ಚಿನ್ನ ಮತ್ತು ಬೆಳ್ಳಿ ಆಮದು ಸುಂಕ 15%ಕ್ಕೆ ಏರಿಕೆ : ಕೇಂದ್ರ ಸರ್ಕಾರದ ಮಹತ್ವದ ನಿರ್ಧಾರ
ದೇಶದ ವಿದೇಶಿ ವಿನಿಮಯ ಸಂಗ್ರಹವನ್ನು ರಕ್ಷಿಸಲು ಹಾಗೂ ಭಾರತೀಯ ರೂಪಾಯಿಯ ಮೇಲಿನ ಒತ್ತಡವನ್ನು ಕಡಿಮೆ ಮಾಡಲು ಕೇಂದ್ರ ಸರ್ಕಾರ ಚಿನ್ನ ಮತ್ತು ಬೆಳ್ಳಿ ಮೇಲಿನ ಆಮದು ಸುಂಕವನ್ನು 15%ಕ್ಕೆ ಹೆಚ್ಚಿಸಿದೆ. ಜಾಗತಿಕ ಆರ್ಥಿಕ ಅನಿಶ್ಚಿತತೆ, ಮಧ್ಯಪ್ರಾಚ್ಯದ ಉದ್ವಿಗ್ನತೆ ಹಾಗೂ ಏರಿಕೆಯಾಗುತ್ತಿರುವ ಕಚ್ಚಾ ತೈಲ ಬೆಲೆಗಳ ಹಿನ್ನೆಲೆ ಈ ಮಹತ್ವದ ಕ್ರಮ ಕೈಗೊಳ್ಳಲಾಗಿದೆ.
ಸರ್ಕಾರದ ಹೊಸ ನಿರ್ಧಾರದಂತೆ, ಚಿನ್ನ ಮತ್ತು ಬೆಳ್ಳಿ ಆಮದು ಮೇಲಿನ ಕಸ್ಟಮ್ಸ್ ಸುಂಕವನ್ನು 6%ರಿಂದ ನೇರವಾಗಿ 15%ಕ್ಕೆ ಏರಿಸಲಾಗಿದೆ. ಪ್ಲಾಟಿನಂ ವರ್ಗದ ವಸ್ತುಗಳ ಮೇಲಿನ ಸುಂಕವನ್ನು 6.4%ರಿಂದ 15.4%ಕ್ಕೆ ಹೆಚ್ಚಿಸಲಾಗಿದೆ.
ಹೊಸ ತೆರಿಗೆ ರಚನೆಯಲ್ಲಿ 10% ಮೂಲ ಕಸ್ಟಮ್ಸ್ ಸುಂಕ (BCD) ಮತ್ತು 5% ಕೃಷಿ ಮೂಲಸೌಕರ್ಯ ಹಾಗೂ ಅಭಿವೃದ್ಧಿ ಸೆಸ್ (AIDC) ಸೇರಿವೆ. ಈ ನಿಯಮ ಚಿನ್ನದ ಡೋರ್, ಬೆಳ್ಳಿ ಡೋರ್, ನಾಣ್ಯಗಳು ಮತ್ತು ಸಂಬಂಧಿತ ವಸ್ತುಗಳಿಗೂ ಅನ್ವಯವಾಗಲಿದೆ.
ಕೇಂದ್ರ ಸರ್ಕಾರದ ಪ್ರಕಾರ, ಭಾರತವು ಕಚ್ಚಾ ತೈಲ, ರಸಗೊಬ್ಬರ, ಕೈಗಾರಿಕಾ ಕಚ್ಚಾ ವಸ್ತುಗಳು, ರಕ್ಷಣಾ ಸಾಧನಗಳು ಮತ್ತು ತಂತ್ರಜ್ಞಾನ ಆಮದುಗಳಿಗಾಗಿ ವಿದೇಶಿ ವಿನಿಮಯದ ಮೇಲೆ ಹೆಚ್ಚು ಅವಲಂಬಿತವಾಗಿದೆ. ಆದರೆ ಚಿನ್ನದ ಆಮದು ಮುಖ್ಯವಾಗಿ ಬಳಕೆ ಮತ್ತು ಹೂಡಿಕೆ ಉದ್ದೇಶಕ್ಕೆ ನಡೆಯುವುದರಿಂದ ದೇಶದ ವಿದೇಶಿ ವಿನಿಮಯ ಸಂಗ್ರಹದ ಮೇಲೆ ಹೆಚ್ಚಿನ ಒತ್ತಡ ಉಂಟಾಗುತ್ತಿದೆ.
