ಡಿಜಿಟಲ್ ಮಹಾಮಾರಿ (Digital Pandemic) ಎಂದರೇನು..?
ಇಂದಿನ ಜಗತ್ತಿನಲ್ಲಿ ಡಿಜಿಟಲ್ ವ್ಯವಸ್ಥೆಗಳು ನಮ್ಮ ದೈನಂದಿನ ಜೀವನದ ಅವಿಭಾಜ್ಯ ಅಂಗವಾಗಿವೆ. ಬ್ಯಾಂಕಿಂಗ್, ಆರೋಗ್ಯ ಸೇವೆ, ಶಿಕ್ಷಣ, ಆಡಳಿತ, ಸಂವಹನ—ಎಲ್ಲವೂ ಇಂಟರ್‌ನೆಟ್ ಮತ್ತು ಮೊಬೈಲ್ ತಂತ್ರಜ್ಞಾನಗಳ ಮೇಲೆ ಅವಲಂಬಿತವಾಗಿದೆ. ಈ ಸಂದರ್ಭದಲ್ಲಿ “ಡಿಜಿಟಲ್ ಮಹಾಮಾರಿ” ಎಂಬ ಪರಿಕಲ್ಪನೆಗೆ ವಿಶೇಷ ಮಹತ್ವ ಬಂದಿದೆ.
ಡಿಜಿಟಲ್ ಮಹಾಮಾರಿ ಒಂದು ಭವಿಷ್ಯದ ಸವಾಲು ಮಾತ್ರವಲ್ಲ, ಈಗಲೇ ಎದುರಿಸಬೇಕಾದ ಅಪಾಯವಾಗಿದೆ. ಡಿಜಿಟಲ್ ವ್ಯವಸ್ಥೆಗಳ ಮೇಲಿನ ನಮ್ಮ ಅವಲಂಬನೆ ಹೆಚ್ಚುತ್ತಿರುವುದರಿಂದ, ಅವುಗಳ ಸುರಕ್ಷತೆ ಮತ್ತು ಸ್ಥಿರತೆ ಅತ್ಯಂತ ಮುಖ್ಯವಾಗಿದೆ.
✶ ಡಿಜಿಟಲ್ ಮಹಾಮಾರಿ (Digital Pandemic) ಎಂದರೇನು?
ಡಿಜಿಟಲ್ ಮಹಾಮಾರಿ ಎಂದರೆ ಡಿಜಿಟಲ್ ಮೂಲಸೌಕರ್ಯದಲ್ಲಿ ಉಂಟಾಗುವ ದೊಡ್ಡ ಮಟ್ಟದ ವ್ಯತ್ಯಯಗಳು ಅಥವಾ ವೈಫಲ್ಯಗಳು. ಇವು ಸೈಬರ್ ದಾಳಿ, ತಂತ್ರಜ್ಞಾನ ದೋಷ, ನೈಸರ್ಗಿಕ ವಿಕೋಪಗಳು ಅಥವಾ ವ್ಯವಸ್ಥಾತ್ಮಕ ಅವಲಂಬನೆಗಳ ಕಾರಣದಿಂದ ಉಂಟಾಗಬಹುದು. ಇವು ಒಂದು ದೇಶ ಅಥವಾ ಕ್ಷೇತ್ರಕ್ಕೆ ಮಾತ್ರ ಸೀಮಿತವಾಗದೆ, ವೇಗವಾಗಿ ಜಾಗತಿಕ ಮಟ್ಟದಲ್ಲಿ ಹರಡಬಹುದು.
