ಪ್ರಚಲಿತ ಘಟನೆಗಳು CA QUIZ GK JOB NEWS E-BOOK QUIZ TEST Geography History Indian Constitution MCQs
GKLatest UpdatesScience

ಗ್ರಂಥಿಗಳು ಮತ್ತು ಹಾರ್ಮೋನ್‌ಗಳು (Glands and Hormones)

Share With Friends

ಜೀವದ ವಿಜ್ಞಾನದಲ್ಲಿ ಹಾರ್ಮೋನ್‌ಗಳ ಹೊರಸೂಸುವಿಕೆ ಮತ್ತು ಹಾರ್ಮೋನುಗಳ ಸ್ವಭಾವದ ಕುರಿತಾದ ಅಧ್ಯಯನವನ್ನು “Endocrinology” ಎನ್ನುವರು. ಸ್ರವಿಕೆಯ ಕಾರ್ಯ ನಿರ್ವಹಿಸುವ ಜೀವಕೋಶಗಳ ಸಮೂಹವನ್ನು ಗ್ರಂಥಿಗಳು ಎನ್ನುವರು.

ಗ್ರಂಥಿಗಳನ್ನು ಮುಖ್ಯವಾಗಿ ಮೂರು ವಿಧಗಳಾಗಿ ವಿಂಗಡಿಸಲಾಗಿದೆ. ಅವು ನಾಳ ಗ್ರಂಥಿಗಳು (Exocrine Glands), ನಿರ್ನಾಳ ಗ್ರಂಥಿಗಳು (Endocrine Glands) ಮತ್ತು ಮಿಶ್ರ ಗ್ರಂಥಿಗಳು (Mixed Glands).

ನಾಳಗ್ರಂಥಿಗಳಲ್ಲಿ ಲಾಲಾರಸ ಗ್ರಂಥಿಗಳು (Salivary Glands) ಪ್ರಮುಖವಾಗಿವೆ. ಲಾಲಾರಸ ಗ್ರಂಥಿಗಳಲ್ಲಿ Parotid gland, Submandibular gland ಮತ್ತು Sublingual gland ಎಂಬ ಮೂರು ವಿಧಗಳಿವೆ. Parotid gland ಕೆನ್ನೆಯ ಕೆಳಭಾಗದಲ್ಲಿ ಕಂಡುಬರುತ್ತದೆ. Submandibular gland ನಾಲಿಗೆಯ ಕೆಳಭಾಗದ ಹಿಂಬದಿಯಲ್ಲಿ ಕಂಡುಬರುತ್ತದೆ. Sublingual gland ನಾಲಿಗೆಯ ಕೆಳಭಾಗದ ಮುಂಬದಿಯಲ್ಲಿ ಕಂಡುಬರುತ್ತದೆ. ಈ ಎಲ್ಲಾ ಗ್ರಂಥಿಗಳಿಂದ ಬಿಡುಗಡೆಯಾಗುವ ರಸವನ್ನು ಲಾಲಾರಸ ಎನ್ನುವರು.

ಲಾಲಾರಸದಲ್ಲಿ ಸುಮಾರು 99% ನೀರು ಮತ್ತು 1% Amylose/Ptyalin, Lysozyme ಹಾಗೂ ಅಂಟು ಪದಾರ್ಥ ಇರುತ್ತದೆ. Amylose/Ptyalin ಪಿಷ್ಟವನ್ನು Maltose ಆಗಿ ಪರಿವರ್ತಿಸುತ್ತದೆ. Lysozyme ಆಹಾರದಲ್ಲಿರುವ ಸೂಕ್ಷ್ಮಜೀವಿಗಳನ್ನು ನಾಶಪಡಿಸುತ್ತದೆ. Mucus (ಅಂಟು ಪದಾರ್ಥ) ಗಂಟಲಿನಲ್ಲಿ ಆಹಾರವು ಸುಲಭವಾಗಿ ಜಾರಲು ಸಹಾಯ ಮಾಡುತ್ತದೆ. ಒಬ್ಬ ವ್ಯಕ್ತಿಯಲ್ಲಿ ಒಂದು ದಿನಕ್ಕೆ ಸುಮಾರು 1.5 ಲೀಟರ್ ಲಾಲಾರಸ ಬಿಡುಗಡೆಯಾಗುತ್ತದೆ.

