ತಮಿಳುನಾಡಿನ ನೂತನ ಮುಖ್ಯಮಂತ್ರಿ ಆಗಿ ಸಿ. ಜೋಸೆಫ್ ವಿಜಯ್ ಪ್ರಮಾಣವಚನ
Current AffairsLatest UpdatesPolitics

ತಮಿಳುನಾಡಿನ ನೂತನ ಮುಖ್ಯಮಂತ್ರಿ ಆಗಿ ಸಿ. ಜೋಸೆಫ್ ವಿಜಯ್ ಪ್ರಮಾಣವಚನ

Share With Friends

C. Joseph Vijay ನೇತೃತ್ವದ ತಮಿಳುನಾಡು ವೆಟ್ರಿ ಕಳಗಂ (TVK) ಪಕ್ಷವು ರಾಜ್ಯ ರಾಜಕೀಯದಲ್ಲಿ ಐತಿಹಾಸಿಕ ಸಾಧನೆ ಮಾಡಿದ್ದು, ಅದರ ಸಂಸ್ಥಾಪಕ ವಿಜಯ್ ಇಂದು ತಮಿಳುನಾಡಿನ ಮುಖ್ಯಮಂತ್ರಿ ಆಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಚೆನ್ನೈನ Nehru Indoor Stadium ನಲ್ಲಿ ನಡೆದ ಸಮಾರಂಭದಲ್ಲಿ ರಾಜ್ಯಪಾಲ Vishwanath Arlekar ಅವರು ವಿಜಯ್ ಅವರಿಗೆ ಪದ ಮತ್ತು ಗೌಪ್ಯತಾ ಪ್ರಮಾಣವಚನ ಬೋಧಿಸಿದರು.

51 ವರ್ಷದ ವಿಜಯ್, ಚಿತ್ರರಂಗದ ಸೂಪರ್ ಸ್ಟಾರ್ ಆಗಿ ಅಪಾರ ಜನಪ್ರಿಯತೆ ಗಳಿಸಿದ ಬಳಿಕ ರಾಜಕೀಯ ಕ್ಷೇತ್ರಕ್ಕೆ ಪ್ರವೇಶಿಸಿ ಮೊದಲ ಪ್ರಯತ್ನದಲ್ಲೇ ಮುಖ್ಯಮಂತ್ರಿ ಸ್ಥಾನಕ್ಕೇರಿರುವುದು ವಿಶೇಷ.

ನಿರ್ದೇಶಕ S. A. Chandrasekhar ಅವರ ಪುತ್ರರಾಗಿರುವ ವಿಜಯ್, “ನಾಳಯ್ಯ ತೀರ್ಪು”(Naalaiya Theerpu) ಚಿತ್ರದ ಮೂಲಕ ಸಿನಿರಂಗ ಪ್ರವೇಶಿಸಿದ್ದರು. ನಂತರ ಅನೇಕ ಬ್ಲಾಕ್‌ಬಸ್ಟರ್ ಚಿತ್ರಗಳಲ್ಲಿ ನಟಿಸಿ ಅಪಾರ ಅಭಿಮಾನಿ ಬಳಗವನ್ನು ನಿರ್ಮಿಸಿಕೊಂಡರು. ರಾಜಕೀಯ ಸಂದೇಶ ಹೊಂದಿದ ಸಂಭಾಷಣೆಗಳು ಮತ್ತು ಯುವಜನರಲ್ಲಿ ಉತ್ಸಾಹ ಹುಟ್ಟಿಸಿದ ಹಾಡುಗಳು ಅವರ ಜನಪ್ರಿಯತೆಯನ್ನು ಮತ್ತಷ್ಟು ಹೆಚ್ಚಿಸಿವೆ.