ವೈರಸ್‌ಗಳಿಂದ ಹರಡುವ ರೋಗಗಳಂತೆ, ಡಿಜಿಟಲ್ ಸಾಧನಗಳ ಮೇಲಿನ ಅತಿಯಾದ ಅವಲಂಬನೆ ಮತ್ತು ಗೀಳು ಜನರ ಮಾನಸಿಕ ಹಾಗೂ ದೈಹಿಕ ಆರೋಗ್ಯವನ್ನು ಕೆಡಿಸುತ್ತಿದೆ. ಸ್ಮಾರ್ಟ್‌ಫೋನ್, ಸಾಮಾಜಿಕ ಮಾಧ್ಯಮ (Social Media), ಮತ್ತು ಆನ್‌ಲೈನ್ ಗೇಮ್‌ಗಳ ವ್ಯಸನವು ಕಣ್ಣಿಗೆ ಕಾಣದ ಸಾಂಕ್ರಾಮಿಕದಂತೆ ಹರಡುತ್ತಿದೆ.
✶ ಪ್ರಮುಖ ಕಾರಣಗಳು :
*ಸೈಬರ್ ದಾಳಿಗಳು (Cyber Attacks): ಹ್ಯಾಕಿಂಗ್, ರಾನ್ಸಮ್‌ವೇರ್ ದಾಳಿಗಳು, ಡೇಟಾ ಕಳವು.
*ತಾಂತ್ರಿಕ ವೈಫಲ್ಯಗಳು: ಸರ್ವರ್ ಕ್ರ್ಯಾಶ್, ಸಾಫ್ಟ್‌ವೇರ್ ದೋಷಗಳು.
*ನೈಸರ್ಗಿಕ ವಿಕೋಪಗಳು: ಭೂಕಂಪ, ಪ್ರವಾಹ, ವಿದ್ಯುತ್ ವ್ಯತ್ಯಯ.
*ಅತಿಯಾದ ಅವಲಂಬನೆ: ಒಂದೇ ಡಿಜಿಟಲ್ ವ್ಯವಸ್ಥೆಯ ಮೇಲೆ ಹೆಚ್ಚಿನ ನಂಬಿಕೆ.
ಪರಿಣಾಮಗಳು
*ಆರ್ಥಿಕ ಅಸ್ತವ್ಯಸ್ತತೆ: ಆನ್‌ಲೈನ್ ಪಾವತಿ ವ್ಯವಸ್ಥೆಗಳು ನಿಲ್ಲುವುದು.
*ಆರೋಗ್ಯ ಸೇವೆಗಳಲ್ಲಿ ವ್ಯತ್ಯಯ: ಆಸ್ಪತ್ರೆಗಳ ಡಿಜಿಟಲ್ ವ್ಯವಸ್ಥೆಗಳು ಸ್ಥಗಿತಗೊಳ್ಳುವುದು.
*ಸಂಪರ್ಕ ವ್ಯತ್ಯಯ: ಮೊಬೈಲ್ ಮತ್ತು ಇಂಟರ್‌ನೆಟ್ ಸೇವೆಗಳ ಸ್ಥಗಿತ.
*ಸಾಮಾಜಿಕ ಅಶಾಂತಿ: ಮಾಹಿತಿ ಕೊರತೆ ಮತ್ತು ಭೀತಿ.
✶ ಉದಾಹರಣೆ…
ಒಂದು ದಿನ ಮೊಬೈಲ್ ನೆಟ್‌ವರ್ಕ್ ಮತ್ತು ಇಂಟರ್‌ನೆಟ್ ಸಂಪೂರ್ಣವಾಗಿ ನಿಲ್ಲಿದರೆ—
ಬ್ಯಾಂಕ್ ವ್ಯವಹಾರಗಳು ಸ್ಥಗಿತಗೊಳ್ಳುತ್ತವೆ. ಆಸ್ಪತ್ರೆಗಳು ದಾಖಲೆಗಳಿಗೆ ಪ್ರವೇಶ ಪಡೆಯಲು ಸಾಧ್ಯವಾಗುವುದಿಲ್ಲ. ಸಾರಿಗೆ ವ್ಯವಸ್ಥೆಗಳು ಅಸ್ತವ್ಯಸ್ತಗೊಳ್ಳುತ್ತವೆ ಇದು ಒಂದು “ಡಿಜಿಟಲ್ ಲಾಕ್‌ಡೌನ್” ಪರಿಸ್ಥಿತಿಯಂತಾಗುತ್ತದೆ.
