ಭಾರತಕ್ಕೆ ಅತಿದೊಡ್ಡ ಎಲ್‌ಪಿಜಿ ಪೂರೈಕೆದಾರ ದೇಶವಾಗಿ ಹೊರಹೊಮ್ಮಿದ ಅಮೆರಿಕ
Uncategorized

ಭಾರತಕ್ಕೆ ಅತಿದೊಡ್ಡ ಎಲ್‌ಪಿಜಿ ಪೂರೈಕೆದಾರ ದೇಶವಾಗಿ ಹೊರಹೊಮ್ಮಿದ ಅಮೆರಿಕ

Share With Friends
HIGHLIGHTS :
➧ 2026ರಲ್ಲಿ ಭಾರತಕ್ಕೆ ಅತಿಹೆಚ್ಚು ಎಲ್‌ಪಿಜಿ ಪೂರೈಸಿದ ದೇಶವಾಗಿ ಹೊರಹೊಮ್ಮಿದ ಅಮೆರಿಕ.
➧ ಮೇ ತಿಂಗಳಲ್ಲಿ ಭಾರತದ ಒಟ್ಟು ಎಲ್‌ಪಿಜಿ ಆಮದಿನಲ್ಲಿ ಅಮೆರಿಕದ ಪಾಲು ಶೇ. 55 ದಾಟಿದೆ.
➧ಹೋರ್ಮುಜ್ ಜಲಸಂಧಿಯ ಬಿಕ್ಕಟ್ಟಿನಿಂದಾಗಿ ಮಧ್ಯಪ್ರಾಚ್ಯದ ಇಂಧನ ಪೂರೈಕೆಯಲ್ಲಿ ವ್ಯತ್ಯಯ.
➧ 7 ವರ್ಷಗಳ ಬಳಿಕ ಇರಾನ್‌ನಿಂದ ಮತ್ತೆ ಆಮದು ಆರಂಭ; ಸದ್ಯಕ್ಕೆ ಇರಾನ್ 2ನೇ ಅತಿ ದೊಡ್ಡ ಪೂರೈಕೆದಾರ ದೇಶ.
➧ ಅಮೆರಿಕ ಮೇ 2026ರಲ್ಲಿ ಭಾರತದ ಅತಿದೊಡ್ಡ ಎಲ್‌ಪಿಜಿ ಪೂರೈಕೆದಾರ ದೇಶವಾಗಿ ಹೊರಹೊಮ್ಮಿದ್ದು, ಒಟ್ಟು ಆಮದುಗಳಲ್ಲಿ 55% ಪಾಲು ಹೊಂದಿದೆ.
➧ ಇರಾನ್ 12% ಪಾಲು ಹೊಂದುವ ಮೂಲಕ ಎರಡನೇ ಅತಿದೊಡ್ಡ ಪೂರೈಕೆದಾರ ದೇಶವಾಗಿದೆ.
➧ ಉಳಿದ 33% ಎಲ್‌ಪಿಜಿ ಅನ್ನು ಸೌದಿ ಅರೇಬಿಯಾ, ಯುಎಇ, ಕತಾರ್, ಕುವೈತ್, ರಷ್ಯಾ ಹಾಗೂ ಇತರೆ ದೇಶಗಳಿಂದ ಭಾರತ ಆಮದು ಮಾಡಿಕೊಂಡಿದೆ.
➧ ಅಮೆರಿಕ ಮತ್ತು ಇರಾನ್ ಸೇರಿ ಭಾರತದ ಒಟ್ಟು ಎಲ್‌ಪಿಜಿ ಆಮದುಗಳಲ್ಲಿ ಸುಮಾರು 67% ಪಾಲು ಹೊಂದಿವೆ.

ಭಾರತದ ದ್ರವೀಕೃತ ಪೆಟ್ರೋಲಿಯಂ ಅನಿಲ (LPG – liquefied petroleum gas) ಆಮದು ಮಾದರಿಯಲ್ಲಿ 2026ರಲ್ಲಿ ಮಹತ್ವದ ಬದಲಾವಣೆ ಕಂಡುಬಂದಿದ್ದು, ಅಮೆರಿಕ ಭಾರತಕ್ಕೆ ಅತಿದೊಡ್ಡ ಎಲ್‌ಪಿಜಿ ಪೂರೈಕೆದಾರ ರಾಷ್ಟ್ರವಾಗಿ ಹೊರಹೊಮ್ಮಿದೆ. ಇದುವರೆಗೆ ಭಾರತದ ಎಲ್‌ಪಿಜಿ ಆಮದುಗಳಲ್ಲಿ ಪ್ರಾಬಲ್ಯ ಹೊಂದಿದ್ದ ಮಧ್ಯಪ್ರಾಚ್ಯ ರಾಷ್ಟ್ರಗಳ ಪಾಲು ಕಡಿಮೆಯಾಗಿದೆ.