ಪಿತ್ತಜನಕಾಂಗ ಅಥವಾ ಯಕೃತ್ (Liver) ಉದರದ ಬಲಭಾಗದಲ್ಲಿ ಕಂಡುಬರುತ್ತದೆ. ಇದು ತ್ರಿಕೋನ ಆಕಾರವನ್ನು ಹೊಂದಿದ್ದು, ಕೆಂಪು ಮಿಶ್ರಿತ ಕಂದು ಬಣ್ಣದಲ್ಲಿರುತ್ತದೆ. ಇದರ ತೂಕ ಸುಮಾರು 1.5 ಕೆ.ಜಿ. ಅಥವಾ 1500 ಗ್ರಾಂ ಇರುತ್ತದೆ. ಇದು ಮಾನವನ ದೇಹದಲ್ಲಿರುವ ಅತಿದೊಡ್ಡ ಗ್ರಂಥಿಯಾಗಿದೆ. ಯಕೃತ್ತಿನ ಕುರಿತಾದ ಅಧ್ಯಯನವನ್ನು “Hepatology” ಎನ್ನುವರು. ದೇಹದಲ್ಲಿ ಪುನರುತ್ಪತ್ತಿ ಸಾಮರ್ಥ್ಯ ಹೊಂದಿರುವ ಪ್ರಮುಖ ಅಂಗಗಳಲ್ಲಿ ಯಕೃತ್ ಒಂದಾಗಿದೆ. ಇದರ Hepatocytes ಎಂಬ ಜೀವಕೋಶಗಳು ಯಕೃತ್ತಿನ ಕಾರ್ಯಗಳಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಯಕೃತ್ತಿನ ಪ್ರಮುಖ ಕಾರ್ಯಗಳಲ್ಲಿ ದೇಹದಲ್ಲಿರುವ ವಿಷಕಾರಿ ವಸ್ತುಗಳನ್ನು ಸಂಸ್ಕರಿಸಿ ಹೊರಹಾಕಲು ಸಹಾಯ ಮಾಡುವುದು ಸೇರಿದೆ.

