ಕನ್ನಡ ಮೊದಲುಗಳು ಹಾಗೂ ಕರ್ನಾಟಕದ ಮೊದಲಿಗರು
➤ ಲಭ್ಯವಿರುವ ಕನ್ನಡದ ಮೊದಲ ಶಾಸನ – ಹಲ್ಮಿಡಿ ಶಾಸನ (ಕ್ರಿ.ಶ. 450)
➤ ತ್ರಿಪದಿ ಛಂದಸ್ಸಿನಲ್ಲಿರುವ ಮೊದಲ ಶಾಸನ – ಕಪ್ಪೆ ಅರಭಟ್ಟನ ಶಾಸನ (ಕ್ರಿ.ಶ. 700)
➤ ಕನ್ನಡದ ಮೊದಲ ಶಾಸ್ತ್ರಗ್ರಂಥ – ಕವಿರಾಜಮಾರ್ಗ (ಕ್ರಿ.ಶ. 850)
➤ ಕನ್ನಡದ ಮೊದಲ ಗದ್ಯಕೃತಿ – ವಡ್ಡಾರಾಧನೆ (ಕ್ರಿ.ಶ. 920)
➤ ಕನ್ನಡದ ಆದಿಕವಿ – ಆದಿಕವಿ ಪಂಪ (ಕ್ರಿ.ಶ. 940)
➤ ಕನ್ನಡದ ಮೊದಲ ಕಾವ್ಯ – ಆದಿಪುರಾಣ (ಪಂಪ, ಕ್ರಿ.ಶ. 941)
➤ ಕನ್ನಡದ ಮೊದಲ ಕವಯತ್ರಿ ಮತ್ತು ವಚನಕಾರ್ತಿ – ಅಕ್ಕಮಹಾದೇವಿ (ಕ್ರಿ.ಶ. 1150)
➤ ಕನ್ನಡದ ಮೊದಲು ಅಚ್ಚಾದ ಕನ್ನಡದ ಕೃತಿ – ‘ಎ ಗ್ರಾಮರ್ ಆಫ್ ದಿ ಕರ್ನಾಟಕ ಲ್ಯಾಂಗ್ವೇಜ್’ (ವಿಲಿಯಂ ಕೇರಿ, ಕ್ರಿ.ಶ. 1890)
➤ ಕನ್ನಡದ ಮೊದಲ ಮುಸ್ಲಿಂ ಕವಿ – ಶಿಶುನಾಳ ಶರೀಫ ಸಾಹೇಬರು (ಕ್ರಿ.ಶ. 1819)
➤ ಕನ್ನಡದ ಮೊದಲ ದೊರೆ – ಕದಂಬ ವಂಶದ ಮಯೂರವರ್ಮ
➤ ಕನ್ನಡದ ಮೊದಲ ಶಿಲ್ಪ – ಬನವಾಸಿಯ ನಾಗಶಿಲ್ಪ
➤ ಕನ್ನಡದ ಮೊದಲ ಕೆರೆ – ಚಂದ್ರವಳ್ಳಿ (ಚಿತ್ರದುರ್ಗ)
➤ ಕನ್ನಡದ ಮೊದಲ ಶಾಸನ – ಹಲ್ಮಿಡಿ ಶಾಸನ (ಕ್ರಿ.ಶ. 450)
➤ ಕನ್ನಡದ ಮೊದಲ ಕೋಟೆ – ಬಾದಾಮಿ (ಕ್ರಿ.ಶ. 543)
➤ ಕನ್ನಡದ ಮೊದಲ ನಾಟಕ – ಸಿಂಗರಾಯನ ಮಿತ್ರವಿಂದಾಗೋವಿಂದ
➤ ಕನ್ನಡದ ಮೊದಲ ದಿನಪತ್ರಿಕೆ – ಸೂರ್ಯೋದಯ ಪ್ರಕಾಶಿಕ
➤ ಕನ್ನಡದ ಮೊದಲ ವಚನಕಾರ್ತಿ – ಅಕ್ಕಮಹಾದೇವಿ
➤ ಕನ್ನಡದ ಮೊದಲ ರಾಷ್ಟ್ರಕವಿ – ಗೋವಿಂದ ಪೈ
➤ ಕನ್ನಡದ ಮೊದಲ ಪತ್ರಿಕೆ – ಮಂಗಳೂರು ಸಮಾಚಾರ
ಸ್ಥಾಪಕರು – ಫಾದರ್ ಹರ್ಮನ್ ಮೊಗ್ಲಿಂಗ್ (1843)
