Job NewsLatest Updates

ವಿಜಯಪುರ ಮಹಾನಗರ ಪಾಲಿಕೆಯಲ್ಲಿ 118 ಪೌರಕಾರ್ಮಿಕ ಹುದ್ದೆಗಳ ನೇಮಕಾತಿ

Share With Friends

ವಿಜಯಪುರ ಮಹಾನಗರ ಪಾಲಿಕೆ (Vijayapura Mahanagara Palike) 118 ಪೌರಕಾರ್ಮಿಕ (Pourakarmika) ಹುದ್ದೆಗಳ ನೇರ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಿದೆ. ಅರ್ಜಿ ಸಲ್ಲಿಕೆ ಪ್ರಕ್ರಿಯೆಯು ಜೂನ್ 10, 2026ರಿಂದ ಆರಂಭವಾಗಿದ್ದು, ಆಸಕ್ತ ಅಭ್ಯರ್ಥಿಗಳು ಜುಲೈ 15, 2026ರೊಳಗೆ ಆಫ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಆಯ್ಕೆಯಾದ ಅಭ್ಯರ್ಥಿಗಳಿಗೆ ಕಾರ್ಮಿಕ ಇಲಾಖೆಯ ನಿಯಮಾನುಸಾರ ಕನಿಷ್ಠ ವೇತನದೊಂದಿಗೆ ಪಿಎಫ್ (PF) ಮತ್ತು ಇಎಸ್‌ಐ (ESI) ಸೌಲಭ್ಯಗಳನ್ನು ಒದಗಿಸಲಾಗುತ್ತದೆ.

ನೇಮಕಾತಿ ವಿವರ :

ವಿವರಮಾಹಿತಿ
ಹುದ್ದೆಯ ಹೆಸರುಪೌರಕಾರ್ಮಿಕ
ಸಂಸ್ಥೆವಿಜಯಪುರ ಮಹಾನಗರ ಪಾಲಿಕೆ
ಒಟ್ಟು ಹುದ್ದೆಗಳು118
ಅರ್ಜಿ ಪ್ರಾರಂಭ ದಿನಾಂಕ10 ಜೂನ್ 2026
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ15 ಜುಲೈ 2026
ಅರ್ಜಿ ವಿಧಾನಆಫ್‌ಲೈನ್
ಅರ್ಜಿ ಶುಲ್ಕ₹100
ಅರ್ಜಿ ಸಲ್ಲಿಸುವ ಸ್ಥಳವಿಜಯಪುರ ಮಹಾನಗರ ಪಾಲಿಕೆ ಕೇಂದ್ರ ಕಚೇರಿ

ಅರ್ಹತೆಗಳು :
ಅಭ್ಯರ್ಥಿಗಳು ಭಾರತೀಯ ಪ್ರಜೆಗಳಾಗಿರಬೇಕು. ಕನಿಷ್ಠ 18 ವರ್ಷ ಹಾಗೂ ಗರಿಷ್ಠ 50 ವರ್ಷ ವಯೋಮಿತಿಯೊಳಗಿರಬೇಕು. ಅಲ್ಲದೆ, ಅಧಿಸೂಚನೆ ಪ್ರಕಟವಾದ ದಿನಾಂಕಕ್ಕೂ ಮೊದಲು ಕನಿಷ್ಠ ಒಂದು ವರ್ಷ ವಿಜಯಪುರ ಮಹಾನಗರ ಪಾಲಿಕೆಯಲ್ಲಿ ಪೌರಕಾರ್ಮಿಕ, ಲೋಡರ್, ಯುಜಿಡಿಎಸ್ ಆರೋಗ್ಯ ಕಾರ್ಯಕರ್ತ, ಕ್ಲೀನರ್ ಅಥವಾ ಆರೋಗ್ಯ ಕಾರ್ಯಕರ್ತರಾಗಿ ಹೊರಗುತ್ತಿಗೆ, ದಿನಗೂಲಿ ಅಥವಾ ಗುತ್ತಿಗೆ ಆಧಾರದಲ್ಲಿ ಸೇವೆ ಸಲ್ಲಿಸಿರುವ ಅನುಭವ ಇರಬೇಕು. ಅಭ್ಯರ್ಥಿಗಳು ಕನ್ನಡ ಭಾಷೆಯ ಜ್ಞಾನ ಹೊಂದಿರಬೇಕು ಹಾಗೂ ಯಾವುದೇ ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾಗಿರಬಾರದು.

ಆಯ್ಕೆ ಪ್ರಕ್ರಿಯೆ ಹೇಗೆ..?
ಈ ನೇಮಕಾತಿಗೆ ಯಾವುದೇ ಲಿಖಿತ ಪರೀಕ್ಷೆ ಇರುವುದಿಲ್ಲ. ಸೇವಾ ಅನುಭವ ಹಾಗೂ ಸರ್ಕಾರ ನಿಗದಿಪಡಿಸಿರುವ ಆದ್ಯತಾ ಮಾನದಂಡಗಳ ಆಧಾರದ ಮೇಲೆ ನೇರ ಆಯ್ಕೆ ನಡೆಯಲಿದೆ.

