ್ 21ರಂದು ಯೋಗ ದಿನವನ್ನು ಆಚರಿಸಲಾಗುತ್ತದೆ. ಈ ದಿನವು ಉತ್ತರ ಗೋಳಾರ್ಧದಲ್ಲಿ ವರ್ಷದ ಅತಿ ದೀರ್ಘ ದಿನವಾದ ಬೇಸಿಗೆ ಅಯನ ಸಂಕ್ರಾಂತಿ (Summer Solstice) ಯೊಂದಿಗೆ ಹೊಂದಿಕೆಯಾಗುತ್ತದೆ. ಯೋಗದ ತತ್ವಶಾಸ್ತ್ರದಲ್ಲಿ ಈ ಅವಧಿಯನ್ನು ಆತ್ಮಜ್ಞಾನ ಮತ್ತು ಆಧ್ಯಾತ್ಮಿಕ ಬೆಳವಣಿಗೆಗೆ ಅತ್ಯಂತ ಮಹತ್ವದ್ದೆಂದು ಪರಿಗಣಿಸಲಾಗುತ್ತದೆ. ಆಧ್ಯಾತ್ಮಿಕ ಸಾಧನೆಗೆ ಮತ್ತು ದೇಹದಲ್ಲಿ ಸಕಾರಾತ್ಮಕ ಶಕ್ತಿಯನ್ನು ಹೆಚ್ಚಿಸಲು ಅತ್ಯಂತ ಪ್ರಶಸ್ತವಾದ ಸಮಯ ಎಂದು ಪರಿಗಣಿಸಲಾಗಿದೆ.

ಯೋಗ ಪದದ ಮೂಲ :
ಯೋಗ ಎಂಬ ಪದವು ಸಂಸ್ಕೃತದ ‘ಯುಜ್’ ಧಾತುವಿನಿಂದ ಬಂದಿದೆ. ಇದರರ್ಥ ‘ಜೋಡಿಸು’ ಅಥವಾ ‘ಒಂದಾಗಿಸು’ (ದೇಹ ಮತ್ತು ಮನಸ್ಸಿನ ಮಿಲನ).ಪಿತಾಮಹ: ಮಹರ್ಷಿ ಪತಂಜಲಿ ಅವರನ್ನು ಆಧುನಿಕ ಯೋಗದ ಪಿತಾಮಹ ಎಂದು ಕರೆಯಲಾಗುತ್ತದೆ. ಇವರು ‘ಯೋಗಸೂತ್ರ’ಗಳನ್ನು ರಚಿಸಿದರು.

2026ರ ವಿಶೇಷ ಥೀಮ್ (Theme)
2026ರ ಥೀಮ್: “Yoga for Healthy Ageing” (ಆರೋಗ್ಯಕರ ವಯೋವೃದ್ಧಿಗಾಗಿ ಯೋಗ).

ಪ್ರತಿ ವರ್ಷ ಯೋಗ ದಿನವನ್ನು ಒಂದು ನಿರ್ದಿಷ್ಟ ಸಂದೇಶದೊಂದಿಗೆ ಆಚರಿಸಲಾಗುತ್ತದೆ. ವಯಸ್ಸಾಗುತ್ತಿದ್ದಂತೆ ಎದುರಾಗುವ ದೈಹಿಕ ಮತ್ತು ಮಾನಸಿಕ ಸವಾಲುಗಳನ್ನು ಎದುರಿಸಲು, ವೃದ್ಧರಲ್ಲೂ ಚಲನಶೀಲತೆ, ನಮ್ಯತೆ (flexibility) ಮತ್ತು ಮಾನಸಿಕ ನೆಮ್ಮದಿಯನ್ನು ಕಾಪಾಡಿಕೊಳ್ಳಲು ಯೋಗ ಎಷ್ಟು ಸಹಕಾರಿ ಎಂಬುದನ್ನು ಈ ಥೀಮ್ ಒತ್ತಿಹೇಳುತ್ತದೆ.

