10 ಬಿಲಿಯನ್ ವರ್ಷ ಹಳೆಯ ರೇಡಿಯೋ ಸಂಕೇತ ಪತ್ತೆ ಮಾಡಿದ ವಿಜ್ಞಾನಿಗಳು
ಭೂಮಿಯನ್ನು ತಲುಪಲು ಸುಮಾರು 10 ಬಿಲಿಯನ್ ವರ್ಷಗಳ ಕಾಲ ಪ್ರಯಾಣಿಸಿದ ವೇಗದ ರೇಡಿಯೋ ಸ್ಫೋಟ (Fast Radio Burst – FRB) ಸಂಕೇತವನ್ನು ವಿಜ್ಞಾನಿಗಳು ಪತ್ತೆಹಚ್ಚಿದ್ದಾರೆ. FRB 20240304B ಎಂದು ಹೆಸರಿಸಲಾದ ಈ ಸಂಕೇತವನ್ನು 2024ರ ಮಾರ್ಚ್ 4ರಂದು ದಕ್ಷಿಣ ಆಫ್ರಿಕಾದ MeerKAT Radio Telescope ಮೊದಲ ಬಾರಿಗೆ ದಾಖಲಿಸಿತು. ಬಳಿಕ James Webb Space Telescope ಸಹಾಯದಿಂದ ಈ ಸಂಕೇತದ ಮೂಲವಾಗಿರುವ ಗ್ಯಾಲಕ್ಸಿಯನ್ನು ಗುರುತಿಸಲಾಯಿತು.
ಸಂಶೋಧಕರ ಪ್ರಕಾರ, ಈ ರೇಡಿಯೋ ಸಂಕೇತವು ಸಣ್ಣ ಗಾತ್ರದ, ಕಡಿಮೆ ದ್ರವ್ಯರಾಶಿಯ ಹಾಗೂ ನಕ್ಷತ್ರ ರಚನೆ ನಡೆಯುತ್ತಿರುವ ಕುಬ್ಜ ಗ್ಯಾಲಕ್ಸಿಯಿಂದ (Dwarf Galaxy) ಹೊರಹೊಮ್ಮಿದೆ. ಈ ಪತ್ತೆಯು ಸ್ಥಳೀಕರಿಸಲಾದ ವೇಗದ ರೇಡಿಯೋ ಸ್ಫೋಟಗಳ (Localized FRBs) ವ್ಯಾಪ್ತಿಯನ್ನು ಹಿಂದಿನ ದಾಖಲೆಗಿಂತ ಸುಮಾರು ಎರಡು ಪಟ್ಟು ಹೆಚ್ಚಿಸಿದೆ.
FRB 20240304B ಉಗಮಿಸಿದ ಸಮಯದಲ್ಲಿ ಬ್ರಹ್ಮಾಂಡದ ವಯಸ್ಸು ಕೇವಲ 3 ಬಿಲಿಯನ್ ವರ್ಷಗಳಷ್ಟಿತ್ತು. ಈ ಅವಧಿಯನ್ನು “ಕಾಸ್ಮಿಕ್ ನೂನ್” ಎಂದು ಕರೆಯಲಾಗುತ್ತದೆ. ಬಿಗ್ ಬ್ಯಾಂಗ್‌ನ ಸುಮಾರು 2–3 ಬಿಲಿಯನ್ ವರ್ಷಗಳ ನಂತರ ನಕ್ಷತ್ರ ರಚನೆಯ ಗರಿಷ್ಠ ಹಂತ ನಡೆದ ಕಾಲವೇ ಕಾಸ್ಮಿಕ್ ನೂನ್ ಆಗಿದೆ.
2025ರ ಜೂನ್‌ನಲ್ಲಿ ವಿಜ್ಞಾನಿಗಳು SpARCS1049 ಗ್ಯಾಲಕ್ಸಿ ಸಮೂಹದ ಸುತ್ತಲೂ ಒಂದು “ರೇಡಿಯೋ ಮಿನಿ-ಹ್ಯಾಲೋ” ಅನ್ನು ಪತ್ತೆಹಚ್ಚಿದ್ದರು. ಇದು 10 ಬಿಲಿಯನ್ ಬೆಳಕಿನ ವರ್ಷಗಳಷ್ಟು ದೂರದಲ್ಲಿದ್ದು, ಒಂದು ಮಿಲಿಯನ್ ಬೆಳಕಿನ ವರ್ಷಗಳಿಗಿಂತ ಹೆಚ್ಚು ವ್ಯಾಪ್ತಿಯನ್ನು ಹೊಂದಿದೆ.
ಫಾಸ್ಟ್ ರೇಡಿಯೋ ಬರ್ಸ್ಟ್ (FRB) ಎಂದರೇನು..?
ಫಾಸ್ಟ್ ರೇಡಿಯೋ ಬರ್ಸ್ಟ್‌ಗಳು ಬ್ರಹ್ಮಾಂಡದ ದೂರದ ಮೂಲಗಳಿಂದ ಬರುವ ಅತಿ ಕಡಿಮೆ ಅವಧಿಯ ಆದರೆ ಅತ್ಯಂತ ಶಕ್ತಿಶಾಲಿ ರೇಡಿಯೋ ಅಲೆಗಳ ಸ್ಫೋಟಗಳಾಗಿವೆ. ಇವುಗಳ ಅಧ್ಯಯನದಿಂದ ವಿಜ್ಞಾನಿಗಳು ಅಂತರ್‌ಗ್ಯಾಲಕ್ಸಿ ಮಾಧ್ಯಮ, ಗ್ಯಾಲಕ್ಸಿಗಳ ವಿಕಾಸ ಹಾಗೂ ಮ್ಯಾಗ್ನೆಟಾರ್‌ಗಳಂತಹ ಖಗೋಳ ವಸ್ತುಗಳ ಕುರಿತು ಹೆಚ್ಚಿನ ಮಾಹಿತಿ ಪಡೆಯುತ್ತಾರೆ.
- ಜಗತ್ತಿನ ಶ್ರೇಷ್ಠ ಜಾಝ್ ಸ್ಯಾಕ್ಸೋಫೋನ್ ವಾದಕ ಸೊನ್ನಿ ರೋಲಿನ್ಸ್ (Sonny Rollins) ನಿಧನ
- ಜನಸಂಖ್ಯಾ ಬದಲಾವಣೆ (Demography Changes) ಅಧ್ಯಯನಕ್ಕೆ ಉನ್ನತ ಮಟ್ಟದ ಸಮಿತಿ ರಚನೆ
- ಅಸ್ಸಾಂ ವಿಧಾನಸಭೆಯಲ್ಲಿ ಏಕರೂಪ ನಾಗರಿಕ ಸಂಹಿತೆ (Uniform Civil Code) ಮಸೂದೆ ಅಂಗೀಕಾರ
- ಭ್ರಷ್ಟಾಚಾರ ನಿರ್ಮೂಲನೆಗೆ ಕೇರಳದಲ್ಲಿ ‘ಪ್ರಾಜೆಕ್ಟ್ ಜೀರೋ’ (Project Zero) ಆರಂಭ
- 10 ಬಿಲಿಯನ್ ವರ್ಷ ಹಳೆಯ ರೇಡಿಯೋ ಸಂಕೇತ ಪತ್ತೆ ಮಾಡಿದ ವಿಜ್ಞಾನಿಗಳು

