ಭಾರತದ ಮೊದಲ ಸಂಪೂರ್ಣ ಪೇಪರ್‌ಲೆಸ್ ನ್ಯಾಯಾಂಗ (First Paperless Judiciary) ಹೊಂದಿದ ರಾಜ್ಯದಾದ ಸಿಕ್ಕಿಂ
ಹಿಮಾಲಯ ಪ್ರದೇಶದಲ್ಲಿರುವ Sikkim ರಾಜ್ಯವು ದೇಶಕ್ಕೆ ಮಾದರಿಯಾಗಿದ್ದು, ಸಂಪೂರ್ಣ ಕಾಗದರಹಿತ ನ್ಯಾಯಾಂಗ (ಪೇಪರ್‌ಲೆಸ್ ನ್ಯಾಯಾಂಗ ವ್ಯವಸ್ಥೆ(First Paperless Judiciary in India)ಯನ್ನು ಯಶಸ್ವಿಯಾಗಿ ಜಾರಿಗೆ ತಂದಿದೆ.
ಮೇ 1, 2026 ರಂದು ಗ್ಯಾಂಗ್ಟಕ್‌ನಲ್ಲಿ ನಡೆದ ‘ತಂತ್ರಜ್ಞಾನ ಮತ್ತು ನ್ಯಾಯಾಂಗ ಶಿಕ್ಷಣ’ ಕುರಿತ ರಾಷ್ಟ್ರೀಯ ಸಮಾವೇಶದಲ್ಲಿ ಭಾರತದ ಸುಪ್ರೀಂ ಕೋರ್ಟ್‌ನ ಹಿರಿಯ ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಅವರು ಈ ಐತಿಹಾಸಿಕ ಘೋಷಣೆಯನ್ನು ಮಾಡಿದರು. ಈ ಸಾಧನೆಯು ಸಿಕ್ಕಿಂ ರಾಜ್ಯದ 50ನೇ ವರ್ಷದ ರಾಜ್ಯೋತ್ಸವದ (Golden Jubilee) ಸಂಭ್ರಮದ ಸಂದರ್ಭದಲ್ಲಿ ಈ ಮಹತ್ವದ ಘೋಷಣೆ ಮಾಡಲಾಯಿತು.
ಈ ಘೋಷಣೆಯೊಂದಿಗೆ ಭಾರತದಲ್ಲಿ ಡಿಜಿಟಲ್ ನ್ಯಾಯ ವ್ಯವಸ್ಥೆಯತ್ತ ದೊಡ್ಡ ಹೆಜ್ಜೆ ಇಡಲಾಗಿದೆ. ನ್ಯಾಯಾಂಗ ಕಾರ್ಯವಿಧಾನಗಳು ಇನ್ನು ಮುಂದೆ ಕಾಗದದ ದಾಖಲೆಗಳ ಅವಲಂಬನೆಯಿಲ್ಲದೆ ಸಂಪೂರ್ಣ ಡಿಜಿಟಲ್ ಮಾದರಿಯಲ್ಲಿ ನಡೆಯಲಿವೆ.
High Court of Sikkim ಈ ಪರಿವರ್ತನೆಯಲ್ಲಿ ಪ್ರಮುಖ ಪಾತ್ರವಹಿಸಿದ್ದು, ಪೇಪರ್‌ಆಧಾರಿತ ಪ್ರಕ್ರಿಯೆಯಿಂದ ಡಿಜಿಟಲ್ ವ್ಯವಸ್ಥೆಗೆ ಸಂಪೂರ್ಣವಾಗಿ ಮಾರ್ಪಟ್ಟಿದೆ. ಭಾರತದ ಡಿಜಿಟಲ್ ಪರಿವರ್ತನೆಯ ಭಾಗವಾಗಿ, ಈ ಸಾಧನೆ ನ್ಯಾಯಾಂಗ ಕ್ಷೇತ್ರದಲ್ಲಿ ಮಹತ್ವದ ಮೈಲುಗಲ್ಲಾಗಿದ್ದು, ಇತರ ರಾಜ್ಯಗಳಿಗೆ ಮಾದರಿಯಾಗಲಿದೆ.
