ದೇಶವ್ಯಾಪಿ ‘ವಿಪತ್ತು ಎಚ್ಚರಿಕೆ ವ್ಯವಸ್ಥೆ’ (Disaster Alert System) ಯಶಸ್ವಿ ಪರೀಕ್ಷೆ ನಡೆಸಿದ NDMA
National Disaster Management Authority (NDMA) ದೇಶವ್ಯಾಪಿ ಹೊಸ Cell Broadcast Emergency Alert System ಅನ್ನು ಯಶಸ್ವಿಯಾಗಿ ಪರೀಕ್ಷಿಸಿದೆ. ಇಂದು ಬೆಳಗ್ಗೆ 11:42ಕ್ಕೆ, ದೇಶದ ಹಲವಾರು ನಾಗರಿಕರ ಮೊಬೈಲ್‌ಗಳಿಗೆ ಫ್ಲ್ಯಾಶ್ ಸಂದೇಶಗಳು ತಲುಪಿದ್ದು, ಇದು ಕೇವಲ ಪರೀಕ್ಷೆಯ ಭಾಗವೆಂದು ಸ್ಪಷ್ಟಪಡಿಸಲಾಗಿದೆ. ‘ಸಚೇತ್’ (SACHET) ಎಂಬ ಈ ಸ್ವದೇಶಿ ತಂತ್ರಜ್ಞಾನವನ್ನು DoT ಮತ್ತು C-DOT, NDMA ಸಹಯೋಗದೊಂದಿಗೆ ಅಭಿವೃದ್ಧಿಪಡಿಸಿವೆ.
ಈ ವ್ಯವಸ್ಥೆ ಆ ಪ್ರದೇಶದಲ್ಲಿರುವ ಎಲ್ಲರಿಗೂ — ನಿವಾಸಿಗಳಾಗಿರಲಿ, ಅತಿಥಿಗಳಾಗಿರಲಿ — ಸಂದೇಶ ತಲುಪುವಂತೆ ವಿನ್ಯಾಸಗೊಳಿಸಲಾಗಿದೆ. ಅಂದರೆ, ಭವಿಷ್ಯದ ನೈಜ ತುರ್ತು ಸಂದರ್ಭಗಳಲ್ಲಿ ಸ್ಥಳಾಧಾರಿತ, ತಕ್ಷಣದ ಮತ್ತು ವ್ಯಾಪಕ ಎಚ್ಚರಿಕೆ ನೀಡುವುದು ಇದರ ಮುಖ್ಯ ಉದ್ದೇಶವಾಗಿದೆ. ಈ ಹೊಸ ವ್ಯವಸ್ಥೆಯ ಉದ್ದೇಶವು ಭೂಕಂಪ, ಪ್ರವಾಹ, ಚಂಡಮಾರುತಗಳಂತಹ ಪ್ರಕೃತಿ ವಿಕೋಪಗಳ ಸಮಯದಲ್ಲಿ ಜನರಿಗೆ ತಕ್ಷಣ ಮತ್ತು ಸ್ಥಳಾಧಾರಿತ ಎಚ್ಚರಿಕೆಗಳನ್ನು ನೀಡುವುದಾಗಿದೆ.
NDMA ಆರಂಭಿಸಿದ ಈ ಹೊಸ Cell Broadcast Alert System ಭಾರತದಲ್ಲಿ ಆಪತ್ತು ನಿರ್ವಹಣೆಯನ್ನು ಇನ್ನಷ್ಟು ವೇಗವಾಗಿ ಮತ್ತು ಪರಿಣಾಮಕಾರಿಯಾಗಿ ಮಾಡಲು ನೆರವಾಗಲಿದೆ. ಮುಂದಿನ ದಿನಗಳಲ್ಲಿ ಈ ವ್ಯವಸ್ಥೆ ಸಾರ್ವಜನಿಕ ಸುರಕ್ಷತೆಗೆ ಪ್ರಮುಖ ಸಾಧನವಾಗಲಿದೆ.