ಪ್ರಶ್ನೋತ್ತರಗಳು :
➧ ಹಾರ್ಮೋನ್‌ಗಳ ಹೊರಸೂಸುವಿಕೆ ಮತ್ತು ಅವುಗಳ ಸ್ವಭಾವದ ಕುರಿತಾದ ಅಧ್ಯಯನವನ್ನು ಏನೆಂದು ಕರೆಯುತ್ತಾರೆ..?**
Endocrinology (ಅಂತಃಸ್ರಾವಶಾಸ್ತ್ರ)
➧ ಹಾರ್ಮೋನ್‌ಗಳ ಹೊರಸೂಸುವಿಕೆ ಮತ್ತು ಅವುಗಳ ಸ್ವಭಾವದ ಕುರಿತಾದ ಅಧ್ಯಯನವನ್ನು ಏನೆಂದು ಕರೆಯುತ್ತಾರೆ..?**
Endocrinology (ಅಂತಃಸ್ರಾವಶಾಸ್ತ್ರ)
➧ ಗ್ರಂಥಿಗಳು ಎಂದರೇನು?
ಸ್ರವಿಕೆಯ ಕಾರ್ಯವನ್ನು ನಿರ್ವಹಿಸುವ ಜೀವಕೋಶಗಳ ಸಮೂಹವನ್ನು ಗ್ರಂಥಿಗಳು ಎನ್ನುವರು.
➧ ಗ್ರಂಥಿಗಳಲ್ಲಿ ಎಷ್ಟು ವಿಧಗಳಿವೆ? ಅವು ಯಾವುವು?
ಗ್ರಂಥಿಗಳಲ್ಲಿ ಮೂರು ವಿಧಗಳಿವೆ.
1.ನಾಳ ಗ್ರಂಥಿಗಳು (Exocrine Glands)
2.ನಿರ್ನಾಳ ಗ್ರಂಥಿಗಳು (Endocrine Glands)
3.ಮಿಶ್ರ ಗ್ರಂಥಿಗಳು (Mixed Glands)
➧ ಲಾಲಾರಸ ಗ್ರಂಥಿಗಳಲ್ಲಿ ಎಷ್ಟು ವಿಧಗಳಿವೆ?
ಉತ್ತರ: ಲಾಲಾರಸ ಗ್ರಂಥಿಗಳಲ್ಲಿ ಮುಖ್ಯವಾಗಿ ಮೂರು ವಿಧಗಳಿವೆ — Parotid gland, Submandibular gland ಮತ್ತು Sublingual gland.
➧ Parotid gland ಎಲ್ಲಿ ಕಂಡುಬರುತ್ತದೆ?
ಉತ್ತರ:
ಇದು ಕೆನ್ನೆಯ ಭಾಗದಲ್ಲಿ ಕಂಡುಬರುತ್ತದೆ.
➧ Submandibular gland ಎಲ್ಲಿ ಕಂಡುಬರುತ್ತದೆ?
ಉತ್ತರ:
ಇದು ನಾಲಿಗೆಯ ಕೆಳಭಾಗದ ಹಿಂಬದಿಯಲ್ಲಿ ಕಂಡುಬರುತ್ತದೆ.
➧Sublingual gland ಎಲ್ಲಿ ಕಂಡುಬರುತ್ತದೆ?
ಉತ್ತರ:
ಇದು ನಾಲಿಗೆಯ ಕೆಳಭಾಗದ ಮುಂಬದಿಯಲ್ಲಿ ಕಂಡುಬರುತ್ತದೆ.
➧ ಲಾಲಾರಸ ಎಂದರೇನು?
ಉತ್ತರ:
ಲಾಲಾರಸ ಗ್ರಂಥಿಗಳಿಂದ ಬಿಡುಗಡೆಯಾಗುವ ರಸವನ್ನು ಲಾಲಾರಸ (Saliva) ಎನ್ನುವರು.
➧ ಲಾಲಾರಸದಲ್ಲಿ ನೀರಿನ ಪ್ರಮಾಣ ಎಷ್ಟು?
ಉತ್ತರ: ಲಾಲಾರಸದಲ್ಲಿ ಸುಮಾರು 99% ನೀರು ಇರುತ್ತದೆ.
➧ ಲಾಲಾರಸದಲ್ಲಿರುವ ಪ್ರಮುಖ ಅಂಶಗಳು ಯಾವುವು?
ಉತ್ತರ:
ಲಾಲಾರಸದಲ್ಲಿ ನೀರು, Ptyalin/Salivary amylase, Lysozyme ಮತ್ತು Mucus ಮುಂತಾದ ಅಂಶಗಳಿರುತ್ತವೆ.
➧ Ptyalin/Salivary amylaseನ ಕಾರ್ಯವೇನು?
ಉತ್ತರ:
ಇದು ಪಿಷ್ಟವನ್ನು (Starch) Maltose ಆಗಿ ಪರಿವರ್ತಿಸಲು ಸಹಾಯ ಮಾಡುತ್ತದೆ.
➧ Lysozymeನ ಕಾರ್ಯವೇನು?
ಉತ್ತರ: ಇದು ಆಹಾರದಲ್ಲಿರುವ ಕೆಲವು ಸೂಕ್ಷ್ಮಜೀವಿಗಳನ್ನು ನಾಶಪಡಿಸಲು ಸಹಾಯ ಮಾಡುತ್ತದೆ.
➧ Mucusನ ಕಾರ್ಯವೇನು?
ಉತ್ತರ: ಆಹಾರವು ಗಂಟಲಿನಲ್ಲಿ ಸುಲಭವಾಗಿ ಜಾರಲು Mucus ಸಹಾಯ ಮಾಡುತ್ತದೆ.
➧ ಒಬ್ಬ ವ್ಯಕ್ತಿಯಲ್ಲಿ ದಿನಕ್ಕೆ ಸರಾಸರಿ ಎಷ್ಟು ಲಾಲಾರಸ ಉತ್ಪತ್ತಿಯಾಗುತ್ತದೆ?
ಉತ್ತರ: ಸುಮಾರು 1.5 ಲೀಟರ್ ಲಾಲಾರಸ ಉತ್ಪತ್ತಿಯಾಗುತ್ತದೆ.





author avatar
GK KANNADA
GK Kannada offers comprehensive General Knowledge, current affairs updates, MCQs, and study notes to help you prepare effectively for competitive exams like UPSC, KPSC, SSC, and banking exams.

GK KANNADA

GK Kannada offers comprehensive General Knowledge, current affairs updates, MCQs, and study notes to help you prepare effectively for competitive exams like UPSC, KPSC, SSC, and banking exams.

error: Content Copyright protected !!