945 ಕೆಇಎ ಕೃಷಿ ಅಧಿಕಾರಿ ಮತ್ತು ಸಹಾಯಕ ಕೃಷಿ ಅಧಿಕಾರಿ ನೇಮಕಾತಿಗೆ ಅರ್ಜಿ ಆಹ್ವಾನ
Job NewsLatest Updates

945 ಕೆಇಎ ಕೃಷಿ ಅಧಿಕಾರಿ ಮತ್ತು ಸಹಾಯಕ ಕೃಷಿ ಅಧಿಕಾರಿ ನೇಮಕಾತಿಗೆ ಅರ್ಜಿ ಆಹ್ವಾನ

Share With Friends

ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) 2026ನೇ ಸಾಲಿನ ಕೃಷಿ ಅಧಿಕಾರಿ (Agriculture Officer – AO) ಹಾಗೂ ಸಹಾಯಕ ಕೃಷಿ ಅಧಿಕಾರಿ (Assistant Agriculture Officer – AAO) ಹುದ್ದೆಗಳ ನೇಮಕಾತಿಗಾಗಿ ಪರಿಷ್ಕೃತ ಅಧಿಸೂಚನೆಯನ್ನು ಪ್ರಕಟಿಸಿದೆ. ರಾಜ್ಯದ ಕೃಷಿ ಇಲಾಖೆಯಲ್ಲಿ ಒಟ್ಟು 945 ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಅರ್ಜಿಗಳನ್ನು ಆಹ್ವಾನಿಸಲಾಗಿದೆ. B.Sc, B.Tech/BE ಪದವಿ ಪಡೆದ ಅಭ್ಯರ್ಥಿಗಳು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಕೆ ಪ್ರಕ್ರಿಯೆಯು 2026ರ ಮೇ 30ರಿಂದ ಆರಂಭಗೊಂಡಿದ್ದು, ಜೂನ್ 20ರವರೆಗೆ ನಡೆಯಲಿದೆ.

ಹುದ್ದೆಗಳ ವಿವರ
ಈ ನೇಮಕಾತಿಯಲ್ಲಿ ಕೃಷಿ ಅಧಿಕಾರಿ ಹಾಗೂ ಸಹಾಯಕ ಕೃಷಿ ಅಧಿಕಾರಿ ಹುದ್ದೆಗಳನ್ನು ಕಲ್ಯಾಣ ಕರ್ನಾಟಕ (KK) ಮತ್ತು RPC ವೃಂದಗಳಲ್ಲಿ ಭರ್ತಿ ಮಾಡಲಾಗುತ್ತಿದೆ.
ಕೃಷಿ ಅಧಿಕಾರಿ (AO)-118
ಸಹಾಯಕ ಕೃಷಿ ಅಧಿಕಾರಿ (AAO)-809
ವಿಶೇಷ ಮೀಸಲಾತಿ (PwD)-18
ಒಟ್ಟು-945

ವಿದ್ಯಾರ್ಹತೆ :
ಬಿ.ಎಸ್ಸಿ. (ಕೃಷಿ), ಬಿ.ಎಸ್ಸಿ. (ಆನರ್ಸ್) ಕೃಷಿ, ಬಿ.ಟೆಕ್ (ಆಹಾರ ತಂತ್ರಜ್ಞಾನ/ಆಹಾರ ವಿಜ್ಞಾನ/ಕೃಷಿ ಎಂಜಿನಿಯರಿಂಗ್/ಜೈವಿಕ ತಂತ್ರಜ್ಞಾನ) ಮತ್ತು ಇತರ ನಿರ್ದಿಷ್ಟ ಕೃಷಿ ಸಂಬಂಧಿತ ಪದವಿಗಳು.

ವೇತನ ಶೇಣಿ :
ಕೃಷಿ ಅಧಿಕಾರಿ: ₹69,250 – ₹1,34,200
ಸಹಾಯಕ ಕೃಷಿ ಅಧಿಕಾರಿ: ₹65,950 – ₹1,24,900 .