➤ ಕನ್ನಡದ ಮೊದಲ ಗದ್ಯಕೃತಿ – ವಡ್ಡಾರಾಧನೆ
➤ ಕನ್ನಡದ ಮೊದಲ ಕಾವ್ಯ – ಆದಿಪುರಾಣ
➤ ಕನ್ನಡದ ಮೊದಲ ಪಂಪ ಪ್ರಶಸ್ತಿ ವಿಜೇತ ಕವಿ – ಕುವೆಂಪು
➤ ಭಾರತರತ್ನ ಪ್ರಶಸ್ತಿ ಪಡೆದ ಮೊದಲ ಕನ್ನಡಿಗ – ಸರ್ ಎಂ. ವಿಶ್ವೇಶ್ವರಯ್ಯ
➤ ಜ್ಞಾನಪೀಠ ಪ್ರಶಸ್ತಿ ಪಡೆದ ಮೊದಲ ಕನ್ನಡ ಕೃತಿ ಮತ್ತು ಕವಿ – ಶ್ರೀರಾಮಾಯಣ ದರ್ಶನಂ (ಕುವೆಂಪು)
➤ ರಾಷ್ಟ್ರ ಪ್ರಶಸ್ತಿ ಪಡೆದ ಮೊದಲ ಕನ್ನಡ ಚಿತ್ರ – ಬೇಡರ ಕಣ್ಣಪ್ಪ
➤ ರಾಷ್ಟ್ರ ಪ್ರಶಸ್ತಿ ಪಡೆದ ಮೊದಲ ಕನ್ನಡದ ಗಾಯಕ – ಶಿವಮೊಗ್ಗ ಸುಬ್ಬಣ್ಣ
➤ ಕನ್ನಡ ಸಾಹಿತ್ಯ ಸಮ್ಮೇಳನದ ಮೊದಲ ಮಹಿಳಾ ಅಧ್ಯಕ್ಷೆ – ಜಯದೇವಿತಾಯಿ ಲಿಗಾಡೆ (1984)
➤ ಕನ್ನಡದ ಮೊದಲ ವರ್ಣಚಿತ್ರ – ಅಮರಶಿಲ್ಪಿ ಜಕಣಾಚಾರಿ
➤ ಕನ್ನಡ ಸೇವೆಗೆ ಡಾಕ್ಟರೇಟ್ ಪ್ರಶಸ್ತಿ ಪಡೆದ ಮೊದಲಿಗ – ಫರ್ಡಿನೆಂಡ್ ಕಿಟ್ಟೆಲ್ (ಕನ್ನಡ-ಇಂಗ್ಲಿಷ್ ನಿಘಂಟು)
➤ ಕನ್ನಡ ರಂಗಭೂಮಿಯ ಮೊದಲ ನಾಯಕಿ ನಟಿ – ಎಲ್ಲೂಬಾಯಿ ಗುಳೇದಗುಡ್ಡ
➤ ಕರ್ನಾಟಕದಲ್ಲಿ ತಯಾರಾದ ಮೊದಲ ಮೂಕಚಿತ್ರ – ಮೃಚ್ಛಕಟಿಕ
➤ ಹೆಚ್ಚು ರಾಷ್ಟ್ರೀಯ ಪ್ರಶಸ್ತಿ ಪಡೆದ ಕನ್ನಡ ಪತ್ರಿಕೆ – ಉದಯವಾಣಿ
➤ ರಾಷ್ಟ್ರ ಪ್ರಶಸ್ತಿ ಪಡೆದ ಮೊದಲ ಯಕ್ಷಗಾನ ಕಲಾವಿದ – ಹಾರಾಡಿ ರಾಮಗಾಣಿಗ
➤ ಸೋವಿಯತ್ ಲ್ಯಾಂಡ್ ಪ್ರಶಸ್ತಿ ಪಡೆದ ಮೊದಲ ಕನ್ನಡ ಮಹಿಳೆ ಮತ್ತು ಕನ್ನಡಿಗ – ಅನುಪಮಾ ನಿರಂಜನ, ಬಸವರಾಜ ಕಟ್ಟಿಮನಿ
➤ ಕನ್ನಡದ ಮೊದಲ ನವೋದಯ ಕವಯತ್ರಿ – ಬೆಳಗೆರೆ ಜಾನಕಮ್ಮ
➤ ಕನ್ನಡದ ಪ್ರಥಮ ತ್ರಿಪದಿ ಶಾಸನ – ಬಾದಾಮಿ ಶಾಸನ
➤ ಕನ್ನಡದ ಪ್ರಥಮ ರಾಜವಂಶ – ಕದಂಬರು
➤ ಸ್ವಾತಂತ್ರ್ಯ ಕಹಳೆ ಊದಿದ ಭಾರತದಲ್ಲೇ ಪ್ರಥಮ ಕನ್ನಡ ಪ್ರಾಂತ್ಯ – ಕಿತ್ತೂರು