ಮೇ 2026ರಲ್ಲಿ ಭಾರತದ ಒಟ್ಟು ಎಲ್‌ಪಿಜಿ ಆಮದುಗಳಲ್ಲಿ ಅಮೆರಿಕದ ಪಾಲು 55% ಕ್ಕಿಂತ ಹೆಚ್ಚಾಗಿದೆ. ಅಮೆರಿಕದಿಂದ ಭಾರತಕ್ಕೆ ಮೇ ತಿಂಗಳಲ್ಲಿ ಸುಮಾರು 6.66 ಲಕ್ಷ ಟನ್ ಎಲ್‌ಪಿಜಿ ರವಾನೆಯಾಗಿದ್ದು, ಫೆಬ್ರವರಿ ತಿಂಗಳಿಗಿಂತ ಗಣನೀಯ ಏರಿಕೆ ದಾಖಲಾಗಿದೆ.

2026ರ ಫೆಬ್ರವರಿ ಅಂತ್ಯದ ನಂತರ ಪಶ್ಚಿಮ ಏಷ್ಯಾದಲ್ಲಿ ಉದ್ಭವಿಸಿದ ಉದ್ವಿಗ್ನತೆ ಮತ್ತು ಹೋರ್ಮುಜ್ ಜಲಸಂಧಿಯಲ್ಲಿನ ಭದ್ರತಾ ಸಮಸ್ಯೆಗಳು ಮಧ್ಯಪ್ರಾಚ್ಯದಿಂದ ಎಲ್‌ಪಿಜಿ ಸಾಗಣೆಗೆ ಅಡ್ಡಿಯಾಯಿತು. ಇದರಿಂದ ಯುನೈಟೆಡ್ ಅರಬ್ ಎಮಿರೇಟ್ಸ್ (UAE) ಹಾಗೂ ಸೌದಿ ಅರೇಬಿಯಾ ಸೇರಿದಂತೆ ಗಲ್ಫ್ ರಾಷ್ಟ್ರಗಳಿಂದ ಆಗುತ್ತಿದ್ದ ಪೂರೈಕೆ ಕುಂಠಿತವಾಯಿತು.

2026ರ ಫೆಬ್ರವರಿ ಅಂತ್ಯದ ನಂತರ ಪಶ್ಚಿಮ ಏಷ್ಯಾದಲ್ಲಿ ಉದ್ಭವಿಸಿದ ಉದ್ವಿಗ್ನತೆ ಮತ್ತು ಹೋರ್ಮುಜ್ ಜಲಸಂಧಿಯಲ್ಲಿನ ಭದ್ರತಾ ಸಮಸ್ಯೆಗಳು ಮಧ್ಯಪ್ರಾಚ್ಯದಿಂದ ಎಲ್‌ಪಿಜಿ ಸಾಗಣೆಗೆ ಅಡ್ಡಿಯಾಯಿತು. ಇದರಿಂದ ಯುನೈಟೆಡ್ ಅರಬ್ ಎಮಿರೇಟ್ಸ್ (UAE) ಹಾಗೂ ಸೌದಿ ಅರೇಬಿಯಾ ಸೇರಿದಂತೆ ಗಲ್ಫ್ ರಾಷ್ಟ್ರಗಳಿಂದ ಆಗುತ್ತಿದ್ದ ಪೂರೈಕೆ ಕುಂಠಿತವಾಯಿತು.


ಭಾರತ–ಅಮೆರಿಕ ಎಲ್‌ಪಿಜಿ ಒಪ್ಪಂದ
2025ರ ನವೆಂಬರ್‌ನಲ್ಲಿ ಇಂಡಿಯನ್ ಆಯಿಲ್ ಕಾರ್ಪೊರೇಷನ್ (IOC), ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (HPCL) ಹಾಗೂ ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (BPCL) ಸಂಸ್ಥೆಗಳು ಅಮೆರಿಕದ ಗಲ್ಫ್ ಕರಾವಳಿಯಿಂದ ವರ್ಷಕ್ಕೆ ಸುಮಾರು 22 ಲಕ್ಷ ಟನ್ ಎಲ್‌ಪಿಜಿ ಆಮದು ಮಾಡಲು ಒಂದು ವರ್ಷದ ಒಪ್ಪಂದಕ್ಕೆ ಸಹಿ ಹಾಕಿದ್ದವು. ಈ ಒಪ್ಪಂದವು 2026ರಲ್ಲಿ ಭಾರತದ ಒಟ್ಟು ಎಲ್‌ಪಿಜಿ ಆಮದು ಅಗತ್ಯದ ಸುಮಾರು 10% ಭಾಗವನ್ನು ಪೂರೈಸುವ ಉದ್ದೇಶ ಹೊಂದಿದೆ.


