ಪ್ರಚಲಿತ ಘಟನೆಗಳು CA QUIZ GK JOB NEWS E-BOOK QUIZ TEST Geography History Indian Constitution MCQs
Current AffairsLatest Updates

ಲಡಾಖ್‌ನಿಂದ ಯುಎಇಗೆ ಮೊದಲ ಬಾರಿಗೆ ಪ್ರೀಮಿಯಂ ಏಪ್ರಿಕಾಟ್ ರಫ್ತು

Share With Friends

ಲಡಾಖ್‌ನ ಪ್ರಸಿದ್ಧ ಏಪ್ರಿಕಾಟ್ (ಖುಬಾನಿ / ಜರ್ದಾಳು) ಹಣ್ಣುಗಳು ಮೊದಲ ಬಾರಿಗೆ ಸಂಯುಕ್ತ ಅರಬ್ ಎಮಿರೇಟ್ಸ್ ( United Arab Emirates) ಮಾರುಕಟ್ಟೆ ಪ್ರವೇಶಿಸಲಿವೆ. ಜುಲೈ 14ರಂದು ಮೊದಲ ತಾಜಾ ಏಪ್ರಿಕಾಟ್ (Apricot) ಸಾಗಣೆಯನ್ನು ವಿಶೇಷ ಕಾರ್ಗೋ ವಿಮಾನದ ಮೂಲಕ ಯುಎಇಗೆ ರವಾನಿಸಲಾಗಿದೆ. ಈ ರಫ್ತು ಯೋಜನೆಯು ಲಡಾಖ್ ಆಡಳಿತ ಮತ್ತು ಲುಲು ರಿಟೇಲ್ ನಡುವಿನ ಒಪ್ಪಂದದ ಭಾಗವಾಗಿದ್ದು, ಒಟ್ಟು 1,000 ಮೆಟ್ರಿಕ್ ಟನ್ ಏಪ್ರಿಕಾಟ್ ರಫ್ತು ಮಾಡುವ ಗುರಿ ಹೊಂದಿದೆ.

ಲಡಾಖ್‌ನ ಶೀತ ಮರುಭೂಮಿ ಹವಾಮಾನದಲ್ಲಿ ಬೆಳೆಯುವ ಜಿಐ (GI) ಟ್ಯಾಗ್ ಪಡೆದ ‘ರಕ್ತ್ಸೇ ಕಾರ್ಪೋ’ (Raktsey Karpo apricot) ಹಾಗೂ ಸ್ಥಳೀಯ ‘ಹಾಲ್ಮನ್'(Halman) ತಳಿಯ ಏಪ್ರಿಕಾಟ್‌ಗಳನ್ನು ಈ ಯೋಜನೆಯಡಿ ವಿದೇಶಕ್ಕೆ ರಫ್ತು ಮಾಡಲಾಗುತ್ತಿದೆ.

ಈ ಯೋಜನೆಗೆ ಕೃಷಿ ಮತ್ತು ಸಂಸ್ಕರಿತ ಆಹಾರ ಉತ್ಪನ್ನಗಳ ರಫ್ತು ಅಭಿವೃದ್ಧಿ ಪ್ರಾಧಿಕಾರ (APEDA – Agricultural and Processed Food Products Export Development Authority) ಹಾಗೂ ಕೇಂದ್ರ ಆಹಾರ ಸಂಸ್ಕರಣಾ ಕೈಗಾರಿಕೆ ಸಚಿವಾಲಯ ( Ministry of Food Processing Industries) ಸಹಕಾರ ನೀಡಿವೆ. ಲುಲು ರಿಟೇಲ್ ರೈತರಿಂದ ನೇರವಾಗಿ ಏಪ್ರಿಕಾಟ್ ಖರೀದಿಸಿ, ಅವುಗಳ ಸಂಸ್ಕರಣೆ, ಪ್ಯಾಕಿಂಗ್ ಹಾಗೂ ವಿದೇಶಿ ಮಾರುಕಟ್ಟೆಯಲ್ಲಿ ಮಾರಾಟದ ಜವಾಬ್ದಾರಿಯನ್ನು ವಹಿಸಿಕೊಂಡಿದೆ.

ಮೊದಲ ಸಾಗಣೆಗೆ ಮುನ್ನ ಖರೀದಿ, ಗುಣಮಟ್ಟ ಪರಿಶೀಲನೆ, ವಿಂಗಡಣೆ, ಪ್ಯಾಕಿಂಗ್ ಹಾಗೂ ಸಾರಿಗೆ ವ್ಯವಸ್ಥೆಗಳ ಕುರಿತು ಲಡಾಖ್ ಮುಖ್ಯ ಕಾರ್ಯದರ್ಶಿ ಆಶಿಷ್ ಕುಂದ್ರಾ ಪರಿಶೀಲನಾ ಸಭೆ ನಡೆಸಿದ್ದರು.

ಕಳೆದ ಎರಡು ವರ್ಷಗಳಲ್ಲಿ ಲಡಾಖ್‌ನಿಂದ ಕೇವಲ 1,500 ಕಿಲೋಗ್ರಾಂ ಏಪ್ರಿಕಾಟ್ ಮಾತ್ರ ರಫ್ತಾಗಿದ್ದರೆ, ಈಗ 1,000 ಮೆಟ್ರಿಕ್ ಟನ್ ರಫ್ತು ಗುರಿ ನಿಗದಿಪಡಿಸಿರುವುದು ಅಲ್ಲಿನ ಹಣ್ಣು ಬೆಳೆಗಾರರಿಗೆ ಮಹತ್ವದ ಮಾರುಕಟ್ಟೆ ಅವಕಾಶವನ್ನು ಕಲ್ಪಿಸಿದೆ. ಈ ಯೋಜನೆಯು ಲಡಾಖ್‌ನ ತೋಟಗಾರಿಕೆ ಉತ್ಪನ್ನಗಳಿಗೆ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಹೊಸ ಗುರುತನ್ನು ತಂದುಕೊಡುವ ನಿರೀಕ್ಷೆಯಿದೆ.


error: Content Copyright protected !!