945 ಕೆಇಎ ಕೃಷಿ ಅಧಿಕಾರಿ ಮತ್ತು ಸಹಾಯಕ ಕೃಷಿ ಅಧಿಕಾರಿ ನೇಮಕಾತಿಗೆ ಅರ್ಜಿ ಆಹ್ವಾನ
ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) 2026ನೇ ಸಾಲಿನ ಕೃಷಿ ಅಧಿಕಾರಿ (Agriculture Officer – AO) ಹಾಗೂ ಸಹಾಯಕ ಕೃಷಿ ಅಧಿಕಾರಿ (Assistant Agriculture Officer – AAO) ಹುದ್ದೆಗಳ ನೇಮಕಾತಿಗಾಗಿ ಪರಿಷ್ಕೃತ ಅಧಿಸೂಚನೆಯನ್ನು ಪ್ರಕಟಿಸಿದೆ. ರಾಜ್ಯದ ಕೃಷಿ ಇಲಾಖೆಯಲ್ಲಿ ಒಟ್ಟು 945 ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಆನ್ಲೈನ್ ಅರ್ಜಿಗಳನ್ನು ಆಹ್ವಾನಿಸಲಾಗಿದೆ. B.Sc, B.Tech/BE ಪದವಿ ಪಡೆದ ಅಭ್ಯರ್ಥಿಗಳು ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಕೆ ಪ್ರಕ್ರಿಯೆಯು 2026ರ ಮೇ 30ರಿಂದ ಆರಂಭಗೊಂಡಿದ್ದು, ಜೂನ್ 20ರವರೆಗೆ ನಡೆಯಲಿದೆ.
ಹುದ್ದೆಗಳ ವಿವರ
ಈ ನೇಮಕಾತಿಯಲ್ಲಿ ಕೃಷಿ ಅಧಿಕಾರಿ ಹಾಗೂ ಸಹಾಯಕ ಕೃಷಿ ಅಧಿಕಾರಿ ಹುದ್ದೆಗಳನ್ನು ಕಲ್ಯಾಣ ಕರ್ನಾಟಕ (KK) ಮತ್ತು RPC ವೃಂದಗಳಲ್ಲಿ ಭರ್ತಿ ಮಾಡಲಾಗುತ್ತಿದೆ.
ಕೃಷಿ ಅಧಿಕಾರಿ (AO)-118
ಸಹಾಯಕ ಕೃಷಿ ಅಧಿಕಾರಿ (AAO)-809
ವಿಶೇಷ ಮೀಸಲಾತಿ (PwD)-18
ಒಟ್ಟು-945
ವಿದ್ಯಾರ್ಹತೆ :
ಬಿ.ಎಸ್ಸಿ. (ಕೃಷಿ), ಬಿ.ಎಸ್ಸಿ. (ಆನರ್ಸ್) ಕೃಷಿ, ಬಿ.ಟೆಕ್ (ಆಹಾರ ತಂತ್ರಜ್ಞಾನ/ಆಹಾರ ವಿಜ್ಞಾನ/ಕೃಷಿ ಎಂಜಿನಿಯರಿಂಗ್/ಜೈವಿಕ ತಂತ್ರಜ್ಞಾನ) ಮತ್ತು ಇತರ ನಿರ್ದಿಷ್ಟ ಕೃಷಿ ಸಂಬಂಧಿತ ಪದವಿಗಳು.
ವೇತನ ಶೇಣಿ :
ಕೃಷಿ ಅಧಿಕಾರಿ: ₹69,250 – ₹1,34,200
ಸಹಾಯಕ ಕೃಷಿ ಅಧಿಕಾರಿ: ₹65,950 – ₹1,24,900 .
