ಜೂನ್ 5ರಂದೇ ‘ವಿಶ್ವ ಪರಿಸರ ದಿನ'(World Environment Day)ವನ್ನು ಏಕೆ ಆಚರಿಸಲಾಗುತ್ತದೆ..?
Uncategorized

ಜೂನ್ 5ರಂದೇ ‘ವಿಶ್ವ ಪರಿಸರ ದಿನ'(World Environment Day)ವನ್ನು ಏಕೆ ಆಚರಿಸಲಾಗುತ್ತದೆ..?

Share With Friends

ವಿಶ್ವ ಪರಿಸರ ದಿನ(World Environment Da)ವನ್ನು ಪ್ರತಿವರ್ಷ ಜೂನ್ 5ರಂದು ವಿಶ್ವದಾದ್ಯಂತ ಆಚರಿಸಲಾಗುತ್ತದೆ. ಪರಿಸರ ಸಂರಕ್ಷಣೆ, ಹವಾಮಾನ ಬದಲಾವಣೆ, ಮಾಲಿನ್ಯ ನಿಯಂತ್ರಣ ಹಾಗೂ ಜೀವವೈವಿಧ್ಯತೆಯ ರಕ್ಷಣೆಯ ಕುರಿತು ಜನರಲ್ಲಿ ಜಾಗೃತಿ ಮೂಡಿಸುವುದು ಇದರ ಪ್ರಮುಖ ಉದ್ದೇಶವಾಗಿದೆ.

ವಿಶ್ವಸಂಸ್ಥೆಯ ಸಂಯುಕ್ತ ರಾಷ್ಟ್ರಗಳ ಪರಿಸರ ಕಾರ್ಯಕ್ರಮ (UNEP) ನೇತೃತ್ವದಲ್ಲಿ ಆಚರಿಸಲಾಗುವ ವಿಶ್ವ ಪರಿಸರ ದಿನವು ಪರಿಸರ ಜಾಗೃತಿಗಾಗಿ ವಿಶ್ವದ ಅತಿದೊಡ್ಡ ಸಾರ್ವಜನಿಕ ವೇದಿಕೆಯಾಗಿದೆ. ಪ್ರತಿವರ್ಷ ಲಕ್ಷಾಂತರ ಜನರು ವಿವಿಧ ಕಾರ್ಯಕ್ರಮಗಳು, ಅಭಿಯಾನಗಳು ಮತ್ತು ಚಟುವಟಿಕೆಗಳ ಮೂಲಕ ಈ ದಿನವನ್ನು ಆಚರಿಸುತ್ತಾರೆ.

⮞ 2026ರ ಆತಿಥೇಯ ದೇಶ :
ಅಜೆರ್ಬೈಜಾನ್ (Azerbaijan) ದೇಶದ ರಾಜಧಾನಿ ಬಾಕು (Baku) ನಗರದಲ್ಲಿ ಈ ವರ್ಷದ ಜಾಗತಿಕ ಮುಖ್ಯ ಕಾರ್ಯಕ್ರಮಗಳು ನಡೆಯುತ್ತಿವೆ.
⮞ 2026ರ ವಿಶ್ವ ಪರಿಸರ ದಿನದ ಘೋಷವಾಕ್ಯ:
“ಪ್ರಕೃತಿಯಿಂದ ಪ್ರೇರಿತ. ಹವಾಮಾನಕ್ಕಾಗಿ. ನಮ್ಮ ಭವಿಷ್ಯಕ್ಕಾಗಿ” (“Inspired by Nature. For Climate. For Our Future.”). ಈ ವರ್ಷ ಪ್ರಮುಖವಾಗಿ ಹವಾಮಾನ ವೈಪರೀತ್ಯ (Climate Change) ಮತ್ತು ಅದಕ್ಕೆ ಪ್ರಕೃತಿ ಆಧಾರಿತ ಪರಿಹಾರಗಳನ್ನು ಕಂಡುಕೊಳ್ಳುವತ್ತ ಹೆಚ್ಚಿನ ಗಮನ ಹರಿಸಲಾಗಿದೆ

