ಕೋಲ್ ಇಂಡಿಯಾದಲ್ಲಿ 660 ಮ್ಯಾನೇಜ್‌ಮೆಂಟ್ ಟ್ರೇನಿ ಹುದ್ದೆಗಳ ನೇಮಕಾತಿ
Job NewsLatest Updates

ಕೋಲ್ ಇಂಡಿಯಾದಲ್ಲಿ 660 ಮ್ಯಾನೇಜ್‌ಮೆಂಟ್ ಟ್ರೇನಿ ಹುದ್ದೆಗಳ ನೇಮಕಾತಿ

Share With Friends

Coal India Limited (CIL) ಸಂಸ್ಥೆಯು 2026ನೇ ಸಾಲಿನ ಮ್ಯಾನೇಜ್‌ಮೆಂಟ್ ಟ್ರೇನಿ (MT) ಹುದ್ದೆಗಳ ಭರ್ತಿಗಾಗಿ ಮಹತ್ವದ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಒಟ್ಟು 660 ಹುದ್ದೆಗಳಿಗಾಗಿ ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಜೂನ್ 11, 2026. (ಆಯ್ಕೆಯಾದ ಅಭ್ಯರ್ಥಿಗಳು ಕನಿಷ್ಠ 5 ವರ್ಷ ಸೇವೆ ಸಲ್ಲಿಸುವ ಬಾಂಡ್‌ಗೆ ಒಳಪಟ್ಟಿರುತ್ತಾರೆ. ತರಬೇತಿ ಅವಧಿ 1 ವರ್ಷವಾಗಿದ್ದು, ನಂತರ ಶಾಶ್ವತ ನೇಮಕಾತಿ ನೀಡಲಾಗುತ್ತದೆ.)

ಪ್ರಮುಖ ಮಾಹಿತಿ :
ಸಂಸ್ಥೆ: Coal India Limited (CIL)
ಹುದ್ದೆ ಹೆಸರು: Management Trainee (MT)
ಒಟ್ಟು ಹುದ್ದೆಗಳು: 660
ಅರ್ಜಿ ವಿಧಾನ: ಆನ್‌ಲೈನ್
ಉದ್ಯೋಗ ಸ್ಥಳ: ಭಾರತದೆಲ್ಲೆಡೆ
ಅಧಿಕೃತ ವೆಬ್‌ಸೈಟ್: www.coalindia.in
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – 11/06/2026

ವಿದ್ಯಾರ್ಹತೆ :
ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಸಂಬಂಧಿತ ಕ್ಷೇತ್ರದಲ್ಲಿ ಕನಿಷ್ಠ 60% ಅಂಕಗಳೊಂದಿಗೆ ಇಂಜಿನಿಯರಿಂಗ್ ಪದವಿ ಹೊಂದಿರಬೇಕು. ಜಿಯಾಲಜಿ ವಿಭಾಗಕ್ಕೆ M.Sc./M.Tech., ರಾಜಭಾಷೆ ಹುದ್ದೆಗೆ MA (ಹಿಂದಿ), ಕಂಪನಿ ಸೆಕ್ರಟರಿ ಹುದ್ದೆಗೆ ICSI ಅರ್ಹತೆ ಅಗತ್ಯವಿದೆ.

ವಯೋಮಿತಿ :
30 ಏಪ್ರಿಲ್ 2026ರಂತೆ ಗರಿಷ್ಠ ವಯಸ್ಸು 30 ವರ್ಷ. ಮೀಸಲಾತಿ ವರ್ಗಗಳಿಗೆ ನಿಯಮಾನುಸಾರ ವಯೋ ಸಡಿಲಿಕೆ ಇದೆ.

ವೇತನ :
ಆಯ್ಕೆಯಾದ ಅಭ್ಯರ್ಥಿಗಳಿಗೆ ₹60,000 ರಿಂದ ₹1,80,000 ವೇತನ ಶ್ರೇಣಿಯಲ್ಲಿ (E-1 ಗ್ರೇಡ್) ಸಂಬಳ ಹಾಗೂ ಇತರ ಭತ್ಯೆಗಳು ಲಭ್ಯ.