ಯೋಗದ ಮಹತ್ವ ಮತ್ತು ಪ್ರಯೋಜನಗಳು (Importance & Benefits)
ಇಂದಿನ ಧಾವಂತದ ಮತ್ತು ಒತ್ತಡದ ಜೀವನಶೈಲಿಯಲ್ಲಿ ಯೋಗದ ಅಗತ್ಯತೆ ಎಂದಿಗಿಂತಲೂ ಹೆಚ್ಚಾಗಿದೆ. ಯೋಗವು ಕೇವಲ ದೈಹಿಕ ಕಸರತ್ತಲ್ಲ, ಅದು ದೇಹ, ಮನಸ್ಸು ಮತ್ತು ಆತ್ಮವನ್ನು ಜೋಡಿಸುವ ಕಲೆ.

ದೈಹಿಕ ಆರೋಗ್ಯ:
ನಿಯಮಿತ ಯೋಗಾಭ್ಯಾಸದಿಂದ ದೇಹದ ನಮ್ಯತೆ, ಸ್ನಾಯುಗಳ ಶಕ್ತಿ ಮತ್ತು ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ಇದು ರಕ್ತದೊತ್ತಡ, ಮಧುಮೇಹ ಮತ್ತು ಹೃದಯ ಸಂಬಂಧಿ ಕಾಯಿಲೆಗಳನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ.

ಮಾನಸಿಕ ನೆಮ್ಮದಿ:
ಯೋಗದಲ್ಲಿನ ಪ್ರಾಣಾಯಾಮ (ಉಸಿರಾಟದ ಪ್ರಕ್ರಿಯೆ) ಮತ್ತು ಧ್ಯಾನವು ಮೆದುಳನ್ನು ಶಾಂತಗೊಳಿಸುತ್ತದೆ. ಇದು ಇಂದಿನ ಪೀಳಿಗೆಯನ್ನು ಕಾಡುತ್ತಿರುವ ತೀವ್ರ ಒತ್ತಡ, ಆತಂಕ (Anxiety) ಮತ್ತು ಖಿನ್ನತೆಯನ್ನು ದೂರ ಮಾಡುತ್ತದೆ.

ಏಕಾಗ್ರತೆ ಮತ್ತು ನಿದ್ರೆ:
ಇದು ನರಮಂಡಲವನ್ನು ಉತ್ತೇಜಿಸಿ ಏಕಾಗ್ರತೆಯನ್ನು ಹೆಚ್ಚಿಸುತ್ತದೆ ಹಾಗೂ ಇನ್ಸೋಮ್ನಿಯಾದಂತಹ (ನಿದ್ರಾಹೀನತೆ) ಸಮಸ್ಯೆಯಿಂದ ಮುಕ್ತಿ ನೀಡುತ್ತದೆ.

ಜಾಗತಿಕ ಒಗ್ಗಟ್ಟು:
ಜಾತಿ, ಮತ, ದೇಶಗಳ ಗಡಿಗಳನ್ನು ಮೀರಿ ಯೋಗವು ಇಡೀ ಜಗತ್ತನ್ನು “ವಸುಧೈವ ಕುಟುಂಬಕಂ” (ಜಗತ್ತೇ ಒಂದು ಕುಟುಂಬ) ಎಂಬ ಭಾವನೆಯಡಿ ಒಂದುಗೂಡಿಸುತ್ತದೆ.

ಇಂದಿನ ಕಾಲದಲ್ಲಿ ಯೋಗದ ಪ್ರಸ್ತುತತೆ :
ಆಧುನಿಕ ಜೀವನದಲ್ಲಿ ಒತ್ತಡ, ಆತಂಕ, ದೈಹಿಕ ಚಟುವಟಿಕೆಗಳ ಕೊರತೆ ಮತ್ತು ಜೀವನಶೈಲಿ ಸಂಬಂಧಿತ ಕಾಯಿಲೆಗಳು ಹೆಚ್ಚುತ್ತಿರುವ ಸಂದರ್ಭದಲ್ಲಿ ಯೋಗವು ಸಮಗ್ರ ಆರೋಗ್ಯದ ಮಾರ್ಗವನ್ನು ಒದಗಿಸುತ್ತದೆ.