‘ವಿಶ್ವ ಪರಿಸರ ದಿನ’ದ ಹಿನ್ನೆಲೆ ಏನು..?
ವಿಶ್ವ ಪರಿಸರ ದಿನದ ಇತಿಹಾಸವು 1972ರ ಜೂನ್ 5 ರಿಂದ ಜೂನ್ 16 ರವರೆಗೆ ಸ್ವೀಡನ್‌ನ ಸ್ಟಾಕ್‌ಹೋಮ್‌ನಲ್ಲಿ ನಡೆದ ವಿಶ್ವಸಂಸ್ಥೆಯ ಮಾನವ ಪರಿಸರ ಸಮ್ಮೇಳನದಿಂದ (United Nations Conference on the Human Environment) ಆರಂಭವಾಯಿತು.

ಈ ಐತಿಹಾಸಿಕ ಸಮ್ಮೇಳನದಲ್ಲಿ ಪರಿಸರ ಸಂರಕ್ಷಣೆ ಮತ್ತು ಮಾನವ ಅಭಿವೃದ್ಧಿಯ ನಡುವಿನ ಸಮತೋಲನದ ಬಗ್ಗೆ ಜಾಗತಿಕ ಚರ್ಚೆ ನಡೆಯಿತು. ಇದರ ಮಹತ್ವವನ್ನು ಗುರುತಿಸಿ, 1972ರ ಡಿಸೆಂಬರ್ 15ರಂದು ವಿಶ್ವಸಂಸ್ಥೆಯ ಮಹಾಸಭೆಯು ಜೂನ್ 5 ಅನ್ನು ವಿಶ್ವ ಪರಿಸರ ದಿನವಾಗಿ ಘೋಷಿಸಿತು.

1973 ರಲ್ಲಿ ಮೊದಲ ಬಾರಿಗೆ “ಕೇವಲ ಒಂದು ಭೂಮಿ” (Only One Earth) ಎಂಬ ಘೋಷವಾಕ್ಯದೊಂದಿಗೆ ಜಾಗತಿಕವಾಗಿ ಈ ದಿನದ ಆಚರಣೆಯನ್ನು ಆರಂಭಿಸಲಾಯಿತು. 1974 ರಿಂದ ಪ್ರತಿ ವರ್ಷ ಬೇರೆ ಬೇರೆ ದೇಶಗಳು ಈ ದಿನದ ಜಾಗತಿಕ ಕಾರ್ಯಕ್ರಮಗಳ ಆತಿಥ್ಯವನ್ನು ವಹಿಸಿಕೊಳ್ಳುವ ಸಂಪ್ರದಾಯವನ್ನು ಆರಂಭಿಸಲಾಯಿತು.

2018ರಲ್ಲಿ ಭಾರತವು ವಿಶ್ವ ಪರಿಸರ ದಿನದ ಜಾಗತಿಕ ಆತಿಥೇಯ ರಾಷ್ಟ್ರವಾಗಿತ್ತು. ಆ ವರ್ಷದ ವಿಷಯ “Beat Plastic Pollution” ಆಗಿದ್ದು, ಏಕಬಳಕೆಯ ಪ್ಲಾಸ್ಟಿಕ್ ವಿರುದ್ಧ ದೇಶವ್ಯಾಪಿ ಜಾಗೃತಿ ಅಭಿಯಾನಗಳನ್ನು ನಡೆಸಲಾಯಿತು.

ಇದೇ ಸಮ್ಮೇಳನದ ಫಲವಾಗಿ ಜಾಗತಿಕ ಪರಿಸರ ಕಾಳಜಿಯನ್ನು ನೋಡಿಕೊಳ್ಳಲು ವಿಶ್ವಸಂಸ್ಥೆಯ ಪರಿಸರ ಕಾರ್ಯಕ್ರಮ (UNEP – United Nations Environment Programme) ಸಂಸ್ಥೆಯು ಜನ್ಮತಾಳಿತು.

