ಪ್ರಚಲಿತ ಘಟನೆಗಳು CA QUIZ GK JOB NEWS E-BOOK QUIZ TEST Geography History Indian Constitution MCQs
Current AffairsLatest Updates

ಭಾರತದಲ್ಲಿ ಮೊದಲ ಬಾರಿಗೆ ಜೆಟ್ ವಿಮಾನದಲ್ಲಿ ಉಪಗ್ರಹ ಆಧಾರಿತ ಗಗನ್ (GAGAN) ಲ್ಯಾಂಡಿಂಗ್ ಯಶಸ್ವಿ

Share With Friends

ಭಾರತವು ನಾಗರಿಕ ವಿಮಾನಯಾನ ಕ್ಷೇತ್ರದಲ್ಲಿ ಮತ್ತೊಂದು ಮಹತ್ವದ ಮೈಲಿಗಲ್ಲು ಸಾಧಿಸಿದೆ. 2026ರ ಜೂನ್ 27ರಂದು ರಾಜಸ್ಥಾನದ ಉದಯಪುರ ವಿಮಾನ ನಿಲ್ದಾಣದಲ್ಲಿ ಜೆಟ್ ಎಂಜಿನ್ ಹೊಂದಿರುವ ಇಂಡಿಗೋ ಏರ್‌ಬಸ್ A320 ವಿಮಾನದಲ್ಲಿ ಮೊದಲ ಬಾರಿಗೆ GAGAN (GPS Aided GEO Augmented Navigation) ಉಪಗ್ರಹ ಆಧಾರಿತ ಲ್ಯಾಂಡಿಂಗ್ ಅಪ್ರೋಚ್ ಅನ್ನು ಯಶಸ್ವಿಯಾಗಿ ನಡೆಸಲಾಗಿದೆ. ಈ ಪರೀಕ್ಷೆಯನ್ನು ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (DGCA) ನಡೆಸಿದೆ.

ದೇಶೀಯವಾಗಿ ಅಭಿವೃದ್ಧಿಪಡಿಸಲಾದ ಉಪಗ್ರಹ ಆಧಾರಿತ ನ್ಯಾವಿಗೇಷನ್ ವ್ಯವಸ್ಥೆ ‘ಗಗನ್’ (GAGAN – GPS Aided GEO Augmented Navigation) ಅನ್ನು ಬಳಸಿಕೊಂಡು ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (DGCA) ಮೊದಲ ಬಾರಿಗೆ ಜೆಟ್ ಇಂಜಿನ್ ವಿಮಾನವೊಂದನ್ನು ಯಶಸ್ವಿಯಾಗಿ ಲ್ಯಾಂಡಿಂಗ್ ಮಾಡಿಸಿದೆ.

GAGAN ಎಂದರೇನು..?
GAGAN (GPS Aided GEO Augmented Navigation) ಎಂಬುದು ಭಾರತದ ಉಪಗ್ರಹ ಆಧಾರಿತ ನ್ಯಾವಿಗೇಶನ್ ವರ್ಧಕ ವ್ಯವಸ್ಥೆ (Satellite-Based Augmentation System – SBAS) ಆಗಿದೆ. ಇದನ್ನು ಇಸ್ರೋ (ISRO) ಮತ್ತು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ (AAI) ಜಂಟಿಯಾಗಿ ಅಭಿವೃದ್ಧಿಪಡಿಸಿವೆ.

ಈ ವ್ಯವಸ್ಥೆಯು ಜಿಯೋಸ್ಟೇಷನರಿ ಉಪಗ್ರಹಗಳು ಹಾಗೂ ಭೂಮಿಯ ಮೇಲಿನ ರೆಫರೆನ್ಸ್ ಕೇಂದ್ರಗಳ ನೆರವಿನಿಂದ GPS ಸಿಗ್ನಲ್‌ಗಳ ನಿಖರತೆಯನ್ನು ಹೆಚ್ಚಿಸಿ ವಿಮಾನಗಳಿಗೆ ಸುರಕ್ಷಿತ ಹಾಗೂ ನಿಖರ ಮಾರ್ಗದರ್ಶನ ಒದಗಿಸುತ್ತದೆ.

