ಮೇ.8 : ವಿಶ್ವ ರೆಡ್ ಕ್ರಾಸ್ ಮತ್ತು ರೆಡ್ ಕ್ರೆಸೆಂಟ್ ದಿನ (World Red Cross and Red Crescent Day)
ವಿಶ್ವಾದ್ಯಂತ ರೆಡ್ ಕ್ರಾಸ್ ಮತ್ತು ರೆಡ್ ಕ್ರೆಸೆಂಟ್ ಸ್ವಯಂಸೇವಕರ ಮಾನವೀಯ ಪ್ರಯತ್ನಗಳನ್ನು ಗೌರವಿಸಲು ಪ್ರತಿ ವರ್ಷ ಮೇ 8 ರಂದು ವಿಶ್ವ ರೆಡ್ ಕ್ರಾಸ್ ಮತ್ತು ರೆಡ್ ಕ್ರೆಸೆಂಟ್ ದಿನವನ್ನು ಆಚರಿಸಲಾಗುತ್ತದೆ. ಈ ದಿನವು ಅಂತರರಾಷ್ಟ್ರೀಯ ರೆಡ್ ಕ್ರಾಸ್ ಸಮಿತಿ (International Federation of Red Cross and Red Crescent Societies -IFRC)) ಯನ್ನು ಸ್ಥಾಪಿಸಿದ ಮತ್ತು ಮೊದಲ ನೊಬೆಲ್ ಶಾಂತಿ ಪ್ರಶಸ್ತಿ ವಿಜೇತ ಹೆನ್ರಿ ಡ್ಯೂನಾಂಟ್ (Henry Dunant ) ಅವರ ಜನ್ಮ ವಾರ್ಷಿಕೋತ್ಸವವನ್ನು ಸೂಚಿಸುತ್ತದೆ.
ವಿಶ್ವ ರೆಡ್ ಕ್ರಾಸ್ ದಿನವು ಮಾನವೀಯತೆ, ಸಹಾನುಭೂತಿ, ಸ್ವಯಂಸೇವೆ ಮತ್ತು ವಿಪತ್ತುಗಳು, ಸಂಘರ್ಷಗಳು ಮತ್ತು ಆರೋಗ್ಯ ತುರ್ತು ಪರಿಸ್ಥಿತಿಗಳಿಂದ ಪೀಡಿತ ಜನರಿಗೆ ಬೆಂಬಲ ನೀಡುವ ಮೌಲ್ಯಗಳನ್ನು ಉತ್ತೇಜಿಸುತ್ತದೆ.
ಈ ಸಂಸ್ಥೆಯು ಕೇವಲ ಯುದ್ಧದ ಸಮಯದಲ್ಲಿ ಮಾತ್ರವಲ್ಲದೆ, ಕೋವಿಡ್-19 ನಂತಹ ಜಾಗತಿಕ ಆರೋಗ್ಯ ತುರ್ತು ಸಂದರ್ಭಗಳಲ್ಲೂ ಮುಂಚೂಣಿಯಲ್ಲಿ ನಿಂತು ಸೇವೆ ಸಲ್ಲಿಸಿದೆ.
ಥೀಮ್ 2026 – ಮಾನವೀಯತೆಯನ್ನು ಜೀವಂತವಾಗಿರಿಸುವುದು (Keeping Humanity Alive)
ಉದ್ದೇಶಗಳು :
*ಮಾನವೀಯತೆ: ಯುದ್ಧ, ಪ್ರಾಕೃತಿಕ ವಿಕೋಪ ಮತ್ತು ರೋಗರುಜಿನಗಳ ಸಮಯದಲ್ಲಿ ಜನರ ಜೀವ ಉಳಿಸುವುದು.
*ಸ್ವಯಂಸೇವೆ: ಜಗತ್ತಿನಾದ್ಯಂತ ಕೋಟ್ಯಂತರ ಸ್ವಯಂಸೇವಕರ ಸೇವೆಯನ್ನು ಗುರುತಿಸುವುದು ಮತ್ತು ಗೌರವಿಸುವುದು.
*ಜಾಗೃತಿ: ರಕ್ತದಾನ, ಪ್ರಥಮ ಚಿಕಿತ್ಸೆ ಮತ್ತು ತುರ್ತು ಪರಿಸ್ಥಿತಿಯ ಸಂದರ್ಭಗಳಲ್ಲಿ ಸಾರ್ವಜನಿಕರಲ್ಲಿ ಅರಿವು ಮೂಡಿಸುವುದು.
ರೆಡ್ ಕ್ರಾಸ್ ಸಂಸ್ಥೆಯ 7 ಮೂಲ ತತ್ವಗಳು :
ಈ ಸಂಸ್ಥೆಯು ಏಳು ಪ್ರಮುಖ ತತ್ವಗಳ ಮೇಲೆ ಕಾರ್ಯನಿರ್ವಹಿಸುತ್ತದೆ:
ಮಾನವೀಯತೆ (Humanity)
ನಿಷ್ಪಕ್ಷಪಾತ (Impartiality)
ತಟಸ್ಥತೆ (Neutrality)
ಸ್ವಾತಂತ್ರ್ಯ (Independence)
ಸ್ವಯಂಪ್ರೇರಿತ ಸೇವೆ (Voluntary Service)
ಏಕತೆ (Unity)
ಸಾರ್ವತ್ರಿಕತೆ (Universality)
- ಮೇ.8 : ವಿಶ್ವ ರೆಡ್ ಕ್ರಾಸ್ ಮತ್ತು ರೆಡ್ ಕ್ರೆಸೆಂಟ್ ದಿನ (World Red Cross and Red Crescent Day)
- ಪ್ರಚಲಿತ ಘಟನೆಗಳ ಕ್ವಿಜ್ (11-05-2026)
- ಪ್ರಚಲಿತ ಘಟನೆಗಳ ಕ್ವಿಜ್ (10-05-2026)
- ರಾಷ್ಟ್ರೀಯ ತಂತ್ರಜ್ಞಾನ ದಿನ (National Technology Day)ದ ಹಿನ್ನೆಲೆ ಮತ್ತು ಮಹತ್ವ
- 7 ಮಂದಿಯನ್ನು 8 ಬಾರಿ ಮದುವೆಯಾಗಿದ್ದ ಈ ನಟಿ ಬಗ್ಗೆ ಗೊತ್ತೇ..?

