ಕರ್ನಾಟಕದ ಇತಿಹಾಸ : ಹೊಯ್ಸಳರು (Hoysala Dynasty)
GKHistoryLatest Updates

ಕರ್ನಾಟಕದ ಇತಿಹಾಸ : ಹೊಯ್ಸಳರು (Hoysala Dynasty)

Share With Friends

ಹೊಯ್ಸಳರು (1006–1346): Hoysala Dynasty
ದಂತಕಥೆಯ ಪ್ರಕಾರ ಜೈನ ಗುರು ಸುದತ್ತನು ಸೊಸೆವೂರಿನ ವಾಸಂತಿಕಾ ಮಂದಿರದಲ್ಲಿ ಹುಲಿ ಬರಲು, ಅದನ್ನು ಹೊಡೆಯಲು ತನ್ನ ಶಿಷ್ಯ ಸಳನಿಗೆ “ಹೊಯ್ ಸಳ” ಎಂದು ಆಜ್ಞಾಪಿಸಿದನು. ಇದೇ ಹೊಯ್ಸಳ ಶಬ್ದದ ಮೂಲವೆಂದು ಹೇಳುತ್ತಾರೆ.

ಇತಿಹಾಸಕಾರರು ಈ ರಾಜವಂಶದ ಸ್ಥಾಪಕರನ್ನು ಮಲೆನಾಡಿನ ಮೂಲದವರೇಂದು ಮಾಹಿತಿ ನೀಡುತ್ತಾರೆ (ಹಲವಾರು ಶಾಸನಗಳಲ್ಲಿ ಇವರನ್ನು ಮಲೆಪರೊಲ್ಗಂಡ ಎಂದು ಸಂಬೋಧಿಸಿದ್ದಾರೆ). ವಿಷ್ಣುವರ್ಧನ ಅವರ ವಿಸ್ತೃತ ಸೇನಾ ವಿಜಯಗಳ ಮೂಲಕ ಹೊಯ್ಸಳರು ಸ್ವತಂತ್ರ ರಾಜ್ಯವಾಗಿ ಹೊಮ್ಮಿದರು. ಚೋಳರಿಂದ ಗಂಗಾವತಿಯನ್ನು ಜಯಿಸಿ ರಾಜಧಾನಿಯನ್ನು ಬೇಲೂರಿನಿಂದ ಹಳೆಬೀಡಿಗೆ ಸ್ಥಳಾಂತರಿಸಿದರು. ಸ್ವತಂತ್ರ ಸಾಮ್ರಾಜ್ಯವನ್ನು ರಚಿಸುವ ವಿಷ್ಣುವರ್ಧನನ ಮಹತ್ವಾಕಾಂಕ್ಷೆಯನ್ನು ಅವರ ಮೊಮ್ಮಗ ವೀರ ಬಲ್ಲಾಳ-2 (1187–1193) ಅಧೀನತೆಯಿಂದ ಬಿಡುಗಡೆಯಿಸುವ ಮೂಲಕ ಈಡೇರಿಸಿದನು. ವೀರ ಬಲ್ಲಾಳ-2 ಚೋಳ ಸಾಮ್ರಾಜ್ಯವನ್ನು ಆಕ್ರಮಿಸಿ, ಪಾಂಡ್ಯರನ್ನು ಸೋಲಿಸಿ “ಚೋಳರಾಜ್ಯಪ್ರತಿಷ್ಠಾಚಾರ್ಯ”, “ದಕ್ಷಿಣ ಚಕ್ರವರ್ತಿ” ಮತ್ತು “ಹೊಯ್ಸಳ ಚಕ್ರವರ್ತಿ” ಎಂಬ ಬಿರುದುಗಳನ್ನು ಗಳಿಸಿದನು. ದಂತಕಥೆಯ ಪ್ರಕಾರ ಬೆಂಗಳೂರನ್ನು ವೀರ ಬಲ್ಲಾಳ-2 ಸ್ಥಾಪಿಸಿದನು.