✶ವರ್ಟಿಕಲ್ ಗೈಡೆನ್ಸ್ (LPV Approach): ಈ ವ್ಯವಸ್ಥೆಯು ವಿಮಾನದ ಪೈಲಟ್‌ಗಳಿಗೆ ರನ್‌ವೇ ಸಮೀಪಿಸುವಾಗ ನಿಖರವಾದ ಅಡ್ಡ (Horizontal) ಮತ್ತು ಲಂಬ (Vertical) ಮಾರ್ಗದರ್ಶನವನ್ನು ನೀಡುತ್ತದೆ.

✶ಸ್ವಾವಲಂಬನೆ: ಈ ತಂತ್ರಜ್ಞಾನದ ಮೂಲಕ ಭಾರತವು ಸ್ವಂತ ಸ್ಯಾಟಲೈಟ್ ಬೇಸ್ಡ್ ಆಗ್ಮೆಂಟೇಶನ್ ಸಿಸ್ಟಮ್ (SBAS) ಹೊಂದಿರುವ ವಿಶ್ವದ ಕೆಲವೇ ಕೆಲವು ಆಯ್ದ ದೇಶಗಳ ಸಾಲಿಗೆ ಸೇರಿದೆ. ಏಷ್ಯಾ-ಪೆಸಿಫಿಕ್ ಪ್ರದೇಶದಲ್ಲೇ ಇಂತಹ ಕಾರ್ಯಾಚರಣಾ ಸಾಮರ್ಥ್ಯ ಹೊಂದಿದ ಮೊದಲ ದೇಶ ಭಾರತವಾಗಿದೆ.

LPV ಲ್ಯಾಂಡಿಂಗ್ ಎಂದರೇನು..?
GAGAN ವ್ಯವಸ್ಥೆಯು LPV (Localiser Performance with Vertical Guidance) ಲ್ಯಾಂಡಿಂಗ್ ವಿಧಾನಕ್ಕೆ ಬೆಂಬಲ ನೀಡುತ್ತದೆ. ಇದರಿಂದ ವಿಮಾನಗಳಿಗೆ ಅಡ್ಡ ಹಾಗೂ ಲಂಬ ದಿಕ್ಕಿನ ಮಾರ್ಗದರ್ಶನ ದೊರೆಯುತ್ತದೆ.

ಈ ವಿಧಾನವು Instrument Landing System (ILS) ಇಲ್ಲದ ವಿಮಾನ ನಿಲ್ದಾಣಗಳಲ್ಲಿ, ವಿಶೇಷವಾಗಿ ಸಣ್ಣ ಮತ್ತು ಪ್ರಾದೇಶಿಕ ವಿಮಾನ ನಿಲ್ದಾಣಗಳಲ್ಲಿ ಸುರಕ್ಷಿತ ಲ್ಯಾಂಡಿಂಗ್ ಮಾಡಲು ನೆರವಾಗುತ್ತದೆ.

GAGAN ಮಹತ್ವವೇನು?
2021ರ ಜುಲೈ 1ರ ನಂತರ ಭಾರತದಲ್ಲಿ ನೋಂದಾಯಿಸಲಾದ ಎಲ್ಲಾ ವಿಮಾನಗಳಲ್ಲಿ GAGAN ಉಪಕರಣ ಅಳವಡಿಕೆಯನ್ನು DGCA ಕಡ್ಡಾಯಗೊಳಿಸಿದೆ. ಏಷ್ಯಾ-ಪೆಸಿಫಿಕ್ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ SBAS ವ್ಯವಸ್ಥೆಯನ್ನು ಹೊಂದಿರುವ ಮೊದಲ ರಾಷ್ಟ್ರ ಭಾರತವಾಗಿದೆ.GAGAN ನಾಗರಿಕ ವಿಮಾನಯಾನಕ್ಕೆ ಸುಮಾರು 3 ಮೀಟರ್ ನಿಖರತೆಯ ನ್ಯಾವಿಗೇಶನ್ ಸೇವೆ ಒದಗಿಸುತ್ತದೆ. ಇದು ಏರ್ ಟ್ರಾಫಿಕ್ ಮ್ಯಾನೇಜ್‌ಮೆಂಟ್ (ATM) ವ್ಯವಸ್ಥೆಯ ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತದೆ.