ಅಪಾಯದ ಎಚ್ಚರಿಕೆ :
ವಿಜ್ಞಾನಿಗಳ ಪ್ರಕಾರ ಜಾಗತಿಕ ತಾಪಮಾನ ಏರಿಕೆಯನ್ನು 1.5 ಡಿಗ್ರಿ ಸೆಲ್ಸಿಯಸ್ ಒಳಗೆ ನಿಯಂತ್ರಿಸುವುದು ಅತ್ಯಗತ್ಯ. ಆದರೆ ಆ ಮಿತಿಯನ್ನು ಮೀರುವ ಅಪಾಯ ಹೆಚ್ಚುತ್ತಿದ್ದು, ಪ್ರತಿಯೊಂದು ಅಂಶದ ತಾಪಮಾನ ಏರಿಕೆಯೂ ದೊಡ್ಡ ಪರಿಣಾಮ ಬೀರುತ್ತಿದೆ.

ಆದರೆ ಪರಿಸ್ಥಿತಿಯನ್ನು ಬದಲಾಯಿಸಲು ವಿಶ್ವದಾದ್ಯಂತ ಸಮೂಹ ಪ್ರಯತ್ನಗಳು ಕೂಡ ಹೆಚ್ಚುತ್ತಿವೆ. ಪರಿಸರ ಪುನಶ್ಚೇತನ, ನವೀಕರಿಸಬಹುದಾದ ಇಂಧನ ಬಳಕೆ, ಯುವಜನರ ಹಸಿರು ಚಳವಳಿಗಳು ಹಾಗೂ ಸುಸ್ಥಿರ ಅಭಿವೃದ್ಧಿ ಯೋಜನೆಗಳು ಉತ್ತಮ ಭವಿಷ್ಯ ನಿರ್ಮಾಣಕ್ಕೆ ನೆರವಾಗುತ್ತಿವೆ.

ವಿಶ್ವ ಪರಿಸರ ದಿನವು ಕೇವಲ ಒಂದು ಆಚರಣೆಯಲ್ಲ; ಇದು ಪರಿಸರ ಸಂರಕ್ಷಣೆಗೆ ಜಾಗತಿಕ ಬದ್ಧತೆಯ ಸಂಕೇತವಾಗಿದೆ. ಜೂನ್ 5ರಂದು ನಡೆಯುವ ಈ ದಿನವು ಭೂಮಿಯನ್ನು ರಕ್ಷಿಸಲು ಪ್ರತಿಯೊಬ್ಬರೂ ತಮ್ಮ ಪಾತ್ರವನ್ನು ಅರಿತುಕೊಳ್ಳುವಂತೆ ಪ್ರೇರೇಪಿಸುತ್ತದೆ.


ನೆನಪಿನಲ್ಲಿಡಬೇಕಾದ ಪ್ರಮುಖ ದಿನಾಚರಣೆಗಳು (ಪ್ರಮುಖ ದಿನಗಳು)
ಪ್ರಮುಖ ಅಂತರಾಷ್ಟ್ರೀಯ ದಿನಗಳು
ಜನವರಿ ತಿಂಗಳ ಪ್ರಮುಖ ದಿನಗಳು / Important days in January
ಫೆಬ್ರವರಿ ತಿಂಗಳ ಪ್ರಮುಖ ದಿನಗಳು / Important days in February
ಮಾರ್ಚ್ ತಿಂಗಳ ಪ್ರಮುಖ ದಿನಗಳು / Important days in March
ಏಪ್ರಿಲ್ ತಿಂಗಳ ಪ್ರಮುಖ ದಿನಗಳು / Important Days in April
ಮೇ ತಿಂಗಳ ಪ್ರಮುಖ ದಿನಗಳು / Important days in May
ಜೂನ್ ತಿಂಗಳ ಪ್ರಮುಖ ದಿನಗಳು / Important days in June
ಜುಲೈ ತಿಂಗಳ ಪ್ರಮುಖ ದಿನಗಳು / Important days in July
ಸೆಪ್ಟೆಂಬರ್ ತಿಂಗಳ ಪ್ರಮುಖ ದಿನಗಳು / Important days in September
ಅಕ್ಟೋಬರ್ ತಿಂಗಳ ಪ್ರಮುಖ ದಿನಗಳು / Important days in October
ನವೆಂಬರ್ ತಿಂಗಳ ಪ್ರಮುಖ ದಿನಗಳು / Important days in November
ಡಿಸೆಂಬರ್ ತಿಂಗಳ ಪ್ರಮುಖ ದಿನಗಳು / Important days in December
error: Content Copyright protected !!