ದಾಖಲೆಗಳು ಹಲವಾರು ಉನ್ನತ ಸ್ಥಾನಗಳ ಅಧಿಕಾರಿಗಳು ರಾಜನಿಗೆ ನೇರವಾಗಿ ವರದಿ ಮಾಡುತ್ತಿದ್ದುದನ್ನು ತಿಳಿಸುತ್ತವೆ. ಹಿರಿಯ ಮಂತ್ರಿಗಳನ್ನು ಮಹಾಪ್ರಧಾನರೆಂದು, ವಿದೇಶಾಂಗ ವ್ಯವಹಾರಗಳಿಗೆ ಸಂಧಿವಿಗ್ರಹಿಯೆಂದು ಮತ್ತು ಮುಖ್ಯ ಖಜಾಂಚಿಯನ್ನು ಮಹಾಭಂಡಾರಿ/ಹಿರಣ್ಯಭಂಡಾರಿಯೆಂದು ಕರೆಯಲಾಗುತ್ತಿತ್ತು. ಸೇನೆಯ ಉಸ್ತುವಾರಿಯನ್ನು ದಂಡನಾಯಕ ಮತ್ತು ನ್ಯಾಯಾಲಯದ ಉಸ್ತುವಾರಿಯನ್ನು ಧರ್ಮಾಧಿಕಾರಿ ನೋಡಿಕೊಳ್ಳುತ್ತಿದ್ದರು. ಸಾಮ್ರಾಜ್ಯವನ್ನು ನಾಡು, ವಿಷಯ, ಕಂಪನ ಮತ್ತು ದೇಶಗಳಾಗಿ ವಿಭಜಿಸಲಾಗಿತ್ತು; ಪ್ರತಿಯೊಂದು ಪ್ರಾಂತ್ಯದಲ್ಲಿ ಸ್ಥಳೀಯ ಆಡಳಿತವಿದ್ದು, ಮಹಾಪ್ರಧಾನ ಮತ್ತು ಭಂಡಾರಿಯರು ದಂಡನಾಯಕನಿಗೆ ವರದಿ ಸಲ್ಲಿಸುತ್ತಿದ್ದರು.

ಉತ್ತಮ ತರಬೇತಿ ಪಡೆದ ಗಣ್ಯ ಅಂಗರಕ್ಷಕ ದಳ (ಗರುಡ) ರಾಜವಂಶವನ್ನು ರಕ್ಷಿಸುತ್ತಿತ್ತು. ಗರುಡ ಕಂಬಗಳು (ವೀರಕಲ್ಲುಗಳು) ಇವರ ನೆನಪಿಗಾಗಿ ಸ್ಥಾಪಿಸಲ್ಪಟ್ಟಿವೆ. ಕುವರ ಲಕ್ಷ್ಮ, ಮಂತ್ರಿ ಹಾಗೂ ವೀರ ಬಲ್ಲಾಳ-2 ಅವರ ಅಂಗರಕ್ಷಕನ ನೆನಪಿಗಾಗಿ ಹಳೆಬೀಡಿನ ಹೊಯ್ಸಳೇಶ್ವರ ದೇವಸ್ಥಾನದಲ್ಲಿ ಗರುಡ ಕಂಬವನ್ನು ಸ್ಥಾಪಿಸಲಾಗಿದೆ.

ಹೊಯ್ಸಳರ ಆಳ್ವಿಕೆಯಲ್ಲಿ ಬಸವಣ್ಣ, ಮಧ್ವಾಚಾರ್ಯ ಮತ್ತು ರಾಮಾನುಜಾಚಾರ್ಯರಿಂದ ಮೂರು ಪ್ರಮುಖ ಧಾರ್ಮಿಕ ಬೆಳವಣಿಗೆಗಳು ನಡೆದವು. ಮಧ್ವಾಚಾರ್ಯರು ಆದಿ ಶಂಕರರ ಬೋಧನೆಗಳನ್ನು ಟೀಕಿಸಿ “ಜಗತ್ತು ನಿಜ” ಎಂದು ವಾದಿಸಿದರು. ಅವರ ತತ್ವಜ್ಞಾನ ಜನಪ್ರಿಯವಾಗಿ ಉಡುಪಿಯಲ್ಲಿ ಅಷ್ಟಮಠಗಳನ್ನು ಸ್ಥಾಪಿಸಿದರು. ವೈಷ್ಣವ ಪಂಥದ ರಾಮಾನುಜಾಚಾರ್ಯರು ಶ್ರೀಭಾಷ್ಯದಲ್ಲಿ ಭಕ್ತಿ ಮಾರ್ಗವನ್ನು ಬೋಧಿಸಿದರು.