ಹುದ್ದೆಗಳ ವಿವರ :

1. ಸಿವಿಲ್ ಎಂಜಿನಿಯರಿಂಗ್ (Civil)
ಹುದ್ದೆಗಳು: 178
(UR-72, EWS-17, SC-26, ST-13, OBC-46, ಬ್ಯಾಕ್‌ಲಾಗ್-04)
ಅರ್ಹತೆ: ಸಿವಿಲ್ ಎಂಜಿನಿಯರಿಂಗ್‌ನಲ್ಲಿ ಕನಿಷ್ಠ 60% ಅಂಕಗಳೊಂದಿಗೆ ಪದವಿ
ಕೆಲಸ: ನಿರ್ಮಾಣ, ಮೂಲಸೌಕರ್ಯ ಯೋಜನೆಗಳು, ಗಣಿಗಾರಿಕೆ ಸೈಟ್ ಅಭಿವೃದ್ಧಿ

2.ಎಲೆಕ್ಟ್ರಿಕಲ್ ಎಂಜಿನಿಯರಿಂಗ್ (Electrical)
ಹುದ್ದೆಗಳು: 221
(UR-91, EWS-22, SC-33, ST-16, OBC-59)
ಅರ್ಹತೆ: ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ಪದವಿ (60%)
ಕೆಲಸ: ವಿದ್ಯುತ್ ವ್ಯವಸ್ಥೆಗಳು, ಯಂತ್ರೋಪಕರಣಗಳ ನಿರ್ವಹಣೆ

3.ಮೆಕ್ಯಾನಿಕಲ್ ಎಂಜಿನಿಯರಿಂಗ್ (Mechanical)
ಹುದ್ದೆಗಳು: 145
(UR-61, EWS-14, SC-21, ST-10, OBC-39)
ಅರ್ಹತೆ: ಮೆಕ್ಯಾನಿಕಲ್ ಎಂಜಿನಿಯರಿಂಗ್ ಪದವಿ (60%)
ಕೆಲಸ: ಯಂತ್ರೋಪಕರಣಗಳ ನಿರ್ವಹಣೆ, ಉತ್ಪಾದನಾ ಪ್ರಕ್ರಿಯೆಗಳು

4.ಸಿಸ್ಟಮ್ಸ್ / ಐಟಿ (Systems / IT)
ಹುದ್ದೆಗಳು: 43
(UR-19, EWS-4, SC-6, ST-3, OBC-11)
ಅರ್ಹತೆ: BE/B.Tech (CSE/IT) ಅಥವಾ MCA (ಪ್ರಥಮ ದರ್ಜೆ)
ಕೆಲಸ: ಸಾಫ್ಟ್‌ವೇರ್, ಡೇಟಾ ಮ್ಯಾನೇಜ್ಮೆಂಟ್, IT ಸಪೋರ್ಟ್

5.ಎಲೆಕ್ಟ್ರಾನಿಕ್ಸ್ & ಟೆಲಿಕಾಂ (E&T)
ಹುದ್ದೆಗಳು: 38
(UR-18, EWS-3, SC-5, ST-2, OBC-10)
ಅರ್ಹತೆ: Electronics/Communication/Instrumentation ಪದವಿ (60%)
ಕೆಲಸ: ಸಂವಹನ ವ್ಯವಸ್ಥೆಗಳು, ಸಾಧನ ನಿಯಂತ್ರಣ

6.ಭೂವಿಜ್ಞಾನ (Geology)
ಹುದ್ದೆಗಳು: 15
(UR-7, EWS-1, SC-2, ST-1, OBC-3, ಬ್ಯಾಕ್‌ಲಾಗ್ SC-1)
ಅರ್ಹತೆ: Geology/Geophysics ನಲ್ಲಿ M.Sc./M.Tech (60%)
ಕೆಲಸ: ಗಣಿಗಾರಿಕೆ ಸಂಶೋಧನೆ, ಭೂಗರ್ಭ ವಿಶ್ಲೇಷಣೆ