✶ ಆರೋಗ್ಯದ ಮೇಲೆ ಪ್ರಭಾವ :
*ಲಕ್ಷಣಗಳು ಮತ್ತು ಪರಿಣಾಮಗಳು
ಮಾನಸಿಕ ಒತ್ತಡ ಮತ್ತು ಆತಂಕ: ಸಾಮಾಜಿಕ ಜಾಲತಾಣಗಳಲ್ಲಿ ಇತರರ ಜೀವನವನ್ನು ನೋಡಿ ಹೋಲಿಸಿಕೊಳ್ಳುವುದು ಮತ್ತು ‘ಲೈಕ್ಸ್’ಗಳಿಗಾಗಿ ಹಪಹಪಿಸುವುದು ಆತಂಕಕ್ಕೆ ಕಾರಣವಾಗುತ್ತಿದೆ.
*ನಿದ್ರಾಹೀನತೆ:
ಮಲಗುವ ಮುನ್ನ ಮೊಬೈಲ್ ಬಳಸುವುದರಿಂದ ಹೊರಬರುವ ‘ನೀಲಿ ಬೆಳಕು’ (Blue Light) ನಿದ್ರೆಯ ಹಾರ್ಮೋನ್ ಮೇಲೆ ಪರಿಣಾಮ ಬೀರಲಿದ್ದು, ನಿದ್ರಾಹೀನತೆಗೆ ದೂಡುತ್ತದೆ.
*ದೈಹಿಕ ಸಮಸ್ಯೆಗಳು:
ನಿರಂತರವಾಗಿ ಸ್ಕ್ರೀನ್ ನೋಡುವುದರಿಂದ ಕಣ್ಣಿನ ದೃಷ್ಟಿ ಮಂದವಾಗುವುದು, ಬೆನ್ನು ನೋವು ಮತ್ತು ಬೊಜ್ಜು ಹೆಚ್ಚಾಗುತ್ತಿದೆ.
*ಸಂಬಂಧಗಳಲ್ಲಿ ಬಿರುಕು:
ಒಂದೇ ಮನೆಯಲ್ಲಿದ್ದರೂ ಕುಟುಂಬದ ಸದಸ್ಯರು ಪರಸ್ಪರ ಮಾತನಾಡುವ ಬದಲು ಮೊಬೈಲ್‌ನಲ್ಲಿ ಮಗ್ನರಾಗಿರುವುದು ಭಾವನಾತ್ಮಕ ಅಂತರವನ್ನು ಹೆಚ್ಚಿಸುತ್ತಿದೆ.
✶ ತಡೆಗಟ್ಟುವ ಕ್ರಮಗಳು : ಡಿಜಿಟಲ್ ಡಿಟಾಕ್ಸ್’ (Digital Detox)
*ಬಲವಾದ ಸೈಬರ್ ಭದ್ರತೆ: ಸುರಕ್ಷಿತ ನೆಟ್‌ವರ್ಕ್ ಮತ್ತು ಎನ್ಕ್ರಿಪ್ಷನ್ ಬಳಕೆ
*ಬ್ಯಾಕಪ್ ವ್ಯವಸ್ಥೆಗಳು: ಡೇಟಾ ಮತ್ತು ಸೇವೆಗಳ ಪರ್ಯಾಯ ವ್ಯವಸ್ಥೆ
*ವೈವಿಧ್ಯಮಯ ಮೂಲಸೌಕರ್ಯ: ಒಂದೇ ವ್ಯವಸ್ಥೆಯ ಮೇಲೆ ಅವಲಂಬನೆ ಕಡಿಮೆ ಮಾಡುವುದು
*ಅಂತಾರಾಷ್ಟ್ರೀಯ ಸಹಕಾರ: ದೇಶಗಳ ನಡುವೆ ಮಾಹಿತಿ ಹಂಚಿಕೆ
ಸಮಾರೋಪ