ಸಿಕ್ಕಿಂನಂತಹ ಪರ್ವತ ಪ್ರದೇಶಗಳಲ್ಲಿ ನ್ಯಾಯಕ್ಕೆ ಪ್ರವೇಶ ಒಂದು ದೊಡ್ಡ ಸವಾಲಾಗಿತ್ತು. ಡಿಜಿಟಲ್ ನ್ಯಾಯಾಂಗದಿಂದ ದೂರದ ಪ್ರದೇಶಗಳ ಜನರು ನ್ಯಾಯಾಲಯಕ್ಕೆ ಹೋಗದೆ ಸೇವೆ ಪಡೆಯಬಹುದು. ಪ್ರಯಾಣ ಮತ್ತು ವೆಚ್ಚ ಕಡಿಮೆಯಾಗುತ್ತದೆ. ನ್ಯಾಯ ವ್ಯವಸ್ಥೆ ಸಮಾನವಾಗಿ ಎಲ್ಲರಿಗೂ ಲಭ್ಯವಾಗುತ್ತದೆ.
ಇದನ್ನೂ ಓದಿ : ಭಾರತದಲ್ಲಿ ಸುಪ್ರೀಂ ಕೋರ್ಟ್ ಕೊಲಿಜಿಯಂ ವ್ಯವಸ್ಥೆ ಎಂದರೇನು? (Supreme Court Collegium System)
ಪೇಪರ್‌ಲೆಸ್ ನ್ಯಾಯಾಂಗ ಎಂದರೇನು?
ಪೇಪರ್‌ಲೆಸ್ ನ್ಯಾಯಾಂಗವೆಂದರೆ ನ್ಯಾಯಾಲಯದ ಎಲ್ಲಾ ಪ್ರಕ್ರಿಯೆಗಳು ಡಿಜಿಟಲ್ ಮೂಲಕ ನಡೆಯುವ ವ್ಯವಸ್ಥೆ ಯಾಗಿದ್ದು ಇ-ಫೈಲಿಂಗ್ (E-filing), ಡಿಜಿಟಲ್ ದಾಖಲೆಗಳು, ವರ್ಚುವಲ್ ವಿಚಾರಣೆಗಳು ಮತ್ತು ಆನ್‌ಲೈನ್ ತೀರ್ಪುಗಳ ಇರಲಿವೆ.
“ಮನವಿಗಳು ಸಾಗಬೇಕು, ಜನರು ಅಲ್ಲ” :
ಮುಖ್ಯ ನ್ಯಾಯಮೂರ್ತಿಯವರು ನ್ಯಾಯ ಪಡೆಯಲು ನಾಗರಿಕರು ದೂರ ಪ್ರಯಾಣ ಮಾಡಬೇಕಾಗಿಲ್ಲ ಎಂದು ಒತ್ತಿ ಹೇಳಿದ್ದಾರೆ. ಈ ಕಲ್ಪನೆ ಸರಳವಾದುದಾದರೂ ಶಕ್ತಿಶಾಲಿಯಾಗಿದೆ. ನ್ಯಾಯ ಎಲ್ಲಿಂದಲಾದರೂ ಲಭ್ಯವಾಗಬೇಕು, ವಿಶೇಷವಾಗಿ ಸಿಕ್ಕಿಂನಂತಹ ಭೌಗೋಳಿಕವಾಗಿ ಸವಾಲಿನ ಪ್ರದೇಶಗಳಲ್ಲಿ ಇದು ಇನ್ನಷ್ಟು ಮಹತ್ವದ್ದು.
ಉನ್ನತ ಡಿಜಿಟಲ್ ಮೂಲಸೌಕರ್ಯದ ಮೂಲಕ ನಾಗರಿಕರು ಈಗ ಆನ್‌ಲೈನ್‌ನಲ್ಲಿ ಮನವಿಗಳನ್ನು ಸಲ್ಲಿಸಲು, ಪ್ರಕರಣಗಳ ಪ್ರಗತಿಯನ್ನು ನೇರ ಸಮಯದಲ್ಲಿ ಟ್ರ್ಯಾಕ್ ಮಾಡಲು ಮತ್ತು ನ್ಯಾಯಾಲಯದ ಆದೇಶಗಳನ್ನು ಡಿಜಿಟಲ್ ರೂಪದಲ್ಲಿ ಪಡೆಯಲು ಸಾಧ್ಯವಾಗಿದೆ.