➤ ಕರ್ನಾಟಕದ ಮೊದಲ ವಿಶ್ವವಿದ್ಯಾಲಯ – ಮೈಸೂರು ವಿಶ್ವವಿದ್ಯಾಲಯ
➤ ಭಾರತರತ್ನ ಪ್ರಶಸ್ತಿ ಪಡೆದ ಪ್ರಥಮ ಕನ್ನಡ ವಿಜ್ಞಾನಿ – ಸರ್ ಸಿ.ವಿ. ರಾಮನ್
➤ ರೈಟ್ ಸಹೋದರರಿಗಿಂತ 8 ವರ್ಷ ಮೊದಲೇ (1895) ಮುಂಬೈಯಲ್ಲಿ 2000 ಅಡಿ ಎತ್ತರಕ್ಕೆ ವಿಮಾನ ಹಾರಿಸಿದ ಕನ್ನಡಿಗ – ಆನೇಕಲ್ ಸುಬ್ಬರಾಯ ಶಾಸ್ತ್ರಿ
➤ ಕನ್ನಡದ ಪ್ರಥಮ ನಾಡಗೀತೆ – ಉದಯವಾಗಲಿ ನಮ್ಮ ಚೆಲುವ ಕನ್ನಡನಾಡು
ಕವಿ – ಹುಯಿಲಗೋಳ ನಾರಾಯಣರಾವ್
➤ ಕನ್ನಡದ ಪ್ರಥಮ ಭಾವಗೀತೆಗಳ ಕ್ಯಾಸೆಟ್ – ನಿತ್ಯೋತ್ಸವ
➤ ವಿದೇಶದಲ್ಲಿ ಚಿತ್ರಿಸಿದ ಮೊದಲ ಕನ್ನಡ ಚಿತ್ರ – ಸಿಂಗಾಪುರದಲ್ಲಿ ರಾಜಾಕುಳ್ಳ
➤ ಕನ್ನಡದ ಪ್ರಥಮ ಚಿತ್ರ ನಿರ್ಮಾಪಕಿ – ಎಂ.ವಿ. ರಾಜಮ್ಮ
➤ ಕನ್ನಡ ಚಿತ್ರರಂಗದ ಪ್ರಥಮ ವಾಕ್ಚಿತ್ರ – ಭಕ್ತಧ್ರುವ
➤ ಕನ್ನಡ ರಂಗಮಂಟಪದ ಮೇಲೆ ಪ್ರಥಮ ಬಾರಿಗೆ ಜೀವಂತ ಪ್ರಾಣಿ ತಂದ ಕನ್ನಡಿಗ – ಗುಬ್ಬಿ ವೀರಣ್ಣ
➤ ಕರ್ನಾಟಕ ಪ್ರಶಸ್ತಿ, ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಪಡೆದ ಪ್ರಥಮ ಕನ್ನಡ ಚಲನಚಿತ್ರ ನಟ – ಡಾ. ರಾಜ್ ಕುಮಾರ್
➤ ಕರ್ನಾಟಕದ ಪ್ರಥಮ ಚಿತ್ರಮಂದಿರ – ಪ್ಯಾರಾಮೌಂಟ್
➤ ಭಾರತ ಹಾಕಿ ತಂಡದ ಮೊದಲ ನಾಯಕರಾಗಿದ್ದ ಕನ್ನಡಿಗ – ಎಂ.ಪಿ. ಗಣೇಶ್
➤ ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಪ್ರಥಮ ಕನ್ನಡತಿ – ಶಾಂತ ರಂಗಸ್ವಾಮಿ
➤ ಭಾರತ ಶ್ರೀ, ಭಾರತ ಕಿಶೋರ್, ಭಾರತ್ ಕುಮಾರ್ ಪ್ರಶಸ್ತಿಗಳನ್ನು ಒಂದೇ ವರ್ಷದಲ್ಲಿ ಪಡೆದ ದೇಹದಾರ್ಢ್ಯ ಪಟು – ಕನ್ನಡಿಗ ರೇಮಂಡ್ ಡಿಸೋಜಾ