ಮೊದಲ ಆದ್ಯತೆಯನ್ನು ಮಹಾನಗರ ಪಾಲಿಕೆಯಲ್ಲಿ ಈಗಾಗಲೇ ಸೇವೆ ಸಲ್ಲಿಸಿರುವ ಪೌರಕಾರ್ಮಿಕರು ಮತ್ತು ಸಂಬಂಧಿತ ಸಿಬ್ಬಂದಿಗೆ ನೀಡಲಾಗುತ್ತದೆ. ಕೋವಿಡ್ ಅಥವಾ ಇತರೆ ಕಾರಣಗಳಿಂದ ಸೇವೆಯಲ್ಲಿದ್ದಾಗ ಮೃತಪಟ್ಟ ಪೌರಕಾರ್ಮಿಕರ ಕುಟುಂಬದ ಒಬ್ಬ ಸದಸ್ಯರಿಗೂ ಅವಕಾಶ ಕಲ್ಪಿಸಲಾಗಿದೆ.

ಅರ್ಜಿ ಶುಲ್ಕ :
ಎಲ್ಲಾ ಅಭ್ಯರ್ಥಿಗಳು ₹100 ಅರ್ಜಿ ಶುಲ್ಕವನ್ನು ವಿಜಯಪುರ ಮಹಾನಗರ ಪಾಲಿಕೆ ಕಚೇರಿಯಲ್ಲಿ ಪಾವತಿಸಿ ಅಧಿಕೃತ ರಸೀದಿ ಪಡೆಯಬೇಕು. ಒಮ್ಮೆ ಪಾವತಿಸಿದ ಶುಲ್ಕವನ್ನು ಯಾವುದೇ ಕಾರಣಕ್ಕೂ ಮರುಪಾವತಿಸಲಾಗುವುದಿಲ್ಲ.

ಅರ್ಜಿ ಸಲ್ಲಿಸುವ ವಿಧಾನ :
ಅಭ್ಯರ್ಥಿಗಳು ನಿಗದಿತ ಅರ್ಜಿ ನಮೂನೆಯನ್ನು ಪಡೆದು ಸಂಪೂರ್ಣವಾಗಿ ಭರ್ತಿ ಮಾಡಬೇಕು. ನಂತರ ಅಗತ್ಯ ದಾಖಲೆಗಳ ಸ್ವಯಂ ದೃಢೀಕೃತ ಪ್ರತಿಗಳು, ಸೇವಾ ಪ್ರಮಾಣಪತ್ರ, ವಯಸ್ಸಿನ ದಾಖಲೆ ಹಾಗೂ ಅರ್ಜಿ ಶುಲ್ಕದ ರಸೀದಿಯನ್ನು ಲಗತ್ತಿಸಿ ವಿಜಯಪುರ ಮಹಾನಗರ ಪಾಲಿಕೆಯ ಕೇಂದ್ರ ಕಚೇರಿಗೆ ಸಲ್ಲಿಸಬೇಕು.

ಆನ್‌ಲೈನ್ ಅರ್ಜಿಗಳನ್ನು ಸ್ವೀಕರಿಸುವುದಿಲ್ಲ. ಅರ್ಜಿಗಳನ್ನು ಕಡ್ಡಾಯವಾಗಿ ವಿಜಯಪುರ ಮಹಾನಗರ ಪಾಲಿಕೆ ಕೇಂದ್ರ ಕಚೇರಿಯಲ್ಲೇ ಸಲ್ಲಿಸಬೇಕು.

ಪ್ರಮುಖ ಸೂಚನೆ :
ಜುಲೈ 15, 2026ರ ನಂತರ ಸಲ್ಲಿಸಲಾದ ಯಾವುದೇ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ. ತಪ್ಪು ಮಾಹಿತಿ ಅಥವಾ ನಕಲಿ ದಾಖಲೆಗಳನ್ನು ಸಲ್ಲಿಸಿದರೆ ಅಭ್ಯರ್ಥಿಯ ಅರ್ಜಿಯನ್ನು ತಿರಸ್ಕರಿಸುವುದರ ಜೊತೆಗೆ ಕಾನೂನು ಕ್ರಮ ಕೈಗೊಳ್ಳಬಹುದು.

ಅಧಿಸೂಚನೆ : Click Here


ಮತ್ತಷ್ಟು ನೇಮಕಾತಿಗಳ ಮಾಹಿತಿ : Current Recruitments : ಪ್ರಸ್ತುತ ನೇಮಕಾತಿಗಳು


error: Content Copyright protected !!