ಗಮನಿಸಬೇಕಾದ ಪ್ರಮುಖ ಅಂಶಗಳು :
⮞ ಪ್ರತಿವರ್ಷ ಜೂನ್ 21ರಂದು ಆಚರಿಸಲಾಗುವ ಅಂತರರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಾಗುತ್ತದೆ.
⮞ ಮೊದಲ ಬಾರಿಗೆ ಅಂತರರಾಷ್ಟ್ರೀಯ ಯೋಗ ದಿನವನ್ನು 2015ರ ಜೂನ್ 21ರಂದು ವಿಶ್ವದಾದ್ಯಂತ ಆಚರಿಸಲಾಯಿತು.
⮞2026ರ ಭಾರತದ ಮುಖ್ಯ ಯೋಗ ದಿನದ ಬೃಹತ್ ಕಾರ್ಯಕ್ರಮವನ್ನು ಪಶ್ಚಿಮ ಬಂಗಾಳದ ಸಾಂಸ್ಕೃತಿಕ ನಗರಿ ಕೋಲ್ಕತ್ತಾದಲ್ಲಿ ಆಯೋಜಿಸಲಾಗಿತ್ತು.
⮞ 2014ರ ಸೆಪ್ಟೆಂಬರ್ 27ರಂದು Narendra Modi ಅವರು UN ಸಾಮಾನ್ಯ ಸಭೆಯಲ್ಲಿ ಅಂತರರಾಷ್ಟ್ರೀಯ ಯೋಗ ದಿನ ಆಚರಿಸುವಂತೆ ಪ್ರಸ್ತಾಪಿಸಿದರು. 177 ದೇಶಗಳು ಈ ನಿರ್ಣಯವನ್ನು ಬೆಂಬಲಿಸಿದವು.UN 2014ರ ಡಿಸೆಂಬರ್ 11ರಂದು ಜೂನ್ 21 ಅನ್ನು ಅಂತರರಾಷ್ಟ್ರೀಯ ಯೋಗ ದಿನವಾಗಿ ಘೋಷಿಸಿತು. 2015ರಿಂದ ಪ್ರತಿ ವರ್ಷ ಜೂನ್ 21ರಂದು ವಿಶ್ವದಾದ್ಯಂತ ಆಚರಿಸಲಾಗುತ್ತಿದೆ.
⮞ ⮞ 11 ಡಿಸೆಂಬರ್ 2014 ರಂದು ದಾಖಲೆಯ 177 ದೇಶಗಳ ಬೆಂಬಲದೊಂದಿಗೆ UNGA ನಲ್ಲಿ ನಿರ್ಣಯ ಅಂಗೀಕರಿಸಲ್ಪಟ್ಟಿತು.
21 ಜೂನ್ 2015 (ನವದೆಹಲಿಯ ರಾಜಪಥ್‌ನಲ್ಲಿ ಮೊದಲ ಬಾರಿಗೆ ಬೃಹತ್ ಕಾರ್ಯಕ್ರಮ ನಡೆಯಿತು).
⮞ 2026ರಲ್ಲಿ ಇದು 12ನೇ ಅಂತರರಾಷ್ಟ್ರೀಯ ಯೋಗ ದಿನ ಆಚರಣೆ
⮞ಭಾರತದಲ್ಲಿ ಯೋಗ ಮತ್ತು ಆಯುರ್ವೇದದ ಉಸ್ತುವಾರಿಯನ್ನು ಆಯುಷ್ ಸಚಿವಾಲಯ (Ministry of AYUSH – Ayurveda, Yoga & Naturopathy, Unani, Siddha and Homoeopathy) ನೋಡಿಕೊಳ್ಳುತ್ತದೆ.