ವಿಜಯ್ ಅವರೊಂದಿಗೆ ಹಿರಿಯ ನಾಯಕರಾದ ಕೆಎ ಸೆಂಗೋಟ್ಟಯ್ಯನ್, ಆಧವ್ ಅರ್ಜುನ, ಎನ್ ಆನಂದ್, ಕೆ ಜಿ ಅರುಣ್ರಾಜ್, ಸಿಟಿಆರ್ ನಿರ್ಮಲ್ ಕುಮಾರ್, ಎ ರಾಜಮೋಹನ್, ಪಿ ವೆಂಕಟರಾಮನ್, ಟಿಕೆ ಪ್ರಭು, ಮತ್ತು ಎಸ್ ಕೀರ್ತನಾ ಸೇರಿದ್ದಂತೆ ಒಂಬತ್ತು ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.

ಕಾಂಗ್ರೆಸ್ ಸಂಸದ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಕೂಡ ಉಪಸ್ಥಿತರಿದ್ದರು. ತಮಿಳುನಾಡಿನಲ್ಲಿ ಸರ್ಕಾರ ರಚಿಸುವಲ್ಲಿ ವಿಜಯ್ ಜೊತೆಗೂಡಲು ಕಾಂಗ್ರೆಸ್ ಸ್ಟಾಲಿನ್ ನೇತೃತ್ವದ ದ್ರಾವಿಡ ಮುನ್ನೇತ್ರ ಕಳಗಂ ಪಕ್ಷದೊಂದಿಗೆ ದಶಕಗಳ ಕಾಲದ ಸಂಬಂಧವನ್ನು ಮುರಿದುಕೊಂಡಿತು.

TVK ಪಕ್ಷವು 108 ಸ್ಥಾನಗಳನ್ನು ಗೆದ್ದು ಅತಿ ದೊಡ್ಡ ಏಕೈಕ ಪಕ್ಷವಾಗಿ ಹೊರಹೊಮ್ಮಿದರೂ ಸಂಪೂರ್ಣ ಬಹುಮತ ಪಡೆಯಲಿಲ್ಲ. ಬಳಿಕ ಕಾಂಗ್ರೆಸ್, ವಿಸಿಕೆ, ಎಡಪಕ್ಷಗಳು ಹಾಗೂ ಐಯುಎಂಎಲ್ ಪಕ್ಷಗಳ ಬೆಂಬಲದೊಂದಿಗೆ ವಿಜಯ್ ಸರ್ಕಾರ ರಚನೆಗೆ ಮುಂದಾದರು. ಸರ್ಕಾರ ರಚನೆಗೆ ಸಂಬಂಧಿಸಿದ ಮಾತುಕತೆಗಳು ಹಲವು ದಿನಗಳ ಕಾಲ ನಡೆದ ಬಳಿಕ ವಿಜಯ್ ಬಹುಮತ ಸಾಬೀತುಪಡಿಸಿ ಮುಖ್ಯಮಂತ್ರಿ ಸ್ಥಾನಕ್ಕೇರಿದ್ದಾರೆ.

“ಉಂಗ ವಿಜಯ್ ನಾನ್ ವರೇನ್” ಎಂಬ ಘೋಷಣೆ ಮೂಲಕ ಜನಮನ ಗೆದ್ದ ವಿಜಯ್, ಇದೀಗ ತಮಿಳುನಾಡಿನ ಹೊಸ ರಾಜಕೀಯ ಅಧ್ಯಾಯಕ್ಕೆ ಚಾಲನೆ ನೀಡಿದ್ದಾರೆ. ಯುವ ಮುಖಂಡರು ಮತ್ತು ಹೊಸ ಸಚಿವರೊಂದಿಗೆ ರೂಪುಗೊಳ್ಳುತ್ತಿರುವ ಈ ಸರ್ಕಾರದ ಕಾರ್ಯಕ್ಷಮತೆಯನ್ನು ಜನತೆ ಕಣ್ಣಾರೆ ಗಮನಿಸುವ ನಿರೀಕ್ಷೆಯಿದೆ.

