ಭಾರತದಲ್ಲಿ ವಿಮಾ ಕ್ಷೇತ್ರಕ್ಕೆ 100% FDIಗೆ ಅನುಮತಿ
ಭಾರತ ಸರ್ಕಾರವು ವಿಮಾ ಕ್ಷೇತ್ರದಲ್ಲಿ 100% ವಿದೇಶಿ ನೇರ ಹೂಡಿಕೆ (FDI)ಗೆ ಸ್ವಯಂಚಾಲಿತ ಮಾರ್ಗದ ಮೂಲಕ ಅನುಮತಿ ನೀಡಿದೆ. ಮೇ 2, 2026ರಂದು Foreign Exchange Management (Non-debt Instruments) Rules, 2019ಗೆ ತಿದ್ದುಪಡಿ ಮಾಡಲಾಗಿದ್ದು, ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಭಾರತದ ವಿಮಾ ಕ್ಷೇತ್ರದಲ್ಲಿ ವಿದೇಶಿ ನೇರ ಹೂಡಿಕೆಯ (FDI) ಮಿತಿಯನ್ನು ಶೇ. 100ಕ್ಕೆ ಏರಿಸಿ ಕೇಂದ್ರ ಸರ್ಕಾರವು ಇತ್ತೀಚೆಗೆ (ಮೇ 2026) ಐತಿಹಾಸಿಕ ಆದೇಶ ಹೊರಡಿಸಿದೆ. ಈ ಮೊದಲು ಈ ಮಿತಿಯು ಶೇ. 74 ರಷ್ಟಿತ್ತು.
ಈ ಕ್ರಮದಿಂದ ಜಾಗತಿಕ ಹೂಡಿಕೆದಾರರನ್ನು ಆಕರ್ಷಿಸುವುದು ಹಾಗೂ ವಿಮಾ ಕ್ಷೇತ್ರವನ್ನು ಮತ್ತಷ್ಟು ಬಲಪಡಿಸುವ ನಿರೀಕ್ಷೆಯಿದೆ. ಇದರಿಂದ ವಿಮಾ ಸೇವೆಗಳ ಸಂಪೂರ್ಣ ಸರಪಳಿಗೆ ವಿದೇಶಿ ಹೂಡಿಕೆ ಪ್ರಯೋಜನವಾಗಲಿದೆ. ಈ ಸುಧಾರಣೆ ಭಾರತದಲ್ಲಿ ವಿಮಾ ಕ್ಷೇತ್ರವನ್ನು ಜಾಗತಿಕ ಮಟ್ಟದಲ್ಲಿ ಸ್ಪರ್ಧಾತ್ಮಕವಾಗಿಸಲು, ಹೂಡಿಕೆ ಹೆಚ್ಚಿಸಲು ಮತ್ತು ಗ್ರಾಹಕರಿಗೆ ಉತ್ತಮ ಸೇವೆ ಒದಗಿಸಲು ನೆರವಾಗಲಿದೆ.
100% FDI ಎಂದರೇನು?
ಹೊಸ ನಿಯಮಗಳ ಪ್ರಕಾರ, ವಿದೇಶಿ ಹೂಡಿಕೆದಾರರು ಈಗ ಭಾರತೀಯ ವಿಮಾ ಕಂಪನಿಗಳಲ್ಲಿ 100% ಷೇರುಗಳನ್ನು ಹೊಂದಬಹುದು. ಇದು “ಸ್ವಯಂಚಾಲಿತ ಮಾರ್ಗ”ದಲ್ಲಿ ಸಾಧ್ಯವಾಗಿದ್ದು, ಸರ್ಕಾರದ ಪೂರ್ವಾನುಮತಿ ಅಗತ್ಯವಿಲ್ಲ. ಈ ಕ್ರಮವು ಭಾರತದ ಹಣಕಾಸು ಕ್ಷೇತ್ರವನ್ನು ಹೆಚ್ಚು ಮುಕ್ತ, ಸ್ಪರ್ಧಾತ್ಮಕ ಮತ್ತು ಜಾಗತಿಕವಾಗಿ ಏಕೀಕೃತಗೊಳಿಸುವ ದಿಕ್ಕಿನಲ್ಲಿ ಮಹತ್ವದ ಹೆಜ್ಜೆಯಾಗಿದೆ.
