KSP ನೇಮಕಾತಿ 2026 : 3,991 ಸಿವಿಲ್ ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳ ಭರ್ತಿ
ಸರ್ಕಾರಿ ಉದ್ಯೋಗದ ನಿರೀಕ್ಷೆಯಲ್ಲಿರುವ ಯುವಕರಿಗೆ ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ (KSP) ಭರ್ಜರಿ ಅವಕಾಶ ನೀಡಿದೆ. ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯು 2026ನೇ ಸಾಲಿನ ನೇಮಕಾತಿ ಅಧಿಸೂಚನೆಯನ್ನು ಪ್ರಕಟಿಸಿದ್ದು, ರಾಜ್ಯದಾದ್ಯಂತ 3,991 ಸಿವಿಲ್ ಪೊಲೀಸ್ ಕಾನ್ಸ್‌ಟೇಬಲ್ (Civil Police Constable) ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದೆ.
ಆನ್‌ಲೈನ್ ಅರ್ಜಿ ಸಲ್ಲಿಕೆ ಪ್ರಕ್ರಿಯೆಯು ಜೂನ್ 8ರಿಂದ ಆರಂಭವಾಗಿದ್ದು, ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಜುಲೈ 3, 2026ರೊಳಗೆ ಅರ್ಜಿ ಸಲ್ಲಿಸಬಹುದು. ಲಿಖಿತ ಪರೀಕ್ಷೆಯನ್ನು ಆಗಸ್ಟ್ 2ರಂದು ನಡೆಸಲು ನಿಗದಿಪಡಿಸಲಾಗಿದೆ.
ಒಟ್ಟು 3,395 ಹುದ್ದೆಗಳಲ್ಲಿ ಪುರುಷ ಅಭ್ಯರ್ಥಿಗಳಿಗೆ 2266, ಮಹಿಳಾ ಅಭ್ಯರ್ಥಿಗಳಿಗೆ 755, ಸೇವಾನಿರತ ಪುರುಷರಿಗೆ 257, ಸೇವಾನಿರತ ಮಹಿಳೆಯರಿಗೆ 82 ಹಾಗೂ ತೃತೀಯ ಲಿಂಗಿ ಅಭ್ಯರ್ಥಿಗಳಿಗೆ 35 ಹುದ್ದೆಗಳನ್ನು ಕಾಯ್ದಿರಿಸಲಾಗಿದೆ.
| ವಿವರ | ಮಾಹಿತಿ |
|---|---|
| ನೇಮಕಾತಿ ಸಂಸ್ಥೆ | ಕರ್ನಾಟಕ ರಾಜ್ಯ ಪೊಲೀಸ್ (KSP) |
| ಪರೀಕ್ಷೆ ನಡೆಸುವ ಪ್ರಾಧಿಕಾರ | ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) |
| ಹುದ್ದೆಯ ಹೆಸರು | ಸಿವಿಲ್ ಪೊಲೀಸ್ ಕಾನ್ಸ್‌ಟೇಬಲ್ (PC) |
| ಅಧಿಸೂಚನೆ ಸಂಖ್ಯೆ | 01/Recruitment-4/2026-27 & 02/Recruitment-4/2026-27 |
| ಒಟ್ಟು ಹುದ್ದೆಗಳು | 3,991 |
| ಅರ್ಜಿ ಸಲ್ಲಿಕೆ ಪ್ರಾರಂಭ ದಿನಾಂಕ | 8 ಜೂನ್ 2026 |
| ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ | 3 ಜುಲೈ 2026 |
| ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ | 4 ಜುಲೈ 2026 |
| ಲಿಖಿತ ಪರೀಕ್ಷೆ ದಿನಾಂಕ | 2 ಆಗಸ್ಟ್ 2026 |
| ಅರ್ಜಿ ಸಲ್ಲಿಕೆ ವಿಧಾನ | ಆನ್‌ಲೈನ್ |
| ಅಧಿಕೃತ ವೆಬ್‌ಸೈಟ್ | cetonline.karnataka.gov.in/kea |
| ವೇತನ | ತಿಂಗಳಿಗೆ ₹37,500 ರಿಂದ ₹76,100 |
ಹುದ್ದೆಗಳ ವಿವರ :
ಒಟ್ಟು ಹುದ್ದೆಗಳು : 3,991
ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ ಕೇಂದ್ರ ನೇಮಕಾತಿ ಮತ್ತು ಬಡ್ತಿ ವಿಭಾಗವು ಎರಡು ಪ್ರತ್ಯೇಕ ಅಧಿಸೂಚನೆಗಳನ್ನು ಬಿಡುಗಡೆ ಮಾಡಿದೆ.