ಟಿವಿಕೆ ಪಕ್ಷದ ಐತಿಹಾಸಿಕ ಗೆಲುವು :
Tamilaga Vettri Kazhagam (TVK) ಪಕ್ಷವು 2026ರ ವಿಧಾನಸಭಾ ಚುನಾವಣೆಯಲ್ಲಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿತು. ವಿಜಯ್ ನೇತೃತ್ವದ ಈ ಪಕ್ಷವು 108 ಸ್ಥಾನಗಳನ್ನು ಗೆದ್ದು, ಮೈತ್ರಿ ಪಕ್ಷಗಳ ಬೆಂಬಲದೊಂದಿಗೆ 234 ಸದಸ್ಯರ ವಿಧಾನಸಭೆಯಲ್ಲಿ ಬಹುಮತದ ಗಡಿ ದಾಟಿತು.

ಕಾಂಗ್ರೆಸ್, ಸಿಪಿಐ, ಸಿಪಿಐ(ಎಂ), ವಿಸಿಕೆ ಹಾಗೂ ಐಯುಎಂಎಲ್ ಪಕ್ಷಗಳು ಟಿವಿಕೆ ನೇತೃತ್ವದ ಸರ್ಕಾರಕ್ಕೆ ಬೆಂಬಲ ನೀಡಿವೆ. ಒಟ್ಟು 120 ಶಾಸಕರ ಬೆಂಬಲದೊಂದಿಗೆ ಮೈತ್ರಿ ಸರ್ಕಾರ ರಚನೆಯಾಗಿದೆ.

ಸಿನಿಮಾದಿಂದ ರಾಜಕೀಯದತ್ತ ವಿಜಯ್ ಪಯಣ :
ತಮಿಳುನಾಡಿನಲ್ಲಿ ಸಿನಿಮಾ ಮತ್ತು ರಾಜಕೀಯದ ನಡುವೆ ದೀರ್ಘಕಾಲದ ನಂಟಿದೆ. ಸಿನಿಮಾ ಮುಖಾಂತರ ರಾಜಕೀಯ ಸಂದೇಶಗಳನ್ನು ಜನರಿಗೆ ತಲುಪಿಸುವ ಪರಂಪರೆ ರಾಜ್ಯದಲ್ಲಿ ಬಹಳ ಬಲವಾಗಿದೆ. ವಿಜಯ್ ಅವರ ಉದಯವು ತಮಿಳುನಾಡಿನ ರಾಜಕೀಯದಲ್ಲಿ ಸಿನಿತಾರೆಯರ ಪ್ರಭಾವ ಇನ್ನೂ ಮುಂದುವರಿದಿರುವುದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ.

ತಮಿಳು ಚಿತ್ರರಂಗದ ಸೂಪರ್‌ಸ್ಟಾರ್ ಆಗಿದ್ದ ವಿಜಯ್, ಜನಪ್ರಿಯತೆಯನ್ನು ರಾಜಕೀಯ ಬೆಂಬಲವಾಗಿ ಪರಿವರ್ತಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. M. G. Ramachandran ಹಾಗೂ J. Jayalalithaa ಅವರಂತೆಯೇ ಸಿನಿಮಾ ಕ್ಷೇತ್ರದಿಂದ ರಾಜಕೀಯ ನಾಯಕತ್ವಕ್ಕೆ ಬಂದ ಮತ್ತೊಬ್ಬ ಪ್ರಮುಖ ನಾಯಕನಾಗಿ ವಿಜಯ್ ಹೊರಹೊಮ್ಮಿದ್ದಾರೆ.

ಯುವಜನ ಸಂಪರ್ಕ, ಭ್ರಷ್ಟಾಚಾರ ವಿರೋಧಿ ಸಂದೇಶ, ಕಲ್ಯಾಣ ಯೋಜನೆಗಳ ವಿಸ್ತರಣೆ ಹಾಗೂ ಆಡಳಿತ ಸುಧಾರಣೆಗಳನ್ನೊಳಗೊಂಡ ಟಿವಿಕೆ ಚುನಾವಣಾ ಪ್ರಚಾರ ಜನಮನ ಗೆದ್ದಿತು.