ಇದೀಗ ಜಾಗತಿಕ ರಾಜಕೀಯ ಉದ್ವಿಗ್ನತೆ ಹಾಗೂ ಆರ್ಥಿಕ ಅಸ್ಥಿರತೆಯಿಂದ ಭಾರತೀಯ ರೂಪಾಯಿ ಮೌಲ್ಯ ಕುಸಿತದ ಒತ್ತಡಕ್ಕೆ ಒಳಗಾಗಿದೆ. ರೂಪಾಯಿ ದುರ್ಬಲವಾದರೆ ಇಂಧನ, ಎಲೆಕ್ಟ್ರಾನಿಕ್ಸ್, ಅಡುಗೆ ಎಣ್ಣೆ ಮತ್ತು ಇತರ ಆಮದು ವಸ್ತುಗಳ ಬೆಲೆ ಏರಿಕೆಯಾಗುವ ಸಾಧ್ಯತೆ ಇದೆ.
ಆದ್ದರಿಂದ ಅಗತ್ಯವಲ್ಲದ ಆಮದುಗಳನ್ನು ನಿಯಂತ್ರಿಸುವ ಮೂಲಕ Current Account Deficit (CAD) ಕಡಿಮೆ ಮಾಡಿ ರೂಪಾಯಿಗೆ ಪರೋಕ್ಷ ಬೆಂಬಲ ನೀಡುವುದು ಸರ್ಕಾರದ ಉದ್ದೇಶವಾಗಿದೆ.
ಈ ನಿರ್ಧಾರದ ಪರಿಣಾಮವಾಗಿ ದೇಶೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದ್ದು, ಮದುವೆ ಹಾಗೂ ಹೂಡಿಕೆ ಉದ್ದೇಶದ ಚಿನ್ನ ಖರೀದಿ ದುಬಾರಿಯಾಗುವ ನಿರೀಕ್ಷೆಯಿದೆ.
ಎಷ್ಟು ಹೆಚ್ಚಾಗಿದೆ.. ?
ಈ ಹಿಂದೆ ಚಿನ್ನ ಮತ್ತು ಬೆಳ್ಳಿ ಆಮದು ಮೇಲಿನ ಕಸ್ಟಮ್ಸ್ ಸುಂಕ 6% ಇತ್ತು. ಈಗ ಅದನ್ನು 15%ಕ್ಕೆ ಏರಿಸಲಾಗಿದೆ.ಪ್ಲಾಟಿನಂ ವರ್ಗದ ವಸ್ತುಗಳ ಮೇಲಿನ ಸುಂಕವನ್ನು 6.4%ರಿಂದ 15.4%ಕ್ಕೆ ಹೆಚ್ಚಿಸಲಾಗಿದೆ. ಈ ಹೊಸ ನಿಯಮ ಚಿನ್ನದ ಡೋರ್, ಬೆಳ್ಳಿ ಡೋರ್, ನಾಣ್ಯಗಳು ಮತ್ತು ಸಂಬಂಧಿತ ಆಭರಣ ವಸ್ತುಗಳಿಗೂ ಅನ್ವಯವಾಗಲಿದೆ.
ಹೊಸ ಸುಂಕ ರಚನೆ ಹೀಗಿದೆ:
10% ಮೂಲ ಕಸ್ಟಮ್ಸ್ ಸುಂಕ (BCD -Basic Customs Duty)
5% ಕೃಷಿ ಮೂಲಸೌಕರ್ಯ ಮತ್ತು ಅಭಿವೃದ್ಧಿ ಸೆಸ್ (AIDC-Agriculture Infrastructure and Development Cess)
ಈ ನಿರ್ಧಾರ ಏಕೆ..?
ಭಾರತ ಹಲವು ಅಗತ್ಯ ವಸ್ತುಗಳಿಗಾಗಿ ವಿದೇಶಿ ಆಮದುಗಳ ಮೇಲೆ ಅವಲಂಬಿತವಾಗಿದೆ. ಅವುಗಳಲ್ಲಿ ಕಚ್ಚಾ ತೈಲ, ರಸಗೊಬ್ಬರ, ಕೈಗಾರಿಕಾ ಕಚ್ಚಾ ವಸ್ತುಗಳು, ರಕ್ಷಣಾ ಸಾಧನಗಳು, ತಂತ್ರಜ್ಞಾನ ಮತ್ತು ಯಂತ್ರೋಪಕರಣಗಳು ಇದಕ್ಕಿಂತ ಭಿನ್ನವಾಗಿ, ಚಿನ್ನದ ಆಮದು ಮುಖ್ಯವಾಗಿ ಬಳಕೆ ಮತ್ತು ಹೂಡಿಕೆ ಉದ್ದೇಶಕ್ಕೆ ನಡೆಯುತ್ತದೆ. ಇದರಿಂದ ದೇಶದ ವಿದೇಶಿ ವಿನಿಮಯ ಸಂಗ್ರಹದ ಮೇಲೆ ಹೆಚ್ಚಿನ ಒತ್ತಡ ಉಂಟಾಗುತ್ತದೆ. ಆದ್ದರಿಂದ ಚಿನ್ನದ ಆಮದು ದುಬಾರಿಯಾಗುವುದರಿಂದ ಬೇಡಿಕೆ ಕಡಿಮೆಯಾಗಬಹುದು ಮತ್ತು ವಿದೇಶಿ ಕರೆನ್ಸಿ ಉಳಿಸಬಹುದು ಎಂಬ ನಿರೀಕ್ಷೆಯನ್ನು ಸರ್ಕಾರ ಹೊಂದಿದೆ.