2015 ರಿಂದ ಈವರೆಗೆ ಯೋಗ ದಿನದ ಮುಖ್ಯ ಕಾರ್ಯಕ್ರಮಗಳು ನಡೆದ ಪ್ರಮುಖ ಸ್ಥಳಗಳ ಪಟ್ಟಿ
ಭಾರತದಲ್ಲಿ ಪ್ರತಿ ವರ್ಷ ಜೂನ್ 21 ರಂದು ಆಚರಿಸಲಾಗುವ ಅಂತರರಾಷ್ಟ್ರೀಯ ಯೋಗ ದಿನದ ಅಂಗವಾಗಿ, ದೇಶದ ವಿವಿಧ ನಗರಗಳಲ್ಲಿ ಪ್ರಧಾನಮಂತ್ರಿಗಳ ನೇತೃತ್ವದಲ್ಲಿ ಮುಖ್ಯ ರಾಷ್ಟ್ರೀಯ ಕಾರ್ಯಕ್ರಮಗಳನ್ನು (Main National Events) ಆಯೋಜಿಸಲಾಗುತ್ತದೆ. 2015 ರಿಂದ ಈವರೆಗೆ ಮುಖ್ಯ ಕಾರ್ಯಕ್ರಮಗಳು ನಡೆದ ಪ್ರಮುಖ ಸ್ಥಳಗಳ ಪಟ್ಟಿ ಇಲ್ಲಿದೆ:

ವರ್ಷಮುಖ್ಯ ಕಾರ್ಯಕ್ರಮ ನಡೆದ ಸ್ಥಳ / ನಗರವಿಶೇಷತೆ
2015ರಾಜಪಥ್, ನವದೆಹಲಿಮೊದಲ ಅಂತರರಾಷ್ಟ್ರೀಯ ಯೋಗ ದಿನ. ಗಿನ್ನೆಸ್ ದಾಖಲೆ ನಿರ್ಮಾಣ.
2016ಚಂಡೀಗಢಕ್ಯಾಪಿಟಲ್ ಕಾಂಪ್ಲೆಕ್ಸ್‌ನಲ್ಲಿ ಬೃಹತ್ ಆಚರಣೆ.
2017ಲಕ್ನೋ, ಉತ್ತರ ಪ್ರದೇಶರಮಾಬಾಯಿ ಅಂಬೇಡ್ಕರ್ ಮೈದಾನದಲ್ಲಿ ನಡೆದ ಕಾರ್ಯಕ್ರಮ.
2018ಡೆಹ್ರಾಡೂನ್, ಉತ್ತರಾಖಂಡಅರಣ್ಯ ಸಂಶೋಧನಾ ಸಂಸ್ಥೆ (FRI) ಆವರಣ.
2019ರಾಂಚಿ, ಜಾರ್ಖಂಡ್ಪ್ರಭಾತ್ ತಾರಾ ಮೈದಾನದಲ್ಲಿ ಬೃಹತ್ ಸಮಾವೇಶ.
2020ವರ್ಚುವಲ್ (ಆನ್‌ಲೈನ್)ಕೋವಿಡ್-19 ಸಾಂಕ್ರಾಮಿಕದ ಕಾರಣದಿಂದಾಗಿ ಜನರು ಮನೆಯಲ್ಲೇ ಆಚರಿಸಿದರು (Theme: Yoga at Home).
2021ವರ್ಚುವಲ್ (ಆನ್‌ಲೈನ್)ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ದೂರದರ್ಶನ ಮತ್ತು ಡಿಜಿಟಲ್ ಮಾಧ್ಯಮಗಳ ಮೂಲಕ ಪ್ರಧಾನಿ ಭಾಷಣ ಮಾಡಿದರು.
2022ಮೈಸೂರು, ಕರ್ನಾಟಕನಮ್ಮ ಹೆಮ್ಮೆಯ ಮೈಸೂರು ಅರಮನೆ ಆವರಣದಲ್ಲಿ ಪ್ರಧಾನಿ ಮೋದಿ ನೇತೃತ್ವದಲ್ಲಿ ಐತಿಹಾಸಿಕ ಆಚರಣೆ ನಡೆಯಿತು.
2023ವಿಶ್ವಸಂಸ್ಥೆಯ ಪ್ರಧಾನ ಕಚೇರಿ, ನ್ಯೂಯಾರ್ಕ್ (ಯು.ಎಸ್.ಎ) / ಜಬಲ್ಪುರ, ಮಧ್ಯಪ್ರದೇಶಪ್ರಧಾನಿ ಮೋದಿ ಅವರು ಅಮೆರಿಕದ ನ್ಯೂಯಾರ್ಕ್‌ನಲ್ಲಿ ಜಾಗತಿಕ ಕಾರ್ಯಕ್ರಮ ಮುನ್ನಡೆಸಿದರೆ, ಭಾರತದ ರಾಷ್ಟ್ರೀಯ ಕಾರ್ಯಕ್ರಮ ಜಬಲ್‌ಪುರದಲ್ಲಿ ನಡೆಯಿತು.
2024ಶ್ರೀನಗರ, ಜಮ್ಮು ಮತ್ತು ಕಾಶ್ಮೀರದಾಲ್ ಸರೋವರದ ತೀರದಲ್ಲಿರುವ ಶೇರ್-ಎ-ಕಾಶ್ಮೀರ್ ಇಂಟರ್ನ್ಯಾಷನಲ್ ಕಾನ್ಫರೆನ್ಸ್ ಸೆಂಟರ್ (SKICC).
2025ವಿಶಾಖಪಟ್ಟಣಂ, ಆಂಧ್ರಪ್ರದೇಶಕರಾವಳಿ ನಗರಿ ವಿಶಾಖಪಟ್ಟಣಂನಲ್ಲಿ ನಡೆದ ಮುಖ್ಯ ಕಾರ್ಯಕ್ರಮ.
2026ಕೋಲ್ಕತ್ತಾ, ಪಶ್ಚಿಮ ಬಂಗಾಳಈ ವರ್ಷದ (2026) ಮುಖ್ಯ ರಾಷ್ಟ್ರೀಯ ಕಾರ್ಯಕ್ರಮವನ್ನು ಕೋಲ್ಕತ್ತಾದ ಐತಿಹಾಸಿಕ ರೆಡ್ ರೋಡ್ (Red Road) ಮೈದಾನದಲ್ಲಿ ಆಯೋಜಿಸಲಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಸಾಮೂಹಿಕ ಯೋಗಾಭ್ಯಾಸದ ನೇತೃತ್ವ ವಹಿಸಿದ್ದಾರೆ.

