ಬಯೋಕಾನ್‌ ಸಂಸ್ಥೆಗೆ ಕಿರಣ್ ಮಜುಂದಾರ್ ಶಾ ಉತ್ತರಾಧಿಕಾರಿಯಾಗಿ ಕ್ಲೇರ್ ಮಜುಂದಾರ್‌ ನೇಮಕ
Current AffairsLatest Updates

ಬಯೋಕಾನ್‌ ಸಂಸ್ಥೆಗೆ ಕಿರಣ್ ಮಜುಂದಾರ್ ಶಾ ಉತ್ತರಾಧಿಕಾರಿಯಾಗಿ ಕ್ಲೇರ್ ಮಜುಂದಾರ್‌ ನೇಮಕ

Share With Friends

ಭಾರತದ ಪ್ರಮುಖ ಬಯೋಫಾರ್ಮಾ ಸಂಸ್ಥೆಯಾದ Bioconಗೆ ಭವಿಷ್ಯದ ನಾಯಕತ್ವ ಬದಲಾವಣೆಯ ಭಾಗವಾಗಿ, ಸಂಸ್ಥಾಪಕಿ Kiran Mazumdar-Shaw ತಮ್ಮ ತನ್ನ ಕುಟುಂಬ ಸಂಬಂಧಿಯೇ ಆದ ಸೋದರ ಸೊಸೆಯಾದ Claire Mazumdar ಅವರನ್ನು ಮುಂದಿನ ಉತ್ತರಾಧಿಕಾರಿಯಾಗಿ ಗುರುತಿಸಿರುವುದಾಗಿ ವರದಿಯಾಗಿದೆ.

ಬಯೋಕಾನ್ ಸಂಸ್ಥೆಯನ್ನು ಕಟ್ಟಿ, ಯಶಸ್ವಿಯಾಗಿ ಅಂತರಾಷ್ಟ್ರೀಯ ಮಟ್ಟದಲ್ಲಿ ಬೆಳೆಸಿದ ಸಂಸ್ಥಾಪಕಿ ಕಿರಣ್ ಮಜುಂದಾರ್ ಶಾ ತಮ್ಮ ಜವಾಬ್ದಾರಿಗಳನ್ನು ಬಿಟ್ಟುಕೊಡಲು ತಯಾರಿ ನಡೆಸಿದ್ದಾರೆ. ತಮ್ಮ ಉತ್ತರಾಧಿಕಾರಿಯಾಗಿ ಕ್ಲೇರ್ ಮಜುಂದಾರ್‌ರನ್ನು ಘೋಷಿಸಿರುವ ಅವರು, ಸಂಸ್ಥೆಯ ಭವಿಷ್ಯದ ಶಕ್ತಿಯಾಗಿ ಅವರನ್ನು ಆಯ್ಕೆ ಮಾಡಿರುವುದಾಗಿ ಹೇಳಿದ್ದಾರೆ.

ಈ ನಿರ್ಧಾರವು ಬಯೋಕಾನ್ ತನ್ನ ಮುಂದಿನ ಬೆಳವಣಿಗೆಯ ಹಂತಕ್ಕೆ — ವಿಶೇಷವಾಗಿ ಬಯೋಸಿಮಿಲರ್ಸ್ ಮತ್ತು ಬಯೋಟೆಕ್ ನವೀನತೆಗಳ ಕ್ಷೇತ್ರದಲ್ಲಿ — ಸಜ್ಜಾಗುತ್ತಿರುವ ಸಂದರ್ಭದಲ್ಲಿ ಪ್ರಮುಖ ತಿರುವಾಗಿ ಕಾಣುತ್ತಿದೆ.

