ಸುಪ್ರೀಂ ಕೋರ್ಟ್‌ನ ಹೊಸ ಡಿಜಿಟಲ್ ಸುಧಾರಣೆ ‘ಒನ್ ಕೇಸ್ ಒನ್ ಡೇಟಾ’ ಎಂದರೇನು..? | Explained
Current AffairsGKLatest Updates

ಸುಪ್ರೀಂ ಕೋರ್ಟ್‌ನ ಹೊಸ ಡಿಜಿಟಲ್ ಸುಧಾರಣೆ ‘ಒನ್ ಕೇಸ್ ಒನ್ ಡೇಟಾ’ ಎಂದರೇನು..? | Explained

Share With Friends

ಭಾರತದ ನ್ಯಾಯಾಂಗ ವ್ಯವಸ್ಥೆಯನ್ನು ಆಧುನೀಕರಿಸುವ ದಿಕ್ಕಿನಲ್ಲಿ Supreme Court of India ಮಹತ್ವದ ಹೆಜ್ಜೆ ಇಟ್ಟಿದೆ. “One Case One Data” ಎಂಬ ಹೊಸ ಡಿಜಿಟಲ್ ಉಪಕ್ರಮವನ್ನು ಆರಂಭಿಸಿರುವ ಸುಪ್ರೀಂ ಕೋರ್ಟ್, ಇದರೊಂದಿಗೆ “Su-Sahayak” ಎಂಬ AI ಆಧಾರಿತ ಚಾಟ್‌ಬಾಟ್‌ನ್ನೂ ಪರಿಚಯಿಸಿದೆ.

ಈ ಹೊಸ ವ್ಯವಸ್ಥೆಯ ಉದ್ದೇಶ ದೇಶದ ಎಲ್ಲಾ ನ್ಯಾಯಾಲಯಗಳ ಮಾಹಿತಿಯನ್ನು ಡಿಜಿಟಲ್ ಮೂಲಕ ಪರಸ್ಪರ ಸಂಪರ್ಕಿಸುವುದಾಗಿದೆ. ತಾಲ್ಲೂಕು ನ್ಯಾಯಾಲಯಗಳಿಂದ ಹಿಡಿದು ಜಿಲ್ಲಾ ನ್ಯಾಯಾಲಯಗಳು, ಹೈಕೋರ್ಟ್‌ಗಳು ಹಾಗೂ ಸುಪ್ರೀಂ ಕೋರ್ಟ್‌ವರೆಗೆ ಎಲ್ಲಾ ಕೇಸ್ ಮಾಹಿತಿಯನ್ನು ಒಂದೇ ಡಿಜಿಟಲ್ ವ್ಯವಸ್ಥೆಯಡಿ ತರಲಾಗುತ್ತದೆ.

ಈ ಹೊಸ ಉಪಕ್ರಮವು ಭಾರತದ ನ್ಯಾಯಾಂಗ ವ್ಯವಸ್ಥೆಯನ್ನು ಸಂಪೂರ್ಣ ಡಿಜಿಟಲ್ ಮತ್ತು ಹೆಚ್ಚು ಪಾರದರ್ಶಕವಾಗಿಸುವ ದಿಕ್ಕಿನಲ್ಲಿ ಪ್ರಮುಖ ಹೆಜ್ಜೆಯಾಗಿದೆ. ತಂತ್ರಜ್ಞಾನ ಬಳಕೆಯಿಂದ ನ್ಯಾಯಾಂಗ ಸೇವೆಗಳು ವೇಗವಾಗಿ ಮತ್ತು ಪರಿಣಾಮಕಾರಿಯಾಗಿ ಜನರಿಗೆ ತಲುಪುವ ನಿರೀಕ್ಷೆ ಇದೆ.