➤ ನಾಟಕರಂಗಕ್ಕೆ ಸಲ್ಲಿಸಿದ ಸೇವೆಗಾಗಿ ಫಿಲಿಪೈನ್ಸ್ ಮ್ಯಾಗ್ಸೆಸೆ ಪ್ರಶಸ್ತಿ ಪಡೆದ ಮೊದಲ ಕನ್ನಡಿಗ – ಕೆ.ವಿ. ಸುಬ್ಬಣ್ಣ
➤ ಅಭಿನಯಿಸಿದ ಮೊದಲ ಚಿತ್ರಕ್ಕೇ ಅಂತರರಾಷ್ಟ್ರೀಯ ಪ್ರಶಸ್ತಿ ಪಡೆದ ಕನ್ನಡ ನಾಯಕ – ಶಂಕರನಾಗ್
➤ ಕನ್ನಡದ ಮೊದಲ ವರ್ಣಚಲನಚಿತ್ರ – ಸತಿಸುಲೋಚನಾ
➤ ಕನ್ನಡ ಭಾಷೆಯ ಮೊದಲ ಪದ – ಇಸಿಲ
➤ ಉತ್ತರ ಭಾರತಕ್ಕೆ ದಂಡಯಾತ್ರೆ ಕೈಗೊಂಡ ಮೊದಲ ಅರಸ – ಮೊದಲನೆಯ ಧ್ರುವ
➤ ಕನ್ನಡದ ಮೊದಲ ಕಾದಂಬರಿ – ಇಂದಿರಾಬಾಯಿ
ಕರ್ನಾಟಕದ ಮೊದಲಿಗರು :
➤ ಸೇನಾ ದಂಡನಾಯಕರಾದ ಮೊದಲ ಕನ್ನಡಿಗ – ಕೆ.ಎಂ. ಕಾರ್ಯಪ್ಪ
➤ ಪ್ರಧಾನಮಂತ್ರಿಯಾದ ಮೊದಲ ಕನ್ನಡಿಗ – ಹೆಚ್.ಡಿ. ದೇವೇಗೌಡ
➤ ಕರ್ನಾಟಕದ ಮೊದಲ ರಾಜ್ಯಪಾಲ – ಜಯಚಾಮರಾಜೇಂದ್ರ ಒಡೆಯರ್
➤ ಕರ್ನಾಟಕದ ಮೊದಲ ಮುಖ್ಯಮಂತ್ರಿ – ಕೆ.ಸಿ. ರೆಡ್ಡಿ
➤ ಏಕೀಕೃತ ಕರ್ನಾಟಕದ ಮೊದಲ ಮುಖ್ಯಮಂತ್ರಿ – ಎಸ್. ನಿಜಲಿಂಗಪ್ಪ
➤ ಭಾರತರತ್ನ ಪ್ರಶಸ್ತಿ ವಿಜೇತ ಮೊದಲ ಕನ್ನಡಿಗ – ಸರ್ ಎಂ. ವಿಶ್ವೇಶ್ವರಯ್ಯ
➤ ಮ್ಯಾಗ್ಸೆಸೆ ಪ್ರಶಸ್ತಿ ವಿಜೇತ ಮೊದಲ ಕನ್ನಡಿಗ – ಕೆ.ವಿ. ಸುಬ್ಬಣ್ಣ
➤ ಜ್ಞಾನಪೀಠ ಪ್ರಶಸ್ತಿ ವಿಜೇತ ಮೊದಲ ಕನ್ನಡಿಗ – ಕುವೆಂಪು
➤ ಪಂಪ ಪ್ರಶಸ್ತಿ ವಿಜೇತ ಮೊದಲ ಕನ್ನಡಿಗ – ಕುವೆಂಪು
➤ ಕರ್ನಾಟಕದ ಮೊದಲ ರಾಷ್ಟ್ರಕವಿ – ಗೋವಿಂದ ಪೈ
➤ ಕಾಳಿದಾಸ ಸಮ್ಮಾನ್ ವಿಜೇತ ಮೊದಲ ಕನ್ನಡಿಗ – ಮಲ್ಲಿಕಾರ್ಜುನ ಮನ್ಸೂರ್
➤ ಕಬೀರ್ ಸಮ್ಮಾನ್ ವಿಜೇತ ಮೊದಲ ಕನ್ನಡಿಗ – ಗೋಪಾಲಕೃಷ್ಣ ಅಡಿಗ
➤ ಜಮನಾಲಾಲ್ ಪ್ರಶಸ್ತಿ ವಿಜೇತ ಮೊದಲ ಕನ್ನಡಿಗ – ತಗಡೂರು ರಾಮಚಂದ್ರರಾವ್
➤ ಗೋಯೆಂಕಾ ಪ್ರಶಸ್ತಿ ವಿಜೇತ ಮೊದಲ ಕನ್ನಡಿಗ – ಪಾ.ವೆಂ. ಆಚಾರ್ಯ