ರಾಜ ವಿಷ್ಣುವರ್ಧನ ಜೈನ ಮತದಿಂದ ವೈಷ್ಣವ ಮತಕ್ಕೆ ಮತಾಂತರಗೊಂಡ ನಂತರ ಹಲವಾರು ದೇವಸ್ಥಾನಗಳನ್ನು ನಿರ್ಮಿಸಿದನು. ಮಧ್ವಾಚಾರ್ಯರ ನಂತರ ಜಯತೀರ್ಥ, ವ್ಯಾಸತೀರ್ಥ, ಶ್ರೀಪಾದರಾಜ, ವಾದಿರಾಜತೀರ್ಥ ಹಾಗೂ ವಿಜಯದಾಸ, ಗೋಪಾಲದಾಸರು ಅವರ ಬೋಧನೆಗಳನ್ನು ಹರಡಿದರು. ಗುಜರಾತಿನ ವಲ್ಲಭಾಚಾರ್ಯ ಮತ್ತು ಬಂಗಾಳದ ಚೈತನ್ಯ ಮಹಾಪ್ರಭು ಇವರಿಂದ ಪ್ರಭಾವಿತರಾದರು.

ಹೊಯ್ಸಳರು ಜನ್ನ, ರುದ್ರಭಟ್ಟ, ಹರಿಹರ, ರಾಘವಾಂಕ ಮುಂತಾದ ವಿದ್ವಾಂಸರನ್ನು ಪೋಷಿಸಿದರು. ಹರಿಹರನು “ಗಿರಿಜಾಕಲ್ಯಾಣ” ಕೃತಿಯನ್ನು ರಚಿಸಿದನು. ರಾಘವಾಂಕನು “ಹರಿಶ್ಚಂದ್ರ ಕಾವ್ಯ” ಮೂಲಕ ಷಟ್ಪದಿಯನ್ನು ಪರಿಚಯಿಸಿದನು.

ಹೊಯ್ಸಳ ವಾಸ್ತುಶಿಲ್ಪವನ್ನು “ಕರ್ನಾಟಕ ದ್ರಾವಿಡ ಶೈಲಿ” ಎಂದು ಕರೆಯಲಾಗುತ್ತದೆ. ಬೇಲೂರಿನ ಚೆನ್ನಕೇಶವ ದೇವಸ್ಥಾನ, ಹಳೇಬೀಡಿನ ಹೊಯ್ಸಳೇಶ್ವರ ದೇವಸ್ಥಾನ, ಸೋಮನಾಥಪುರದ ಚೆನ್ನಕೇಶವ ದೇವಸ್ಥಾನ ಮುಂತಾದವು ಇವರ ವಾಸ್ತುಶಿಲ್ಪದ ಉದಾಹರಣೆಗಳು. ಬೇಲೂರು ಮತ್ತು ಹಳೆಬೀಡು ದೇವಸ್ಥಾನಗಳು ಯುನೆಸ್ಕೋ ವಿಶ್ವ ಪರಂಪರೆ ಪಟ್ಟಿಗೆ ಪ್ರಸ್ತಾಪಿತವಾಗಿವೆ.

ಇತಿಹಾಸಕಾರ ಶೆಲ್ಡನ್ ಪೊಲ್ಲಾಕ್ ಪ್ರಕಾರ ಹೊಯ್ಸಳರ ಆಳ್ವಿಕೆಯಲ್ಲಿ ಸಂಸ್ಕೃತದ ಬದಲು ಕನ್ನಡ ಆಸ್ಥಾನದ ಭಾಷೆಯಾಗಿ ಪ್ರಾಬಲ್ಯ ಪಡೆದಿತು. ಶಾಸನಗಳು ಹೆಚ್ಚಾಗಿ ಕನ್ನಡದಲ್ಲಿದ್ದು, ಕೆಲವು ಸಂಸ್ಕೃತ ಮತ್ತು ದ್ವಿಭಾಷೆಗಳಲ್ಲಿ ದೊರೆಯುತ್ತವೆ.


Leave a Reply

Your email address will not be published. Required fields are marked *

error: Content Copyright protected !!