ಯಾರು ಈ ಕ್ಲೇರ್ ಮಜುಂದಾರ್ (Claire Mazumdar )..?
37 ವರ್ಷ ವಯಸ್ಸಿನ ಕ್ಲೇರ್ ಮಜುಂದಾರ್ ಅವರು ಕಿರಣ್ ಮಜುಂದಾರ್ ಶಾ ಅವರ ಬಯೋಕಾನ್ ಪ್ರೇರಣೆಯಿಂದ ಬಿಕಾರಾ ಥೆರಪಿಟಿಕ್ಸ್ (Bicara Therapeutics) ಎಂಬ ಸಂಸ್ಥೆ ಸ್ಥಾಪಿಸಿ ಅದರ ಸಿಇಒ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಸಂಸ್ಥೆ ಅಮೆರಿಕದ ನ್ಯಾಸ್ ಡಾಕ್ (NASDAQ) ಶೇರು ಮಾರುಕಟ್ಟೆಯಲ್ಲಿ ನೋಂದಣಿಯಾಗಿದೆ. ಈ ಸಂಸ್ಥೆಯ ಮಾರುಕಟ್ಟೆ ಮೌಲ್ಯ ಸುಮಾರು 1.6 ಬಿಲಿಯನ್ ಡಾಲರ್‌ಗೂ ಅಧಿಕವಾಗಿದೆ. ಹೀಗಾಗಿ ಕ್ಲೇರ್ ಅವರ ಸಮರ್ಥ ನಾಯಕತ್ವದ ಬಗ್ಗೆ ವಿಶ್ವಾಸ ಹೊಂದಿರುವ ಕಿರಣ್, ಅವರಿಗೆ ಬಯೋಕಾನ್ ಸಂಸ್ಥೆಯ ನೇತೃತ್ವವಹಿಸಿಕೊಳ್ಳಲು ಹಂತಹಂತವಾಗಿ ಬಿಟ್ಟುಕೊಡಲಿದ್ದಾರೆ.

ಕ್ಲೇರ್ ಮಜುಂದಾರ್ ಶಿಕ್ಷಣದ ಹಿನ್ನಲೆಯೂ ಅತ್ಯುನ್ನತವಾಗಿದೆ. ಎಂಐಟಿ ಮತ್ತು ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡಿದ್ದು, ಕ್ಯಾನ್ಸರ್ ಬಯೋಲಾಜಿಯಲ್ಲಿ ಪಿಎಚ್‌ಡಿ ಪಡೆದಿದ್ದಾರೆ. ಅಲ್ಲದೆ ಥರ್ಡ್ ರಾಕ್ ವೆಂಚರ್ಸ್ ಹಾಗೂ ರಿಯೋಸ್ ಮೆಡಿಸಿನ್ಸ್ ಗಳಂತಹ ಸಂಸ್ಥೆಗಳಲ್ಲಿ ಕೆಲಸ ಮಾಡಿದ ಅನುಭವವೂ ಇದೆ.

ಕ್ಲೇರ್ ಮಜುಂದಾರ್ ಜೊತೆಗೆ ವರ ಕುಟುಂಬದ ಇತರ ಸದಸ್ಯರು ಕೂಡಾ ಬಯೋಕಾನ್‌ಗೆ ಪೂರಕವಾಗಲಿದ್ದಾರೆ ಎಂಬುದು ಕಿರಣ್ ಮಜುಂದಾರ್ ಶಾ ಅವರ ಅಭಿಪ್ರಾಯ. ಕ್ಲೇರ್ ಅವರ ಸಹೋದರ, ಎಐ ತಜ್ಞ ಹಾಗೂ ಕ್ಯಾಲ್ಟೆಕ್ ಪ್ರೊಫೆಸರ್ ಆಗಿರುವ ಎರಿಕ್ ಮಜುಂದಾರ್ ಹಾಗೂ ಕ್ಲೇರ್ ಅವರ ಪತಿ ಕ್ಯಾನ್ಸರ್ ತಜ್ಞರಾಗಿರುವ ಥಾಮಸ್ ರಾಬರ್ಟ್ಸ್ ಅವರ ಜ್ಞಾನ ಕೂಡಾ ಕಂಪನಿಯ ಭವಿಷ್ಯಕ್ಕೆ ಪೂರಕವಾಗಿರಲಿದೆ ಎನ್ನಲಾಗಿದೆ.

ತಕ್ಷಣವೇ ನಿವೃತ್ತಿಯಾಗುವುದಿಲ್ಲ: ಕಿರಣ್
ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಮಾಹಿತಿ ಹಂಚಿಕೊಂಡಿರುವ ಉದ್ಯಮಿ ಕಿರಣ್ ಮಜುಂದಾರ್ ಷಾ, “ನಾನು ಸದ್ಯಕ್ಕೆ ನಿವೃತ್ತಿಯಾಗಿ ಬಿಡುವ ಯೋಚನೆಯಲ್ಲಿ ಇಲ್ಲ, ಹಂತಹಂತವಾಗಿ ಕ್ಲೇರ್ ನನ್ನ ಜವಾಬ್ದಾರಿಗಳನ್ನು ವಹಿಸಿಕೊಳ್ಳಲಿದ್ದಾರೆ ” ಎಂದು ಹೇಳಿದ್ದಾರೆ.