‘One Case One Data’ ಎಂದರೇನು?
“One Case One Data” ಎನ್ನುವುದು ನ್ಯಾಯಾಂಗದ ಡಿಜಿಟಲ್ ಕೇಸ್ ನಿರ್ವಹಣಾ ವ್ಯವಸ್ಥೆಯಾಗಿದೆ. ದೇಶದ ಎಲ್ಲಾ ಹಂತದ ನ್ಯಾಯಾಲಯಗಳ ಮಾಹಿತಿಯನ್ನು ಒಂದೇ ಡಿಜಿಟಲ್ ವ್ಯವಸ್ಥೆಯಲ್ಲಿ ಒಗ್ಗೂಡಿಸುವ ಉದ್ದೇಶ ಹೊಂದಿದೆ. ಈ ಯೋಜನೆಯಡಿ ಕೆಳಗಿನ ನ್ಯಾಯಾಂಗ ಮತ್ತು ಸರ್ಕಾರಿ ಸಂಸ್ಥೆಗಳ ಮಾಹಿತಿಯನ್ನು ಒಗ್ಗೂಡಿಸಲಾಗುತ್ತದೆ:
ಸುಪ್ರೀಂ ಕೋರ್ಟ್
ಹೈಕೋರ್ಟ್‌ಗಳು
ಜಿಲ್ಲಾ ನ್ಯಾಯಾಲಯಗಳು
ತಾಲ್ಲೂಕು ನ್ಯಾಯಾಲಯಗಳು
ವಿವಿಧ ಸರ್ಕಾರಿ ಇಲಾಖೆಗಳು
ಇದರಿಂದ ಪ್ರಕರಣಗಳಿಗೆ ಸಂಬಂಧಿಸಿದ ದಾಖಲೆಗಳು, ವಿಚಾರಣೆಯ ಇತಿಹಾಸ ಮತ್ತು ನ್ಯಾಯಾಂಗ ಮಾಹಿತಿ ವೇಗವಾಗಿ ಲಭ್ಯವಾಗಲಿದೆ.

ಇದನ್ನೂ ಓದಿ : ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳ ಸಂಖ್ಯೆ 34 ರಿಂದ 38ಕ್ಕೆ ಏರಿಸಲು ಕೇಂದ್ರ ಸಂಪುಟ ಅನುಮೋದನೆ

ಪ್ರಮುಖ ವೈಶಿಷ್ಟ್ಯಗಳು :
*ಬಹು ಹಂತದ ಡೇಟಾ ಏಕೀಕರಣ: ಹೈಕೋರ್ಟ್, ಜಿಲ್ಲಾ ಹಾಗೂ ತಾಲೂಕು ನ್ಯಾಯಾಲಯಗಳ ಮಾಹಿತಿಯನ್ನು ಒಂದೇ ವ್ಯವಸ್ಥೆಗೆ ಜೋಡಣೆ.
*ಏಕೀಕೃತ ಡೇಟಾಬೇಸ್: ಒಂದು ಪ್ರಕರಣಕ್ಕೆ ಒಂದೇ ಅಧಿಕೃತ ಡೇಟಾ ಮೂಲ ಸೃಷ್ಟಿ.
*ಕೇಸ್ ಟ್ರ್ಯಾಕಿಂಗ್ ಸುಲಭ: ಮೇಲ್ಮನವಿ ಅಥವಾ ವರ್ಗಾವಣೆ ಸಂದರ್ಭದಲ್ಲಿ ಪ್ರಕರಣದ ಸಂಪೂರ್ಣ ಇತಿಹಾಸವನ್ನು ಸುಲಭವಾಗಿ ಅನುಸರಿಸಬಹುದು.
*ಡಿಜಿಟಲ್ ದಾಖಲೆ ವ್ಯವಸ್ಥೆ: ನ್ಯಾಯಾಧೀಶರು, ವಕೀಲರು ಮತ್ತು ಅರ್ಜಿದಾರರಿಗೆ ದಾಖಲೆಗಳ ಸುಲಭ ಪ್ರವೇಶ.
*ವೇಗ ಮತ್ತು ಪಾರದರ್ಶಕತೆ: ಕೈಯಾರೆ ದಾಖಲೆ ಸಂಗ್ರಹಿಸುವ ಅವಶ್ಯಕತೆ ಕಡಿಮೆಯಾಗುತ್ತದೆ.

