ಐಪಿಎಲ್ 2026 ರಲ್ಲಿ ವೈಭವ್ ಸೂರ್ಯವಂಶಿ ಮುರಿದ ದಾಖಲೆಗಳ ಸಂಪೂರ್ಣ ಪಟ್ಟಿ
ಐಪಿಎಲ್ 2026ರ ಋತುವಿನಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ಕಿರಿಯ ಆಟಗಾರ ವೈಭವ್ ಸೂರ್ಯವಂಶಿ (Vaibhav Sooryavanshi) ಕ್ರಿಕೆಟ್ ಜಗತ್ತೇ ನಿಂತು ನೋಡುವಂತಹ ಐತಿಹಾಸಿಕ ಬ್ಯಾಟಿಂಗ್ ಪ್ರದರ್ಶನ ನೀಡಿದ್ದಾರೆ. ಕೇವಲ 15ನೇ ವಯಸ್ಸಿನಲ್ಲಿ ಅವರು ಬ್ಯಾಟಿಂಗ್ನಲ್ಲಿ ಹಲವು ದಾಖಲೆಗಳನ್ನು ನಿರ್ಮಿಸಿ ಕ್ರಿಕೆಟ್ ಅಭಿಮಾನಿಗಳ ಗಮನ ಸೆಳೆದಿದ್ದಾರೆ. ಕೇವಲ ರನ್ ಗಳಿಸಿಲ್ಲ, ಬದಲಿಗೆ ಐಪಿಎಲ್ ಇತಿಹಾಸದ ಹತ್ತಾರು ದಿಗ್ಗಜರ ದಾಖಲೆಗಳನ್ನು ಧೂಳೀಪಟ ಮಾಡಿದ್ದಾರೆ.
ಕೇವಲ 1.10 ಕೋಟಿ ರೂಪಾಯಿಗೆ ರಾಜಸ್ಥಾನ್ ರಾಯಲ್ಸ್ ತಂಡ ಸೇರಿದ್ದ ವೈಭವ್ ಸೂರ್ಯವಂಶಿ, ತಮ್ಮ ವಿಧ್ವಂಸಕ ಬ್ಯಾಟಿಂಗ್ ಮೂಲಕ ಐಪಿಎಲ್ 2026ರ ಅತ್ಯಂತ ದೊಡ್ಡ ಆಸ್ತಿಯಾಗಿ ಹೊರಹೊಮ್ಮಿದ್ದಾರೆ.
ಐಪಿಎಲ್ 2026ರಲ್ಲಿ ವೈಭವ್ ಸೂರ್ಯವಂಶಿ ನಿರ್ಮಿಸಿದ ಪ್ರಮುಖ ದಾಖಲೆಗಳು
1.ಒಂದೇ ಐಪಿಎಲ್ ಋತುವಿನಲ್ಲಿ ಪವರ್ಪ್ಲೇಯಲ್ಲಿ ಅತಿ ಹೆಚ್ಚು ರನ್ಗಳು (521).
2.ಒಂದೇ ಐಪಿಎಲ್ ಆವೃತ್ತಿಯಲ್ಲಿ ಅತಿ ಹೆಚ್ಚು ಸಿಕ್ಸರ್ಗಳು (72).
3.500+ ರನ್ಗಳನ್ನು 200+ ಸ್ಟ್ರೈಕ್ ರೇಟ್ನಲ್ಲಿ ಗಳಿಸಿದ ಮೊದಲ ಬ್ಯಾಟರ್.
4.ಟಿ20 ಟೂರ್ನಿಯಲ್ಲಿ 700+ ರನ್ಗಳನ್ನು 200+ ಸ್ಟ್ರೈಕ್ ರೇಟ್ನಲ್ಲಿ ಗಳಿಸಿದ ಮೊದಲ ಆಟಗಾರ.
5.ಅನ್ಕ್ಯಾಪ್ಡ್ ಬ್ಯಾಟರ್ನಿಂದ ಐಪಿಎಲ್ನಲ್ಲಿ ಅತಿ ಹೆಚ್ಚು ರನ್ಗಳು (776).
6.ಕೇವಲ 440 ಎಸೆತಗಳಲ್ಲಿ 1,000 ಐಪಿಎಲ್ ರನ್ಗಳನ್ನು ತಲುಪಿದ ವೇಗದ ಬ್ಯಾಟರ್.