➤ ರಾಷ್ಟ್ರ ಪ್ರಶಸ್ತಿ ಪಡೆದ ಮೊದಲ ಯಕ್ಷಗಾನ ಕಲಾವಿದ – ಹಾರಾಡಿ ರಾಮಗಾಣಿಗ
➤ ಕನ್ನಡ ಸೇವೆಗೆ ಡಾಕ್ಟರೇಟ್ ಪಡೆದವರು – ಫರ್ಡಿನೆಂಡ್ ಕಿಟ್ಟೆಲ್
➤ ಚಲನಚಿತ್ರ ಹಿನ್ನೆಲೆ ಗಾಯನಕ್ಕೆ ರಾಷ್ಟ್ರ ಪ್ರಶಸ್ತಿ ಪಡೆದ ಮೊದಲ ಕನ್ನಡಿಗ – ಶಿವಮೊಗ್ಗ ಸುಬ್ಬಣ್ಣ
➤ ಪುಸ್ತಕ ಪ್ರಕಾಶನಕ್ಕೆ ಪದ್ಮಶ್ರೀ ಪಡೆದ ಮೊದಲ ಕನ್ನಡಿಗ – ಜಿ.ಬಿ. ಜೋಷಿ
➤ ಸೋವಿಯತ್ ಲ್ಯಾಂಡ್ ಪ್ರಶಸ್ತಿ ಪಡೆದ ಮೊದಲ ಕನ್ನಡಿಗ – ಬಸವರಾಜ ಕಟ್ಟಿಮನಿ
➤ ಕನ್ನಡದ ಮೊದಲ ಪತ್ರಕರ್ತೆ / ಪ್ರಕಾಶಕಿ – ನಂಜನಗೂಡು ತಿರುಮಲಾಂಬಾ
➤ ಕನ್ನಡ ನಾಟಕ ರಂಗದ ಮೊದಲ ಸ್ತ್ರೀ – ಗಂಗೂಬಾಯಿ ಗುಳೇದಗುಡ್ಡ
➤ ಸಾಹಿತ್ಯ ಸಮ್ಮೇಳನದ ಮೊದಲ ಮಹಿಳಾ ಅಧ್ಯಕ್ಷೆ – ಜಯದೇವಿತಾಯಿ ಲಿಗಾಡೆ
➤ ಸೋವಿಯತ್ ಲ್ಯಾಂಡ್ ಪ್ರಶಸ್ತಿ ಪಡೆದ ಮೊದಲ ಕನ್ನಡತಿ – ಅನುಪಮಾ ನಿರಂಜನ
| ಇದನ್ನೂ ಓದಿ : |
|---|
| ➤ First In Kannada : ಕರ್ನಾಟಕದ / ಕನ್ನಡದ ಮೊದಲುಗಳು – ಭಾಗ 1 |
| ➤ First In Kannada : ಕರ್ನಾಟಕದ / ಕನ್ನಡದ ಮೊದಲುಗಳು – ಭಾಗ 2 |
| ➤ First In Kannada : ಕರ್ನಾಟಕದ / ಕನ್ನಡದ ಮೊದಲುಗಳು – ಭಾಗ 3 |
- ವಿಶ್ವದ ಅತ್ಯುತ್ತಮ ಶಾಲೆಗಳ ಪ್ರಶಸ್ತಿ-2026 : ಅಂತಿಮ ಪಟ್ಟಿಗೆ ಭಾರತದ 7 ಶಾಲೆಗಳು ಆಯ್ಕೆ
- ಭಾರತದಲ್ಲಿ ಮೊದಲ ಬಾರಿಗೆ ಜೆಟ್ ವಿಮಾನದಲ್ಲಿ ಉಪಗ್ರಹ ಆಧಾರಿತ ಗಗನ್ (GAGAN) ಲ್ಯಾಂಡಿಂಗ್ ಯಶಸ್ವಿ
- ಇಸ್ರೋ ಮತ್ತೊಂದು ಮಹತ್ವದ ಹೆಜ್ಜೆ : ಸೆಮಿ-ಕ್ರಯೋಜೆನಿಕ್ ರಾಕೆಟ್ ಎಂಜಿನ್ ಯಶಸ್ವಿ ಪರೀಕ್ಷೆ
- ಪ್ರಚಲಿತ ಘಟನೆಗಳ ಕ್ವಿಜ್ (27-06-2026)
- ಪ್ರಚಲಿತ ಘಟನೆಗಳ ಕ್ವಿಜ್ (26-06-2026)