ಭಾರತದಲ್ಲಿ ಪ್ರವಾಹ, ಭೂಕಂಪ, ಚಂಡಮಾರುತ, ಹೀಟ್‌ವೇವ್‌ಗಳು ಸಾಮಾನ್ಯವಾಗಿವೆ. ಇಂತಹ ಸಂದರ್ಭಗಳಲ್ಲಿ ಈ ಎಚ್ಚರಿಕಾ ವ್ಯವಸ್ಥೆ ಜೀವಗಳನ್ನು ರಕ್ಷಿಸಲು ಮಹತ್ವದ ಪಾತ್ರವಹಿಸುತ್ತದೆ.
✶ಏನಿದು ‘ಸಚೇತ್’ (SACHET) ವ್ಯವಸ್ಥೆ?
ಈ ತಂತ್ರಜ್ಞಾನವನ್ನು ದೂರಸಂಪರ್ಕ ಇಲಾಖೆ (DoT) ಮತ್ತು ಸಿ-ಡಾಟ್ (C-DOT) ಸಂಸ್ಥೆಯು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ (NDMA) ಸಹಯೋಗದೊಂದಿಗೆ ಅಭಿವೃದ್ಧಿಪಡಿಸಿದೆ. ಇದು ಇಂಟರ್ನೆಟ್ ಅಥವಾ ನೆಟ್‌ವರ್ಕ್ ದಟ್ಟಣೆಯ ಮೇಲೆ ಅವಲಂಬಿತವಾಗಿಲ್ಲ. ಬದಲಾಗಿ, ನಿರ್ದಿಷ್ಟ ಪ್ರದೇಶದ ಎಲ್ಲಾ ಮೊಬೈಲ್ ಟವರ್ ಮೂಲಕ ಏಕಕಾಲದಲ್ಲಿ ಸಂದೇಶಗಳನ್ನು ರವಾನಿಸುತ್ತದೆ. ಭೂಕಂಪ, ಸುನಾಮಿ, ಚಂಡಮಾರುತ, ಮಿಂಚು ಅಥವಾ ಅನಿಲ ಸೋರಿಕೆಯಂತಹ ತುರ್ತು ಸಂದರ್ಭಗಳಲ್ಲಿ ಜನರನ್ನು ಕೇವಲ ಸೆಕೆಂಡುಗಳಲ್ಲಿ ಎಚ್ಚರಿಸಿ ಸುರಕ್ಷಿತ ಸ್ಥಳಕ್ಕೆ ತೆರಳಲು ಸಮಯ ನೀಡುವ ಉದ್ದೇಶವನ್ನು ಇದು ಹೊಂದಿದೆ.
✶ಸೆಲ್ ಬ್ರಾಡ್‌ಕಾಸ್ಟ್ ಅಲರ್ಟ್ ಸಿಸ್ಟಂ ಎಂದರೇನು?
ಸೆಲ್ ಬ್ರಾಡ್‌ಕಾಸ್ಟ್ ತಂತ್ರಜ್ಞಾನವು ಒಂದು ಪ್ರದೇಶದಲ್ಲಿರುವ ಎಲ್ಲಾ ಮೊಬೈಲ್‌ಗಳಿಗೆ ಒಂದೇ ಸಮಯದಲ್ಲಿ ಸಂದೇಶವನ್ನು ಕಳುಹಿಸುತ್ತದೆ. ಸಾಮಾನ್ಯ SMSಗೆ ಹೋಲಿಸಿದರೆ, ಇದು ವೈಯಕ್ತಿಕ ಸಂಖ್ಯೆಗಳ ಮೇಲೆ ಅವಲಂಬಿತವಾಗಿರುವುದಿಲ್ಲ. ನೆಟ್‌ವರ್ಕ್ ಟ್ರಾಫಿಕ್ ಹೆಚ್ಚು ಇದ್ದರೂ ಸಹ ಸಂದೇಶಗಳು ವಿಳಂಬವಿಲ್ಲದೆ ತಲುಪುತ್ತವೆ.
✶ಜನರಿಗೆ ಈ ಸಂದೇಶ ಏಕೆ ಬಂದಿತು?
