ಜೂನ್ 1 – ವಿಶ್ವ ಹಾಲು ದಿನ (World Milk Day)
ಜಾಗತಿಕ ಆಹಾರವಾಗಿ ಹಾಲಿನ ಮಹತ್ವವನ್ನು ಎತ್ತಿ ತೋರಿಸಲು ಮತ್ತು ಪೋಷಣೆ ಮತ್ತು ಜೀವನೋಪಾಯದಲ್ಲಿ ಡೈರಿ ಕ್ಷೇತ್ರದ ಪಾತ್ರವನ್ನು ಗುರುತಿಸಲು Food and Agriculture Organization (FAO) ವತಿಯಿಂದ 2001ರಲ್ಲಿ ವಿಶ್ವ ಹಾಲು ದಿನವನ್ನು ಆರಂಭಿಸಲಾಯಿತು. ಪ್ರತಿ ವರ್ಷ ಜೂನ್ 1 ರಂದು ಈ ದಿನವನ್ನು ಆಚರಿಸಲಾಗುತ್ತದೆ.
ವಿವಿಧ ದೇಶಗಳಲ್ಲಿ ಈಗಾಗಲೇ ಹಾಲು ದಿನವನ್ನು ಬೇರೆ ಬೇರೆ ದಿನಗಳಲ್ಲಿ ಆಚರಿಸಲಾಗುತ್ತಿತ್ತು. ಜಾಗತಿಕ ಮಟ್ಟದಲ್ಲಿ ಒಂದು ಸಾಮಾನ್ಯ ದಿನವನ್ನು ನಿಗದಿಪಡಿಸಲು FAO ಜೂನ್ 1 ಅನ್ನು ಆಯ್ಕೆ ಮಾಡಿತು.
ಭಾರತ ವಿಶ್ವದ ಅತಿದೊಡ್ಡ ಹಾಲು ಉತ್ಪಾದಕ ರಾಷ್ಟ್ರವಾಗಿದ್ದು, ಹೈನುಗಾರಿಕೆ ಲಕ್ಷಾಂತರ ರೈತ ಕುಟುಂಬಗಳ ಜೀವನೋಪಾಯಕ್ಕೆ ಆಧಾರವಾಗಿದೆ. ಆದ್ದರಿಂದ ವಿಶ್ವ ಹಾಲು ದಿನಕ್ಕೆ ಭಾರತದಲ್ಲಿ ವಿಶೇಷ ಮಹತ್ವವಿದೆ.
ಹಾಲು ಮಾನವನ ಆರೋಗ್ಯಕ್ಕೆ ಅಗತ್ಯವಾದ ಪೌಷ್ಟಿಕಾಂಶಗಳ ಪ್ರಮುಖ ಮೂಲವಾಗಿದೆ. ಇದರಲ್ಲಿ ಕ್ಯಾಲ್ಸಿಯಂ, ಪ್ರೋಟೀನ್, ವಿಟಮಿನ್ A, ವಿಟಮಿನ್ D, ವಿಟಮಿನ್ B12, ಪೊಟ್ಯಾಸಿಯಂ ಮತ್ತು ಫಾಸ್ಫರಸ್ಗಳಂತಹ ಪೋಷಕಾಂಶಗಳು ಸಮೃದ್ಧವಾಗಿದ್ದು, ದೇಹದ ಬೆಳವಣಿಗೆ ಮತ್ತು ಆರೋಗ್ಯ ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.
ಇದನ್ನೂ ಓದಿ : ಜೂನ್ ತಿಂಗಳ ಪ್ರಮುಖ ದಿನಗಳು / Important days in June
ತಜ್ಞರ ಪ್ರಕಾರ, ಹಾಲಿನ ನಿಯಮಿತ ಸೇವನೆಯು ಮೂಳೆಗಳು ಮತ್ತು ಹಲ್ಲುಗಳನ್ನು ಬಲಪಡಿಸುವುದರ ಜೊತೆಗೆ ಸ್ನಾಯುಗಳ ಬೆಳವಣಿಗೆ, ರೋಗನಿರೋಧಕ ಶಕ್ತಿ ವೃದ್ಧಿ ಹಾಗೂ ದೇಹಕ್ಕೆ ಅಗತ್ಯವಾದ ಶಕ್ತಿಯನ್ನು ಒದಗಿಸುತ್ತದೆ. ಮಕ್ಕಳಿಂದ ಹಿಡಿದು ವಯೋವೃದ್ಧರವರೆಗೆ ಎಲ್ಲ ವಯೋಮಾನದವರಿಗೂ ಹಾಲು ಅತ್ಯಂತ ಉಪಯುಕ್ತ ಆಹಾರವಾಗಿದೆ.
ಹೈನುಗಾರಿಕೆ ಕ್ಷೇತ್ರವು ಗ್ರಾಮೀಣ ಆರ್ಥಿಕತೆಯ ಪ್ರಮುಖ ಆಧಾರವಾಗಿದ್ದು, ಲಕ್ಷಾಂತರ ರೈತ ಕುಟುಂಬಗಳ ಜೀವನೋಪಾಯಕ್ಕೆ ನೆರವಾಗುತ್ತಿದೆ. ಹಾಲು ಉತ್ಪಾದನೆ ಮತ್ತು ಹಾಲು ಆಧಾರಿತ ಉದ್ಯಮಗಳು ದೇಶದ ಆರ್ಥಿಕ ಅಭಿವೃದ್ಧಿಯಲ್ಲಿಯೂ ಮಹತ್ವದ ಪಾತ್ರ ವಹಿಸುತ್ತಿವೆ.
2026ರ ಥೀಮ್ – ಮಹಿಳಾ ರೈತರನ್ನು ಆಚರಿಸುವುದು. (Celebrating Women Farmers)
- ಅಂಡಮಾನ್-ನಿಕೋಬಾರ್ ದ್ವೀಪಗಳಲ್ಲಿ ದೇಶದಲ್ಲೇ ಅತಿ ಕಡಿಮೆ ಸಂತಾನೋತ್ಪತ್ತಿ ದರ(Fertility Rate) ದಾಖಲು
- ಭಾರತದ ಪರಮಾಣು ಶಕ್ತಿ ಮತ್ತಷ್ಟು ಬಲಿಷ್ಠ : ಅಣ್ವಸ್ತ್ರ ಸಂಗ್ರಹ 190ಕ್ಕೆ ಏರಿಕೆ
- ಜಾಗತಿಕ ಬಿಕ್ಕಟ್ಟಿನ ನಡುವೆಯೂ ಭಾರತದಲ್ಲಿ ಸುಭದ್ರ ಆರ್ಥಿಕತೆ : FY26 ರಲ್ಲಿ 7.7% GDP ದಾಖಲು
- ಪ್ರಚಲಿತ ಘಟನೆಗಳ ಕ್ವಿಜ್ (08-06-2026)
- ಪ್ರಚಲಿತ ಘಟನೆಗಳ ಕ್ವಿಜ್ (07-06-2026)