ರೂಪಾಯಿ ಮೌಲ್ಯ ಕುಸಿತದ ಆತಂಕ :
ಪ್ರಸ್ತುತ ಜಾಗತಿಕ ರಾಜಕೀಯ ಉದ್ವಿಗ್ನತೆ ಹಾಗೂ ಆರ್ಥಿಕ ಅಸ್ಥಿರತೆಯಿಂದ ಭಾರತೀಯ ರೂಪಾಯಿ ಒತ್ತಡಕ್ಕೆ ಒಳಗಾಗಿದೆ. ರೂಪಾಯಿ ದುರ್ಬಲವಾದರೆ ಇಂಧನ ಬೆಲೆ ಹೆಚ್ಚಾಗುತ್ತದೆ, ಎಲೆಕ್ಟ್ರಾನಿಕ್ಸ್ ವಸ್ತುಗಳು ದುಬಾರಿಯಾಗುತ್ತವೆ, ಅಡುಗೆ ಎಣ್ಣೆ ಹಾಗೂ ಕೈಗಾರಿಕಾ ವಸ್ತುಗಳ ವೆಚ್ಚ ಏರಿಕೆಯಾಗುತ್ತದೆ. ಈ ಹಿನ್ನೆಲೆ ಚಿನ್ನದಂತಹ ಅಗತ್ಯವಲ್ಲದ ಆಮದುಗಳನ್ನು ಕಡಿಮೆ ಮಾಡುವ ಮೂಲಕ ಸರ್ಕಾರವು Current Account Deficit (CAD) ಮೇಲಿನ ಒತ್ತಡವನ್ನು ಕಡಿಮೆ ಮಾಡಲು ಪ್ರಯತ್ನಿಸುತ್ತಿದೆ.
ಜನರಿಗೆ ಏನು ಪರಿಣಾಮ?
*ಚಿನ್ನದ ಬೆಲೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ
*ಆಭರಣ ಖರೀದಿ ದುಬಾರಿ ಆಗಬಹುದು
*ಮದುವೆ ಹಾಗೂ ಹೂಡಿಕೆ ಉದ್ದೇಶದ ಖರೀದಿಗೆ ಹೆಚ್ಚುವರಿ ವೆಚ್ಚ
*ದೇಶೀಯ ಮಾರುಕಟ್ಟೆಯಲ್ಲಿ ಚಿನ್ನದ ಬೇಡಿಕೆ ಕಡಿಮೆಯಾಗುವ ಸಾಧ್ಯತೆ
ಜಾಗತಿಕ ಆರ್ಥಿಕ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಭಾರತ ಸರ್ಕಾರ ತೆಗೆದುಕೊಂಡಿರುವ ಈ ಕ್ರಮ ಮುಂದಿನ ದಿನಗಳಲ್ಲಿ ದೇಶದ ಆರ್ಥಿಕ ಸ್ಥಿರತೆಗೆ ಎಷ್ಟು ಸಹಾಯಕವಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ.
- ಭಾರತದ ಪ್ರಮುಖ ಉದ್ದದ ಸೇತುವೆಗಳ ಪಟ್ಟಿ – List of Longest Bridges in India
- ಚಿನ್ನ ಮತ್ತು ಬೆಳ್ಳಿ ಆಮದು ಸುಂಕ 15%ಕ್ಕೆ ಏರಿಕೆ : ಕೇಂದ್ರ ಸರ್ಕಾರದ ಮಹತ್ವದ ನಿರ್ಧಾರ
- ಜುಲೈ 1ರಿಂದ VB-G RAM G Act ಜಾರಿ : ಹೊಸ ಕಾಯ್ದೆಯ ಕಂಪ್ಲೀಟ್ ಡೀಟೇಲ್ಸ್
- ಸುಪ್ರೀಂ ಕೋರ್ಟ್ನ ಹೊಸ ಡಿಜಿಟಲ್ ಸುಧಾರಣೆ ‘ಒನ್ ಕೇಸ್ ಒನ್ ಡೇಟಾ’ ಎಂದರೇನು..? | Explained
- NEET-UG 2026 ಪರೀಕ್ಷೆ ರದ್ದು : ಕೇಂದ್ರ ಸರ್ಕಾರದ ಮಹತ್ವದ ನಿರ್ಧಾರ
#ImportDutyonGold, #GoldImportDuty, #SilverImportDuty,