ಕೃತಕ ಬುದ್ಧಿಮತ್ತೆ (ಎಐ)ಹಾಗೂ ಆಧುನಿಕ ಬಯೋಟೆಕ್ನಾಲಜಿ ಯುಗದಲ್ಲಿ ಕಂಪನಿಯನ್ನು ಭವಿಷ್ಯದಲ್ಲಿ ಯಶಸ್ವಿಯಾಗಿ ಮುನ್ನಡೆಸಲು ಕ್ಲೇರ್ ಸರಿಯಾದ ವ್ಯಕ್ತಿ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. 40 ವರ್ಷಗಳಿಂದ ಕಂಪನಿ ನಡೆಸಿಕೊಂಡು ಬಂದ ಅವರಿಗೆ ಮಕ್ಕಳಲಿಲ್ಲದಿರುವ ಹಿನ್ನಲೆ ಸಂಸ್ಥೆ ನಡೆಸಲು ಸೊಸೆಗೆ ಜವಾಬ್ದಾರಿ ಕೊಟ್ಟಿದ್ದಾರೆ. ಈ ಬಗ್ಗೆ ಉದ್ಯಮಿ ಕಿರಣ್ ಫಾರ್ಚೂನ್ ಇಂಡಿಯಾಗೆ ಕೊಟ್ಟ ಸಂದರ್ಶನದಲ್ಲಿ ಅವರು ಈ ಬಗ್ಗೆ ಹೇಳಿದ್ದಾರೆ

ಜಾಗತಿಕ ಅನುಭವದ ಬಲ :
ಕ್ಲೇರ್ ಮಜುಂದಾರ್ ಅವರಿಗೆ ಬಯೋಟೆಕ್ನಾಲಜಿ ಕ್ಷೇತ್ರದಲ್ಲಿ ವೈವಿಧ್ಯಮಯ ಹಾಗೂ ಅಂತರರಾಷ್ಟ್ರೀಯ ಅನುಭವವಿದೆ. ಅವರು ಹಿಂದೆ ಕೆಳಗಿನ ಸಂಸ್ಥೆಗಳೊಂದಿಗೆ ಕೆಲಸ ಮಾಡಿದ್ದಾರೆ:
Third Rock Ventures
Rheos Medicines
ಈ ಅನುಭವವು ಬಯೋಕಾನ್‌ನ ಮುಂದಿನ ಹಂತದ ಬೆಳವಣಿಗೆಗೆ ಬಲ ನೀಡಲಿದೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ.

ಕುಟುಂಬದ ವಿಜ್ಞಾನ ಬೆಂಬಲ :
ಮಜುಂದಾರ್ ಕುಟುಂಬದ ಹಿನ್ನೆಲೆ ಸಹ ವಿಜ್ಞಾನ ಹಾಗೂ ಸಂಶೋಧನೆಗೆ ಆಳವಾಗಿ ಸಂಪರ್ಕ ಹೊಂದಿದೆ. ಕ್ಲೇರ್ ಅವರ ಸಹೋದರ Eric Mazumdar ಅವರು California Institute of Technologyನಲ್ಲಿ ಪ್ರಾಧ್ಯಾಪಕರಾಗಿದ್ದಾರೆ. ಅದೇ ರೀತಿ, ಅವರ ಪತಿ Thomas Roberts ಅವರು Massachusetts General Hospital ಜೊತೆ ಸಂಬಂಧ ಹೊಂದಿದ್ದಾರೆ.

ಬಯೋಕಾನ್‌ನಲ್ಲಿ ನಾಯಕತ್ವ ಪುನರ್‌ವ್ಯವಸ್ಥೆ
ಈ ಉತ್ತರಾಧಿಕಾರಿ ಘೋಷಣೆಯ ಜೊತೆಗೆ, ಬಯೋಕಾನ್ ತನ್ನ ಉಪಕಂಪನಿಗಳಲ್ಲೂ ಪ್ರಮುಖ ನಾಯಕತ್ವ ಬದಲಾವಣೆಗಳನ್ನು ಮಾಡಿದೆ:
Shreehas Tambe ಅವರು Biocon Biologics ಸಿಇಒ ಆಗಿ ಅಧಿಕಾರ ಸ್ವೀಕರಿಸಿದ್ದಾರೆ
Siddharth Mittal ಅವರು ಜುಲೈ 2026ರಿಂದ Syngene Internationalಗೆ ನಾಯಕತ್ವ ವಹಿಸಲಿದ್ದಾರೆ