ಯಾರಿಗೆ ಲಾಭ?
ಈ ಹೊಸ ನೀತಿ ವಿಮಾ ಕಂಪನಿಗಳಷ್ಟೇ ಅಲ್ಲದೆ, ವಿಮಾ ಸಂಬಂಧಿತ ವಿವಿಧ ಸಂಸ್ಥೆಗಳಿಗೂ ಅನ್ವಯಿಸುತ್ತದೆ. ಅವುಗಳೆಂದರೆ:
*ವಿಮಾ ಬ್ರೋಕರ್‌ಗಳು ಮತ್ತು ರೀಇನ್ಶುರೆನ್ಸ್ ಬ್ರೋಕರ್‌ಗಳು
*ವಿಮಾ ಸಲಹೆಗಾರರು ಮತ್ತು ಕಾರ್ಪೊರೇಟ್ ಏಜೆಂಟ್‌ಗಳು
*ತೃತೀಯ ಪಕ್ಷ ಆಡಳಿತಗಾರರು (TPAs)
*ಸರ್ವೇಯರ್‌ಗಳು ಮತ್ತು ಲಾಸ್ ಅಸೆಸರ್‌ಗಳು
*ಮ್ಯಾನೇಜಿಂಗ್ ಜನರಲ್ ಏಜೆಂಟ್‌ಗಳು ಮತ್ತು ಇನ್ಶುರೆನ್ಸ್ ರೆಪೊಸಿಟರಿಗಳು
ಪ್ರಯೋಜನಗಳು :
*ಹೆಚ್ಚಿನ ಬಂಡವಾಳ: ವಿದೇಶಿ ಕಂಪನಿಗಳು ಭಾರತಕ್ಕೆ ಹೆಚ್ಚಿನ ಹಣವನ್ನು ತರುವುದರಿಂದ ವಿಮಾ ವಲಯವು ಆರ್ಥಿಕವಾಗಿ ಬಲಗೊಳ್ಳುತ್ತದೆ.
*ಸ್ಪರ್ಧಾತ್ಮಕ ದರ: ಹೆಚ್ಚು ಕಂಪನಿಗಳು ಮಾರುಕಟ್ಟೆಗೆ ಬರುವುದರಿಂದ ಗ್ರಾಹಕರಿಗೆ ಕಡಿಮೆ ಪ್ರೀಮಿಯಂನಲ್ಲಿ ಉತ್ತಮ ವಿಮಾ ಸೌಲಭ್ಯಗಳು ಸಿಗಲಿವೆ.
*ತಂತ್ರಜ್ಞಾನ: ಜಾಗತಿಕ ಮಟ್ಟದ ಹೊಸ ತಂತ್ರಜ್ಞಾನ ಮತ್ತು ವಿಮಾ ಮಾದರಿಗಳು ಭಾರತಕ್ಕೆ ಪರಿಚಯವಾಗಲಿವೆ.
ನಿಯಂತ್ರಣ ಮತ್ತು ಸುರಕ್ಷತಾ ಕ್ರಮಗಳು :
ಹೂಡಿಕೆ ನಿಯಮಗಳನ್ನು ಸಡಿಲಗೊಳಿಸಿದರೂ, ಸರ್ಕಾರವು ಕಠಿಣ ನಿಯಂತ್ರಣ ಕ್ರಮಗಳನ್ನು ಮುಂದುವರೆಸಿದೆ. ಎಲ್ಲಾ ಹೂಡಿಕೆಗಳು Insurance Regulatory and Development Authority of India ನಿಯಂತ್ರಣಕ್ಕೆ ಒಳಪಡುತ್ತವೆ. ಜೊತೆಗೆ Insurance Act, 1938ನ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಾಗಿದೆ.