ಈ ಬದಲಾವಣೆಯ ಪ್ರಮುಖ ಅಂಶಗಳು:
*ಸಂಪೂರ್ಣ ಡಿಜಿಟಲೀಕರಣ:
ಇನ್ನು ಮುಂದೆ ಸಿಕ್ಕಿಂನ ಉಚ್ಚ ನ್ಯಾಯಾಲಯ ಮತ್ತು ಕೆಳಹಂತದ ನ್ಯಾಯಾಲಯಗಳಲ್ಲಿ ಎಲ್ಲಾ ದಾಖಲೆಗಳು, ಅರ್ಜಿ ಸಲ್ಲಿಕೆ (e-filing) ಮತ್ತು ವಿಚಾರಣೆಗಳು ಡಿಜಿಟಲ್ ರೂಪದಲ್ಲಿ ನಡೆಯಲಿವೆ.
*ತ್ವರಿತ ನ್ಯಾಯದಾನ:
ಕಾಗದದ ಕಡತಗಳ ಬದಲಿಗೆ ಡಿಜಿಟಲ್ ವ್ಯವಸ್ಥೆ ಇರುವುದರಿಂದ ಪ್ರಕರಣಗಳ ವಿಲೇವಾರಿ ವೇಗವಾಗಲಿದೆ ಮತ್ತು ಪಾರದರ್ಶಕತೆ ಹೆಚ್ಚಲಿದೆ.
*ತಂತ್ರಜ್ಞಾನದ ಬಳಕೆ: ಸುಪ್ರೀಂ ಕೋರ್ಟ್‌ನ ಇ-ಕಮಿಟಿ ಮಾರ್ಗದರ್ಶನದಲ್ಲಿ ಈ ವ್ಯವಸ್ಥೆಯನ್ನು ಜಾರಿಗೆ ತರಲಾಗಿದ್ದು, ಇಲ್ಲಿ ಕೃತಕ ಬುದ್ಧಿಮತ್ತೆ (AI) ಉಪಕರಣಗಳಾದ SUPACE ಮತ್ತು SUVAS ಅನ್ನು ಸಂಶೋಧನೆ ಮತ್ತು ಅನುವಾದಕ್ಕಾಗಿ ಬಳಸಲಾಗುತ್ತದೆ.
*ಪರಿಸರ ಸ್ನೇಹಿ: ಲಕ್ಷಾಂತರ ಕಾಗದಗಳ ಬಳಕೆಯನ್ನು ನಿಲ್ಲಿಸುವ ಮೂಲಕ ಈ ಯೋಜನೆಯು ಪರಿಸರ ಸಂರಕ್ಷಣೆಗೆ ದೊಡ್ಡ ಕೊಡುಗೆ ನೀಡಲಿದೆ.
ಡಿಜಿಟಲ್ ಮೂಲಸೌಕರ್ಯದಿಂದ ನಾಗರಿಕರಿಗೆ ಸೌಲಭ್ಯ :
*ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು
*ಪ್ರಕರಣದ ಸ್ಥಿತಿಯನ್ನು ತಕ್ಷಣ ತಿಳಿದುಕೊಳ್ಳಬಹುದು
*ನ್ಯಾಯಾಲಯದ ಆದೇಶಗಳನ್ನು ಡಿಜಿಟಲ್ ರೂಪದಲ್ಲಿ ಪಡೆಯಬಹುದು
ಪೇಪರ್‌ಲೆಸ್ ವ್ಯವಸ್ಥೆಗೆ ವಿವಿಧ ಡಿಜಿಟಲ್ ಉಪಕ್ರಮಗಳು :
*e-Courts Project ಮೂಲಕ ನ್ಯಾಯಾಲಯಗಳ ಆಧುನಿಕೀಕರಣ
*SUPACE ಮತ್ತು SUVAS ಎಂಬ AI ಉಪಕರಣಗಳು
*ವರ್ಚುವಲ್ ವಿಚಾರಣೆಗಳು ಮತ್ತು ಆನ್‌ಲೈನ್ ಕೇಸ್ ನಿರ್ವಹಣಾ ವ್ಯವಸ್ಥೆಗಳು
*ದೂರ ಪ್ರದೇಶಗಳಿಗೆ ನ್ಯಾಯದ ಪ್ರವೇಶ