ಬಯೋಕಾನ್ ಬಗ್ಗೆ :
1978ರಲ್ಲಿ ಸ್ಥಾಪಿತವಾದ ಬಯೋಕಾನ್, ಭಾರತದ ಪ್ರಮುಖ ಬಯೋಫಾರ್ಮಾ ಕಂಪನಿಗಳಲ್ಲಿ ಒಂದಾಗಿದೆ. ಆರಂಭದಲ್ಲಿ ಕೇವಲ ಕಿಣ್ವಗಳನ್ನು (Enzymes) ತಯಾರಿಸುವ ಕಂಪನಿಯಾಗಿ ಆರಂಭವಾಗಿ, ಇಂದು ಜಾಗತಿಕ ಮಟ್ಟದ ಬಯೋಫಾರ್ಮಾಸ್ಯುಟಿಕಲ್ ಕಂಪನಿಯಾಗಿ ಬೆಳೆದಿದೆ.
ಉನ್ನತ ಮಟ್ಟದ ಬಯೋಟೆಕ್ ಸಂಶೋಧನೆ, ಜೀವ ಉಳಿಸುವ ಔಷಧಿಗಳ ಜಾಗತಿಕ ಲಭ್ಯತೆ ವಿಸ್ತರಣೆಯಲ್ಲಿ ಈ ಕ್ಷೇತ್ರಗಳಲ್ಲಿ ತನ್ನದೇ ಆದ ಸ್ಥಾನವನ್ನು ನಿರ್ಮಿಸಿಕೊಂಡಿದೆ.

ಪ್ರಮುಖ ಉತ್ಪನ್ನಗಳು ಮತ್ತು ಸಂಶೋಧನೆ : ಬಯೋಕಾನ್ ಮುಖ್ಯವಾಗಿ ಈ ಕೆಳಗಿನ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತದೆ:
*ಡಯಾಬಿಟಿಸ್ (ಮಧುಮೇಹ): ವಿಶ್ವದ ಅತಿ ಕಡಿಮೆ ವೆಚ್ಚದ ‘ಇನ್ಸುಲಿನ್’ ತಯಾರಿಕೆಯಲ್ಲಿ ಇದು ಪ್ರಮುಖ ಪಾತ್ರ ವಹಿಸುತ್ತದೆ.
*ಕ್ಯಾನ್ಸರ್ (Oncology): ಕ್ಯಾನ್ಸರ್ ಚಿಕಿತ್ಸೆಗೆ ಅಗತ್ಯವಾದ ಔಷಧಗಳನ್ನು ಇದು ಅಭಿವೃದ್ಧಿಪಡಿಸುತ್ತದೆ.
*ಇಮ್ಯುನೊಲಜಿ: ರೋಗನಿರೋಧಕ ಶಕ್ತಿಗೆ ಸಂಬಂಧಿಸಿದ ಸಂಕೀರ್ಣ ಕಾಯಿಲೆಗಳ ಮೇಲೆ ಸಂಶೋಧನೆ ನಡೆಸುತ್ತದೆ.

ಅಂಗಸಂಸ್ಥೆಗಳು : ಬಯೋಕಾನ್ ಗುಂಪಿನ ಅಡಿಯಲ್ಲಿ ಕೆಲವು ಪ್ರಮುಖ ಕಂಪನಿಗಳಿವೆ:
*Syngene (ಸಿಂಜೆನ್): ಇದು ಸಂಶೋಧನೆ ಮತ್ತು ಅಭಿವೃದ್ಧಿ (R&D) ಸೇವೆಗಳನ್ನು ಒದಗಿಸುವ ಪ್ರಮುಖ ಸಂಸ್ಥೆ.
*Biocon Biologics: ಇದು ಜೈವಿಕ ಔಷಧಗಳ (Biosimilars) ಮೇಲೆ ಗಮನ ಕೇಂದ್ರೀಕರಿಸುತ್ತದೆ.

ಜಾಗತಿಕ ಮಾನ್ಯತೆ :
ಬಯೋಕಾನ್ ತಯಾರಿಸಿದ ಔಷಧಗಳು ಅಮೇರಿಕಾ (FDA) ಮತ್ತು ಯುರೋಪ್ ಸೇರಿದಂತೆ ಅನೇಕ ಮುಂದುವರಿದ ದೇಶಗಳಲ್ಲಿ ಮಾರಾಟವಾಗುತ್ತವೆ. ಪರಿಸರ ಸ್ನೇಹಿ ಮತ್ತು ನಾವೀನ್ಯತೆಯ ಸಂಶೋಧನೆಗಾಗಿ ಈ ಸಂಸ್ಥೆ ಅನೇಕ ಅಂತರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದಿದೆ.


error: Content Copyright protected !!