ಯೂನಿಯನ್ ಬ್ಯಾಂಕ್ ಅಪ್ರೆಂಟಿಸ್ ನೇಮಕಾತಿ 2026 : 1865 ಹುದ್ದೆಗಳಿಗೆ ಅರ್ಜಿ ಆಹ್ವಾನ
Job NewsLatest Updates

ಯೂನಿಯನ್ ಬ್ಯಾಂಕ್ ಅಪ್ರೆಂಟಿಸ್ ನೇಮಕಾತಿ 2026 : 1865 ಹುದ್ದೆಗಳಿಗೆ ಅರ್ಜಿ ಆಹ್ವಾನ

Share With Friends

Union Bank of India ವತಿಯಿಂದ ಅಪ್ರೆಂಟಿಸ್ ಹುದ್ದೆಗಳಿಗಾಗಿ 2026ನೇ ಸಾಲಿನ ನೇಮಕಾತಿ ಅಧಿಸೂಚನೆ ಪ್ರಕಟವಾಗಿದೆ. ಒಟ್ಟು 1865 ಹುದ್ದೆಗಳಿಗಾಗಿ ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಯಾವುದೇ ಪದವೀಧರರು ಈ ಅವಕಾಶಕ್ಕೆ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಕೆ ಪ್ರಕ್ರಿಯೆ ಏಪ್ರಿಲ್ 29, 2026 ರಿಂದ ಪ್ರಾರಂಭವಾಗಿದ್ದು, ಮೇ 19, 2026 ಕೊನೆಯ ದಿನವಾಗಿದೆ. ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ ಮೂಲಕ ಮಾತ್ರ ಅರ್ಜಿ ಸಲ್ಲಿಸಬೇಕು.

ನೇಮಕಾತಿ ವಿವರಗಳು :
ಒಟ್ಟು ಹುದ್ದೆಗಳು: 1,865 (ಕರ್ನಾಟಕದಲ್ಲಿ 131 ಹುದ್ದೆಗಳು ಲಭ್ಯ)
ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ: 29 ಏಪ್ರಿಲ್ 2026
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 19 ಮೇ 2026
ತರಬೇತಿ ಅವಧಿ: 1 ವರ್ಷ

ವಿದ್ಯಾರ್ಹತೆ :
ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ (Graduation) ಹೊಂದಿರಬೇಕು. (ಪದವಿಯು 1 ಏಪ್ರಿಲ್ 2022 ರ ನಂತರ ಪೂರೈಸಿರಬೇಕು).

ವಯೋಮಿತಿ :
ಕನಿಷ್ಠ 20 ವರ್ಷ ಮತ್ತು ಗರಿಷ್ಠ 28 ವರ್ಷಗಳು (01 ಏಪ್ರಿಲ್ 2026 ಕ್ಕೆ ಅನ್ವಯಿಸುವಂತೆ). SC/ST ಅಭ್ಯರ್ಥಿಗಳಿಗೆ 5 ವರ್ಷ, OBC ಅಭ್ಯರ್ಥಿಗಳಿಗೆ 3 ವರ್ಷ ಮತ್ತು PwBD ಅಭ್ಯರ್ಥಿಗಳಿಗೆ 10 ವರ್ಷಗಳ ಸಡಿಲಿಕೆ ಇರುತ್ತದೆ.

ಮಾಸಿಕ ಸ್ಟೈಫಂಡ್ : ಮೆಟ್ರೋ ಶಾಖೆಗಳು: ₹20,000; ನಗರ ಶಾಖೆಗಳು: ₹18,000; ಗ್ರಾಮೀಣ/ಅರೆ-ನಗರ ಶಾಖೆಗಳು: ₹15,000.