7.ಕೈಗಾರಿಕಾ ಎಂಜಿನಿಯರಿಂಗ್ (Industrial Engineering)
ಹುದ್ದೆಗಳು: 11
(UR-4, SC-2, ST-1, OBC-4)
ಅರ್ಹತೆ: Industrial Engineering ಪದವಿ (60%)
ಕೆಲಸ: ಪ್ರಕ್ರಿಯೆ ಸುಧಾರಣೆ, ಉತ್ಪಾದನಾ ಯೋಜನೆ

8.ರಾಜಭಾಷಾ / ಹಿಂದಿ (Hindi)
ಹುದ್ದೆಗಳು: 05
(UR-3, OBC-1, ST-1)
ಅರ್ಹತೆ: ಹಿಂದಿಯಲ್ಲಿ MA (60%) + ಪದವಿ ಮಟ್ಟದಲ್ಲಿ ಹಿಂದಿ/ಇಂಗ್ಲಿಷ್
ಕೆಲಸ: ಅಧಿಕೃತ ಭಾಷಾ ಅನುವಾದ, ಆಡಳಿತ ಸಹಾಯ

9.ಕಂಪನಿ ಕಾರ್ಯದರ್ಶಿ (Company Secretary – CS)
ಹುದ್ದೆಗಳು: 04
(UR-3, SC-1)
ಅರ್ಹತೆ: ಯಾವುದೇ ಪದವಿ + ICSI CS ಅರ್ಹತೆ
ಕೆಲಸ: ಕಾನೂನು ಪಾಲನೆ, ಕಂಪನಿ ಆಡಳಿತ

ಇದನ್ನೂ ಓದಿ : ಯೂನಿಯನ್ ಬ್ಯಾಂಕ್ ಅಪ್ರೆಂಟಿಸ್ ನೇಮಕಾತಿ 2026 : 1865 ಹುದ್ದೆಗಳಿಗೆ ಅರ್ಜಿ ಆಹ್ವಾನ

ಆಯ್ಕೆ ಪ್ರಕ್ರಿಯೆ :
ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT) ಮೂಲಕ ಮಾತ್ರ ಆಯ್ಕೆ
3 ಗಂಟೆಗಳ ಪರೀಕ್ಷೆ (2 ಪೇಪರ್‌ಗಳು – ಪ್ರತಿ 100 ಅಂಕ)
ನೆಗೆಟಿವ್ ಮಾರ್ಕಿಂಗ್ ಇಲ್ಲ
ಸಂದರ್ಶನ ಇರುವುದಿಲ್ಲ
ಡಾಕ್ಯುಮೆಂಟ್ ಪರಿಶೀಲನೆ ಮತ್ತು ವೈದ್ಯಕೀಯ ಪರೀಕ್ಷೆ ನಂತರ ನೇಮಕಾತಿ

ಪರೀಕ್ಷಾ ವಿವರ :
ಪೇಪರ್-I: ಸಾಮಾನ್ಯ ಜ್ಞಾನ, ತರ್ಕ, ಗಣಿತ ಸಾಮರ್ಥ್ಯ, ಇಂಗ್ಲಿಷ್
ಪೇಪರ್-II: ಸಂಬಂಧಿತ ವಿಷಯದ ವೃತ್ತಿಪರ ಜ್ಞಾನ

ಪ್ರಮುಖ ದಿನಾಂಕಗಳು
ಆನ್‌ಲೈನ್ ಅರ್ಜಿಗಳ ನೋಂದಣಿಗೆ ಆರಂಭಿಕ ದಿನಾಂಕ – 12/05/2026
ಅರ್ಜಿಗಳನ್ನು ಆನ್‌ಲೈನ್‌ನಲ್ಲಿ ಸಲ್ಲಿಸಲು ಕೊನೆಯ ದಿನಾಂಕ- 11/06/2026

ಅಧಿಸೂಚನೆ : ಇಲ್ಲಿ ಸಿಕಿಕ್ ಮಾಡಿ


ಮತ್ತಷ್ಟು ನೇಮಕಾತಿಗಳ ಮಾಹಿತಿ : Current Recruitments : ಪ್ರಸ್ತುತ ನೇಮಕಾತಿಗಳು


error: Content Copyright protected !!