ಇಂದು ಬಂದ ಅಲರ್ಟ್ ಸಂದೇಶವು ಸರ್ಕಾರದ ಪರೀಕ್ಷಾ ಅಭ್ಯಾಸದ ಭಾಗವಾಗಿತ್ತು. ಸಂದೇಶದಲ್ಲಿ “ಇದು ಕೇವಲ ಪರೀಕ್ಷೆ” ಎಂದು ಸ್ಪಷ್ಟವಾಗಿ ಉಲ್ಲೇಖಿಸಲಾಗಿತ್ತು. ಯಾವುದೇ ಕ್ರಮ ತೆಗೆದುಕೊಳ್ಳಬೇಕಿಲ್ಲ ಎಂದು ನಾಗರಿಕರಿಗೆ ತಿಳಿಸಲಾಗಿದೆ.
✶ಈ ವ್ಯವಸ್ಥೆಯ ಹಿಂದೆ ಯಾವ ಸಂಸ್ಥೆಗಳು?
ಈ ಯೋಜನೆ ಅಭಿವೃದ್ಧಿ ಮತ್ತು ಪರೀಕ್ಷೆಯಲ್ಲಿ ಹಲವು ಸರ್ಕಾರಿ ಸಂಸ್ಥೆಗಳು ಭಾಗಿಯಾಗಿವೆ:
Department of Telecommunications
National Disaster Management Authority
Centre for Development of Telematics
✶SACHET ಅಲರ್ಟ್ ವ್ಯವಸ್ಥೆಯ ಪಾತ್ರ :
ಈ ಎಚ್ಚರಿಕಾ ಸಂದೇಶಗಳು SACHET Integrated Alert System ಮೂಲಕ ಕಳುಹಿಸಲಾಗುತ್ತಿವೆ. ಇದನ್ನು Centre for Development of Telematics ಅಭಿವೃದ್ಧಿಪಡಿಸಿದೆ. 19ಕ್ಕೂ ಹೆಚ್ಚು ಭಾಷೆಗಳಲ್ಲಿ ಸಂದೇಶಗಳನ್ನು ಕಳುಹಿಸಲು ಇದು ಸಹಕಾರಿಯಾಗಿದೆ ಈಗಾಗಲೇ 134 ಬಿಲಿಯನ್‌ಗೂ ಹೆಚ್ಚು ಅಲರ್ಟ್ ಸಂದೇಶಗಳನ್ನು ಕಳುಹಿಸಲಾಗಿದೆ
✶SMSಗಿಂತ ಇದು ಹೇಗೆ ಉತ್ತಮ..?
ತಕ್ಷಣ ಸಂದೇಶ ವಿತರಣೆ
ಯಾವುದೇ ಫೋನ್ ನಂಬರ್ ಡೇಟಾಬೇಸ್ ಅಗತ್ಯವಿಲ್ಲ
ನೆಟ್‌ವರ್ಕ್ ಬ್ಯುಸಿ ಇದ್ದರೂ ಕೆಲಸ ಮಾಡುತ್ತದೆ
ಒಂದು ಪ್ರದೇಶದಲ್ಲಿನ ಎಲ್ಲರಿಗೂ ಒಂದೇ ಸಮಯದಲ್ಲಿ ತಲುಪುತ್ತದೆ
🇮🇳 ಭಾರತಕ್ಕೆ ಇದರ ಮಹತ್ವ ಏನು?
✶ಅಮಿತ್ ಶಾ ಅಧಿಕೃತ ಚಾಲನೆ:
ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಸಂವಹನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರು ಇಂದು ದೆಹಲಿಯಲ್ಲಿ ಈ ಸ್ವದೇಶಿ ವಿಪತ್ತು ಸಂವಹನ ವ್ಯವಸ್ಥೆಗೆ ಅಧಿಕೃತವಾಗಿ ಚಾಲನೆ ನೀಡಿದ್ದಾರೆ. ಭಾರತದ 36 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ರಾಜಧಾನಿಗಳಲ್ಲಿ ಇಂದು ಈ ಪರೀಕ್ಷಾರ್ಥ ಸಂದೇಶಗಳನ್ನು ರವಾನಿಸಲಾಗಿದೆ.