ಆಯ್ಕೆ ಪ್ರಕ್ರಿಯೆ:
ಅಭ್ಯರ್ಥಿಗಳನ್ನು ಈ ಕೆಳಗಿನ ಹಂತಗಳ ಮೂಲಕ ಆಯ್ಕೆ ಮಾಡಲಾಗುತ್ತದೆ:
ಆನ್‌ಲೈನ್ ಲಿಖಿತ ಪರೀಕ್ಷೆ: ಮೇ ಅಥವಾ ಜೂನ್ 2026 ರಲ್ಲಿ ನಡೆಯುವ ಸಾಧ್ಯತೆ ಇದೆ.
ಸ್ಥಳೀಯ ಭಾಷಾ ಪ್ರಾವೀಣ್ಯತೆ ಪರೀಕ್ಷೆ (LPT): ಅಭ್ಯರ್ಥಿಗಳು ಆಯಾ ರಾಜ್ಯದ ಅಧಿಕೃತ ಭಾಷೆಯಲ್ಲಿ ಓದಲು, ಬರೆಯಲು ಮತ್ತು ಮಾತನಾಡಲು ತಿಳಿದಿರಬೇಕು.
ದಾಖಲೆಗಳ ಪರಿಶೀಲನೆ.
ವೈದ್ಯಕೀಯ ತಪಾಸಣೆ.

ಪರೀಕ್ಷಾ ಮಾದರಿ:
ಪರೀಕ್ಷೆಯು 100 ಅಂಕಗಳಿಗೆ 60 ನಿಮಿಷಗಳ ಕಾಲ ನಡೆಯಲಿದ್ದು, ಇದರಲ್ಲಿ ಜೆನೆರಲ್ ಅವೇರ್ನೆಸ್, ಇಂಗ್ಲಿಷ್, ಕ್ವಾಂಟಿಟೇಟಿವ್ ಆಪ್ಟಿಟ್ಯೂಡ್, ಕಂಪ್ಯೂಟರ್ ಜ್ಞಾನ ಮತ್ತು ಬ್ಯಾಂಕಿಂಗ್ ಉತ್ಪನ್ನಗಳ ಬಗ್ಗೆ ಪ್ರಶ್ನೆಗಳಿರುತ್ತವೆ. ವಿಶೇಷವೆಂದರೆ ಈ ಪರೀಕ್ಷೆಯಲ್ಲಿ ಯಾವುದೇ ಋಣಾತ್ಮಕ ಅಂಕಗಳು (Negative Marking) ಇರುವುದಿಲ್ಲ.

ಅರ್ಜಿ ಸಲ್ಲಿಸುವುದು ಹೇಗೆ?
ಆಸಕ್ತ ಅಭ್ಯರ್ಥಿಗಳು ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಅಧಿಕೃತ ವೆಬ್‌ಸೈಟ್ www.unionbankofindia.bank.in ಗೆ ಭೇಟಿ ನೀಡಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸುವ ಮುನ್ನ BFSI SSC ಪೋರ್ಟಲ್‌ನಲ್ಲಿ ನೋಂದಾಯಿಸಿಕೊಳ್ಳುವುದು ಕಡ್ಡಾಯವಾಗಿದೆ.

ಅರ್ಜಿ ಶುಲ್ಕ:
ಸಾಮಾನ್ಯ/OBC (ಪುರುಷರು): ₹944
ಸಾಮಾನ್ಯ/OBC (ಮಹಿಳೆಯರು): ₹708
SC/ST/PwBD/ತೃತೀಯ ಲಿಂಗಿಗಳು: ₹236

ಆಸಕ್ತರು ಅಧಿಕೃತ ವೆಬ್‌ಸೈಟ್‌ಗಳಲ್ಲಿ ಅರ್ಜಿ ಸಲ್ಲಿಸಬಹುದು:
unionbankofindia.bank.in
beep.bfsissc.com

ಅಧಿಸೂಚನೆ : ಇಲ್ಲಿ ಕ್ಲಿಕ್ ಮಾಡಿ


ಮತ್ತಷ್ಟು ನೇಮಕಾತಿಗಳ ಮಾಹಿತಿ : Current Recruitments : ಪ್ರಸ್ತುತ ನೇಮಕಾತಿಗಳು


#UnionBankofIndia #ApprenticeRecruitment


error: Content Copyright protected !!