RBI ಡೆಪ್ಯುಟಿ ಗವರ್ನರ್ ಆಗಿ Rohit Jain ನೇಮಕ
Current AffairsLatest Updates

RBI ಡೆಪ್ಯುಟಿ ಗವರ್ನರ್ ಆಗಿ Rohit Jain ನೇಮಕ

Share With Friends

Government of Indiaವು Rohit Jain ಅವರನ್ನು Reserve Bank of India (RBI) ಉಪ ಗವರ್ನರ್ ಆಗಿ ನೇಮಕ ಮಾಡಿದೆ. ಸಚಿವ ಸಂಪುಟ ನೇಮಕಾತಿ ಸಮಿತಿ (ACC) ಅನುಮೋದನೆಯ ನಂತರ ಈ ನೇಮಕಾತಿ ಅಂತಿಮಗೊಂಡಿದ್ದು, 2026ರ ಮೇ 3ರಿಂದ ಅವರು ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಅವರು T. Rabi Sankar ಅವರನ್ನು ಉತ್ತರಾಧಿಕಾರಿಯಾಗಳಿದ್ದಾರೆ. ಮೂರು ವರ್ಷಗಳ ಅವಧಿಗೆ ನೇಮಕಗೊಂಡಿರುವ ರೋಹಿತ್ ಜೈನ್ ಅವರ ನೇಮಕಾತಿ RBIಯ ನಾಯಕತ್ವವನ್ನು ಮತ್ತಷ್ಟು ಬಲಪಡಿಸುವತ್ತ ಮಹತ್ವದ ಹೆಜ್ಜೆಯಾಗಿದೆ.

ಆರ್‌ಬಿಐ ಉಪ ಗವರ್ನರ್ ಆಗಿದ್ದ ಟಿ. ರವಿಶಂಕರ್ ಅವರ ಅಧಿಕಾರಾವಧಿ ಮುಗಿದಿದೆ. ಈ ಹಿನ್ನೆಲೆ ಅವರ ಸ್ಥಾನಕ್ಕೆ ರೋಹಿತ್ ಜೈನ್ ಅವರನ್ನು ನೇಮಕ ಮಾಡಲಾಗಿದೆ.

ಸುಮಾರು 30 ವರ್ಷಗಳ ಬ್ಯಾಂಕಿಂಗ್ ಮತ್ತು ಹಣಕಾಸು ನಿಯಂತ್ರಣ ಅನುಭವ ಹೊಂದಿರುವ ಜೈನ್, ಡಿಸೆಂಬರ್ 2020ರಲ್ಲಿ ಆರ್‌ಬಿಐನ ಕಾರ್ಯನಿರ್ವಾಹಕ ನಿರ್ದೇಶಕರಾಗಿ ನೇಮಕ ಮಾಡಲಾಗಿತ್ತು. ಬ್ಯಾಂಕಿಂಗ್ ಮೇಲ್ವಿಚಾರಣೆ, ಅಪಾಯ ನಿರ್ವಹಣೆ, ಹಣಕಾಸು ನಿಯಂತ್ರಣ ಮತ್ತು ಮಾನವ ಸಂಪನ್ಮೂಲ ಕ್ಷೇತ್ರಗಳಲ್ಲಿ ಅವರು ವಿಶಾಲ ಅನುಭವ ಹೊಂದಿದ್ದಾರೆ.

ವಾಣಿಜ್ಯದಲ್ಲಿ ಸ್ನಾತಕೋತ್ತರ ಪದವಿ ಹಾಗೂ MBA ಪಡೆದಿರುವ ಅವರು, ಬ್ಯಾಂಕಿಂಗ್ ರಿಸ್ಕ್ ಮತ್ತು ನಿಯಂತ್ರಣ ಸೇರಿದಂತೆ ಹಲವು ವೃತ್ತಿಪರ ಪ್ರಮಾಣಪತ್ರಗಳನ್ನು ಗಳಿಸಿದ್ದಾರೆ. ಡಿಜಿಟಲ್ ಪಾವತಿಗಳು, ಜಾಗತಿಕ ಹಣಕಾಸು ಅಸ್ಥಿರತೆ ಮತ್ತು ನಿಯಂತ್ರಣ ಸವಾಲುಗಳನ್ನು ಎದುರಿಸುವಲ್ಲಿ ಅವರ ಪರಿಣತಿ RBIಗೆ ನೆರವಾಗಲಿದೆ ಎಂಬ ನಿರೀಕ್ಷೆ ಇದೆ.


error: Content Copyright protected !!