✶ಗಾಬರಿ ಬೇಡ :
ದೇಶದ ಕೋಟ್ಯಂತರ ಮೊಬೈಲ್ ಬಳಕೆದಾರರಿಗೆ ಏಕಾಏಕಿ ‘ಎಮರ್ಜೆನ್ಸಿ ಅಲರ್ಟ್’ ಸಂದೇಶಗಳು ಬಂದಿವೆ. ಸೈಲೆಂಟ್ ಮೋಡ್‌ನಲ್ಲಿದ್ದ ಫೋನ್‌ಗಳೂ ಸಹ ಜೋರಾಗಿ ಶಬ್ದ ಮಾಡುತ್ತಾ ಕಂಪಿಸಲು (Vibrate) ಶುರುಮಾಡಿದ್ದರಿಂದ ಆತಂಕಕ್ಕೊಳಗಾಗುವುದು ಸಹಜ. ಆದರೆ, ಸಾರ್ವಜನಿಕರು ಭಯಪಡುವ ಅಗತ್ಯವಿಲ್ಲ. ಇದು ಕೇಂದ್ರ ಸರ್ಕಾರವು ಹೊಸದಾಗಿ ಜಾರಿಗೆ ತಂದಿರುವ ‘ಸೆಲ್ ಬ್ರಾಡ್‌ಕಾಸ್ಟ್’ (Cell Broadcast) ವ್ಯವಸ್ಥೆಯ ಅಧಿಕೃತ ಪರೀಕ್ಷೆಯಾಗಿದೆ.
ಮೊಬೈಲ್‌ಗಳಿಗೆ ಬಂದ ‘ಎಮರ್ಜೆನ್ಸಿ ಅಲರ್ಟ್’ ಸಂದೇಶವು ಕೇಂದ್ರ ಸರ್ಕಾರದ ಹೊಸ ‘ಸೆಲ್ ಬ್ರಾಡ್‌ಕಾಸ್ಟ್’ ವ್ಯವಸ್ಥೆಯ ಅಧಿಕೃತ ಪರೀಕ್ಷೆಯಾಗಿದೆ. ಭೂಕಂಪ, ಸುನಾಮಿಯಂತಹ ವಿಪತ್ತುಗಳಲ್ಲಿ ಜನರನ್ನು ತಕ್ಷಣ ಎಚ್ಚರಿಸುವುದು ಇದರ ಉದ್ದೇಶ. ಇದು ಕೇವಲ ಪರೀಕ್ಷಾರ್ಥ ಸಂದೇಶವಾಗಿದ್ದು, ಆತಂಕಪಡುವ ಅಗತ್ಯವಿಲ್ಲ.
✶ಸೈರನ್ ಶಬ್ದ :
ಇದು ತುರ್ತು ಸಂದೇಶವಾದ್ದರಿಂದ ಫೋನ್ ಯಾವುದೇ ಸ್ಥಿತಿಯಲ್ಲಿದ್ದರೂ ಜೋರಾದ ಸೈರನ್ ಮೂಲಕ ನಿಮ್ಮ ಗಮನ ಸೆಳೆಯುತ್ತದೆ. ಕನ್ನಡ ಸೇರಿದಂತೆ ಸುಮಾರು 19ಕ್ಕೂ ಹೆಚ್ಚು ಭಾರತೀಯ ಭಾಷೆಗಳಲ್ಲಿ ಈ ಸಂದೇಶಗಳನ್ನು ಕಳುಹಿಸುವ ಸಾಮರ್ಥ್ಯವನ್ನು ಇದು ಹೊಂದಿದೆ. ಈಗ ಬಂದಿರುವುದು ಕೇವಲ ಪರೀಕ್ಷಾರ್ಥ ಸಂದೇಶ (Test Message). ಇದಕ್ಕಾಗಿ ನೀವು ಯಾವುದೇ ಆತಂಕ ಪಡುವ ಅಥವಾ ಲಿಂಕ್‌ಗಳನ್ನು ಕ್ಲಿಕ್ ಮಾಡುವ ಅವಶ್ಯಕತೆಯಿಲ್ಲ.
#NDMA #NationwideTest #CellBroadcastAlertSystem #DisasterAlertSystem