ಇಂಡಿಗೋದ ಪಾತ್ರ :
ಇಂಡಿಗೋ ಸಂಸ್ಥೆಯು 2022ರಲ್ಲಿ ತನ್ನ ATR ವಿಮಾನಗಳಲ್ಲಿ LPV ಕಾರ್ಯಾಚರಣೆಯನ್ನು ಆರಂಭಿಸಿತ್ತು. ನಂತರ SBAS ಆಧಾರಿತ ಕಾರ್ಯಾಚರಣೆಯನ್ನು ತನ್ನ ಇತರೆ ವಿಮಾನಗಳಿಗೂ ವಿಸ್ತರಿಸಿತು. ಇದೀಗ ಮೊದಲ ಬಾರಿಗೆ Airbus A320 ಜೆಟ್ ವಿಮಾನದಲ್ಲಿ GAGAN ಆಧಾರಿತ ಲ್ಯಾಂಡಿಂಗ್ ಅಪ್ರೋಚ್ ಯಶಸ್ವಿಯಾಗಿ ಪೂರ್ಣಗೊಂಡಿದೆ.

2026ರ ಗುರಿ
ಭಾರತದಲ್ಲಿ ಜುಲೈ 1, 2021 ರ ನಂತರ ನೋಂದಾಯಿಸಲಾದ ಎಲ್ಲಾ ನಾಗರಿಕ ವಿಮಾನಗಳಲ್ಲಿ ‘ಗಗನ್’ ಉಪಕರಣವನ್ನು ಹೊಂದುವುದನ್ನು ಕಡ್ಡಾಯಗೊಳಿಸಲಾಗಿದೆ. ಇಂಡಿಗೋ ಸಂಸ್ಥೆಯು ಈಗಾಗಲೇ 2022ರಲ್ಲಿ ತನ್ನ ಸಣ್ಣ ‘ಎಟಿಆರ್’ (ATR Turboprop) ವಿಮಾನಗಳಲ್ಲಿ ಇದನ್ನು ಅಳವಡಿಸಿ ಯಶಸ್ವಿ ಪ್ರಯೋಗ ನಡೆಸಿತ್ತು. ಪ್ರಸ್ತುತ ಪ್ರಮುಖ ವಾಣಿಜ್ಯ ಜೆಟ್ ವಿಮಾನದಲ್ಲೂ (Airbus A320) ಇದನ್ನು ಯಶಸ್ವಿಯಾಗಿ ಪರೀಕ್ಷಿಸಿರುವುದರಿಂದ ಮುಂದಿನ ದಿನಗಳಲ್ಲಿ ವಾಣಿಜ್ಯ ಹಾರಾಟಗಳಿಗೆ ಸಮ್ಮತಿ ಸಿಗಲಿದೆ.  

ಪ್ರಸ್ತುತ ದೇಶಾದ್ಯಂತ 23 ವಿಮಾನ ನಿಲ್ದಾಣಗಳಲ್ಲಿ ಈ ವ್ಯವಸ್ಥೆಯನ್ನು ಅಳವಡಿಸಲಾಗಿದ್ದು, 2026ರ ವರ್ಷದ ಅಂತ್ಯದ ವೇಳೆಗೆ ಇದರ ಸಂಖ್ಯೆಯನ್ನು 40 ಕ್ಕೂ ಹೆಚ್ಚು ನಿಲ್ದಾಣಗಳಿಗೆ ವಿಸ್ತರಿಸುವ ಗುರಿಯನ್ನು ವಿಮಾನ ನಿಲ್ದಾಣಗಳ ಪ್ರಾಧಿಕಾರ ಹೊಂದಿದೆ. ಕೇವಲ ವಿಮಾನಯಾನ ಮಾತ್ರವಲ್ಲದೆ ರೈಲ್ವೆ, ರಸ್ತೆ ಸಾರಿಗೆ ಮತ್ತು ರಕ್ಷಣಾ ವಲಯದಲ್ಲೂ ಈ ತಂತ್ರಜ್ಞಾನ ಮುಂಬರುವ ದಿನಗಳಲ್ಲಿ ಪ್ರಮುಖ ಪಾತ್ರ ವಹಿಸಲಿದೆ.


error: Content Copyright protected !!