ಇರಾನ್‌ನಿಂದ ಮತ್ತೆ ಆಮದು :
ಏಳು ವರ್ಷಗಳ ವಿರಾಮದ ಬಳಿಕ ಭಾರತವು 2026ರ ಮಾರ್ಚ್‌ನಲ್ಲಿ ಇರಾನ್‌ನಿಂದ ಎಲ್‌ಪಿಜಿ ಆಮದು ಪುನರಾರಂಭಿಸಿತು. ಮೇ 2026ರಲ್ಲಿ ಇರಾನ್ ಸುಮಾರು 1.45 ಲಕ್ಷ ಟನ್ ಎಲ್‌ಪಿಜಿ ಪೂರೈಸಿದ್ದು, ಆ ತಿಂಗಳಲ್ಲಿ ಭಾರತದ ಎರಡನೇ ಅತಿದೊಡ್ಡ ಪೂರೈಕೆದಾರ ರಾಷ್ಟ್ರವಾಗಿ ಪರಿಣಮಿಸಿತು.


ಇತರ ಪೂರೈಕೆದಾರ ರಾಷ್ಟ್ರಗಳು :
ಅಮೆರಿಕ ಮತ್ತು ಇರಾನ್ ಹೊರತುಪಡಿಸಿ, ಭಾರತವು ಆಸ್ಟ್ರೇಲಿಯಾ, ರಷ್ಯಾ, ಅರ್ಜೆಂಟಿನಾ, ಕಾಂಗೋ, ಅಂಗೋಲಾ, ನೈಜೀರಿಯಾ ಹಾಗೂ ಕ್ಯಾಮರೂನ್ ದೇಶಗಳಿಂದಲೂ ಎಲ್‌ಪಿಜಿ ಆಮದು ಮಾಡಿಕೊಳ್ಳುತ್ತಿದೆ.


ಹೋರ್ಮುಜ್ ಜಲಸಂಧಿಯ ಬಿಕ್ಕಟ್ಟು :
ಯುಎಇ (UAE) ಮತ್ತು ಸೌದಿ ಅರೇಬಿಯಾದಂತಹ ಪ್ರಮುಖ ಗಲ್ಫ್ ರಫ್ತುದಾರರಿಂದ ಎಲ್‌ಪಿಜಿ ಸಾಗಣೆಗೆ ‘ಹೋರ್ಮುಜ್ ಜಲಸಂಧಿ’ಯಲ್ಲಿ (Strait of Hormuz) ಉಂಟಾದ ದಿಗ್ಬಂಧನಗಳು ಮತ್ತು ಭದ್ರತಾ ಸವಾಲುಗಳು ಮುಖ್ಯ ಕಾರಣವಾಗಿವೆ. ಓಮನ್ ಮತ್ತು ಇರಾನ್ ನಡುವೆ ಇರುವ ಈ ಕಿರಿದಾದ ಕಡಲ ಮಾರ್ಗವು ಪರ್ಷಿಯನ್ ಗಲ್ಫ್ ಅನ್ನು ಓಮನ್ ಗಲ್ಫ್ ಮತ್ತು ಅರೇಬಿಯನ್ ಸಮುದ್ರಕ್ಕೆ ಜೋಡಿಸುತ್ತದೆ. ಇದು ಕಚ್ಚಾ ತೈಲ ಮತ್ತು ದ್ರವೀಕೃತ ಅನಿಲಗಳ ಸಾಗಣೆಗೆ ಜಗತ್ತಿನ ಅತ್ಯಂತ ಪ್ರಮುಖ ಇಂಧನ ಸಾಗಣೆ ಮಾರ್ಗವಾಗಿದೆ (Energy Chokepoint). ಇಲ್ಲಿ ಉಂಟಾದ ಅಡಚಣೆಯಿಂದಾಗಿ ಭಾರತ ಪರ್ಯಾಯ ಮಾರ್ಗಗಳತ್ತ ಮುಖ ಮಾಡಬೇಕಾಯಿತು.

ಮೇ 2026ರಲ್ಲಿ ಭಾರತಕ್ಕೆ ಎಲ್‌ಪಿಜಿ (LPG) ಪೂರೈಕೆ ಮಾಡಿದ ದೇಶಗಳ ಪಟ್ಟಿ ಮತ್ತು ಶೇಕಡಾವಾರು

ಕ್ರಮದೇಶಭಾರತದ ಎಲ್‌ಪಿಜಿ ಆಮದುಗಳಲ್ಲಿ ಪಾಲು
1ಅಮೆರಿಕ (United States)55%
2ಇರಾನ್ (Iran)12%
3ಇತರೆ ದೇಶಗಳು33%

error: Content Copyright protected !!