ವಯೋಮಿತಿ :
ಸಾಮಾನ್ಯ ಅಭ್ಯರ್ಥಿಗಳಿಗೆ 18–40 ವರ್ಷಗಳು ,
ಒಬಿಸಿ ಅಭ್ಯರ್ಥಿಗಳಿಗೆ 43 ವರ್ಷಗಳು ಮತ್ತು
ಎಸ್‌ಸಿ/ಎಸ್‌ಟಿ/ಪ್ರವರ್ಗ-1 ಅಭ್ಯರ್ಥಿಗಳಿಗೆ 45 ವರ್ಷಗಳು .
(ನಿಯಮಗಳ ಪ್ರಕಾರ ಹೆಚ್ಚುವರಿ ಸಡಿಲಿಕೆಗಳು ಅನ್ವಯಿಸುತ್ತವೆ.)

ಅರ್ಜಿ ಶುಲ್ಕ:
ಸಾಮಾನ್ಯ/ಓಬಿಸಿ ಅಭ್ಯರ್ಥಿಗಳಿಗೆ ₹750, ಎಸ್‌ಸಿ/ಎಸ್‌ಟಿ/ಪ್ರವರ್ಗ-1/ಮಾಜಿ ಸೈನಿಕರಿಗೆ ₹500 ಮತ್ತು ಅಂಗವಿಕಲ ಅಭ್ಯರ್ಥಿಗಳಿಗೆ ₹250.

ಆಯ್ಕೆ ಪ್ರಕ್ರಿಯೆ :
ಸಾಮಾನ್ಯ ಪತ್ರಿಕೆ ಮತ್ತು ನಿರ್ದಿಷ್ಟ ಪತ್ರಿಕೆಯನ್ನು ಒಳಗೊಂಡಿರುವ ಸ್ಪರ್ಧಾತ್ಮಕ ಲಿಖಿತ ಪರೀಕ್ಷೆ (OMR-ಆಧಾರಿತ), ನಂತರ ಅರ್ಹತಾ ಕನ್ನಡ ಭಾಷಾ ಪರೀಕ್ಷೆ.

ಪರೀಕ್ಷೆಯ ದಿನಾಂಕ :
ಪತ್ರಿಕೆ-1: 25.07.2026 (ಕೆಕೆ ಕೇಡರ್) / 26.07.2026 (ಆರ್‌ಪಿಸಿ ಕೇಡರ್) – ಬೆಳಿಗ್ಗೆ 10:30 ರಿಂದ ಮಧ್ಯಾಹ್ನ 12:30 ರವರೆಗೆ
ಪತ್ರಿಕೆ-2: ಅದೇ ದಿನಾಂಕಗಳು – ಮಧ್ಯಾಹ್ನ 2:30 ರಿಂದ ಸಂಜೆ 4:30 ರವರೆಗೆ

ನೇಮಕಾತಿ ಕುರಿತಾದ ಮತ್ತಷ್ಟು ವಿವರಗಳು ಹಾಗೂ ಅಧಿಸೂಚನೆ :
RPC : Click Here
KK : Click Here

ಪ್ರಮುಖ ದಿನಾಂಕಗಳು
ಅರ್ಜಿಸಲ್ಲಿಕೆ ಆರಂಭ: 30 ಮೇ 2026
ಅರ್ಜಿ ಸಲ್ಲಿಸಲು ಕೊನೆಯ ದಿನ: 20 ಜೂನ್ 2026
ಶುಲ್ಕ ಪಾವತಿಸಲು ಕೊನೆಯ ದಿನ: 22 ಜೂನ್ 2026
ಲಿಖಿತ ಪರೀಕ್ಷೆ (KK ವೃಂದ): 25 ಜುಲೈ 2026
ಲಿಖಿತ ಪರೀಕ್ಷೆ (RPC ವೃಂದ): 26 ಜುಲೈ 2026

ಅಧಿಕೃತ ಜಾಲತಾಣ : https://cetonline.karnataka.gov.in/kea/


ಮತ್ತಷ್ಟು ನೇಮಕಾತಿಗಳ ಮಾಹಿತಿ : Current Recruitments : ಪ್ರಸ್ತುತ ನೇಮಕಾತಿಗಳು


error: Content Copyright protected !!