7.1,000 ಐಪಿಎಲ್ ರನ್ಗಳನ್ನು ತಲುಪಿದ ಅತ್ಯಂತ ಕಿರಿಯ ಆಟಗಾರ.
8.ಐಪಿಎಲ್ ಪ್ಲೇಆಫ್ ಇನ್ನಿಂಗ್ಸ್ನಲ್ಲಿ ಅತಿ ಹೆಚ್ಚು ಸಿಕ್ಸರ್ಗಳು (12).
9.ಭಾರತೀಯ ಬ್ಯಾಟರ್ನಿಂದ ಒಂದೇ ಇನ್ನಿಂಗ್ಸ್ನಲ್ಲಿ ಜಂಟಿ ಅತಿ ಹೆಚ್ಚು ಸಿಕ್ಸರ್ಗಳು (12).
10.ಒಂದೇ ಐಪಿಎಲ್ ಇನ್ನಿಂಗ್ಸ್ನ ಪವರ್ಪ್ಲೇಯಲ್ಲಿ ಅತಿ ಹೆಚ್ಚು ಸಿಕ್ಸರ್ಗಳು (8).
11.ಒಂದೇ ಋತುವಿನಲ್ಲಿ ಮೂರು ಬಾರಿ 10+ ಸಿಕ್ಸರ್ಗಳ ಇನ್ನಿಂಗ್ಸ್ ಆಡಿದ ಮೊದಲ ಬ್ಯಾಟರ್.
12.10+ ಸಿಕ್ಸರ್ಗಳ ಇನ್ನಿಂಗ್ಸ್ಗಳ ಸಂಖ್ಯೆಯಲ್ಲಿ Chris Gayle ದಾಖಲೆಯನ್ನು ಸರಿಗಟ್ಟಿದರು.
13.ಪ್ಲೇಆಫ್ ಇತಿಹಾಸದ ಜಂಟಿ ವೇಗದ ಅರ್ಧಶತಕ (16 ಎಸೆತಗಳು).
14.20 ಎಸೆತಗಳೊಳಗೆ ಅತಿ ಹೆಚ್ಚು ಅರ್ಧಶತಕಗಳ ದಾಖಲೆಯ ಪಟ್ಟಿಯಲ್ಲಿ ಸ್ಥಾನ.
15.ಮೊದಲ ಎರಡು ಐಪಿಎಲ್ ಋತುಗಳಲ್ಲೇ ಶತಕ ಗಳಿಸಿದ ಮೊದಲ ಬ್ಯಾಟರ್.
16.ಭಾರತದ ಪರ 50 ಐಪಿಎಲ್ ಸಿಕ್ಸರ್ಗಳನ್ನು ಅತಿ ವೇಗವಾಗಿ ತಲುಪಿದ ಆಟಗಾರ.
17.90+ ಸ್ಕೋರ್ಗೆ ಐಪಿಎಲ್ ಇತಿಹಾಸದ ಅತಿ ಹೆಚ್ಚು ಸ್ಟ್ರೈಕ್ ರೇಟ್ (334.48).
18.ತಂಡದ ಸಹ ಆಟಗಾರರಿಗಿಂತ ಅತಿ ದೊಡ್ಡ ಸ್ಟ್ರೈಕ್ರೇಟ್ ಅಂತರ (87.02).
19.ಓಪನರ್ ಆಗಿ ಒಂದೇ ಋತುವಿನಲ್ಲಿ ಅತಿ ಹೆಚ್ಚು ಸಿಕ್ಸರ್ಗಳು (72).
20.ಒಂದೇ ಐಪಿಎಲ್ ಋತುವಿನಲ್ಲಿ ಪವರ್ಪ್ಲೇಯಲ್ಲಿ ಅತಿ ಹೆಚ್ಚು ಸಿಕ್ಸರ್ಗಳು (46).
21.ಭಾರತೀಯ ಬ್ಯಾಟರ್ನ ವೇಗದ ಐಪಿಎಲ್ ಶತಕ (36 ಎಸೆತಗಳು).
22.ವೇಗದ ಬೌಲರ್ಗಳ ವಿರುದ್ಧ ಅತಿ ಹೆಚ್ಚು ರನ್ಗಳು (648).