ಕಲ್ಯಾಣ ಕರ್ನಾಟಕ (371-ಜೆ) ಮೀಸಲು ವ್ಯಾಪ್ತಿಗೆ – 596 ಹುದ್ದೆಗಳು
ಸಾಮಾನ್ಯ/ಮಿಕ್ಕುಳಿದ ವರ್ಗಗಳಿಗೆ – 3,395 ಹುದ್ದೆಗಳು
ವಿದ್ಯಾರ್ಹತೆ :
ಅಭ್ಯರ್ಥಿಗಳು ಮಾನ್ಯತೆ ಪಡೆದ ಶಿಕ್ಷಣ ಮಂಡಳಿಯಿಂದ ದ್ವಿತೀಯ ಪಿಯುಸಿ (PUC) ಅಥವಾ ತತ್ಸಮಾನ ವಿದ್ಯಾರ್ಹತೆ ಪಡೆದಿರಬೇಕು. ಇದರ ಜೊತೆಗೆ ಎಸ್‌ಎಸ್‌ಎಲ್‌ಸಿ ಮಟ್ಟದವರೆಗೆ ಕನ್ನಡವನ್ನು ಪ್ರಥಮ ಅಥವಾ ದ್ವಿತೀಯ ಭಾಷೆಯಾಗಿ ಅಧ್ಯಯನ ಮಾಡಿರಬೇಕು. ಕನ್ನಡ ಭಾಷೆಯನ್ನು ಅಧ್ಯಯನ ಮಾಡದ ಅಭ್ಯರ್ಥಿಗಳು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ನಡೆಸುವ ಕನ್ನಡ ಭಾಷಾ ಪರೀಕ್ಷೆಯಲ್ಲಿ ತೇರ್ಗಡೆಯಾಗಬೇಕು.
ವಯೋಮಿತಿ :
ಸಾಮಾನ್ಯ ವರ್ಗದ ಅಭ್ಯರ್ಥಿಗಳು – ಗರಿಷ್ಠ 33 ವರ್ಷ
ಎಸ್‌ಸಿ, ಎಸ್‌ಟಿ ಹಾಗೂ ಹಿಂದುಳಿದ ವರ್ಗಗಳು – ಗರಿಷ್ಠ 35 ವರ್ಷ
ಅರಣ್ಯ ಪ್ರದೇಶದ ಬುಡಕಟ್ಟು ಎಸ್‌ಸಿ ಅಭ್ಯರ್ಥಿಗಳು – ಗರಿಷ್ಠ 38 ವರ್ಷ
ಮಾಜಿ ಸೈನಿಕರು – 38 ರಿಂದ 40 ವರ್ಷಗಳವರೆಗೆ ವರ್ಗಾನುಸಾರ ಸಡಿಲಿಕೆ
ಅರ್ಜಿ ಶುಲ್ಕ :
ಸಾಮಾನ್ಯ ಹಾಗೂ ಒಬಿಸಿ ಅಭ್ಯರ್ಥಿಗಳು -₹750 –
ಎಸ್‌ಸಿ, ಎಸ್‌ಟಿ, ಕ್ಯಾಟ್-1, ಮಾಜಿ ಸೈನಿಕರು ಹಾಗೂ ತೃತೀಯ ಲಿಂಗ ಅಭ್ಯರ್ಥಿಗಳು-₹500
ಆಯ್ಕೆ ಪ್ರಕ್ರಿಯೆ :
ನೇಮಕಾತಿ ಪ್ರಕ್ರಿಯೆಯು ಒಟ್ಟು ಐದು ಹಂತಗಳಲ್ಲಿ ನಡೆಯಲಿದೆ.
1.ಲಿಖಿತ ಪರೀಕ್ಷೆ
2.ದೈಹಿಕ ಮಾನದಂಡ ಪರೀಕ್ಷೆ (PST)
3.ದೈಹಿಕ ಸಾಮರ್ಥ್ಯ ಪರೀಕ್ಷೆ (PET)
4.ವೈದ್ಯಕೀಯ ಪರೀಕ್ಷೆ
5.ದಾಖಲೆಗಳ ಪರಿಶೀಲನೆ
ಲಿಖಿತ ಪರೀಕ್ಷೆಯ ವಿವರ
ಒಟ್ಟು ಪ್ರಶ್ನೆಗಳು – 100
ಒಟ್ಟು ಅಂಕಗಳು – 100
ಪರೀಕ್ಷಾ ಅವಧಿ – 90 ನಿಮಿಷ
ಕನಿಷ್ಠ ಅರ್ಹತಾ ಅಂಕ – 30
ಪ್ರತಿ ತಪ್ಪು ಉತ್ತರಕ್ಕೆ 0.25 ಅಂಕಗಳ ಋಣಾತ್ಮಕ ಮೌಲ್ಯಮಾಪನ
ಪರೀಕ್ಷೆಯಲ್ಲಿ ಸಾಮಾನ್ಯ ಜ್ಞಾನ, ವಿಜ್ಞಾನ, ಭೂಗೋಳ, ಭಾರತೀಯ ಇತಿಹಾಸ, ಸಂವಿಧಾನ, ಕರ್ನಾಟಕದ ಸಮಕಾಲೀನ ವಿಚಾರಗಳು, ಮಾನಸಿಕ ಸಾಮರ್ಥ್ಯ ಮತ್ತು ನೈತಿಕತೆ ಕುರಿತ ಪ್ರಶ್ನೆಗಳು ಇರಲಿವೆ.