ತಮಿಳುನಾಡಿನ ರಾಜಕೀಯ ಇತಿಹಾಸ:
*1920ರ ಡಿಸೆಂಬರ್‌ 17ರಿಂದ ಆಡಳಿತಾತ್ಮಕ ಇತಿಹಾಸ ಹೊಂದಿರುವ ಮದ್ರಾಸ್‌ ಪ್ರೆಸಿಡೆನ್ಸಿಗೆ 1949ರ ಏಪ್ರಿಲ್‌ 6ರವರೆಗೆ 11 ಮಂದಿ ಮುಖ್ಯಮಂತ್ರಿಗಳಾಗಿ ಆಡಳಿತ ನಡೆಸಿದ್ದರು.

*ಮದ್ರಾಸ್‌ ರಾಜ್ಯ ರಚನೆಯಾದ ಬಳಿಕ 1950ರ ಜನವರಿ 26ರಿಂದ 1963ರ ಅಕ್ಟೋಬರ್‌ 2ರವರೆಗೆ ಕಾಂಗ್ರೆಸ್‌ನ ನಾಲ್ವರು ಮುಖ್ಯಮಂತ್ರಿಗಳು ಆಡಳಿತ ನಡೆಸಿದ್ದರು.

*1967ರ ನಂತರ ಆರಂಭವಾದ ಪ್ರಾದೇಶಿಕ ಅಸ್ತಿತ್ವ ರಾಷ್ಟ್ರೀಯ ಪಕ್ಷಗಳನ್ನು ಧೂಳೀಪಟ ಮಾಡಿತು. ಸಿ.ಎನ್‌. ಅಣ್ಣಾದುರೈ ಅವರು 1967ರ ಮಾರ್ಚ್‌ 6ರಂದು ಡಿಎಂಕೆ ಪಕ್ಷದಿಂದ ಮೊದಲ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದರು. ಅದೇ ವರ್ಷದ ಜನವರಿ 14ರಂದು ತಮಿಳುನಾಡು ರಾಜ್ಯ ರಚನೆಯಾಗಿತ್ತು. ಮುಖ್ಯಮಂತ್ರಿಯಾಗಿ ಮುಂದುವರೆದ ಅಣ್ಣಾದುರೈ ಅವರು 1969ರ ಫೆಬ್ರವರಿ 3ರಂದು ನಿಧನರಾದರು.