ಕಡ್ಡಾಯ ಷರತ್ತುಗಳು :
*ಹೂಡಿಕೆಗೆ ಮುಕ್ತ ಅವಕಾಶ ನೀಡಲಾಗಿದ್ದರೂ, ಕಂಪನಿಗಳ ಮೇಲೆ ಕೆಲವು ಪ್ರಮುಖ ನಿಯಂತ್ರಣಗಳನ್ನು ಹೇರಲಾಗಿದೆ:
*ಕಂಪನಿಯ ಅಧ್ಯಕ್ಷರು (Chairperson), ವ್ಯವಸ್ಥಾಪಕ ನಿರ್ದೇಶಕರು (MD) ಅಥವಾ ಮುಖ್ಯ ಕಾರ್ಯನಿರ್ವಹಣಾಧಿಕಾರಿ (CEO) ಪೈಕಿ ಕನಿಷ್ಠ ಒಬ್ಬರು ಭಾರತೀಯ ನಾಗರಿಕರಾಗಿರಬೇಕು.
*ಕಂಪನಿಗಳು ಭಾರತದ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (IRDAI) ವಿಧಿಸುವ ಸುರಕ್ಷತಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು.
ಸ್ವಯಂಚಾಲಿತ ಮಾರ್ಗ (Automatic Route)
ವಿಮಾ ಕಂಪನಿಗಳು ಮತ್ತು ವಿಮಾ ಮಧ್ಯವರ್ತಿಗಳಲ್ಲಿ (ಬ್ರೋಕರ್‌ಗಳು, ಏಜೆಂಟ್‌ಗಳು ಇತ್ಯಾದಿ) ವಿದೇಶಿ ಹೂಡಿಕೆದಾರರು ಸರ್ಕಾರದ ಪೂರ್ವಾನುಮತಿ ಇಲ್ಲದೆಯೇ ಶೇ. 100ರಷ್ಟು ಹೂಡಿಕೆ ಮಾಡಲು ಅವಕಾಶ ನೀಡಲಾಗಿದೆ. ಇದನ್ನು ವಿದೇಶಿ ವಿನಿಮಯ ನಿರ್ವಹಣಾ (FEMA) ನಿಯಮಗಳು, 2026 ಅಡಿಯಲ್ಲಿ ಅಧಿಸೂಚಿಸಲಾಗಿದೆ.
LICಗೆ ವಿನಾಯಿತಿ :
ಈ ಬದಲಾವಣೆಗಳ ನಡುವೆಯೂ, Life Insurance Corporation of Indiaನಲ್ಲಿ FDI ಮಿತಿ 20% ಕ್ಕೆ ಮಾತ್ರ ಸೀಮಿತವಾಗಿದೆ. ಇದು ಸಾರ್ವಜನಿಕ ಕ್ಷೇತ್ರದ ಸಂಸ್ಥೆಯಾಗಿ LICಗೆ ಇರುವ ವಿಶೇಷ ಸ್ಥಾನಮಾನವನ್ನು ತೋರಿಸುತ್ತದೆ.
- ಈ ವಾರದ ಪ್ರಚಲಿತ ಘಟನೆಗಳ QUIZ (ಮೇ. 03 ರಿಂದ 09ರ ವರೆಗೆ)
- ತಮಿಳುನಾಡಿನ ನೂತನ ಮುಖ್ಯಮಂತ್ರಿ ಆಗಿ ಸಿ. ಜೋಸೆಫ್ ವಿಜಯ್ ಪ್ರಮಾಣವಚನ
- ಇಂದಿನ ಪ್ರಚಲಿತ ವಿದ್ಯಮಾನಗಳು | 09-05-2026
- ಏನಿದು DigiPIN ಡಿಜಿಟಲ್ ವಿಳಾಸ ವ್ಯವಸ್ಥೆ..? ನಿಮ್ಮ ಡಿಜಿಪಿನ್ ತಿಳಿದುಕೊಳ್ಳುವುದು ಹೇಗೆ..?
- ಪಶ್ಚಿಮ ಬಂಗಾಳದ ಮೊದಲ ಬಿಜೆಪಿ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಪ್ರಮಾಣವಚನ ಸ್ವೀಕಾರ
#ForeignInvestment, #FDIinInsuranceSector