ಈ ಸುಧಾರಣೆ ಏಕೆ ಮಹತ್ವದ್ದು..?
ಭಾರತದ ನ್ಯಾಯಾಂಗ ವ್ಯವಸ್ಥೆಯಲ್ಲಿ ಲಕ್ಷಾಂತರ ಪ್ರಕರಣಗಳು ಬಾಕಿ ಉಳಿದಿವೆ. ಪ್ರಮುಖ ಸಮಸ್ಯೆಯೆಂದರೆ ವಿವಿಧ ನ್ಯಾಯಾಲಯಗಳಲ್ಲಿ ಬೇರೆ ಬೇರೆ ಡೇಟಾಬೇಸ್‌ಗಳಿರುವುದರಿಂದ ಮಾಹಿತಿ ಸಂಗ್ರಹ ಮತ್ತು ಪರಿಶೀಲನೆಗೆ ಹೆಚ್ಚು ಸಮಯ ಬೇಕಾಗುತ್ತದೆ.

ದಾಖಲೆ ಪರಿಶೀಲನೆ, ಕೇಸ್ ಇತಿಹಾಸ ಟ್ರ್ಯಾಕಿಂಗ್, ನ್ಯಾಯಾಲಯಗಳ ನಡುವಿನ ಮಾಹಿತಿ ವಿನಿಮಯ, ದಾಖಲೆಗಳನ್ನು ಮರುಪಡೆಯುವುದು, ಸರ್ಕಾರಿ ಇಲಾಖೆಗಳ ಸಮನ್ವಯದ ಕಾರಣಗಳಿಂದಾಗಿ ವಿಳಂಬ ಉಂಟಾಗುತ್ತಿತ್ತು. ಹೊಸ “One Case One Data” ವ್ಯವಸ್ಥೆ ಈ ಸಮಸ್ಯೆಗಳನ್ನು ಕಡಿಮೆ ಮಾಡಲು ಸಹಾಯ ಮಾಡಲಿದೆ.

ಹೊಸ ವ್ಯವಸ್ಥೆ ಹೇಗೆ ಕಾರ್ಯನಿರ್ವಹಿಸಲಿದೆ..?
ಈ ಡಿಜಿಟಲ್ ವ್ಯವಸ್ಥೆ ವಿವಿಧ ನ್ಯಾಯಾಂಗ ಡೇಟಾಬೇಸ್‌ಗಳಿಂದ ಮಾಹಿತಿಯನ್ನು ಸ್ವಯಂಚಾಲಿತವಾಗಿ ಪಡೆಯಲಿದೆ. ಪ್ರತ್ಯೇಕ ವ್ಯವಸ್ಥೆಗಳಲ್ಲಿ ಹುಡುಕುವ ಅಗತ್ಯ ಕಡಿಮೆಯಾಗುತ್ತದೆ.

ವ್ಯವಸ್ಥೆಯ ಪ್ರಮುಖ ವೈಶಿಷ್ಟ್ಯಗಳು:
*ಏಕೀಕೃತ ಕೇಸ್ ಮಾಹಿತಿ ವ್ಯವಸ್ಥೆ
*ರಿಯಲ್-ಟೈಮ್ ದಾಖಲೆ ಪರಿಶೀಲನೆ
*ಸರ್ಕಾರಿ ಇಲಾಖೆಗಳ ಸಂಪರ್ಕ ವ್ಯವಸ್ಥೆ
*ವೇಗವಾದ ನ್ಯಾಯಾಂಗ ಕಾರ್ಯಪ್ರವಾಹ