*1969ರ ಫೆಬ್ರವರಿ 10ರಂದು ಎಂ. ಕರುಣಾನಿಧಿ ಅಧಿಕಾರ ಸ್ವೀಕರಿಸಿದರು. ಸುಮಾರು 7 ವರ್ಷ ಆಡಳಿತ ನಡೆಸಿದ ಅವರು 1977ರ ಚುನಾವಣೆಯಲ್ಲಿ ಸೋಲು ಕಂಡರು.ಆಗಿನ ಸೂಪರ್‌ಸ್ಟಾರ್‌ ಎಂ.ಜಿ. ರಾಮಚಂದ್ರನ್‌ ಎಐಎಡಿಎಂಕೆ ರಚಿಸಿ ಪಕ್ಷವನ್ನು ಅಧಿಕಾರಕ್ಕೆ ತಂದರು. ಆದರೆ 3 ವರ್ಷದಲ್ಲೇ ವಿಧಾನಸಭೆ ವಿಸರ್ಜನೆಯಾಯಿತು. ಮತ್ತೆ 1980ರಲ್ಲಿ ಎಂ.ಜಿ. ರಾಮಚಂದ್ರನ್‌ ಅಧಿಕಾರಕ್ಕೆ ಮರಳಿದರು. ಅವರ ಪತ್ನಿ ವಿ.ಎನ್‌. ಜಾನಕಿ 1988ರಲ್ಲಿ 23 ದಿನಗಳ ಕಾಲ ಮುಖ್ಯಮಂತ್ರಿಯಾಗಿದ್ದರು. ಒಂದು ವರ್ಷದ ರಾಷ್ಟ್ರಪತಿ ಆಡಳಿತದ ಬಳಿಕ, 1989ರಲ್ಲಿ ಎಂ. ಕರುಣಾನಿಧಿ ಮತ್ತೆ ಅಧಿಕಾರಕ್ಕೆ ಬಂದರು. ನಂತರ ಡಿಎಂಕೆ ಮತ್ತು ಎಐಎಡಿಎಂಕೆ ಪಕ್ಷಗಳ ಆಧಿಪತ್ಯ ಮುಂದುವರಿಯಿತು. ಬಳಿಕ ಜೆ. ಜಯಲಲಿತಾ, ಓ. ಪನ್ನೀರ್‌ಸೆಲ್ವಂ ಹಾಗೂ ಎಡಪ್ಪಾಡಿ ಕೆ. ಪಳನಿಸ್ವಾಮಿ ಮುಖ್ಯಮಂತ್ರಿಗಳಾಗಿದ್ದರು. ಎಂ.ಕೆ. ಸ್ಟಾಲಿನ್‌ 2021ರಿಂದ ಮುಖ್ಯಮಂತ್ರಿಯಾಗಿ ಆಡಳಿತ ನಡೆಸುತ್ತಿದ್ದಾರೆ.

*21 ತಿಂಗಳ ಹಿಂದೆ ದಳಪತಿ ಸಿ. ಜೋಸೆಫ್‌ ವಿಜಯ್‌ ಟಿವಿಕೆ ಪಕ್ಷವನ್ನು ಸ್ಥಾಪಿಸಿದ್ದರು. ಹಲವು ಸವಾಲುಗಳ ನಡುವೆಯೂ ತಮಿಳುನಾಡಿನ ಜನತೆ ಟಿವಿಕೆಗೆ 108 ಕ್ಷೇತ್ರಗಳಲ್ಲಿ ಶಾಸಕರನ್ನು ಗೆಲ್ಲಿಸಿದ್ದರು.

*ಮೇ 5ರಂದು ಫಲಿತಾಂಶ ಪ್ರಕಟವಾದರೂ ಸಂಖ್ಯಾಬಲದ ಕೊರತೆ ನೆಪವೊಡ್ಡಿ ತಮಿಳುನಾಡಿನ ರಾಜ್ಯಪಾಲ ರಾಜೇಂದ್ರ ಅರ್ಲೇಕರ್‌ ಸರ್ಕಾರ ರಚನೆಗೆ ಅವಕಾಶ ನೀಡಿರಲಿಲ್ಲ.

*ಕಾಂಗ್ರೆಸ್‌ನ 5, ಸಿಪಿಐಎಂ, ಸಿಪಿಐ, ವಿಸಿಕೆ ಹಾಗೂ ಐಯುಎಂಎಲ್‌ನ ತಲಾ 2 ಶಾಸಕರ ಬೆಂಬಲ ಸೇರಿ ಒಟ್ಟು 121 ಶಾಸಕರ ಸಂಖ್ಯಾಬಲವನ್ನು ವಿಜಯ್‌ ಅವರು ರಾಜ್ಯಪಾಲರಿಗೆ ತಿಳಿಸಿದ ಬಳಿಕ, ಮೇ 13ರೊಳಗೆ ಬಹುಮತ ಸಾಬೀತುಪಡಿಸುವ ಷರತ್ತಿನೊಂದಿಗೆ ಸರ್ಕಾರ ರಚಿಸಲು ಅವಕಾಶ ನೀಡಲಾಯಿತು.

#CJosephVijay, #ChiefMinisterofTamilNadu,


error: Content Copyright protected !!