ಜೂನ್.1 : ಪೋಷಕರ ಜಾಗತಿಕ ದಿನ (Global Day of Parents)
Uncategorized

ಜೂನ್.1 : ಪೋಷಕರ ಜಾಗತಿಕ ದಿನ (Global Day of Parents)

Share With Friends

ವಿಶ್ವಾದ್ಯಂತ ಪೋಷಕರ ನಿಸ್ವಾರ್ಥ ಬದ್ಧತೆ ಮತ್ತು ಮಕ್ಕಳ ಪೋಷಣೆ ಮತ್ತು ರಕ್ಷಣೆಗಾಗಿ ಅವರ ಜೀವಮಾನದ ಸಮರ್ಪಣೆಗಾಗಿ ಅವರನ್ನು ಗೌರವಿಸಲು ಪ್ರತಿ ವರ್ಷ ಜೂನ್ 1 ರಂದು ಜಾಗತಿಕ ಪೋಷಕರ ದಿನ(Global Day of Parents)ವನ್ನು ಆಚರಿಸಲಾಗುತ್ತದೆ. ವಿಶ್ವದ ಎಲ್ಲ ಪೋಷಕರ ನಿಸ್ವಾರ್ಥ ಸೇವೆ, ಪ್ರೀತಿ, ತ್ಯಾಗ ಮತ್ತು ಬದ್ಧತೆಯನ್ನು ಗೌರವಿಸುವ ಸಲುವಾಗಿ ಈ ದಿನವನ್ನು ಸ್ಥಾಪಿಸಲಾಯಿತು.

ಪೋಷಕರ ಪ್ರೀತಿ ಮತ್ತು ಮಾರ್ಗದರ್ಶನವೇ ಮಕ್ಕಳ ಯಶಸ್ಸಿನ ಭದ್ರ ಬುನಾದಿ. ಪೋಷಕರನ್ನು ಗೌರವಿಸುವುದು ಎಂದರೆ ನಮ್ಮ ಅಸ್ತಿತ್ವದ ಬೇರುಗಳನ್ನು ಗೌರವಿಸಿದಂತೆ. ನಮ್ಮ ಜೀವನ ರೂಪಿಸಿದ ಪೋಷಕರಿಗೆ ಅಥವಾ ಪೋಷಕರ ಸಮಾನ ವ್ಯಕ್ತಿಗಳಿಗೆ ಪ್ರೀತಿಯಿಂದ ಧನ್ಯವಾದ ತಿಳಿಸುವುದು. ಪೋಷಕರು ಮಕ್ಕಳ ಮೊದಲ ಶಿಕ್ಷಕರು, ಮಾರ್ಗದರ್ಶಕರು ಮತ್ತು ಜೀವನದ ಮೊದಲ ಆದರ್ಶ ವ್ಯಕ್ತಿಗಲಾಗಿರುತ್ತಾರೆ.

ಇದನ್ನೂ ಓದಿ : ಜೂನ್ ತಿಂಗಳ ಪ್ರಮುಖ ದಿನಗಳು / Important days in June

ಹಿನ್ನೆಲೆ :
1980ರ ದಶಕದಲ್ಲಿ ವಿಶ್ವಸಂಸ್ಥೆಯು ಕುಟುಂಬ ಮತ್ತು ಅದಕ್ಕೆ ಸಂಬಂಧಿಸಿದ ವಿಷಯಗಳತ್ತ ಹೆಚ್ಚಿನ ಗಮನ ಹರಿಸಲು ಪ್ರಾರಂಭಿಸಿತು. ಮಕ್ಕಳ ಆರೋಗ್ಯಕರ ಅಭಿವೃದ್ಧಿ ಮತ್ತು ಯೋಗಕ್ಷೇಮದಲ್ಲಿ ಪೋಷಕರ ನಿರ್ಣಾಯಕ ಪಾತ್ರವನ್ನು ಗುರುತಿಸಲು ವಿಶ್ವಸಂಸ್ಥೆಯ ಮಹಾಸಭೆಯು (UN General Assembly) ಜೂನ್ 1 ಅನ್ನು ಪೋಷಕರ ಜಾಗತಿಕ ದಿನ ಎಂದು ಅಧಿಕೃತವಾಗಿ ಘೋಷಿಸಿತು.

2026ರ ಥೀಮ್
Global Day of Parents ದಿನಕ್ಕೆ ವಿಶ್ವಸಂಸ್ಥೆ ಪ್ರತಿವರ್ಷ ವಿಶೇಷ ಸಂದೇಶದೊಂದಿಗೆ ಆಚರಣೆಗೆ ಕರೆ ನೀಡುತ್ತದೆ. ಪೋಷಕರ ಬೆಂಬಲ, ಮಕ್ಕಳ ಹಕ್ಕುಗಳು ಮತ್ತು ಕುಟುಂಬದ ಮೌಲ್ಯಗಳ ಕುರಿತು ಜಾಗೃತಿ ಮೂಡಿಸುವುದು ಈ ದಿನದ ಪ್ರಮುಖ ಉದ್ದೇಶವಾಗಿದೆ.
2026ರ ಥೀಮ್ – ಪೋಷಕರಿಗಾಗಿ ಒಟ್ಟಾಗಿ (Together for Parents)


ನೆನಪಿನಲ್ಲಿಡಬೇಕಾದ ಪ್ರಮುಖ ದಿನಾಚರಣೆಗಳು (ಪ್ರಮುಖ ದಿನಗಳು)
ಪ್ರಮುಖ ಅಂತರಾಷ್ಟ್ರೀಯ ದಿನಗಳು
ಜನವರಿ ತಿಂಗಳ ಪ್ರಮುಖ ದಿನಗಳು / Important days in January
ಫೆಬ್ರವರಿ ತಿಂಗಳ ಪ್ರಮುಖ ದಿನಗಳು / Important days in February
ಮಾರ್ಚ್ ತಿಂಗಳ ಪ್ರಮುಖ ದಿನಗಳು / Important days in March
ಏಪ್ರಿಲ್ ತಿಂಗಳ ಪ್ರಮುಖ ದಿನಗಳು / Important Days in April
ಮೇ ತಿಂಗಳ ಪ್ರಮುಖ ದಿನಗಳು / Important days in May
ಜೂನ್ ತಿಂಗಳ ಪ್ರಮುಖ ದಿನಗಳು / Important days in June
ಜುಲೈ ತಿಂಗಳ ಪ್ರಮುಖ ದಿನಗಳು / Important days in July
ಸೆಪ್ಟೆಂಬರ್ ತಿಂಗಳ ಪ್ರಮುಖ ದಿನಗಳು / Important days in September
ಅಕ್ಟೋಬರ್ ತಿಂಗಳ ಪ್ರಮುಖ ದಿನಗಳು / Important days in October
ನವೆಂಬರ್ ತಿಂಗಳ ಪ್ರಮುಖ ದಿನಗಳು / Important days in November
ಡಿಸೆಂಬರ್ ತಿಂಗಳ ಪ್ರಮುಖ ದಿನಗಳು / Important days in December
error: Content Copyright protected !!