ಹೈದರ್ ಅಲಿ ಮತ್ತು ಟಿಪ್ಪು ಸುಲ್ತಾನ್ ಕುರಿತ ಮಹತ್ವದ ಮಾಹಿತಿ
History

ಹೈದರ್ ಅಲಿ ಮತ್ತು ಟಿಪ್ಪು ಸುಲ್ತಾನ್ ಕುರಿತ ಮಹತ್ವದ ಮಾಹಿತಿ

Share With Friends

( Karnataka History )

1.ಹೈದರಾಲಿಯು ಕ್ರಿ.ಶ. 1721 ರಲ್ಲಿ ಕೋಲಾರ ಜಿಲ್ಲೆಯ ಬೂದಿಕೋಟೆಯಲ್ಲಿ ಜನಿಸಿದನು.

2.ಸೈನಿಕ ತರಭೇತಿ ಪಡೆದಿದ್ದ ಈತ ಮೈಸೂರು ಸೈನ್ಯವನ್ನು ಸೇರಿಕೊಂಡು, ಕ್ರಿ.ಶ. 1749 ರಲ್ಲಿ ನಡೆದ ದೇವನಹಳ್ಳಿಯ ಮುತ್ತಿಗೆಯಲ್ಲಿ ಅಪ್ರತಿಮ ಸಾಹಸ ತೋರಿ ಅಂದಿನ “ದಳವಾಯಿ ನಂಜ ರಾಜಯ್ಯನ” ಗಮನ ಸೆಳೆದನು. ನಂಜರಾಜಯ್ಯನು ಇವನನ್ನು ತುಕಡಿಯೊಂದರ ನಾಯಕನನ್ನಾಗಿ ನೇಮಿಸಿದನು.

3.ದಂಡಿಗಲ್‍ನ ಫೌಜುದಾರನಾದ ಹೈದರಾಲಿ ಫ್ರೆಂಚರ ಮತ್ತು ಇಂಗ್ಲೀಷ್‍ರ ಯುದ್ಧ ತಂತ್ರಗಳನ್ನು ಗಮನಿಸಿ ಅನುಸರಿಸಿದನು. ಮುಂದೆ ಅಸಮರ್ಥನಾಗಿದ್ದ ನಂಜರಾಜನನ್ನು ಕೆಳಗಿಳಿಸಿ ಅವನ ತಮ್ಮ ‘ಬೆಟ್ಟದ ಚಾಮರಾಜ ಒಡೆಯರನ್ನು’ ಕ್ರಿ.ಶ. 1770 ರಲ್ಲಿ ಸಿಂಹಾಸನವೇರಿಸಿದನು. ಇಲ್ಲಿಗೆ ದಳವಾಯಿಗಳ ಆಳ್ವಿಕೆ ಕೊನೆಗೊಂಡು, ಮುಂದೆ ಹೈದರಾಲಿಯು ಪ್ರಬಲನಾಗುತ್ತಾ ಹೋದನು.

4.1758 ರಲ್ಲಿ ಅವನು ‘ಚೌತಾಯಿ’ ವಸೂಲಿಗೆ ಬಂದ ಮರಾಠರನ್ನು ಸೋಲಿಸಿದನು. ಎಲ್ಲರೂ ಅಸಮರ್ಥರಾದ ಕಾರಣ ನಂಜರಾಜನನ್ನು ಅಧಿಕಾರದಿಂದ ಸರಿಸಿ 1761 ರಲ್ಲಿ ಸರ್ವಾಧಿಕಾರಿಯಾದನು.

5.ಮೂರನೆಯ ಪಾಣಿಪತ್ ಯುದ್ಧದಲ್ಲಿ ಸೋತ ಮರಾಠರು ಹೈದರಾಲಿಯ ಪ್ರಾಬಲ್ಯವನ್ನು ತಡೆಯಲಿಲ್ಲ.

6.ರಾಜರನ್ನು ಗೌರವಿಸುತ್ತಿದ್ದ ಹೈದರನು ಬೆಂಗಳೂರು, ಶ್ರೀರಂಗಪಟ್ಟಣದಲ್ಲಿ ಅರಮನೆಗಳನ್ನು ನಿರ್ಮಿಸಿದನು.