ದೈಹಿಕ ಪರೀಕ್ಷಾ ಮಾನದಂಡ :
ಪುರುಷ ಅಭ್ಯರ್ಥಿಗಳಿಗೆ ಕನಿಷ್ಠ 168 ಸೆಂ.ಮೀ. ಎತ್ತರ ಹಾಗೂ ಮಹಿಳಾ ಅಭ್ಯರ್ಥಿಗಳಿಗೆ 157 ಸೆಂ.ಮೀ. ಎತ್ತರ ಕಡ್ಡಾಯವಾಗಿದೆ. ದೈಹಿಕ ಸಾಮರ್ಥ್ಯ ಪರೀಕ್ಷೆಯಲ್ಲಿ ಓಟ, ಎತ್ತರ ಜಿಗಿತ, ಉದ್ದ ಜಿಗಿತ ಹಾಗೂ ಶಾಟ್‌ಪುಟ್ ಸ್ಪರ್ಧೆಗಳು ಇರಲಿವೆ.
ವೇತನಶ್ರೇಣಿ :
ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ₹37,500 ರಿಂದ ₹76,100 ವೇತನ ಶ್ರೇಣಿ ದೊರೆಯಲಿದೆ. ಇದರ ಜೊತೆಗೆ ತುಟ್ಟಿ ಭತ್ಯೆ (DA), ಮನೆ ಬಾಡಿಗೆ ಭತ್ಯೆ (HRA), ಪ್ರಯಾಣ ಭತ್ಯೆ (TA), ರಾಷ್ಟ್ರೀಯ ಪಿಂಚಣಿ ಯೋಜನೆ (NPS) ಸೇರಿದಂತೆ ವಿವಿಧ ಸರ್ಕಾರಿ ಸೌಲಭ್ಯಗಳು ಲಭ್ಯವಾಗಲಿವೆ.
ಅರ್ಜಿ ಸಲ್ಲಿಸುವುದು ಹೇಗೆ?
ಅಭ್ಯರ್ಥಿಗಳು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕೃತ ವೆಬ್‌ಸೈಟ್ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ವೈಯಕ್ತಿಕ ಮಾಹಿತಿ, ವಿದ್ಯಾರ್ಹತೆ, ವರ್ಗದ ವಿವರಗಳನ್ನು ಭರ್ತಿ ಮಾಡಿ, ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಿ ಶುಲ್ಕ ಪಾವತಿಸಿದ ಬಳಿಕ ಅರ್ಜಿ ಸಲ್ಲಿಸಬೇಕು.
ಪ್ರಮುಖ ದಿನಾಂಕಗಳು
ಅಧಿಸೂಚನೆ ಪ್ರಕಟಣೆ-ಜೂನ್ 5, 2026
ಅರ್ಜಿ ಸಲ್ಲಿಕೆ ಆರಂಭ-ಜೂನ್ 8, 2026
ಅರ್ಜಿ ಸಲ್ಲಿಸಲು ಕೊನೆಯ ದಿನ -ಜುಲೈ 3, 2026
ಶುಲ್ಕ ಪಾವತಿಸಲು ಕೊನೆಯ ದಿನ -ಜುಲೈ 4, 2026
ಲಿಖಿತ ಪರೀಕ್ಷೆ-ಆಗಸ್ಟ್ 2, 2026
ಅಧಿಸೂಚನೆ :
ಕಲ್ಯಾಣ ಕರ್ನಾಟಕ 596 ಹುದ್ದೆಗಳು – ಅಧಿಕೃತ ಅಧಿಸೂಚನೆ PDF
3395 ಹುದ್ದೆಗಳು – ಅಧಿಕೃತ ಅಧಿಸೂಚನೆ PDF
ಮತ್ತಷ್ಟು ನೇಮಕಾತಿಗಳ ಮಾಹಿತಿ : Current Recruitments : ಪ್ರಸ್ತುತ ನೇಮಕಾತಿಗಳು