ವಯೋಮಿತಿ :
ಸಾಮಾನ್ಯ ಅಭ್ಯರ್ಥಿಗಳಿಗೆ 18–40 ವರ್ಷಗಳು ,
ಒಬಿಸಿ ಅಭ್ಯರ್ಥಿಗಳಿಗೆ 43 ವರ್ಷಗಳು ಮತ್ತು
ಎಸ್ಸಿ/ಎಸ್ಟಿ/ಪ್ರವರ್ಗ-1 ಅಭ್ಯರ್ಥಿಗಳಿಗೆ 45 ವರ್ಷಗಳು .
(ನಿಯಮಗಳ ಪ್ರಕಾರ ಹೆಚ್ಚುವರಿ ಸಡಿಲಿಕೆಗಳು ಅನ್ವಯಿಸುತ್ತವೆ.)
ಅರ್ಜಿ ಶುಲ್ಕ:
ಸಾಮಾನ್ಯ/ಓಬಿಸಿ ಅಭ್ಯರ್ಥಿಗಳಿಗೆ ₹750, ಎಸ್ಸಿ/ಎಸ್ಟಿ/ಪ್ರವರ್ಗ-1/ಮಾಜಿ ಸೈನಿಕರಿಗೆ ₹500 ಮತ್ತು ಅಂಗವಿಕಲ ಅಭ್ಯರ್ಥಿಗಳಿಗೆ ₹250.
ಆಯ್ಕೆ ಪ್ರಕ್ರಿಯೆ :
ಸಾಮಾನ್ಯ ಪತ್ರಿಕೆ ಮತ್ತು ನಿರ್ದಿಷ್ಟ ಪತ್ರಿಕೆಯನ್ನು ಒಳಗೊಂಡಿರುವ ಸ್ಪರ್ಧಾತ್ಮಕ ಲಿಖಿತ ಪರೀಕ್ಷೆ (OMR-ಆಧಾರಿತ), ನಂತರ ಅರ್ಹತಾ ಕನ್ನಡ ಭಾಷಾ ಪರೀಕ್ಷೆ.
ಪರೀಕ್ಷೆಯ ದಿನಾಂಕ :
ಪತ್ರಿಕೆ-1: 25.07.2026 (ಕೆಕೆ ಕೇಡರ್) / 26.07.2026 (ಆರ್ಪಿಸಿ ಕೇಡರ್) – ಬೆಳಿಗ್ಗೆ 10:30 ರಿಂದ ಮಧ್ಯಾಹ್ನ 12:30 ರವರೆಗೆ
ಪತ್ರಿಕೆ-2: ಅದೇ ದಿನಾಂಕಗಳು – ಮಧ್ಯಾಹ್ನ 2:30 ರಿಂದ ಸಂಜೆ 4:30 ರವರೆಗೆ
ನೇಮಕಾತಿ ಕುರಿತಾದ ಮತ್ತಷ್ಟು ವಿವರಗಳು ಹಾಗೂ ಅಧಿಸೂಚನೆ :
RPC : Click Here
KK : Click Here
ಪ್ರಮುಖ ದಿನಾಂಕಗಳು
ಅರ್ಜಿಸಲ್ಲಿಕೆ ಆರಂಭ: 30 ಮೇ 2026
ಅರ್ಜಿ ಸಲ್ಲಿಸಲು ಕೊನೆಯ ದಿನ: 20 ಜೂನ್ 2026
ಶುಲ್ಕ ಪಾವತಿಸಲು ಕೊನೆಯ ದಿನ: 22 ಜೂನ್ 2026
ಲಿಖಿತ ಪರೀಕ್ಷೆ (KK ವೃಂದ): 25 ಜುಲೈ 2026
ಲಿಖಿತ ಪರೀಕ್ಷೆ (RPC ವೃಂದ): 26 ಜುಲೈ 2026
ಅಧಿಕೃತ ಜಾಲತಾಣ : https://cetonline.karnataka.gov.in/kea/
ಮತ್ತಷ್ಟು ನೇಮಕಾತಿಗಳ ಮಾಹಿತಿ : Current Recruitments : ಪ್ರಸ್ತುತ ನೇಮಕಾತಿಗಳು