7.ಹೈದರಾಲಿಯ ಪ್ರಾಬಲ್ಯವು ಮರಾಠರಿಗೆ ಮತ್ತು ಹೈದರಾಬಾದ್‌ನ ನಿಜಾಮನಿಗೆ ಎಚ್ಚರಿಕೆಯ ಕರೆಗಂಟೆಯಾಯಿತು. ನಿಜಾಮನು ಇಂಗ್ಲಿಷರ ಸಹಾಯದಿಂದ ಮೈಸೂರಿನ ಮೇಲೆ ದಾಳಿ ಮಾಡಿದನು. ಆದರೆ ಹೈದರಾಲಿಯನ್ನು ಸೋಲಿಸಲು ಆಗಲಿಲ್ಲ. ಇವನ ಏಳಿಗೆಯನ್ನು ಸಹಿಸಲಾಗದ ಬ್ರಿಟಿಷರ ನಡುವೆ ಕ್ರಿ.ಶ. 1763 ರಲ್ಲಿ ಮೊದಲನೇ ಆಂಗ್ಲೋ-ಮೈಸೂರು ಯುದ್ಧ ನಡೆಯಿತು. ಆಗ ಬ್ರಿಟಿಷರಿಗೆ ಸೋಲಾಯಿತು. ಈ ಯುದ್ಧದಲ್ಲಿ ಮರಾಠರು ತಟಸ್ಥರಾಗುವಂತೆ ನೋಡಿಕೊಳ್ಳಲು ಅವರಿಗೆ ಕೆಲವು ಕೋಟೆಗಳು ಮತ್ತು ಹಣವನ್ನು ನೀಡಲಾಯಿತು.

8.ಕ್ರಿ.ಶ. 1769 ರಲ್ಲಿ ಹೈದರನು ಬ್ರಿಟಿಷರ ಕೆಲವೊಂದು ಪ್ರದೇಶಗಳನ್ನು ಗೆಲ್ಲುತ್ತಾ ಮದ್ರಾಸ್‌ವರೆಗೆ ಹೋದನು. ಹಾಗಾಗಿ 1769 ರಲ್ಲಿ ಬ್ರಿಟಿಷರೊಂದಿಗೆ “ಮದ್ರಾಸ್ ಒಪ್ಪಂದ”ವಾಗಿ ಪರಸ್ಪರ ಆಕ್ರಮಣ ಮಾಡಬಾರದು ಹಾಗೂ ಸಹಾಯ ಮಾಡಬೇಕು ಎಂದು ತೀರ್ಮಾನವಾಯಿತು.

9.1770 ರಲ್ಲಿ ಮರಾಠ ಪೇಶ್ವೆ ಮಾಧವರಾವ್ ಮೈಸೂರಿನ ಮೇಲೆ ದಾಳಿ ಮಾಡಿದಾಗ ಹೈದರಾಲಿಯು ಏಕಾಂಗಿಯಾಗಿ ಹೋರಾಡಿ ಮರಾಠರನ್ನು ಹಿಮ್ಮೆಟ್ಟಿಸಿದನು. ಆದರೆ ಬ್ರಿಟಿಷರು ಮದ್ರಾಸ್ ಒಪ್ಪಂದದಂತೆ ಸಹಾಯ ಮಾಡಲಿಲ್ಲ. ಹೀಗಾಗಿ ಬ್ರಿಟಿಷರ ಮೇಲೆ ಮತ್ತೆ ದ್ವೇಷ ಬೆಳೆಯಿತು. ನಂತರ ಕ್ರಿ.ಶ. 1780 ರಲ್ಲಿ ಎರಡನೇ ಆಂಗ್ಲೋ-ಮೈಸೂರು ಯುದ್ಧ ಪ್ರಾರಂಭವಾಯಿತು.

10.1781 ರಲ್ಲಿ ‘ಸೋಲಿಗನೂರು’ ಎಂಬಲ್ಲಿ ಬ್ರಿಟಿಷರ ಸೇನಾನಿ ‘ಸರ್ ಐರ್ ಕೂಟನು’ ಹೈದರಾಲಿಯನ್ನು ಸೋಲಿಸಿದನು. ಹೈದರನು ಈ ಯುದ್ಧದಲ್ಲಿ ಮಡಿದನು.

11.ಹೈದರಾಲಿಯ ನಂತರ ಅಧಿಕಾರ ವಹಿಸಿಕೊಂಡ ಅವನ ಮಗ ‘ಟಿಪ್ಪು ಸುಲ್ತಾನ’ ಯುದ್ಧವನ್ನು ಮುಂದುವರೆಸಿ ಮಂಗಳೂರನ್ನು ಗೆದ್ದುಕೊಂಡನು. 1784 ರಲ್ಲಿ ಟಿಪ್ಪು ಮತ್ತು ಬ್ರಿಟಿಷರ ನಡುವೆ “ಮಂಗಳೂರು ಒಪ್ಪಂದ”ವಾಗಿ ಎರಡನೇ ಆಂಗ್ಲೋ-ಮೈಸೂರು ಯುದ್ಧ ಕೊನೆಗೊಂಡಿತು.

12.ಟಿಪ್ಪು ಸುಲ್ತಾನನು “ಮೈಸೂರಿನ ಹುಲಿ” ಎಂದು ಖ್ಯಾತಿ ಪಡೆದಿದ್ದಾನೆ.

13.ಇವನು ಕ್ರಿ.ಶ. 1753 ರಲ್ಲಿ ನವೆಂಬರ್ 20 ರಂದು ದೇವನಹಳ್ಳಿಯಲ್ಲಿ ಜನಿಸಿದನು.