ನೆನಪಿನಲ್ಲಿಡಬೇಕಾದ ಪ್ರಮುಖ ದಿನಾಚರಣೆಗಳು (ಪ್ರಮುಖ ದಿನಗಳು)
ಪ್ರಮುಖ ಅಂತರಾಷ್ಟ್ರೀಯ ದಿನಗಳು
ಜನವರಿ ತಿಂಗಳ ಪ್ರಮುಖ ದಿನಗಳು / Important days in January
ಫೆಬ್ರವರಿ ತಿಂಗಳ ಪ್ರಮುಖ ದಿನಗಳು / Important days in February
ಮಾರ್ಚ್ ತಿಂಗಳ ಪ್ರಮುಖ ದಿನಗಳು / Important days in March
ಏಪ್ರಿಲ್ ತಿಂಗಳ ಪ್ರಮುಖ ದಿನಗಳು / Important Days in April
ಮೇ ತಿಂಗಳ ಪ್ರಮುಖ ದಿನಗಳು / Important days in May
ಜೂನ್ ತಿಂಗಳ ಪ್ರಮುಖ ದಿನಗಳು / Important days in June
ಜುಲೈ ತಿಂಗಳ ಪ್ರಮುಖ ದಿನಗಳು / Important days in July
ಸೆಪ್ಟೆಂಬರ್ ತಿಂಗಳ ಪ್ರಮುಖ ದಿನಗಳು / Important days in September
ಅಕ್ಟೋಬರ್ ತಿಂಗಳ ಪ್ರಮುಖ ದಿನಗಳು / Important days in October
ನವೆಂಬರ್ ತಿಂಗಳ ಪ್ರಮುಖ ದಿನಗಳು / Important days in November
ಡಿಸೆಂಬರ್ ತಿಂಗಳ ಪ್ರಮುಖ ದಿನಗಳು / Important days in December

error: Content Copyright protected !!