“Su-Sahayak” (Su Sahay) AI ಚಾಟ್‌ಬಾಟ್ ಏನು..?
ಸುಪ್ರೀಂ ಕೋರ್ಟ್ ಪರಿಚಯಿಸಿದ “Su-Sahayak” ಎಂಬ AI ಚಾಟ್‌ಬಾಟ್ ನ್ಯಾಯಾಂಗ ಸೇವೆಗಳನ್ನು ಜನರಿಗೆ ಸುಲಭವಾಗಿ ಲಭ್ಯವಾಗುವಂತೆ ಮಾಡಲು ರೂಪಿಸಲಾಗಿದೆ.
ಇದು ಬಳಕೆದಾರರಿಗೆ:
*ಕೇಸ್ ಮಾಹಿತಿ ಪಡೆಯಲು
*ನ್ಯಾಯಾಲಯದ ಪ್ರಕ್ರಿಯೆಗಳ ಬಗ್ಗೆ ತಿಳಿದುಕೊಳ್ಳಲು
*ದಾಖಲೆಗಳ ಸ್ಥಿತಿ ಪರಿಶೀಲಿಸಲು ಸಹಾಯ ಮಾಡಲಿದೆ.
*ಬಳಕೆದಾರ ಸ್ನೇಹಿ ವ್ಯವಸ್ಥೆ: ಸರಳ ಸಂಭಾಷಣೆಯ ಮೂಲಕ ಮಾಹಿತಿ ಪಡೆಯುವ ಅವಕಾಶ.
*24×7 ಡಿಜಿಟಲ್ ಸಹಾಯ: ಯಾವಾಗ ಬೇಕಾದರೂ ನ್ಯಾಯಾಲಯ ಸೇವೆಗಳ ಮಾಹಿತಿ.
ಹಂತ ಹಂತದ ಮಾರ್ಗದರ್ಶನ: ಅರ್ಜಿ ಸಲ್ಲಿಕೆ, ಕೇಸ್ ಸ್ಟೇಟಸ್ ಹಾಗೂ ಕೋರ್ಟ್ ಪ್ರಕ್ರಿಯೆಗಳ ವಿವರ.
*ಜನಕೇಂದ್ರಿತ ವಿನ್ಯಾಸ: ಸಾಮಾನ್ಯ ಜನರೂ ಸುಲಭವಾಗಿ ಅರ್ಥಮಾಡಿಕೊಳ್ಳುವ ರೀತಿಯಲ್ಲಿ ರೂಪಿಸಲಾಗಿದೆ.
*ಭೌತಿಕ ಭೇಟಿ ಅವಶ್ಯಕತೆ ಕಡಿಮೆ: ಮೂಲಭೂತ ಮಾಹಿತಿಗಾಗಿ ಕೋರ್ಟ್‌ಗೆ ಹೋಗುವ ಅವಶ್ಯಕತೆ ತಗ್ಗಲಿದೆ.


ಸುಪ್ರೀಂ ಕೋರ್ಟ್ ಗೆ ಸಂಬಂಧಿಸಿದ ಇವುಗಳನ್ನು ಓದಿ :
* ಭಾರತದ ಮೊದಲ ಸಂಪೂರ್ಣ ಪೇಪರ್‌ಲೆಸ್ ನ್ಯಾಯಾಂಗ (First Paperless Judiciary) ಹೊಂದಿದ ರಾಜ್ಯದಾದ ಸಿಕ್ಕಿಂ
*ಭಾರತದಲ್ಲಿ ಸುಪ್ರೀಂ ಕೋರ್ಟ್ ಕೊಲಿಜಿಯಂ ವ್ಯವಸ್ಥೆ ಎಂದರೇನು? (Supreme Court Collegium System)
* Hindu Inheritance Law : “ಮಹಿಳೆ ಮದುವೆಯಾದಾಗ, ಅವಳ ಗೋತ್ರವೂ ಬದಲಾಗುತ್ತದೆ” : ಸುಪ್ರೀಂ ಕೋರ್ಟ್
*ಸುಪ್ರೀಂ ಮುಖ್ಯ ನ್ಯಾಯಮೂರ್ತಿಗಳ ಮಹಾಭಿಯೋಗ ನಡೆಯುವುದು ಹೇಗೆ..?
*SCBAಯಲ್ಲಿ ಮಹಿಳೆಯರಿಗೆ ಶಾಶ್ವತ ಉಪಾಧ್ಯಕ್ಷ ಹುದ್ದೆ : ಸುಪ್ರೀಂ ಮಹತ್ವದ ಪ್ರಸ್ತಾವನೆ


error: Content Copyright protected !!