14.ಕ್ರಿ.ಶ. 1786 ರಲ್ಲಿ ಮರಾಠರೊಂದಿಗೆ ನಡೆದ ಯುದ್ಧವನ್ನು ಯಶಸ್ವಿಯಾಗಿ ಎದುರಿಸಿದನು.

15.ನಂತರ ಟಿಪ್ಪುವು ಬ್ರಿಟಿಷರ ಮಿತ್ರ ರಾಜ್ಯವಾದ ತಿರುವಾಂಕೂರಿನ ಮೇಲೆ ದಾಳಿ ಮಾಡಿದುದು ಮೂರನೇ ಆಂಗ್ಲೋ-ಮೈಸೂರು ಯುದ್ಧಕ್ಕೆ ನಾಂದಿಯಾಯಿತು.

16.1791 ರಲ್ಲಿ ಬ್ರಿಟಿಷ್ ಗವರ್ನರ್ ಲಾರ್ಡ್ ಕಾರ್ನವಾಲಿಸ್ ಮರಾಠ ಹಾಗೂ ಹೈದರಾಬಾದ್‌ನ ನಿಜಾಮರೊಂದಿಗೆ ಟಿಪ್ಪುವನ್ನು ಸೋಲಿಸಲು ಶ್ರೀರಂಗಪಟ್ಟಣದವರೆಗೆ ಬಂದು, ಟಿಪ್ಪುವಿಂದ ಪ್ರತಿರೋಧ ಕಂಡನು.

17.1792 ರಲ್ಲಿ ಲಾರ್ಡ್ ಕಾರ್ನವಾಲಿಸ್ ದೊಡ್ಡ ಸೈನ್ಯದೊಂದಿಗೆ ಟಿಪ್ಪುವನ್ನು ಸೋಲಿಸಲು ಬಂದನು. ಇಷ್ಟು ದೊಡ್ಡ ಸೈನ್ಯವನ್ನು ಎದುರಿಸಲು ಸಾಧ್ಯವಾಗದೆ ಟಿಪ್ಪು “ಶ್ರೀರಂಗಪಟ್ಟಣ ಒಪ್ಪಂದಕ್ಕೆ” ಸಹಿ ಹಾಕಿದನು.

18.ಈ ಒಪ್ಪಂದದ ಪ್ರಕಾರ ಟಿಪ್ಪು ತನ್ನ ಅರ್ಧ ರಾಜ್ಯವನ್ನು ಮತ್ತು ಯುದ್ಧದ ಖರ್ಚಿಗೆ ಹಣವನ್ನು ನೀಡಬೇಕಾಯಿತು. ಅಲ್ಲದೆ ಹಣ ಪಾವತಿಯಾಗುವವರೆಗೆ ತನ್ನ ಇಬ್ಬರು ಮಕ್ಕಳನ್ನು ಬ್ರಿಟಿಷರಿಗೆ ಒತ್ತೆ ಇಡಬೇಕಾಯಿತು.

19.ಬ್ರಿಟಿಷರ ವಿರುದ್ಧ ಸದಾ ಹಗೆ ಹೊಂದಿದ್ದ ಟಿಪ್ಪು ಅವರನ್ನು ಭಾರತದಿಂದ ಓಡಿಸಲು ವಿದೇಶಿಯರ ನೆರವು ಕೋರಿದರೂ ಯಶಸ್ವಿಯಾಗಲಿಲ್ಲ.

20.ಕ್ರಿ.ಶ. 1798 ರಲ್ಲಿ ಗವರ್ನರ್ ಜನರಲ್ ಲಾರ್ಡ್ ವೆಲ್ಲೆಸ್ಲಿಯ ಸಹಾಯಕ ಸೈನ್ಯ ಪದ್ದತಿಯನ್ನು ಟಿಪ್ಪು ನಿರಾಕರಿಸಿದನು. ಇದರಿಂದ ವೆಲ್ಲೆಸ್ಲಿ ಕೆರಳಿದನು. ಟಿಪ್ಪುವನ್ನು ಸೋಲಿಸಲು ಹ್ಯಾರಿಸ್‌ನ ನಾಯಕತ್ವದಲ್ಲಿ ಸೈನ್ಯ ಕಳುಹಿಸಲಾಯಿತು. ಇದೇ ನಾಲ್ಕನೇ ಆಂಗ್ಲೋ-ಮೈಸೂರು ಯುದ್ಧ.

21.ವೀರಾವೇಶದಿಂದ ಹೋರಾಡಿದ ಟಿಪ್ಪು ಕ್ರಿ.ಶ. 1799 ರ ಮೇ 4 ರಂದು ಈ ಯುದ್ಧದಲ್ಲಿ ಹತನಾದನು.


Leave a Reply

Your email address will not be published. Required fields are marked *

error: Content Copyright protected !!